• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೋಶಿಯಲ್ ಮಿಡಿಯಾ ಐಕಾನ್, ರೂಪದರ್ಶಿ ತರಾ ಬರ್ಬರ ಹತ್ಯೆ

|

ಬಾಗ್ದಾದ್, ಸೆಪ್ಟೆಂಬರ್ 29: ಸಾಮಾಜಿಕ ಮಾಧ್ಯಮದಲ್ಲಿ ಕೋಟಿ ಕೋಟಿ ಫಾಲೋವರ್ಸ್ ಗಳನ್ನು ಹೊಂದಿರುವ ಇರಾಕಿ ರೂಪದರ್ಶಿ ತರಾ ಫಾರ್ಸ್ ಅವರನ್ನು ದುಷ್ಕರ್ಮಿಗಳು ಕೊಂದಿದ್ದಾರೆ.

ಟ್ರಿಗರ್ ಎಳೆಯುವ ಮುನ್ನ ನಡೆದಿದ್ದೇನು? ಸುಪಾರಿ ಕಿಲ್ಲರ್ ಮನ ಕರಗಿದ್ದೇಕೆ?

ಶುಕ್ರವಾರ ರಾತ್ರಿ ಕಾರು ಚಲಾಯಿಸಿಕೊಂಡು ಬರುತ್ತಿದ್ದ ತರಾ ಅವರನ್ನು ಇರಾಕ್ ರಾಜಧಾನಿ ಬಾಗ್ದಾದ್ ನ, ಕ್ಯಾಂಪ್ ಸರಾಹ್ ಎಂಬ ಜಿಲ್ಲೆಯಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ.

ಪೊಲೀಸ್ ಠಾಣೆಗೆ ಪ್ರಿಯತಮೆಯ ರುಂಡ ಹಿಡಿದು ತಂದ ಯುವಕ!

ರೂಪದರ್ಶಿಯೂ ಆಗಿರುವ ತರಾ ಅವರಿಗೆ ಇನ್ ಸ್ಟಾಗ್ರಾಂ ನಲ್ಲಿ 2.7 ಮಿಲಿಯನ್ ನಷ್ಟು ಫಾಲೋವರ್ಸ್ ಗಳಿದ್ದರು. ವಿಭಿನ್ನ ರೀತಿಯ ಕೇಶ ವಿನ್ಯಾಸ, ಬಟ್ಟೆ, ಟ್ಯಾಟೂ ಗಳಿಂದಲೇ ಆಕೆ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದರು.

Tara Fares, Iraqi model shot dead

ಘಟನೆಯ ಕುರಿತು ತನಿಖೆ ನಡೆಯುತ್ತಿದ್ದು, ಆರೋಪಿಗಳ ಸುಳಿವು ಪತ್ತೆಯಾಗಿಲ್ಲ. ಆಕೆಯ ಜೀವನ ಶೈಲಿ ಮತ್ತು ಬಿಂದಾಸ್ ವ್ಯಕ್ತಿತ್ವವೇ ಆಕೆಯ ಹತ್ಯೆಗೆ ಕಾರಣವಿದ್ದಿರಬಹುದು ಎನ್ನಲಾಗಿದೆ.

ಕಳೆದ ಜುಲೈನಲ್ಲಿ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ತರಾ ಬರೆದುಕೊಂಡಿದ್ದ ಸಾಲುಗಳು ಸಾಕಷ್ಟು ಜನರ ಗಮನ ಸೆಳೆದಿತ್ತು. ಮತಾಂಧತೆಯಿಮದ ನಡೆಯುತ್ತಿರುವ ಬರ್ಬರ ಹತ್ಯೆಗಳ ಬಗ್ಗೆ ಮಾತನಾಡಿದ್ದ ಅವರು, 'ದೇವರ ಇರುವನ್ನು ಅಲ್ಲಗಳೆಯುವವರ ಬಗ್ಗೆ ನಗೆ ಭಯವಿಲ್ಲ. ಆದರೆ ನನಗೆ ನಿಜಕ್ಕೂ ಭಯವಾಗುವುದು, ಕೆಲವರು ಹತ್ಯೆ ಮಾಡುವ ಮೂಲಕ ದೇವರ ಇರುವನ್ನು ತೋರಿಸುವುದಕ್ಕೆ ಹೊರಟಿರುವುದು' ಎಂದಿದ್ದರು.

English summary
An Iraqi model shot dead on friday. Tara Fares who was a famous social media icon died,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X