ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನದಲ್ಲಿ ಬಂದೂಕು ಹಿಡಿದು ನಿಂತ ತಾಲಿಬಾನಿಗಳ ಕುಣಿತಕ್ಕೆ ಚೀನಾ ತಾಳ!

|
Google Oneindia Kannada News

ಬೀಜಿಂಗ್, ಆಗಸ್ಟ್ 16: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಇತಿಹಾಸ ಅರಿತ ಪ್ರತಿಯೊಬ್ಬ ಪ್ರಜೆಯೂ ಭಯದಲ್ಲಿ ಅದರಿ ಹೋಗುತ್ತಿದ್ದಾರೆ. ಯಾವ ಕ್ಷಣದಲ್ಲಿ ಯಾವ ಘಳಿಗೆಯಲ್ಲಿ ಏನಾಗುತ್ತದೆಯೋ ಏನೋ ಎಂಬ ಭಯದಲ್ಲೇ ಕಾಲ ಕಳೆಯುತ್ತಿದ್ದಾರೆ. ಇಡೀ ಜಗತ್ತಿನ ಬಹುಪಾಲು ರಾಷ್ಟ್ರಗಳು ಅಫ್ಘಾನಿಸ್ತಾನದತ್ತ ದೃಷ್ಟಿ ನೆಟ್ಟಿವೆ. ತಾಲಿಬಾನಿಗಳ ಮುಂದಿನ ನಡೆ ಏನಿರಬಹುದು ಎಂದು ಅಚ್ಚರಿ ಕಣ್ಣಿನಿಂದ ಎದುರು ನೋಡುತ್ತಿವೆ.

ಒಂದು ದಿಕ್ಕಿನಲ್ಲಿ ಬಹುಪಾಲು ರಾಷ್ಟ್ರಗಳು ಅಲ್ಲದೇ ಸ್ವತಃ ಅಫ್ಘಾನ್ ಪ್ರಜೆಗಳೇ ತಾಲಿಬಾನ್ ಉಗ್ರ ಸಂಘಟನೆಗೆ ಛೀಮಾರಿ ಹಾಕುತ್ತದೆ. ಆದರೆ ಚೀನಾ ಮಾತ್ರ ವಿಭಿನ್ನ ರಾಗವನ್ನು ಹಾಡಿದೆ. "ತಾಲಿಬಾನ್ ತನ್ನ ಪೂರ್ವ ಬದ್ಧತೆಯಂತೆ ಮುಕ್ತ ಹಾಗೂ ಅಂತರ್ಗತ ಇಸ್ಲಾಮಿಕ್ ಸರ್ಕಾರವನ್ನು ರಚಿಸುವುದು ಹಾಗೂ ಯಾವುದೇ ರೀತಿ ಹಿಂಸಾಚಾರಗಳು ಇಲ್ಲದಂತೆ ದೇಶದ ಪ್ರಜೆಗಳಿಗಾಗಿ ಶಾಂತಿಯುತ ಆಡಳಿತವನ್ನು ನೀಡಲಿದೆ," ಎಂದು ಚೀನಾ ವಿಶ್ವಾಸ ವ್ಯಕ್ತಪಡಿಸಿದೆ.

Video: ತಾಲಿಬಾನ್ ಉಗ್ರರಿಗೆ ಬೆದರಿ ವಿಮಾನ ಹತ್ತೋದು ಹೀಗಾ!?Video: ತಾಲಿಬಾನ್ ಉಗ್ರರಿಗೆ ಬೆದರಿ ವಿಮಾನ ಹತ್ತೋದು ಹೀಗಾ!?

ಅಫ್ಘಾನಿಸ್ತಾನದಲ್ಲಿ ಆಗಿರುವ ದಿಢೀರ್ ಅಧಿಕಾರ ಬದಲಾವಣೆ ಬಗ್ಗೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನಿಯಿಂಗ್ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. "ತಾಲಿಬಾನ್ ಬದ್ಧತೆ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಅವರು, ಶಾಂತಿಯುತ ರೀತಿಯಲ್ಲಿ ಅಧಿಕಾರ ಹಸ್ತಾಂತರದ ಬಗ್ಗೆ ಮಾತನಾಡಿದ್ದಾರೆ. ಇದರ ಜೊತೆಗೆ ವಿದೇಶಿ ಕಾರ್ಯಾಚರಣೆಗಳು ಮತ್ತು ದೇಶದ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಯ ಹೊಣೆಯನ್ನು ತಾಲಿಬಾನ್ ಹೊತ್ತುಕೊಳ್ಳಬೇಕಾಗುತ್ತದೆ," ಎಂದಿದ್ದಾರೆ.

ಕಳೆದ ಆಗಸ್ಟ್ 15ರ ಭಾನುವಾರ ಮೊದಲು ಕಾಬೂಲ್ ಹೊರವಲಯಕ್ಕೆ ತಾಲಿಬಾನ್ ಉಗ್ರರು ಲಗ್ಗೆ ಇಟ್ಟರು. ಅಫ್ಘಾನ್ ಸರ್ಕಾರಕ್ಕೆ ಅಲ್ಲಿಂದಲೇ ಸಂದೇಶ ರವಾನಿಸಿದ ತಾಲಿಬಾನ್ ಶಾಂತಿಯುತ ರೀತಿಯಲ್ಲಿ ಅಧಿಕಾರ ಹಸ್ತಾಂತರ ಮಾಡುವಂತೆ ಎಚ್ಚರಿಕೆ ನೀಡಿತು. ತಾಲಿಬಾನ್ ಕಾಬೂಲ್ ನಗರದಲ್ಲಿ ಪ್ರವೇಶಿಸುತ್ತಿದ್ದಂತೆ ಅಧ್ಯಕ್ಷ ಅಶ್ರಫ್ ಘನಿ ಸೇರಿದಂತೆ ಎಲ್ಲ ಸರ್ಕಾರಿ ಅಧಿಕಾರಿಗಳು ಅಲರ್ಟ್ ಆದರು. ಸಂಜೆ ವೇಳೆಗೆ ತಮ್ಮ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೋಹಿಬ್ ಜೊತೆಗೆ ಓಮನ್ ರಾಷ್ಟ್ರಕ್ಕೆ ಹಾರಿದರು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ತಾಲಿಬಾನ್ ಉಗ್ರ ಸಂಘಟನೆಗೆ ಬೆಂಬಲ ಸೂಚಿಸುವ ಧಾಟಿಯಲ್ಲಿ ಚೀನಾ ಮಾತನಾಡಿದೆ. ಈ ಕುರತು ಒಂದು ವರದಿ ಇಲ್ಲಿದೆ.

ಅಫ್ಘಾನಿಸ್ತಾನದಿಂದ ರಾಯಭಾರಿ ವಾಪಸ್ ಕರೆಸಿಕೊಳ್ಳದ ಚೀನಾ

ಅಫ್ಘಾನಿಸ್ತಾನದಿಂದ ರಾಯಭಾರಿ ವಾಪಸ್ ಕರೆಸಿಕೊಳ್ಳದ ಚೀನಾ

ತಾಲಿಬಾನ್ ಉಗ್ರ ಸಂಘಟನೆಯು ಕಾಬೂಲ್ ಮೇಲೆ ಹಿಡಿತ ಸಾಧಿಸುತ್ತಿದ್ದಂತೆ ಬಹುಪಾಲು ರಾಷ್ಟ್ರಗಳು ತಮ್ಮ ರಾಯಭಾರಿ ಕಚೇರಿ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಂಡವು. ಯುನೈಟೆಡ್ ಸ್ಟೇಟ್ಸ್, ಭಾರತ ಮತ್ತು ಯುರೋಪಿಯನ್ ಯೂನಿಯನ್ ರಾಷ್ಟ್ರಗಳು ಸೇರಿದಂತೆ ಕಾಬೂಲ್‌ನಲ್ಲಿರುವ ಹೆಚ್ಚಿನ ರಾಯಭಾರ ಕಚೇರಿಗಳು ತನ್ನ ರಾಜತಾಂತ್ರಿಕ ಸಿಬ್ಬಂದಿಯನ್ನು ಸ್ಥಳಾಂತರಿಸಲು ಧಾವಿಸಿದವು. ಆದರೆ ಚೀನಾ ರಾಯಭಾರ ಕಚೇರಿ ಮಾತ್ರ ತನ್ನ ರಾಯಭಾರಿ ಮತ್ತು ಕೆಲವು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಹುವಾ ಹೇಳಿದ್ದಾರೆ. ಇದರ ಮಧ್ಯೆ "ಅಫ್ಘಾನಿಸ್ತಾನದಲ್ಲಿದ್ದ ಬಹುಪಾಲು ಚೀನಾ ಪ್ರಜೆಗಳನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ಅಫ್ಘಾನಿಸ್ತಾನದ ಪರಿಸ್ಥಿತಿ ಪ್ರಮುಖ ಬದಲಾವಣೆಗಳನ್ನು ಅನುಭವಿಸಿದೆ. ನಾವು ಅಫ್ಘಾನಿಸ್ತಾನದ ಜನರ ಇಚ್ಛೆ ಮತ್ತು ಆಯ್ಕೆಯನ್ನು ಗೌರವಿಸುತ್ತೇವೆ," ಎಂದು ಹುವಾ ಹೇಳಿದ್ದಾರೆ.

40 ವರ್ಷಗಳ ಯುದ್ಧವನ್ನು ಮರೆಯುವಂತೆ ಚೀನಾ ಸಲಹೆ

40 ವರ್ಷಗಳ ಯುದ್ಧವನ್ನು ಮರೆಯುವಂತೆ ಚೀನಾ ಸಲಹೆ

"ಅಫ್ಘಾನಿಸ್ತಾನದಲ್ಲಿ ಈ ಹಿಂದೆ 40 ವರ್ಷಗಳ ಕಾಲ ಯುದ್ಧಗಳು ನಡೆದಿವೆ. ಈ ಯುದ್ಧವನ್ನು ನಿಲ್ಲಿಸುವುದು ಮತ್ತು ಶಾಂತಿ-ಸುವ್ಯವಸ್ಥೆಯ ಮಹತ್ವವನ್ನು ಅರಿತುಕೊಳ್ಳುವುದು 30 ದಶಲಕ್ಷ ಅಫ್ಘಾನ್ ಜನರ ಆಶಯವಾಗಿದೆ. ಅಂತರಾಷ್ಟ್ರೀಯ ಸಮುದಾಯ ಮತ್ತು ಪ್ರಾದೇಶಿಕ ದೇಶಗಳ ಆಶಯ ಕೂಡಾ ಅದೇ ಆಗಿದೆ. "ಭಾನುವಾರ ಅಫ್ಘಾನ್ ತಾಲಿಬಾನ್ ಹೇಳಿಕೆಯನ್ನು ನಾವು ಗಮನಿಸಿದ್ದೇವೆ, ಯುದ್ಧವು ಮುಗಿದಿದೆ ಮತ್ತು ಅವರು ಮುಕ್ತ ಮತ್ತು ಅಂತರ್ಗತ ಇಸ್ಲಾಮಿಕ್ ಸರ್ಕಾರವನ್ನು ಸ್ಥಾಪಿಸುವ ಬಗ್ಗೆ ಸಮಾಲೋಚನೆ ಆರಂಭಿಸುತ್ತಾರೆ. ಅಫ್ಘಾನ್ ನಾಗರಿಕರು ಮತ್ತು ವಿದೇಶಿ ರಾಜತಾಂತ್ರಿಕ ದಳಗಳ ಸುರಕ್ಷತೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ" ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ವಕ್ತಾರರಾದ ಹುವಾ ಹೇಳಿದ್ದಾರೆ.

ತಾಲಿಬಾನ್ ಬಗ್ಗೆ ಚೀನಾ ತೋರಿದ ವಿಶ್ವಾಸ ಎಂಥದ್ದು?

ತಾಲಿಬಾನ್ ಬಗ್ಗೆ ಚೀನಾ ತೋರಿದ ವಿಶ್ವಾಸ ಎಂಥದ್ದು?

""ಶಾಂತಿಯುತ ರೀತಿಯಲ್ಲಿ ಪರಿವರ್ತನೆಯನ್ನು ಎದುರು ನೋಡಲಾಗುತ್ತಿದೆ. ಹಿಂಸಾಚಾರ ಮತ್ತು ಭಯೋತ್ಪಾದನೆಯನ್ನು ಇಲ್ಲಿಗೆ ನಿಲ್ಲಿಸಬೇಕಿದೆ. ಜನರನ್ನು ಯುದ್ಧದಿಂದ ಮುಕ್ತಗೊಳಿಸಿರಿ ಮತ್ತು ಅವರಿಗೆ ಹೊಸ ಮನೆಗಳ ಮೂಲಕ ಹೊಸ ಬದುಕು ಕಟ್ಟಿಕೊಳ್ಳುವುದಕ್ಕೆ ಅನುವು ಮಾಡಿಕೊಡುತ್ತೀರೆಂದು ನಾವು ಭಾವಿಸುತ್ತೇವೆ" ಎಂದು ಹುವಾ ಹೇಳಿದ್ದಾರೆ. ತಾಲಿಬಾನ್ ಸರ್ಕಾರವನ್ನು ಚೀನಾ ಯಾವಾಗ ಗುರುತಿಸುತ್ತದೆ ಹಾಗೂ ಅದಕ್ಕೆ ಯಾವುದೇ ಷರತ್ತು ಹಾಕಲಾಗುತ್ತದೆಯೇ ಎಂಬ ಪ್ರಶ್ನೆಗೆ ಹುವಾ ಉತ್ತರಿಸಿದರು. "ಅಫ್ಘಾನಿಸ್ತಾನದ ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಸರ್ವಪಕ್ಷಗಳ ಇಚ್ಛೆಯನ್ನು ಸಂಪೂರ್ಣವಾಗಿ ಗೌರವಿಸುವ ಆಧಾರದಲ್ಲಿ ಬೀಜಿಂಗ್ ಅಫ್ಘಾನಿಸ್ತಾನದ ತಾಲಿಬಾನ್ ಜೊತೆ ಸಂಪರ್ಕ ಮತ್ತು ಸಂವಹನವನ್ನು ನಿರ್ವಹಿಸುತ್ತಿದೆ," ಎಂದಿದ್ದಾರೆ.

ಚೀನಾ ವಿರೋಧಿ ಉಗ್ರರ ಜೊತೆಗೆ ಸಂಬಂಧ ಹೊಂದುವಂತಿಲ್ಲ

ಚೀನಾ ವಿರೋಧಿ ಉಗ್ರರ ಜೊತೆಗೆ ಸಂಬಂಧ ಹೊಂದುವಂತಿಲ್ಲ

ಕಳೆದ ತಿಂಗಳು ಮುಲ್ಲಾ ಅಬ್ದುಲ್ ಘನಿ ಬರದಾರ್ ನೇತೃತ್ವದ ತಾಲಿಬಾನ್ ರಾಜಕೀಯ ನಿಯೋಗವು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಜೊತೆಗೆ ನಡೆಸಿದ ಚರ್ಚೆಯ ಬಗ್ಗೆ ಹುವಾ ಚುನಿಯಿಂಗ್ ಉಲ್ಲೇಖಿಸಿದ್ದಾರೆ. "ಅಫ್ಘಾನ್ ತಾಲಿಬಾನ್ ಇತರ ಪಕ್ಷಗಳೊಂದಿಗೆ ಮತ್ತು ಎಲ್ಲಾ ರಾಷ್ಟ್ರಗಳೊಂದಿಗೆ ಒಗ್ಗಟ್ಟಾಗಿರಲು ಆಶಿಸುತ್ತೇವೆ. ರಾಷ್ಟ್ರೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ರಾಜಕೀಯ ಚೌಕಟ್ಟಿನ ವ್ಯಾಪ್ತಿಯನ್ನು ಒಳಗೊಂಡಂತೆ ಶಾಂತಿ ಸ್ಥಾಪನೆಗೆ ಅಡಿಪಾಯ ಹಾಕಲಾಗುವುದು," ಎಂದು ಹೇಳಲಾಗಿತ್ತು. ಇದರ ಜೊತೆಗೆ "ಚೀನಾದ ವಿರೋಧಿ ಶಕ್ತಿಗಳಾದ ಪೂರ್ವ ತುರ್ಕಿಸ್ತಾನ್ ಇಸ್ಲಾಮಿಕ್ ಚಳವಳಿಯ (ಇಟಿಐಎಂ) ಉಯಿಗುರ್ ಇಸ್ಲಾಮಿಕ್ ಉಗ್ರರ ಜೊತೆಗೆ ಯಾವುದೇ ರೀತಿ ನಂಟು ಹೊಂದುವುದಿಲ್ಲ," ಎಂದು ವಾಂಗ್‌ಗೆ ತಾಲಿಬಾನ್ ನೀಡಿದ ಭರವಸೆಯನ್ನು ಒತ್ತಿ ಹೇಳಿದ್ದಾರೆ.

ಅಫ್ಘಾನ್ ಮತ್ತು ಚೀನಾ ನಡುವಿನ ಗಡಿ ಸಂಪರ್ಕ

ಅಫ್ಘಾನ್ ಮತ್ತು ಚೀನಾ ನಡುವಿನ ಗಡಿ ಸಂಪರ್ಕ

ಚೀನಾದ ಕ್ಸಿನ್ ಜಿಯಾಂಗ್ ಪ್ರಾಂತ್ಯವು ಒಂದು ಕಡೆಯಲ್ಲಿ ಅಫ್ಘಾನಿಸ್ತಾನದ ಜೊತೆಗೆ ಗಡಿ ಸಂಪರ್ಕವನ್ನು ಹೊಂದಿದೆ. ಇನ್ನೊಂದು ಕಡೆ ಪಾಕಿಸ್ತಾನ ಆಕ್ರಮಿಕ ಕಾಶ್ಮೀರ, ಮತ್ತೊಂದು ಕಡೆಯಲ್ಲಿ ಕೇಂದ್ರೀಯ ಏಷ್ಯಾ ರಾಷ್ಟ್ರಗಳಾದ ಕಜಕಿಸ್ತಾನ್, ಕ್ರಿಜಿಸ್ತಾನ್ ಮತ್ತು ತಜಕಿಸ್ತಾನ್ ಜೊತೆಯಲ್ಲಿ ಗಡಿಯನ್ನು ಹಂಚಿಕೊಂಡಿದೆ.

ತಾಲಿಬಾನ್ ಹೇಳಿರುವ ಮಾತನ್ನು ಹುವಾ ಚುನಿಯಿಂಗ್ ಮತ್ತೊಮ್ಮೆ ಒತ್ತಿ ಹೇಳಿದ್ದು, "ತಾಲಿಬಾನ್ ಈಗ ಅಭಿವೃದ್ಧಿಯನ್ನು ಬಯಸಿ ನಮ್ಮೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದುವುದಕ್ಕೆ ಬಯಸಿದೆ. ಆ ದೇಶದ ಅಭಿವೃದ್ಧಿ ಮತ್ತು ಪುನರ್ ನಿರ್ಮಾಣ ಕಾರ್ಯದಲ್ಲಿ ಬೀಜಿಂಗ್ ಬೆಂಬಲ ನೀಡಲಿದೆ. ಚೀನಾಗೆ ಧಕ್ಕೆ ಉಂಟು ಮಾಡುವುದಕ್ಕಾಗಿ ಯಾವುದೇ ಕಾರಣಕ್ಕೂ ತನ್ನ ಸೇನೆಯನ್ನು ಬಳಸಿಕೊಳ್ಳುವುದಿಲ್ಲ ಎಂದು ತಾಲಿಬಾನ್ ನಮಗೆ ಭರವಸೆ ನೀಡಿದೆ," ಎಂದು ಹೇಳಿದ್ದಾರೆ.

ತಾಲಿಬಾನ್ ನಿಲುವನ್ನು ಸ್ವಾಗತಿಸಿರುವ ಚೀನಾ

ತಾಲಿಬಾನ್ ನಿಲುವನ್ನು ಸ್ವಾಗತಿಸಿರುವ ಚೀನಾ

"ನಾವು ತಾಲಿಬಾನ್ ನಡೆಯನ್ನು ಸ್ವಾಗತಿಸುತ್ತೇವೆ ಮತ್ತು ನಾವು ಯಾವಾಗಲೂ ದೇಶದ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯ ಮತ್ತು ಸಮಗ್ರತೆಯನ್ನು ಗೌರವಿಸುತ್ತೇವೆ. ನಾವು ಜನರ ಸ್ವಾತಂತ್ರ್ಯ ಮತ್ತು ಆಯ್ಕೆಯನ್ನು ಗೌರವಿಸುತ್ತೇವೆ. ಇದರ ಜೊತೆಗೆ ನಾವು ಸ್ನೇಹ ಸಂಬಂಧವನ್ನು ಮುಂದುವರಿಸುತ್ತೇವೆ. ಶಾಂತಿ ಮತ್ತು ಪುನರ್ನಿರ್ಮಾಣದಲ್ಲಿ ರಚನಾತ್ಮಕ ಪಾತ್ರವನ್ನು ವಹಿಸುತ್ತೇವೆ," ಎಂದು ಹುವಾ ಹೇಳಿದ್ದಾರೆ.

ತಾಲಿಬಾನ್ ಮುಷ್ಠಿಯಲ್ಲಿದ್ದ ಅಫ್ಘಾನಿಸ್ತಾನ

ತಾಲಿಬಾನ್ ಮುಷ್ಠಿಯಲ್ಲಿದ್ದ ಅಫ್ಘಾನಿಸ್ತಾನ

ಕಳೆದ 1996 ರಿಂದ 2001ರವರೆಗೂ ಅಫ್ಘಾನಿಸ್ತಾನದಲ್ಲಿ ಇದೇ ತಾಲಿಬಾನ್ ಉಗ್ರ ಸಂಘಟನೆಯ ಹಿಡಿತದಲ್ಲಿತ್ತು. 2001ರ ಸಪ್ಟೆಂಬರ್ 11ರಂದು ಯುನೈಟೆಡ್ ಸ್ಟೇಟ್ಸ್ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿದ್ದರು. ಅದರ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಅಫ್ಘಾನ್ ಮೇಲೆ ದಾಳಿ ನಡೆಸಿದ ಯುಎಸ್ ಸೇನೆಯು ಅಫ್ಘಾನಿಸ್ತಾನವನ್ನು 2001ರಲ್ಲಿ ತಾಲಿಬಾನ್ ಹಿಡಿತದಿಂದ ಬಿಡುಗಡೆಗೊಳಿಸಿತು.

Recommended Video

ಅಮೆರಿಕಾ ಯಾಮಾರಿದ್ದು ಎಲ್ಲಿ? ದೊಡ್ಡಣ್ಣ ಮಾಡಿದ ಎಡವಟ್ಟಿನ ನಿರ್ಧಾರ ಯಾವ್ದು? | Oneindia Kannada
ಅಫ್ಘಾನಿಸ್ತಾನ ತಾಲಿಬಾನ್ ತೆಕ್ಕೆಗೆ ಜಾರಿದ್ದು ಹೇಗೆ?

ಅಫ್ಘಾನಿಸ್ತಾನ ತಾಲಿಬಾನ್ ತೆಕ್ಕೆಗೆ ಜಾರಿದ್ದು ಹೇಗೆ?

ಅಫ್ಘಾನಿಸ್ತಾನದಿಂದ ಯುಎಸ್ ಸೇನಾ ಪಡೆಯನ್ನು ಹಿಂತೆಗೆದುಕೊಂಡ ಒಂದು ವಾರದಲ್ಲೇ ಇಡೀ ದೇಶದ ಚಿತ್ರಣವೇ ಬದಲಾಗಿದೆ. ಅಫ್ಘಾನಿಸ್ತಾನ ಸರ್ಕಾರ ಮತ್ತು ಸೇನೆಯನ್ನು ಆಕ್ರಮಿಸಿಕೊಂಡ ತಾಲಿಬಾನ್ ದೇಶದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ. ಒಂದೇ ವಾರದಲ್ಲಿ ಇಡೀ ದೇಶವನ್ನು ತಾಲಿಬಾನ್ ಆಕ್ರಮಿಸಿಕೊಂಡಿದೆ. ಕೆಲವು ಪ್ರದೇಶಗಳಲ್ಲಿ ಸೇನೆಯನ್ನು ಸೋಲಿಸಿದರೆ, ಇನ್ನು ಕೆಲವು ಪ್ರದೇಶಗಳಲ್ಲಿ ಸಂಘಟನೆಗೆ ಸಹಕಾರ ನೀಡಿದ ಸರ್ಕಾರದ ಭದ್ರತಾ ಪಡೆಗಳನ್ನು ಅಲ್ಲಿಂದ ಹಿಂತಿರುಗಿ ಕಳುಹಿಸಲಾಗಿದೆ.

ಕಳೆದ ಆಗಸ್ಟ್ 15ರ ಭಾನುವಾರ ಮೊದಲು ಕಾಬೂಲ್ ಹೊರವಲಯಕ್ಕೆ ತಾಲಿಬಾನ್ ಉಗ್ರರು ಲಗ್ಗೆ ಇಟ್ಟರು. ಅಫ್ಘಾನ್ ಸರ್ಕಾರಕ್ಕೆ ಅಲ್ಲಿಂದಲೇ ಸಂದೇಶ ರವಾನಿಸಿದ ತಾಲಿಬಾನ್ ಶಾಂತಿಯುತ ರೀತಿಯಲ್ಲಿ ಅಧಿಕಾರ ಹಸ್ತಾಂತರ ಮಾಡುವಂತೆ ಎಚ್ಚರಿಕೆ ನೀಡಿತು. ತಾಲಿಬಾನ್ ಕಾಬೂಲ್ ನಗರದಲ್ಲಿ ಪ್ರವೇಶಿಸುತ್ತಿದ್ದಂತೆ ಅಧ್ಯಕ್ಷ ಅಶ್ರಫ್ ಘನಿ ಸೇರಿದಂತೆ ಎಲ್ಲ ಸರ್ಕಾರಿ ಅಧಿಕಾರಿಗಳು ಅಲರ್ಟ್ ಆದರು. ಸಂಜೆ ವೇಳೆಗೆ ತಮ್ಮ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೋಹಿಬ್ ಜೊತೆಗೆ ಓಮನ್ ರಾಷ್ಟ್ರಕ್ಕೆ ಹಾರಿದರು. ಸೋಮವಾರದ ವೇಳೆಗೆ ಓಮನ್ ನಿಂದ ಯುನೈಟೆಡ್ ಸ್ಟೇಟ್ಸ್ ನತ್ತ ಅಶ್ರಫ್ ಘನಿ ಹಾರಿದ್ದಾರೆ ಎಂದು ತಿಳಿದು ಬಂದಿದೆ.

English summary
Taliban will established Open And Inclusive' Islamic govt as committed; China Hope.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X