• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಡಳಿತವನ್ನು ಅಸ್ಥಿರಗೊಳಿಸದಂತೆ ಯುಎಸ್‌ಗೆ ತಾಲಿಬಾನ್‌ ಎಚ್ಚರಿಕೆ

|
Google Oneindia Kannada News

ದೋಹಾ, ಅಕ್ಟೋಬರ್‌ 10: ಅಫ್ಘಾನಿಸ್ತಾನದಿಂದ ಯುಎಸ್‌ ತನ್ನ ಸೇನೆಯನ್ನು ಹಿಂದಕ್ಕೆ ಪಡೆದ ಬಳಿಕ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದುಕೊಂಡ ತಾಲಿಬಾನ್‌ನೊಂದಿಗೆ ನಡೆದ ಮೊದಲ ಮಾತುಕತೆಯಲ್ಲಿ ಆಡಳಿತವನ್ನು ಅಸ್ಥಿರಗೊಳಿಸದಂತೆ ತಾಲಿಬಾನ್‌ ಯುಎಸ್‌ಗೆ ಎಚ್ಚರಿಕೆ ನೀಡಿದೆ ಎಂದು ತಾಲಿಬಾನ್‌ ಸರ್ಕಾರದ ವಿದೇಶಾಂಗ ಸಚಿವ ಅಮಿರ್‌ ಖಾನ್‌ ಮುತ್ತಾಕಿ ಶನಿವಾರ ತಿಳಿಸಿದ್ದಾರೆ.

"ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುವುದು ಯಾರಿಗೂ ಒಳಿತಲ್ಲ ಎಂದು ನಾವು ತಿಳಿಸಿದ್ದೇವೆ," ಎಂದು ಯುಎಸ್‌ನೊಂದಿಗೆ ದೋಹಾದ ಕತಾರ್‌ನಲ್ಲಿ ಮಾತುಕತೆ ನಡೆದ ಬಳಿಕ ಬಕಾರ್‌ ಸುದ್ದಿ ಸಂಸ್ಥೆಗೆ ತಾಲಿಬಾನ್‌ ಸರ್ಕಾರದ ವಿದೇಶಾಂಗ ಸಚಿವ ಅಮಿರ್‌ ಖಾನ್‌ ಮುತ್ತಾಕಿ ಹೇಳಿದ್ದಾರೆ.

ಅಫ್ಘಾನಿಸ್ತಾನದ ಮಸೀದಿಯಲ್ಲಿ ಬಾಂಬ್ ಸ್ಫೋಟ 100ಕ್ಕೂ ಅಧಿಕ ಮಂದಿ ಸಾವುಅಫ್ಘಾನಿಸ್ತಾನದ ಮಸೀದಿಯಲ್ಲಿ ಬಾಂಬ್ ಸ್ಫೋಟ 100ಕ್ಕೂ ಅಧಿಕ ಮಂದಿ ಸಾವು

"ಅಫ್ಘಾನಿಸ್ತಾನದೊಂದಿಗೆ ಒಳ್ಳೆಯ ಸಂಬಂಧವನ್ನು ಇಟ್ಟುಕೊಳ್ಳುವುದು ಎಲ್ಲರಿಗೂ ಒಳಿತು. ಅಫ್ಘಾನಿಸ್ತಾನದಲ್ಲಿ ಪ್ರಸ್ತುತ ಇರುವ ತಾಲಿಬಾನ್‌ ಸರ್ಕಾರವನ್ನು ಅಸ್ಥಿರಗೊಳಿಸಲು ಏನನ್ನೂ ಮಾಡಬಾರದು. ಆ ರೀತಿ ಮಾಡಿದ್ದಲ್ಲಿ ಜನರಿಗೆ ತೊಂದರೆ ಉಂಟಾಗುತ್ತದೆ," ಎಂದು ಅಮಿರ್‌ ಖಾನ್‌ ಮುತ್ತಾಕಿ ಎಚ್ಚರಿಕೆ ನೀಡಿದ್ದಾರೆ.

ವಿದೇಶಾಂಗ ಇಲಾಖೆಯ ಉಪ ವಿಶೇಷ ಪ್ರತಿನಿಧಿ ಟಾಮ್ ವೆಸ್ಟ್ ಮತ್ತು ಯುಎಸ್‌ಎಐಡಿಯ ಉನ್ನತ ಮಾನವೀಯ ಅಧಿಕಾರಿ ಸಾರಾ ಚಾರ್ಲ್ಸ್ ನೇತೃತ್ವದ ಯುಎಸ್ ತಂಡದೊಂದಿಗೆ ಎರಡು ದಿನಗಳ ಮಾತುಕತೆಯ ಮೊದಲ ದಿನದಂದು ಮುತ್ತಾಕಿ ಈ ಹೇಳಿಕೆಯನ್ನು ನೀಡಿದ್ದಾರೆ.

ಇನ್ನು ಈ ಸಂದರ್ಭದಲ್ಲೇ "ಅಫ್ಘಾನಿಸ್ತಾನದ ಜನರಿಗೆ ಕೋವಿಡ್‌ ವಿರು‌ದ್ಧದ ಲಸಿಕೆಯನ್ನು ನೀಡಲು ಯುಎಸ್‌ ಸಹಾಯ ಮಾಡಲಿದೆ," ಎಂದು ಕೂಡಾ ತಾಲಿಬಾನ್‌ ಸರ್ಕಾರದ ವಿದೇಶಾಂಗ ಸಚಿವ ಅಮಿರ್‌ ಖಾನ್‌ ಮುತ್ತಾಕಿ ತಿಳಿಸಿದ್ದಾರೆ. ಆದರೆ ಈ ಬಗ್ಗೆ ಯುಎಸ್‌ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. "ಯುಎಸ್‌ನ ಪ್ರತಿನಿಧಿಗಳು ಅಫ್ಘಾನ್‌ ಜನರಿಗೆ ಕೋವಿಡ್‌ ವಿರುದ್ದದ ಲಸಿಕೆಯನ್ನು ನೀಡಲು ಸಹಾಯ ಮಾಡಲು ಹಾಗೂ ಅಲ್ಲಿನ ಮಾನವ ಸಂಪನ್ಮೂಲದ ಮೂಲಕ ಸಹಾಯ ಮಾಡುವುದಾಗಿ ಹೇಳಿದ್ದಾರೆ," ಎಂದು ಅಮಿರ್‌ ಖಾನ್‌ ಮುತ್ತಾಕಿ ತಿಳಿಸಿದರು.

"ಅಫ್ಘಾನಿಸ್ತಾನ ಈ ಸಂಕಷ್ಟದ ಸಂದರ್ಭದಲ್ಲಿ ಉಭಯ ದೇಶಗಳು ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳುವುದಾಗಿ ಹಾಗೂ ತಾಳ್ಮೆಯಿಂದ ಇರುವುದಾಗಿ ಭರವಸೆ ನೀಡಿದೆ. ಅಫ್ಘಾನಿಸ್ತಾನ ಎಲ್ಲಾ ಸಂಕಷ್ಟವನ್ನು ಎದುರಿಸಿ ಮುನ್ನಡೆಯಲಿದೆ," ಎಂದಿದೆ.

ಉತ್ತರ ಅಫ್ಘಾನಿಸ್ತಾನದ ಮಸೀದಿಯೊಂದರಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಬಾಂಬ್ ಸ್ಪೋಟದಲ್ಲಿ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ತಾಲಿಬಾನ್ ಪೊಲೀಸರು ಮಾಹಿತಿ ನೀಡಿದ್ದಾರೆ. ದೋಸ್ತ್ ಮೊಹಮ್ಮದ್ ಅವರು ಹೇಳಿರುವ ಪ್ರಕಾರ ಶಿಯಾ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದ್ದು, ದಾಳಿಯಲ್ಲಿ ಬಹುತೇಕರು ಮೃತಪಟ್ಟಿದ್ದಾರೆ. ಕುಂದುಜ್ ಪ್ರದೇಶದಲ್ಲಿ ಸ್ಫೋಟ ನಡೆದಿದ್ದು, ಇಸ್ಲಾಮಿಕ್ ಸ್ಟೇಟ್‌ ಸೇನೆಯು ಮೊದಲಿನಿಂದಲೂ ಅಫ್ಘಾನಿಸ್ತಾನದ ಅಲ್ಪಸಂಖ್ಯಾತರಾಗಿರುವ ಶಿಯಾ ಮುಸ್ಲಿಮರ ಮೇಲೆ ದಾಳಿ ನಡೆಸುತ್ತಲೇ ಇದೆ.

ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಈ ಹಿಂದೆ ಕುಂದುಜ್‌ನಲ್ಲಿ ಶಿಯಾ ಮಸೀದಿಗಳಲ್ಲಿ ಸಾಕಷ್ಟು ಸ್ಫೋಟಗಳು ಸಂಭವಿಸಿವೆ. ಸಾಕಷ್ಟು ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಇದಕ್ಕೂ ಮುನ್ನ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಬಾಂಬ್‌ ಸ್ಪೋಟವಾಗಿದ್ದು, ಕೆಲವು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್‌ ವಕ್ತಾರುರು ಹೇಳಿದ್ದರು. ಈದ್ಗಾ ಮಸೀದಿಯಲ್ಲಿ ಸೇರಿದ್ದವರನ್ನು ಗುರಿಯಾಗಿಸಿಕೊಂಡು ಈ ಬಾಂಬ್‌ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ. "ಪ್ರಾಥಮಿಕ ಮಾಹಿತಿ ಪ್ರಕಾರ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ. ಮೂವರು ಗಾಯಗೊಂಡಿದ್ದಾರೆ," ಎಂದು ಆಂತರಿಕ ಸಚಿವಾಲಯದ ವಕ್ತಾರ ಖಾರಿ ಸಯ್ಯದ್ ಖೋಸ್ತಿ ತಿಳಿಸಿದ್ದಾರೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆಯು ವರದಿ ಮಾಡಿದೆ.

(ಒನ್‌ಇಂಡಿಯಾ ಸುದ್ದಿಗಳು)

English summary
Taliban Warns US, not to destabilise the regime and says Nothing Should Be Done To Weaken Regime.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X