ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಮಗೆ ನಮ್ಮ ಹಣ ನೀಡಿಬಿಡಿ': ತಾಲಿಬಾನ್‌ ಒತ್ತಾಯ

|
Google Oneindia Kannada News

ಕಾಬೂಲ್‌, ಅಕ್ಟೋಬರ್‌ 29: ಅಫ್ಘಾನಿಸ್ತಾನಕ್ಕೆ ದಾಳಿ ನಡೆಸಿದ ತಾಲಿಬಾನ್‌ ದೇಶವನ್ನು ತನ್ನ ವಶಕ್ಕೆ ಪಡೆದುಕೊಂಡು ಸರ್ಕಾರವನ್ನು ರಚನೆ ಮಾಡಿದೆ. ಆದರೆ ಈಗ ತಾಲಿಬಾನ್‌ಗೆ ಸರ್ಕಾರ ನಡೆಸಲು ಆರ್ಥಿಕ ಸಮಸ್ಯೆ ಕಾಣಿಸಿಕೊಂಡಿದೆ. ಬರಪೀಡಿತ ರಾಷ್ಟ್ರವಾದ ಅಫ್ಘಾನಿಸ್ತಾನ ಈಗ ಆರ್ಥಿಕ ಸಮಸ್ಯೆ, ಬಡತನ ಮೊದಲಾದ ಸಮಸ್ಯೆಯನ್ನು ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರಿಯ ಸೆಂಟ್ರಲ್ ಬ್ಯಾಂಕ್ ಶತಕೋಟಿ ಡಾಲರ್‌ನಷ್ಟು ಹಣವನ್ನು ಬಿಡುಗಡೆ ಮಾಡಬೇಕು ಎಂದು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ಆಗ್ರಹ ಮಾಡಿದೆ.

ಯು.ಎಸ್. ಫೆಡರಲ್ ರಿಸರ್ವ್ ಮತ್ತು ಯುರೋಪ್‌ನಲ್ಲಿರುವ ಇತರೆ ಹಲವಾರು ಕೇಂದ್ರ ಬ್ಯಾಂಕುಗಳಲ್ಲಿ ಅಫ್ಘಾನಿಸ್ತಾನವು ಶತಕೋಟಿ ಡಾಲರ್ ಹಣವನ್ನು ಇರಿಸಿದೆ. ಆದರೆ ಕಳೆದ ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನವನ್ನು ತಾಲಿಬಾನ್‌ ವಶಕ್ಕೆ ಪಡೆದ ಬಳಿಕ ಈ ಅಂತಾರಾಷ್ಟ್ರೀಯ ಬ್ಯಾಂಕುಗಳು ಹಣವನ್ನು ತಡೆ ಹಿಡಿದಿದೆ. ತಾಲಿಬಾನ್‌ ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಲಾಗಿರುವ ಹಿನ್ನೆಲೆಯಲ್ಲಿಅಂತಾರಾಷ್ಟ್ರೀಯ ಮಟ್ಟದಲ್ಲಿ ತಾಲಿಬಾನ್‌ ಸರ್ಕಾರವನ್ನು ಸ್ವೀಕಾರ ಮಾಡಿಲ್ಲ ಈ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಅಫ್ಘಾನಿಸ್ತಾನ: ಕುಟುಂಬ ನಿರ್ವಹಣೆಗಾಗಿ ಸ್ವಂತ ಮಕ್ಕಳನ್ನೇ ಮಾರಾಟ ಮಾಡುತ್ತಿರುವ ಜನರುಅಫ್ಘಾನಿಸ್ತಾನ: ಕುಟುಂಬ ನಿರ್ವಹಣೆಗಾಗಿ ಸ್ವಂತ ಮಕ್ಕಳನ್ನೇ ಮಾರಾಟ ಮಾಡುತ್ತಿರುವ ಜನರು

ಅಫ್ಘಾನಿಸ್ತಾನದಲ್ಲಿ ಸರ್ಕಾರವನ್ನು ನಡೆಸುವುದು ಇನ್ನಷ್ಟು ಕಷ್ಟವಾಗುತ್ತಲೇ ಇರುವ ಹಿನ್ನೆಲೆ ತಾಲಿಬಾನ್‌ ಸರ್ಕಾರದ ಹಣಕಾಸುವ ಸಚಿವಾಲಯದ ವಕ್ತಾರ ಅಹ್ಮದ್ ವಾಲಿ ಹಕ್ಮಲ್ ಮಾತನಾಡಿ, "ಸರ್ಕಾರವು ಮಹಿಳೆಯರ ಶಿಕ್ಷಣ ಸೇರಿದಂತೆ ಮಾನವ ಹಕ್ಕುಗಳನ್ನು ಗೌರವಿಸುತ್ತದೆ. ಏಕೆಂದರೆ ನಾವು ಮಾನವೀಯ ನೆಲೆಗಟ್ಟಿನಲ್ಲಿ ಸಹಾಯವನ್ನು ಕೋರುತ್ತಿದ್ದೇವೆ," ಎಂದಿದ್ದಾರೆ.

 Taliban Want Billions Parked Abroad Amid Crunch says Just Give Us Our Money

1996-2001 ರಲ್ಲಿ ತಾಲಿಬಾನ್‌ ಸರ್ಕಾರವನ್ನು ರಚನೆ ಮಾಡಿದಾಗ, ಮಹಿಳೆಯರಿಗೆ ಯಾವುದೇ ಸ್ವಾತಂತ್ರ್ಯವಿರಲಿಲ್ಲ. ಮಹಿಳೆಯರು ಶಿಕ್ಷಣ ಪಡೆಯಲು ಹಾಗೂ ಉದ್ಯೋಗವನ್ನು ಪಡೆಯಲು ಅನುಮತಿ ಇರಲಿಲ್ಲ. ಮಹಿಳೆಯರು ಕಡ್ಡಾಯವಾಗಿ ಮುಖವನ್ನು ಮುಚ್ಚಬೇಕಾಗಿತ್ತು. ಮನೆಯಿಂದ ಹೊರಗೆ ಹೋಗಬೇಕಾದರೂ ಪುರುಷರ ಜೊತೆಯಲ್ಲೇ ಹೋಗಬೇಕಿತ್ತು.

ನಮಗೆ ನಮ್ಮ ಹಣ ನೀಡಿ, ಇಲ್ಲವಾದರೆ ನಿಮಗೆಯೇ ತೊಂದರೆ

"ಆ ಹಣವು ಅಫ್ಘಾನ್‌ ದೇಶಕ್ಕೆ ಸೇರಿದ ಹಣ. ನಮಗೆ ನಮ್ಮ ಹಣವನ್ನು ನೀಡಿ. ಹಣವನ್ನು ಹೀಗೆ ತಡೆದು ಹಿಡಿಯುವುದು ಅನೈತಿಕ ಹಾಗೂ ಇದು ಕಾನೂನು, ಮೌಲ್ಯಕ್ಕೆ ವಿರುದ್ಧವಾದುದು," ಎಂದು ತಾಲಿಬಾನ್‌ ಸರ್ಕಾರದ ಹಣಕಾಸುವ ಸಚಿವಾಲಯದ ವಕ್ತಾರ ಅಹ್ಮದ್ ವಾಲಿ ಹಕ್ಮಲ್ ಆಗ್ರಹಿಸಿದ್ದಾರೆ. ಯುರೋಪ್‌ನ ಕಡೆಗೆ ಸಾಮೂಹಿಕ ವಲಸೆ, ಬಿಕ್ಕಟ್ಟನ್ನು ತಪ್ಪಿಸುವ ನಿಟ್ಟಿನಲ್ಲಿ ಹಾಗೂ ಆರ್ಥಿಕ ಕುಸಿತವನ್ನು ತಪ್ಪಿಸಲು ಜರ್ಮನಿ ಸೇರಿದಂತೆ ಯುರೋಪಿಯನ್ ರಾಷ್ಟ್ರಗಳಿಗೆ ತಮ್ಮ ಪಾಲನ್ನು ಬಿಡುಗಡೆ ಮಾಡಲು ಕೇಂದ್ರ ಬ್ಯಾಂಕ್‌ನ ಉನ್ನತ ಅಧಿಕಾರಿ ಶಾ ಮೆಹ್ರಾಬಿ ಕರೆ ನೀಡಿದರು.

ಅಫ್ಘಾನ್ ಮಹಿಳಾ ಆಟಗಾರ್ತಿಯ ಶಿರಚ್ಛೇದನಗೈದ ತಾಲಿಬಾನ್‌ಅಫ್ಘಾನ್ ಮಹಿಳಾ ಆಟಗಾರ್ತಿಯ ಶಿರಚ್ಛೇದನಗೈದ ತಾಲಿಬಾನ್‌

"ಪರಿಸ್ಥಿತಿ ತೀರಾ ಹತಾಶವಾಗಿದೆ ಹಾಗೂ ಹಣದ ಪ್ರಮಾಣ ತೀರಾ ಕಡಿಮೆ ಆಗುತ್ತಿದೆ," ಎಂದು ಅಫ್ಘಾನ್‌ ಸೆಂಟ್ರಲ್‌ ಬ್ಯಾಂಕ್‌ನ ಮಂಡಳಿಯ ಸದಸ್ಯ ಶಾ ಮೆಹ್ರಾಬಿ ರಾಯಿಟರ್ಸ್‌ಗೆ ತಿಳಿಸಿದರು. "ಅಫ್ಘಾನಿಸ್ತಾನಕ್ಕೆ ತನ್ನ ಹಣವು ಲಭಿಸದಿದ್ದರೆ ಇದರಿಂದಾಗಿ ಯುರೋಪ್‌ ದೇಶಗಳ ಮೇಲೆ ತೀವ್ರ ಪರಿಣಾಮ ಉಂಟಾಗಲಿದೆ. ಜನರಿಗೆ ಆಹಾರವಿಲ್ಲದೆ ಭಾರೀ ಆತಂಕಕ್ಕೆ ಒಳಗಾಗಿದ್ದಾರೆ. ಆದ್ದರಿಂದ ದೇಶ ತೊರೆದು ಯುರೋಪ್‌ಗೆ ಹೋಗುತ್ತಿದ್ದಾರೆ," ಎಂಬ ಎಚ್ಚರಿಕೆಯನ್ನು ಕೂಡಾ ಶಾ ಮೆಹ್ರಾಬಿ ನೀಡಿದ್ದಾರೆ. ಸರಿಸುಮಾರು 400 ಮಿಲಿಯನ್ ಆಫ್ಘಾನಿಗಳ ದೈನಂದಿನ ತೆರಿಗೆಯನ್ನು ಹೊಂದಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ಬೇರೆ ರಾಷ್ಟ್ರಗಳು ಅಫ್ಘಾನಿಸ್ತಾನದಲ್ಲಿ ಆಗುವ ಈ ಮಾನವೀಯ ವಿಪತ್ತನ್ನು ಪರಿಹರಿಸಲು ಸಹಾಯವನ್ನು ಮಾಡಲು ಬಯಸಿದೆ. ಆದರೆ ಈ ಸಂದರ್ಭದಲ್ಲೇ ತಾಲಿಬಾನ್‌ ಸರ್ಕಾರವನ್ನು ಗುರುತಿಸಲು ನಿರಾಕರಿಸಿದೆ.

ಎಲ್‌ಜಿಬಿಟಿ, ನಮ್ಮ ಷರಿಯಾಗೆ ವಿರುದ್ಧ ಎಂದ ತಾಲಿಬಾನ್‌ ವಕ್ತಾರ

ಇನ್ನು ಈ ಸಂದರ್ಭದಲ್ಲಿ ತಾಲಿಬಾನ್‌ ಸರ್ಕಾರದ ಹಣಕಾಸುವ ಸಚಿವಾಲಯದ ವಕ್ತಾರ ಅಹ್ಮದ್ ವಾಲಿ ಹಕ್ಮಲ್ ಮಾನವ ಹಕ್ಕುಗಳ ಬಗ್ಗೆ ಮಾತನಾಡಿದ್ದಾರೆ. "ಅಫ್ಘಾನಿಸ್ತಾನವು ಮಹಿಳೆಯರು ಶಿಕ್ಷಣವನ್ನು ಪಡೆಯಲು ಅನುಮತಿ ನೀಡುತ್ತದೆ. ಆದರೆ ಪುರುಷರೊಂದಿಗೆ ಒಂದೇ ತರಗತಿಯಲ್ಲಿ ಶಿಕ್ಷಣವನ್ನು ನೀಡಲು ಆಗದು. ನಾವು ಮಾನವ ಹಕ್ಕುಗಳನ್ನು ಗೌರವಿಸುತ್ತೇವೆ. ಆದರೆ ಇಸ್ಲಾಮ್‌ ಕಾನೂನಿನ ಪ್ರಕಾರ ಮಾನವ ಹಕ್ಕುಗಳನ್ನು ನಾವು ಗೌರವಿಸುತ್ತೇವೆ. ಇದರಲ್ಲಿ ಸಲಿಂಗ ಕಾಮ ಎಂಬುವುದು ಮಾನ್ಯತೆ ಆಗಲಾರದು. ಎಲ್‌ಜಿಬಿಟಿ.. ಅದು ನಮ್ಮ ಚರಿಯಾ ಕಾನೂನಿಗೆ ವಿರುದ್ಧವಾದುದ್ದು," ಎಂದಿದ್ದಾರೆ.

ಯುರೋಪಿಯನ್ ಒಕ್ಕೂಟದಿಂದ ಅಫ್ಘಾನಿಸ್ತಾನಕ್ಕೆ ಆರ್ಥಿಕ ನೆರವು ಘೋಷಣೆಯುರೋಪಿಯನ್ ಒಕ್ಕೂಟದಿಂದ ಅಫ್ಘಾನಿಸ್ತಾನಕ್ಕೆ ಆರ್ಥಿಕ ನೆರವು ಘೋಷಣೆ

ಇನ್ನು ಹಣದ ವಿಚಾರದಲ್ಲಿ ಮಾತನಾಡಿದ ಅಹ್ಮದ್ ವಾಲಿ ಹಕ್ಮಲ್, "ನಮಗೆ ಹಣ ನೀಡದಿದ್ದರೆ, ಅಫ್ಘಾನಿಸ್ತಾನದ ಆಮದುದಾರರಿಗೆ ಆಮದು ಮಾಡಿಕೊಳ್ಳಲು ಹಣವನ್ನು ನೀಡಲು ಸಾಧ್ಯವಾಗುವುದಿಲ್ಲ, ಬ್ಯಾಂಕುಗಳು ನಷ್ಟ ಅನುಭವಿಸಿ ಕುಸಿಯುತ್ತದೆ, ಆಹಾರ ಎಂಬುವುದೇ ವಿರಳ ವಸ್ತುವಾಗುತ್ತದೆ, ದಿನಸಿ ಅಂಗಡಿಗಳು ಬರಿದಾಗುತ್ತದೆ," ಎಂದು ವಿವರಿಸಿದರು.

(ಒನ್‌ಇಂಡಿಯಾ ಸುದ್ದಿ)

English summary
Taliban Want Billions Parked Abroad Amid Crunch says Just Give Us Our Money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X