ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಕಿಯಿಂದ ಬಾಣಲೆಗೆ..! ನೆಮ್ಮದಿಯನ್ನೇ ಹಾಳು ಮಾಡುತ್ತಿದೆಯಾ ಅಮೆರಿಕ..?

|
Google Oneindia Kannada News

ಬೇಕು ಅಂದಾಗ ಬಳಸಿಕೊಂಡು, ಬೇಡ ಅಂದಾಗ ಬಿಸಾಡೋದು ಅಮೆರಿಕದ ಬುದ್ಧಿ. ಇಂತಹ ಸಣ್ಣತನದಿಂದ ಅಮೆರಿಕ ಎಂಬ ದೈತ್ಯ ದೇಶಕ್ಕೆ ಈಗ ಹತ್ತಾರು ಶತ್ರು ರಾಷ್ಟ್ರಗಳು ಹುಟ್ಟಿಕೊಂಡಿವೆ. ಈಗಲೂ ಅಂತಹದ್ದೇ ಸಣ್ಣ ಬುದ್ಧಿ ತೋರಿಸುತ್ತಿರುವ ಆರೋಪ ಅಮೆರಿಕ ವಿರುದ್ಧ ಕೇಳಿಬಂದಿದೆ.

ಆದರೆ ಈ ಬಾರಿ ಯಾರ ಮನೆ ಒಳಗೂ ನುಗ್ಗದೆ, ಯಾರಿಗೂ ತೊಂದರೆ ಮಾಡದೆ ವಿಲನ್ ಪಟ್ಟ ಕಟ್ಟಿಕೊಳ್ಳುತ್ತಿದೆ ಅಮೆರಿಕ. ಅಷ್ಟಕ್ಕೂ ಅಫ್ಘಾನಿಸ್ತಾನದ ಕರುಣಾಜನಕ ಕಥೆ ಇದು. ಇಷ್ಟುದಿನ ಅಫ್ಘಾನಿಸ್ತಾನ ಎಂಬ ಉಗ್ರರ ಕೂಪದಲ್ಲಿ ಶಾಂತಿ ಕಾಪಾಡುತ್ತೇನೆ ಅಂತಾ ಮೊಳೆ ಹೊಡೆದು ಕೂತಿದ್ದ ಅಮೆರಿಕ, ದಿಢೀರ್ ಅಲ್ಲಿಂದ ಹೊರಗೆ ಬರುತ್ತಿದೆ. ಒಂದೊಂದೆ ಜಾಗದಿಂದ ಹೊರ ಬರುತ್ತಿದೆ ಅಮೆರಿಕ ಸೇನೆ.

ಅರೆರೆ ಇದರಲ್ಲೇನು ತೊಂದರೆ ಅಂದ್ರಾ? ಹೌದು, ಇಲ್ಲೇ ತೊಂದರೆ ಎದುರಾಗಿದ್ದು. ಏಕೆಂದರೆ ಇಷ್ಟು ದಿನ ಅಮೆರಿಕ ಸೇನೆ ಇದೆ ಅಂತಾ ತಾಲಿಬಾನ್ ಉಗ್ರರು ಒಂದಷ್ಟು ಬಾಲ ಮುದುರಿಕೊಂಡು ಬೆಟ್ಟ, ಗುಡ್ಡದಲ್ಲಿ ಅಡಗಿದ್ದರು. ಆದರೆ ಯಾವಾಗ ಅಮೆರಿಕ ಸೇನೆ ಸಮೇತ ಅಲ್ಲಿಂದ ಜಾಗ ಖಾಲಿ ಮಾಡೋಕೆ ಮುಂದಾಯ್ತೋ, ಅಂದಿನಿಂದ ಪಾಪಿ ಉಗ್ರರು ಬಾಲ ಬಿಚ್ಚುತ್ತಿದ್ದಾರೆ. ಒಂದೊಂದೇ ಊರುಗಳು ತಾಲಿಬಾನಿಗಳ ವಶವಾಗುತ್ತಿವೆ. ಉಗ್ರರ ಅಟ್ಟಹಾಸ ಎಷ್ಟಿದೆ ಎಂದರೆ, ಕೆಲವೇ ವಾರಗಳಲ್ಲಿ ಹಿಂಸಾಚಾರ 2 ಪಟ್ಟು ಹೆಚ್ಚಾಗಿದೆ.

 ತಾಲಿಬಾನ್ ಉಗ್ರರು ಅದೆಷ್ಟು ಕಿರಾತಕರು

ತಾಲಿಬಾನ್ ಉಗ್ರರು ಅದೆಷ್ಟು ಕಿರಾತಕರು

ತಾಲಿಬಾನ್ ಉಗ್ರರು ಅದೆಷ್ಟು ಕಿರಾತಕರು ಎಂಬುದನ್ನ ಬಿಡಿಸಿ ಹೇಳಬೇಕಾದ ಅಗತ್ಯತೆ ಇಲ್ಲ. ಒಂದು ಕಾಲದ ಸ್ವರ್ಗದಂತಹ ಜಾಗ ಅಫ್ಘಾನಿಸ್ತಾನ ಇಂದು ನರಕವಾಗಿ ಬದಲಾಗಲು ತಾಲಿಬಾನ್ ಗ್ಯಾಂಗ್ ಕಾರಣವಾಯಿತು. ಆದರೆ 20 ವರ್ಷಗಳ ಹಿಂದೆ ಅಮೆರಿಕ ಸೇನೆ ಭಾರಿ ಪ್ರಮಾಣದಲ್ಲಿ ತನ್ನ ಗ್ಯಾಂಗ್ ಕರೆದುಕೊಂಡು ಬಂದಿತ್ತು. ಆ ಬಳಿಕ ಪರಿಸ್ಥಿತಿ ಒಂದಷ್ಟು ಹಿಡಿತಕ್ಕೆ ಸಿಕ್ಕಿತ್ತು ಎನ್ನಬಹದಾದರೂ ಉಗ್ರರ ದಾಳಿ ನಿಂತಿರಲಿಲ್ಲ. ಈಗ ದಿಢೀರ್ ಅಮೆರಿಕ ಸೇನೆ ಜಾಗ ಖಾಲಿ ಮಾಡುತ್ತಿದ್ದು, ತಾಲಿಬಾನ್ ಕಿರಾತಕರು ಒಂದೊಂದೇ ಹಳ್ಳಿಗಳನ್ನು ತಮ್ಮ ವಶಕ್ಕೆ ಪಡೆಯುತ್ತಿದ್ದಾರೆ. ಜನರನ್ನ ಮನಸ್ಸಿಗೆ ಬಂದಂತೆ ಹಿಂಸಿಸುತ್ತಿದ್ದಾರೆ.

 ಉಗ್ರ ಪಡೆಗೆ ಖುಷಿ ಕೊಟ್ಟಿದೆ

ಉಗ್ರ ಪಡೆಗೆ ಖುಷಿ ಕೊಟ್ಟಿದೆ

ಅಫ್ಘಾನಿಸ್ತಾನ ಬಿಟ್ಟು ಅಮೆರಿಕ ಸೇನೆ ಹೊರಗೆ ಹೋಗುತ್ತಿರುವುದು ಅಲ್ಲಿನ ಸರ್ಕಾರಕ್ಕೆ ಚಿಂತೆ ತಂದಿದ್ದರೆ, ಉಗ್ರ ಪಡೆಗೆ ಖುಷಿ ಕೊಟ್ಟಿದೆ. ಏಕೆಂದರೆ ದಿಢೀರ್ ಅಮೆರಿಕ ಸೇನೆ ಹೊರ ಹೋದರೆ ತಾಲಿಬಾನ್‌ ಉಗ್ರರ ಉಪಟಳ ಹೆಚ್ಚಲಿದೆ. ಅಮೆರಿಕ ಸೇನೆ ಇದ್ದಾಗಲೇ ತಾಲಿಬಾನ್ ಅಟ್ಟಹಾಸ ಕಂಟ್ರೋಲ್‌ಗೆ ಬರಲಿಲ್ಲ. ಇನ್ನು ಅಮೆರಿಕ ತನ್ನ ಸೇನೆ ಹಿಂದಕ್ಕೆ ಕರೆಸಿಕೊಂಡರೆ ಅಫ್ಘಾನ್ ಪರಿಸ್ಥಿತಿ ಹೇಗಿರಬೇಡ? ಇದೇ ಚಿಂತೆ ಅಫ್ಘಾನಿಸ್ತಾನದ ಸರ್ಕಾರಕ್ಕೂ ಕಾಡುತ್ತಿದೆ. ಅಮೆರಿಕ ಇಂತಹ ಸಂದರ್ಭದಲ್ಲಿ ಅಫ್ಘಾನ್‌ನ ಒಂಟಿಯಾಗಿ ಬಿಟ್ಟು ಹೋದರೆ ತಾಲಿಬಾನ್ ಇಡೀ ಅಫ್ಘಾನಿಸ್ತಾನವನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಅಪಾಯ ಇದೆ ಎನ್ನುತ್ತಾರೆ ತಜ್ಞರು.

 ಅಮೆರಿಕ ದಿಢೀರ್ ಅಫ್ಘಾನಿಸ್ತಾನದಿಂದ ಹೊರ ಹೋಗುವುದಿಲ್ಲ

ಅಮೆರಿಕ ದಿಢೀರ್ ಅಫ್ಘಾನಿಸ್ತಾನದಿಂದ ಹೊರ ಹೋಗುವುದಿಲ್ಲ

ಅಮೆರಿಕ ದಿಢೀರ್ ಅಫ್ಘಾನಿಸ್ತಾನದಿಂದ ಹೊರ ಹೋಗುವುದಿಲ್ಲ. ಹಂತ ಹಂತವಾಗಿ ಸೇನೆಯನ್ನು ಸೆಪ್ಟೆಂಬರ್ 11ರ ಒಳಗಾಗಿ ವಾಪಸ್ ಕರೆಸಿಕೊಳ್ಳಲಿದೆ. ಆದ್ರೆ ಅಮೆರಿಕದ ನಿರ್ಧಾರದ ಬೆನ್ನಲ್ಲೇ ಯಾರಿಗೆ ಲಾಭ, ಯಾರಿಗೆ ನಷ್ಟ ಎಂಬ ಲೆಕ್ಕಾಚಾರಗಳು ಆರಂಭವಾಗಿವೆ. ಮತ್ತೊಂದು ಕಡೆ ಅಫ್ಘಾನಿಸ್ತಾನದ ಸ್ಥಳೀಯರಿಗೆ ತಾಲಿಬಾನಿಗಳ ಭಯ ಇನ್ನೂ ಹೋಗಿಲ್ಲ. ಏಕೆಂದರೆ ತಾಲಿಬಾನಿ ಉಗ್ರರು ನಡೆಸಿರುವ ಕೃತ್ಯಗಳು ಅಷ್ಟು ಭಯಾನಕವಾಗಿವೆ. ಇಷ್ಟೆಲ್ಲದರ ನಡುವೆ ಮತ್ತೊಂದು ದೇಶ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಬಹುದಾ ಎಂಬ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ. ಆದರೆ ಇದಕ್ಕೆಲ್ಲಾ ಕಾಲವೇ ಉತ್ತರ ನೀಡಲಿದೆ.

 ಬ್ರಿಟಿಷರಿಂದ ಅಫ್ಘಾನ್‌ 1919ರಲ್ಲೇ ಸ್ವಾತಂತ್ರ್ಯ ಪಡೆದಿದೆ

ಬ್ರಿಟಿಷರಿಂದ ಅಫ್ಘಾನ್‌ 1919ರಲ್ಲೇ ಸ್ವಾತಂತ್ರ್ಯ ಪಡೆದಿದೆ

ಬ್ರಿಟಿಷರಿಂದ ಅಫ್ಘಾನ್‌ 1919ರಲ್ಲೇ ಸ್ವಾತಂತ್ರ್ಯ ಪಡೆದಿದೆ. ಇದು ಭಾರತಕ್ಕಿಂತ ಮೊದಲಾದರೂ ಅಲ್ಲಿ ಶಾಂತಿ ನೆಲೆಸಿಲ್ಲ. ಸದ್ಯಕ್ಕೆ ಅಫ್ಘಾನ್‌ ಸ್ಥಿತಿ ಹೇಗಿದೆ ಎಂದರೆ, ಧೈರ್ಯವಾಗಿ ಹೊರಗೆ ಹೋಗಲೂ ಸಾಧ್ಯವಿಲ್ಲ. ಯಾವ ಕ್ಷಣದಲ್ಲಿ ಉಗ್ರಪಡೆ ಗುಂಡಿನ ಮಳೆಗರೆಯುತ್ತೋ, ಬಾಂಬ್ ಹಾಕುತ್ತೋ ಎಂಬ ಭಯ. ಅಫ್ಘಾನ್‌ನಲ್ಲಿ ದಿನಕ್ಕೆ ಒಂದಾದರೂ ಹಿಂಸೆ ನಡೆಸದಿದ್ದರೆ ತಾಲಿಬಾನ್ ಉಗ್ರರಿಗೆ ನಿದ್ದೆ ಬರೋದಿಲ್ಲ. ಈಗಾಗಲೇ ಲಕ್ಷಾಂತರ ಜನ ರಕ್ತ ಪಿಪಾಸುಗಳ ದಾಳಿಗೆ ಬಲಿಯಾಗಿದ್ದಾರೆ. ತಾಲಿಬಾನಿಗಳ ಉಪಟಳಕ್ಕೆ ಬ್ರೇಕ್ ಹಾಕಲು ಅಶ್ರಫ್ ಘನಿ ಸರ್ಕಾರ ಪರದಾಡುತ್ತಿದೆ. ಕಂಡ ಕಂಡಲ್ಲಿ ಪಟಾಕಿಗಳಂತೆ ಉಗ್ರರು ಬಾಂಬ್ ಉಡಾಯಿಸುತ್ತಿದ್ದಾರೆ.

 ನರಕದರ್ಶನ ಗ್ಯಾರಂಟಿ

ನರಕದರ್ಶನ ಗ್ಯಾರಂಟಿ

ಅಫ್ಘಾನಿಸ್ತಾನದ ಜನರು ಅದೇನು ಪಾಪ ಮಾಡಿದ್ದಾರೋ ಗೊತ್ತಿಲ್ಲ, ಅಲ್ಲಿ ಬದುಕಬೇಕು ಎಂದರೆ ನರಕದರ್ಶನ ಗ್ಯಾರಂಟಿ. ಹೆಜ್ಜೆ ಹೆಜ್ಜೆಗೂ ಆವರಿಸುವ ಭಯ. ಯಾವ ಸಮಯದಲ್ಲಿ ಏನಾಗುತ್ತೋ ಎಂಬ ಆತಂಕ. ನೆಮ್ಮದಿ, ಶಾಂತಿ ಎಂಬುದೇ ಅಫ್ಘಾನಿಸ್ತಾನದ ಜನರಿಗೆ ಮರೆತು ಹೋದಂತಿದೆ. ಇನ್ನು ಅಲ್ಲಿನ ಆರ್ಥಿಕ ಸ್ಥಿತಿ ಕೂಡ ತೀರಾ ಹದಗೆಟ್ಟು ಹೋಗಿದ್ದು, ಹೊಟ್ಟೆಗೆ ಅನ್ನವಿಲ್ಲದೆ ಕೋಟ್ಯಂತರ ಮಂದಿ ನರಳುತ್ತಿದ್ದಾರೆ. ಮಕ್ಕಳಿಗೆ ವಿದ್ಯಾಭ್ಯಾಸವೂ ಸಿಗದ ಪರಿಸ್ಥಿತಿ ಅಫ್ಘಾನಿಸ್ತಾನದಲ್ಲಿ ನಿರ್ಮಾಣವಾಗಿದೆ. ಹೀಗೆ ಅಫ್ಘಾನಿಸ್ತಾನದ ಪರಿಸ್ಥಿತಿ ಸುಧಾರಣೆ ನೆಪ ಮಾಡಿ ಬಂದು ಸೇರಿಕೊಂಡ ಯಾವುದೇ ದೇಶ ಕೂಡ ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವಂತೆ ಮಾಡುವಲ್ಲ ಸಕ್ಸಸ್ ಆಗಿಲ್ಲ. ಅದು ಬಿಡಿ ಪ್ರಾಮಾಣಿಕ ಪ್ರಯತ್ನಗಳನ್ನೂ ನಡೆಸುತ್ತಿಲ್ಲ ಎಂಬ ಆರೋಪವಿದೆ.

English summary
Taliban getting more grip on Afghanistan after US military departing from the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X