ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿದಿನ ಗಡಿಯತ್ತ 8-9 ಸಾವಿರ ಅಫ್ಘಾನಿಗಳು: ಪಾಕ್‌ಗೆ ಹೋಗುವವರನ್ನು ತಡೆದ ತಾಲಿಬಾನ್‌

|
Google Oneindia Kannada News

ಕಾಬೂಲ್‌, ಸೆಪ್ಟೆಂಬರ್‌ 30: ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಆಡಳಿತದಿಂದಾಗಿ ಆತಂಕಕ್ಕೆ ಒಳಗಾಗಿರುವ ಸಾವಿರಾರು ಅಫ್ಘಾನಿಸ್ಥಾನಿಗಳು ದೇಶವನ್ನು ಬಿಟ್ಟು ಹೋಗಲು ಪ್ರಯತ್ನ ಮಾಡುತ್ತಿದ್ದಾರೆ. ತಮ್ಮ ದೇಶದ ದಕ್ಷಿಣ ಗಡಿಯಾದ ಸಾವಿರಾರು ಅಫ್ಘಾನಿಸ್ಥಾನಿಗಳು ಪಾಕಿಸ್ತಾನದತ್ತ ಧಾವಿಸಿದ್ದಾರೆ. ಆದರೆ ತಾಲಿಬಾನ್‌ ಮಾತ್ರ ಯಾವುದೇ ಅಫ್ಘಾನಿಸ್ತಾನಿಗಳನ್ನು ಗಡಿ ದಾಟಲು ಬಿಟ್ಟಿಲ್ಲ, ತಡೆದು ನಿಲ್ಲಿಸಿದೆ ಎಂದು ವರದಿಯಾಗಿದೆ.

ಪಾಕಿಸ್ತಾನದಿಂದ ಕೆಲವು ಕಿಲೋ ಮೀಟರ್‌ ದೂರದಲ್ಲಿ ಇರುವ ಸ್ಪಿನ್‌ ಬೋಡಾಕ್‌ನ ವ್ಯಾಪಾರಿ ಪಟ್ಟಣದಲ್ಲಿ ದಾರಿಯಲ್ಲಿ ಕೂತಿರುವ ಝಕ್ಕೀರುದ್ದೀನ್‌ ಎಂಬಾ ಅಫ್ಘಾನಿಸ್ತಾನಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ನಾನು ಅದೇಷ್ಟೋ ಬಾರಿ ಪಾಕಿಸ್ತಾನ ಗಡಿಯನ್ನು ದಾಟಲು ಸಾಧ್ಯವಾಗದೆ ಹಿಂದಕ್ಕೆ ಬಂದಿದ್ದೇನೆ, ಕೆಲವೊಮ್ಮೆ ಹಿಂಸಾತ್ಮಕವಾಗಿ ನನ್ನನ್ನು ಹಿಂದೆ ಕಳುಹಿಸಿದ್ದಾರೆ," ಎಂದು ತಿಳಿಸಿದ್ದಾರೆ.

ತಾಲಿಬಾನ್ ಸರ್ಕಾರಕ್ಕೆ ನೆರವಾಗಲು ಪಾಕ್‌ಗೆ ಎದುರಾಗಿದೆ ತೊಂದರೆತಾಲಿಬಾನ್ ಸರ್ಕಾರಕ್ಕೆ ನೆರವಾಗಲು ಪಾಕ್‌ಗೆ ಎದುರಾಗಿದೆ ತೊಂದರೆ

"ಪಾಕಿಸ್ತಾನದವರು ಎಂದು ಅಗತ್ಯ ದಾಖಲೆಗಳನ್ನು ಹೊಂದಿರುವವರನ್ನು ಮಾತ್ರ ನಾವು ಗಡಿಯ ಮೂಲಕ ಪಾಕಿಸ್ತಾನಕ್ಕೆ ಹೋಗಲು ಬಿಡುತ್ತೇವೆ," ಎಂದು 25 ವರ್ಷದ ಝಕ್ಕೀರುದ್ಧೀನ್‌ ಎಂಬ ರೈತ, ಮೂರು ಮಕ್ಕಳ ತಂದೆ ಎಎಫ್‌ಪಿಗೆ ಹೇಳಿದ್ದಾರೆ. "ನಾವು ಗಡಿ ದಾಟಿ ಹೋಗಿ ಅಲ್ಲಿ ಕೆಲಸ ಮಾಡಬೇಕು. ಇಲ್ಲಿ ಯಾವುದೇ ಕೆಲಸವಿಲ್ಲ," ಎಂದು ಕೂಡಾ ಹೇಳಿದ್ದಾರೆ.

Taliban Stops At Border Afghans Trying To Flee To Pakistan

ಯುದ್ಧ ಪೀಡಿತ ದೇಶವನ್ನು ಪುನರ್‌ ರಚನೆ ಮಾಡುವ ನಿಟ್ಟಿನಲ್ಲಿ ತಾಲಿಬಾನ್‌ ಸರ್ಕಾರವು ಅಫ್ಘಾನಿಸ್ತಾನಿಗಳು ದೇಶದಲ್ಲಿಯೇ ಉಳಿಯಬೇಕು ಎಂದು ತಿಳಿಸಿದ್ದಾರೆ. "ತಾಲಿಬಾನಿಗರು ಜನರೇ ಇದು ನಿಮ್ಮ ದೇಶ ಎಂದು ಹೇಳುತ್ತಾರೆ. ನೀವು ದೇಶ ಬಿಟ್ಟು ಹೋಗಬೇಡಿ ಎಂದು ಹೇಳುತ್ತಾರೆ," ಎಂದು ರಹ್‌ಮದ್‌ ವಾರ್ದಕ್‌ ತಿಳಿಸಿದ್ದಾರೆ. ರಹ್‌ಮದ್‌ ವಾರ್ದಕ್‌ ಅಫ್ಘಾನಿಸ್ತಾನವನ್ನು ಬಿಟ್ಟು ಹೋಗುವ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದಾರೆ.

ಇನ್ನು ಈ ನಡುವೆ ಪಾಕಿಸ್ತಾನದ ಚಮ್ಮಾನ್‌ನಲ್ಲೂ ಗಡಿ ದಾಟುವವರನ್ನು ತಡೆಯಲಾಗುತ್ತಿದೆ. ಪಾಕಿಸ್ತಾನಿಗಳು ತಡೆಯುತ್ತಿದ್ದಾರೆ ಎಂದು ವರದಿಯಾಗಿದೆ. "ಪ್ರತಿ ದಿನ ಸುಮಾರು ಎಂಟು ಸಾವಿರದಿಂದ ಒಂಬತ್ತು ಸಾವಿರಷ್ಟು ಮಂದಿ ಗಡಿಯಲ್ಲಿ ದಾಟಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅವರ ಬಳಿ ಅಗತ್ಯ ದಾಖಲೆಗಳು ಇಲ್ಲ. ಆದ್ದರಿಂದಾಗಿ ಮತ್ತೆ ತಿರುಗಿ ಹೋಗುತ್ತಾರೆ," ಎಂದು ಗಡಿಯಲ್ಲಿರುವ ಸಿಬ್ಬಂದಿ ಮುಲ್ಲಾ ಮೌಲ್ವಿ ಹಕ್‌ಯಾರ್‌ ವಿವರಿಸಿದ್ದಾರೆ.

"ಜನರು ಅಫ್ಘಾನಿಸ್ತಾನವನ್ನು ತೊರೆಯದಂತೆ ನಾವು ಒತ್ತಾಯ ಮಾಡುತ್ತಿದ್ದೇವೆ," ಎಂದು ಕಂದಹಾರ ಪ್ರಾಂತ್ಯದ ತಾಲಿಬಾನ್‌ ಅಧಿಕಾರಿ ಮೌಲ್ವಿ ನೂರ್‌ ಮೊಹಮ್ಮದ್‌ ಸಾಯೀದ್‌ ತಿಳಿಸಿದ್ದಾರೆ. "ಹಾಗೆಯೇ ಅಫ್ಘಾನಿಸ್ತಾನದ ಜನರು ಅಫ್ಘಾನಿಸ್ತಾನವನ್ನೇ ತೊರೆದು ಹೋಗುವುದು ಅವರು ಈ ದೇಶದ ಗೌರವಕ್ಕೆ ಮಾಡುವ ಅಪಮಾನ, ನೀವು ಅಫ್ಘಾನಿಸ್ತಾನದ ಸಂಸ್ಕೃತಿಗೆ ಇರುವ ಗೌರವವನ್ನು ಕಳೆದುಕೊಳ್ಳುತ್ತೀರಿ," ಎಂದು ಅಭಿಪ್ರಾಯಿಸಿದ್ದಾರೆ.

ಕೋವಿಡ್ ಸಾಂಕ್ರಾಮಿಕ ಮತ್ತು ಇತ್ತೀಚಿನ ಅಫ್ಘಾನಿಸ್ತಾನದ ಬೆಳವಣಿಗೆಗೂ ಮುನ್ನ ಪಾಕಿಸ್ತಾನ ಗಡಿಯು ಕೆಲವೊಂದು ನಿರ್ಬಂಧಗಳೊಂದಿಗೆ ತೆರೆದಿತ್ತು. ಆದರೆ ತಾಲಿಬಾನ್‌ ಯಾವಾಗ ಸ್ಪಿನ್‌ ಬೋಲ್ಡಾಕ್‌ ಪ್ರದೇಶವನ್ನು ವಶಕ್ಕೆ ಪಡೆದುಕೊಂಡಿತೋ ಅಂದಿನಿಂದ ಪಾಕಿಸ್ತಾನ ಗಡಿಯನ್ನು ಮುಚ್ಚಿದೆ. ಯುಎಸ್‌ ಬೆಂಬಲಿತ ಅಫ್ಘಾನಿಸ್ತಾನ ಸರ್ಕಾರ ಹೋಗಿ ತಾಲಿಬಾನ್‌ ಆಗಸ್ಟ್‌ನಲ್ಲಿ ತನ್ನ ಸರ್ಕಾರವನ್ನು ಸ್ಥಾಪನೆ ಮಾಡಿದ ಬಳಿಕ ಪಾಕಿಸ್ತಾನವು ಮತ್ತೆ ಗಡಿಯನ್ನು ತೆರೆದಿದೆ.

"ಮೊದಲಿಗೆ, ಅನೇಕ ಜನರು ಗಡಿಯನ್ನು ದಾಟಬಹುದು" ಎಂದು ಯುಎನ್‌ ನಿರಾಶ್ರಿತರ ಸಂಸ್ಥೆ ಯುಎನ್‌ಎಚ್‌ಸಿಆರ್‌ನ ಕ್ರಾಸಿಂಗ್ ಪಾಯಿಂಟ್ ಅನ್ನು ಮೇಲ್ವಿಚಾರಣೆ ಮಾಡುವ ಸಮಿ ಉಲ್ ಹಕ್ ಹೇಳಿದರು. "ಮೊದಲು ದಿನಕ್ಕೆ 24,000 ಜನರು ಬರುತ್ತಿದ್ದರು," ಎಂದು ಕೂಡಾ ಉಲ್ಲೇಖ ಮಾಡಿದ್ದಾರೆ.

ಗುರುವಾರ ತಾಲಿಬಾನ್‌, "ಪಾಕಿಸ್ತಾನ ಪದೇ ಪದೇ ಅಫ್ಘಾನಿಸ್ತಾನದ ನಿರಾಶ್ರಿತರನ್ನು ನಾವು ದೇಶಕ್ಕೆ ಬರಲು ಬಿಡಲ್ಲ ಎಂದು ಹೇಳುತ್ತಿದ್ದಾರೆ. ಆದ್ದರಿಂದ ಅವರ ವಿರುದ್ದವಾಗಿ ನಾವು ನಡೆಸುವ ಪ್ರತಿಭಟನೆಯ ಭಾಗವಾಗಿ ಗಡಿಯಲ್ಲಿ ಗೇಟ್‌ಗಳನ್ನು ಸಂಪೂರ್ಣವಾಗಿ ಮುಚ್ಚಿದ್ದೇವೆ," ಎಂದು ಹೇಳಿದ್ದರು.

(ಒನ್‌ಇಂಡಿಯಾ ಸುದ್ದಿ)

English summary
Taliban Stops At Border Afghans Trying To Flee To Pakistan, and says It's Your Country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X