ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಸೇನೆ ಅಫ್ಘಾನ್‌ನಿಂದ ತೆರಳಿದರೆ ದಾಳಿ ನಿಲ್ಲಿಸುತ್ತೇವೆ: ತಾಲಿಬಾನ್

|
Google Oneindia Kannada News

ಕಾಬೂಲ್, ಆಗಸ್ಟ್ 30: ಅಮೆರಿಕ ಸೇನೆ ಅಫ್ಘಾನಿಸ್ತಾನದಿಂದ ತೆರಳಿದರೆ ಕೂಡಲೇ ನಾವು ನಡೆಸುತ್ತಿರುವ ದಾಳಿಯನ್ನು ನಿಲ್ಲಿಸುತ್ತೇವೆ ಎಂದು ತಾಲಿಬಾನ್ ಹೇಳಿದೆ.

ಈ ಕುರಿತು ತಾಲಿಬಾನ್ ವಕ್ತಾರ ಮಾತನಾಡಿದ್ದು, ವಿದೇಶಿಯರು ದೇಶದಿಂದ ಹೊರೋದ ಬಳಿಕ ಇಸ್ಲಾಮಿಕ್ ಸ್ಟೇಟ್ ಗುಂಪು ನಡೆಸುತ್ತಿರುವ ದಾಳಿಗಳು ನಿಲ್ಲಲಿವೆ, ಒಂದೊಮ್ಮೆ ಮುಂದುವರೆದರೆ ನಾವು ಅದನ್ನು ನಿಗ್ರಹಿಸುತ್ತೇವೆ ಎಂದು ಹೇಳಿದ್ದಾರೆ.

ಅವರು ಯುದ್ಧದ ಸನ್ನಿವೇಶವನ್ನು ಸೃಷ್ಟಿಸಿದರೆ ಮತ್ತು ಅವರ ಕಾರ್ಯಾಚರಣೆಯನ್ನು ಮುಂದುವರೆಸಿದರೆ, ನಮ್ಮ ಇಸ್ಲಾಮಿಕ್ ಸರ್ಕಾರ ಹಾಗೂ ನಾವು ಅವರನ್ನು ಎದುರಿಸುತ್ತೇವೆ.

Taliban Spokesperson Says, US Exit Will Stop IS Attacks In Afghanistan

ಐಎಸ್‌ಐಎಸ್‌ನಿಂದ ಪ್ರಭಾವಿತರಾಗಿರುವ ಅಫ್ಘಾನಿಯರು, ವಿದೇಶಿಯರ ಅನುಪಸ್ಥಿತಿಯಲ್ಲಿ ಇಸ್ಲಾಮಿಕ್ ಸರ್ಕಾರ ರಚನೆಯಾಗುವುದನ್ನು ಕಂಡು ತಮ್ಮ ದಾಳಿಗಳನ್ನು ನಿಲ್ಲಿಸುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.

ತಾಲಿಬಾನ್ ಅಡಿಯಲ್ಲಿ ಪ್ರತಿಕಾರ ಅಥವಾ ದಮನದ ಆತಂಕದಲ್ಲಿರುವ ಹತ್ತು ಸಾವಿರಕ್ಕೂ ಹೆಚ್ಚು ವಿದೇಶಿಯರು ಮತ್ತು ಅಫ್ಘಾನಿಸ್ತಾನದ ಜನರ ಸ್ಥಳಾಂತರವು ಮಂಗಳವಾರ ಕೊನೆಗೊಳ್ಳಲಿದೆ. ಜತೆಗೆ ಅಮೆರಿಕ ಮತ್ತು ನ್ಯಾಟೋ ಪಡೆಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲು ನಾಳೆ ಕೊನೆಯ ದಿನವಾಗಿದೆ.

ಈ ನಡುವೆ, ಕಳೆದ ಕೆಲವು ದಿನಗಳಿಂದ ಐಎಸ್‌ಐಎಸ್ ನೆಲೆಗಳ ಮೇಲೆ ಅಮೆರಿಕ ಮಾಡಿದ ಪ್ರತಿಕಾರದ ದಾಳಿ ಉಗ್ರರನ್ನು ಮತ್ತಷ್ಟು ಕೆರಳಿಸಿದೆ.

ಕಾಬೂಲ್ ವಿಮಾನ ನಿಲ್ದಾಣಕ್ಕೆ ಬೆದರಿಕೆ ಒಡ್ಡಿದ್ದ ಐಎಸ್‌ಐಎಸ್‌ಗೆ ಸೇರಿದ್ದೆನ್ನಲಾದ ವಾಹನದ ಮೇಲೆ ಭಾನುವಾರ ಡ್ರೋನ್ ದಾಳಿ ನಡೆಸಿದ್ದಾಗಿ ಪೆಂಟಗನ್ ಹೇಳಿದೆ.

ಈ ಕುರಿತು ಮಾತನಾಡಿದ ತಾಲಿಬಾನ್ ವಕ್ತಾರ, ಅಂತಹ ಕಾರ್ಯಾಚರಣೆಗಳನ್ನು ಮಾಡಲು ಅವರಿಗೆ ಯಾವ ಅನುಮತಿಯೂ ಇಲ್ಲ, ನಮ್ಮ ಸ್ವಾತಂತ್ರ್ಯವನ್ನು ಗೌರವಿಸಬೇಕು ಎಂದಿದ್ದಾರೆ.

ಅಮೆರಿಕ ಸೇನೆಯು ಅಫ್ಘಾನಿಸ್ತಾನದಿಂದ ಹಿಂದೆ ಸರಿಯಲು ತಾಲಿಬಾನ್ ನೀಡಿರುವ ಗಡುವು ಇನ್ನೊಂದು ದಿನ ಮಾತ್ರ ಬಾಕಿಯಿದೆ. ಹೀಗಾಗಿ ಅಮೆರಿಕ ತರಾತುರಿಯಲ್ಲಿ ತನ್ನ ಸೈನಿಕರು ಮತ್ತು ಜನರನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿದೆ. ಕಳೆದ 20 ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ಬಳಸಿದ್ದ ಎಲ್ಲ ಯುದ್ಧೋಪಕರಣಗಳು ಮತ್ತು ವೈಮಾನಿಕ ವಾಹನಗಳನ್ನು ವಾಪಸ್ ಕೊಂಡೊಯ್ಯಲು ಅಮೆರಿಕಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಬೃಹತ್ ಪ್ರಮಾಣದ ಯುದ್ಧೋಪಕರಣಗಳು ಅಫ್ಘಾನಿಸ್ತಾನದ ತಾಲಿಬಾನಿಯರ ವಶಕ್ಕೆ ಸಿಕ್ಕಿವೆ.

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಮೆರಿಕ ಬಿಟ್ಟು ಹೋಗಿರುವ ಸುಮಾರು 200 ವಿಮಾನ, ಹೆಲಿಕಾಪ್ಟರ್​ಗಳು ಹಾಗೂ 85 ಶತಕೋಟಿ ಡಾಲರ್ ಮೌಲ್ಯದ ಯುದ್ಧೋಪಕರಣಗಳು ತಾಲಿಬಾನ್ ವಶಕ್ಕೆ ಬಂದಿವೆ ಎಂದು ಹೇಳಲಾಗಿದೆ. ತಾಲಿಬಾನ್ ಕೈಸೇರಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಪೂರ್ಣ ವಿವರ ಇನ್ನೂ ಸಿಕ್ಕಿಲ್ಲ.

ಕಾಬೂಲ್ ವಿಮಾನ ನಿಲ್ದಾಣ ಭದ್ರತೆ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡೆನ್​ಗೆ ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾಕ್ ಸುಲೀವನ್ ಮಾಹಿತಿ ನೀಡಿದರು. ಅಮೆರಿಕ ಸೇನೆ ಮತ್ತು ನಾಗರಿಕರ ರಕ್ಷಣೆಗೆ ದುಪ್ಪಟ್ಟು ಶ್ರಮವಹಿಸಬೇಕು ಎಂದು ಅಧ್ಯಕ್ಷರು ಸೂಚಿಸಿದ್ದಾಗಿ, ಶ್ವೇತ ಭವನದ ಮಾಧ್ಯಮ ಪ್ರಕಟಣೆ ತಿಳಿಸಿದೆ.

Recommended Video

Kim Jong Un ಮತ್ತೊಮ್ಮೆ ಶುರು ಮಾಡಿದರೇ ನ್ಯೂಕ್ಲಿಯರ್ ಕಿರಿಕ್ | Oneindia Kannada

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ತಾಲಿಬಾನ್ ಕೈವಶವಾಗಿ 15 ದಿನ ಕಳೆದರೂ ತಾಲಿಬಾನ್ ಸಂಘಟನೆಯ ಪರಮೋಚ್ಛ ನಾಯಕ ಹೇಬಿತುಲ್ಲಾ ಅಖುಂದಾಜಾ ಈವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಹೇಬಿತುಲ್ಲಾ ಅಖುಂದಾಜಾ ಕಂದಹಾರ್‌ ನಗರದಲ್ಲಿದ್ದಾರೆ. ಶೀಘ್ರದಲ್ಲೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ ಎಂದು ತಾಲಿಬಾನ್ ವಕ್ತಾರ ಹೇಳಿದ್ದಾನೆ.

English summary
The Taliban's spokesman says they will crack down on the the militant Islamic State (IS) group's attacks and expects them to end once foreign forces leave the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X