ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಗ್ರಾಮ್ ಕಾರಾಗೃಹ ವಶಕ್ಕೆ ಪಡೆದು 5,000 ಕೈದಿಗಳನ್ನು ಬಿಡುಗಡೆಗೊಳಿಸಿದ ತಾಲಿಬಾನ್!

|
Google Oneindia Kannada News

ಕಾಬೂಲ್, ಆಗಸ್ಟ್ 15: ಅಫ್ಘಾನಿಸ್ತಾನದ ಬಗ್ರಾಮ್ ವಾಯು ನೆಲೆ ಸಮೀಪದ ಬಗ್ರಾಮ್ ಕಾರಾಗೃಹವನ್ನು ತಾಲಿಬಾನ್ ಸಂಘಟನೆಯು ಸ್ವಾಧೀನಪಡಿಸಿಕೊಂಡಿದ್ದು, ಜೈಲಿನಲ್ಲಿದ್ದ ಎಲ್ಲ ಕೈದಿಗಳನ್ನು ಬಿಡುಗಡೆಗೊಳಿಸಿದೆ ಎಂದು ತಿಳಿದು ಬಂದಿದೆ. ಈ ಜೈಲಿನ ಕೈದಿಗಳು ಈ ಮೊದಲು ತಾಲಿಬಾನ್ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.

ಅಫ್ಘಾನಿಸ್ತಾನದ ಇದೇ ಬಗ್ರಾಮ್ ವಾಯು ನೆಲೆಯು ಒಂದು ಕಾಲದಲ್ಲಿ ಯುಎಸ್ ಸೇನೆಯ ಅತಿದೊಡ್ಡ ಸೇನಾ ನೆಲೆಯಾಗಿತ್ತು. ಇತ್ತೀಚಿಗಷ್ಟೇ ಅಫ್ಘಾನಿಸ್ತಾನ ಭದ್ರತಾ ಪಡೆಯು ಈ ವಾಯು ನೆಲೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿತ್ತು.

ನಿಮ್ ಸಹವಾಸವೇ ಬೇಡ; ಅಫ್ಘಾನ್ ಮತ್ತು ಭಾರತದ ಭವಿಷ್ಯ ಹೀಗಿರುತ್ತಾ!? ನಿಮ್ ಸಹವಾಸವೇ ಬೇಡ; ಅಫ್ಘಾನ್ ಮತ್ತು ಭಾರತದ ಭವಿಷ್ಯ ಹೀಗಿರುತ್ತಾ!?

ಯುಎಸ್ ಪಡೆಗಳು ಬಗ್ರಾಮ್ ವಾಯುನೆಲೆಯ ಮೇಲೆ ನಿಯಂತ್ರಣವನ್ನು ಹೊಂದಿದ್ದು, ಎಲ್ಲ ರೀತಿ ಸೇನಾ ಚಟುವಟಿಕೆಗಳನ್ನು ಇಲ್ಲಿಂದಲೇ ನಡೆಸುತ್ತಿದ್ದವು. ಅಮೆರಿಕಾ ಸೇನಾ ಪಡೆಯನ್ನು ವಾಪಸ್ ಕರೆಸಿಕೊಳ್ಳುವ ನಿರ್ಧಾರವನ್ನು ತೆಗೆದುಕೊಂಡ ನಂತರದಲ್ಲಿ ಈ ವಾಯು ನೆಲೆಯ ಪ್ರದೇಶ ಮತ್ತು ಕಾರಾಗೃಹವನ್ನು ಅಫ್ಘಾನಿಸ್ತಾನದ ನಿಯಂತ್ರಣಕ್ಕೆ ಒಪ್ಪಿಸಲಾಗಿತ್ತು. ಜುಲೈ 1ರಂದು ಯುಎಸ್ ಸೇನಾ ಪಡೆಯಿಂದ ಅಫ್ಘಾನ್ ಸೇನೆಗೆ ಕಾರಾಗೃಹದ ಅಧಿಕಾರವನ್ನು ವರ್ಗಾಯಿಸಲಾಗಿತ್ತು.

Recommended Video

ಈ ರಾಷ್ಟ್ರಗಳು ತಾಲಿಬಾನ್ ಗೆ ಸಾಥ್ ಕೊಡೋಕೆ ರೆಡೀ ಅಂತೆ! | Taliban Captures Afghanistan | Oneindia Kannada
5,000 ಕೈದಿಗಳು ತಾಲಿಬಾನ್ ಸಂಘಟನೆಗೆ ಶರಣು

5,000 ಕೈದಿಗಳು ತಾಲಿಬಾನ್ ಸಂಘಟನೆಗೆ ಶರಣು

ಬಗ್ರಾಮ್ ವಾಯು ನೆಲೆಯ ಕಾರಾಗೃಹದಲ್ಲಿ ಸೆರೆಯಾಗಿದ್ದ 5,000ಕ್ಕೂ ಹೆಚ್ಚು ಕೈದಿಗಳು ತಾಲಿಬಾನ್ ಉಗ್ರರಿಗೆ ಶರಣಾಗಿದ್ದಾರೆ ಎಂದು ಬಗ್ರಾಮ್ ಜಿಲ್ಲೆಯ ಮುಖ್ಯಾಧಿಕಾರಿ ದರ್ವಾಶ್ ರೈಫಿ ತಿಳಿಸಿದ್ದಾರೆ. ಈ ಕಾರಾಗೃಹದಲ್ಲಿ ಯುಎಸ್ ಸೇನಾ ಪಡೆಯು ತಾಲಿಬಾನ್ ಹಾಗೂ ಇಸ್ಲಾಮಿಕ್ ಸ್ಟೇಟ್ಸ್ ಸಂಘಟನೆಯ ಉಗ್ರರನ್ನು ಸೆರೆ ಹಿಡಿದಿಟ್ಟಿತ್ತು ಎಂದು ತಿಳಿದು ಬಂದಿದೆ.

ಒಂದೇ ವಾರದಲ್ಲಿ ಅಫ್ಘಾನ್ ಮೇಲೆ ಹಿಡಿತ ಸಾಧಿಸಿದ ತಾಲಿಬಾನ್

ಒಂದೇ ವಾರದಲ್ಲಿ ಅಫ್ಘಾನ್ ಮೇಲೆ ಹಿಡಿತ ಸಾಧಿಸಿದ ತಾಲಿಬಾನ್

ಅಫ್ಘಾನಿಸ್ತಾನದ ಕೆಲವು ಪ್ರದೇಶಗಳಲ್ಲಿ ಯುಎಸ್ ವಾಯುಸೇನೆ ಬೆಂಬಲದ ಹೊರತಾಗಿಯೂ ತಾಲಿಬಾನ್ ಶಕ್ತಿಶಾಲಿ ಆಗುತ್ತಿದೆ. ಯುಎಸ್ ಸೇನಾ ಪಡೆಯನ್ನು ಹಿಂತೆಗೆದುಕೊಂಡ ಒಂದು ವಾರದಲ್ಲೇ ಇಡೀ ದೇಶದ ಚಿತ್ರಣವೇ ಬದಲಾಗಿ ಹೋಗಿದೆ. ಅಫ್ಘಾನಿಸ್ತಾನ ಸರ್ಕಾರ ಮತ್ತು ಸೇನೆಯನ್ನು ಆಕ್ರಮಿಸಿಕೊಂಡ ತಾಲಿಬಾನ್ ದೇಶದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ. ಒಂದೇ ವಾರದಲ್ಲಿ ದೇಶದ ಪ್ರಮುಖ ಪ್ರದೇಶಗಳ ಮೇಲೆ ತಾಲಿಬಾನ್ ಆಕ್ರಮಿಸಿಕೊಂಡಿದೆ. ಕೆಲವು ಪ್ರದೇಶಗಳಲ್ಲಿ ಸೇನೆಯನ್ನು ಸೋಲಿಸಿದರೆ, ಇನ್ನು ಕೆಲವು ಪ್ರದೇಶಗಳಲ್ಲಿ ಸಂಘಟನೆಗೆ ಸಹಕಾರ ನೀಡಿದ ಸರ್ಕಾರದ ಭದ್ರತಾ ಪಡೆಗಳನ್ನು ಅಲ್ಲಿಂದ ಹಿಂತಿರುಗಿ ಕಳುಹಿಸಲಾಗಿದೆ. ಆದರೆ ತಾಲಿಬಾನ್ ಬಂಡುಕೋರರಿಗೆ ಬೆದರಿ ವಾಪಸ್ಸಾದ ಅಫ್ಘಾನ್ ಸೇನೆ ಮತ್ತು ಯೋಧರ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಶತಕೋಟಿಗಳನ್ನು ಖರ್ಚು ಮಾಡಿ ಅಮೆರಿಕಾದ ಸೇನೆಗಳಿಂದ ಅಫ್ಘಾನ್ ಅದೆಂಥಾ ತರಬೇತಿಗಳನ್ನು ಪಡೆದುಕೊಂಡಿದೆ ಎಂಬು ಪ್ರಶ್ನೆ ಹುಟ್ಟಿಕೊಳ್ಳುತ್ತಿದೆ.

ಅಫ್ಘಾನ್ ರಾಜಧಾನಿ ಮೇಲೆ ತಾಲಿಬಾನ್ ನಿಯಂತ್ರಣ

ಅಫ್ಘಾನ್ ರಾಜಧಾನಿ ಮೇಲೆ ತಾಲಿಬಾನ್ ನಿಯಂತ್ರಣ

ಭಾನುವಾರ ತಾಲಿಬಾನ್ ಸಂಘಟನೆಯ ಹೋರಾಟಗಾರರು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಹೊರವಲಯವನ್ನು ಪ್ರವೇಶಿಸಿದರು. ನಾವು ಬಲವಂತವಾಗಿ ನಗರವನ್ನು ವಶಕ್ಕೆ ಪಡೆದುಕೊಳ್ಳುವುದಿಲ್ಲ ಎಂದು ಭರವಸೆ ನೀಡಿದ ನಂತರ "ಶಾಂತಿಯುತ ವರ್ಗಾವಣೆ"ಗಾಗಿ ಕಾಯುತ್ತಿದ್ದೇವೆ ಎಂದು ತಾಲಿಬಾನ್ ಹೇಳಿದೆ. ಇದರ ಮಧ್ಯೆ ಯುಎಸ್ ರಾಯಭಾರ ಕಚೇರಿಯಲ್ಲಿ ಹೆಲಿಕಾಪ್ಟರ್‌ಗಳು ಬಂದಿಳಿಯುತ್ತಿದ್ದಂತೆ ಅನಿಶ್ಚಿತತೆಯ ಭೀತಿಯಲ್ಲಿ ಸರ್ಕಾರಿ ಕಚೇರಿಗಳಿಂದ ಸಿಬ್ಬಂದಿಯು ಓಡಿ ಹೋಗಿದ್ದಾರೆ.

ಈ ಮಧ್ಯೆ "ನಾವು ಕಾಬೂಲ್ ನಗರದ ಅಧಿಕಾರವನ್ನು ಶಾಂತಿಯುತವಾಗಿ ವರ್ಗಾಯಿಸುವ ನಿರೀಕ್ಷೆಯಲ್ಲಿದ್ದೇವೆ," ಎಂದು ತಾಲಿಬಾನ್ ವಕ್ತಾರ ಸುಶೈಲ್ ಶಾಹೀನ್ ಹೇಳಿದ್ದಾರೆ. ಕ್ವಾತಾರ್ ಪ್ರದೇಶದಲ್ಲಿ ಜಾಗತಿಕ ಸುದ್ದಿ ಸಂಸ್ಥೆ ಅಲ್-ಜಜಿರಾಗೆ ಅವರು ಪ್ರತಿಕ್ರಿಯೆ ನೀಡಿದ್ದು, ಶಾಂತಿಯುತ ಅಧಿಕಾರ ವರ್ಗಾವಣೆಗೆ ಸಂಬಂಧಿಸಿದಂತೆ ಅಫ್ಘಾನಿಸ್ತಾನ ಸರ್ಕಾರ, ಸೇನೆ ಮತ್ತು ತಾಲಿಬಾನ್ ನಡುವಿನ ಶಾಂತಿ ಮಾತುಕತೆ ಬಗ್ಗೆ ತಿಳಿಸಲು ನಿರಾಕರಿಸಿದ್ದಾರೆ. "ಯಾರೊಬ್ಬರ ಜೀವನ, ಆಸ್ತಿ ಮತ್ತು ಘನತೆಗೆ ಹಾನಿಯಾಗುವುದಿಲ್ಲ ಮತ್ತು ಕಾಬೂಲ್ ನಾಗರಿಕರ ಜೀವಕ್ಕೆ ಅಪಾಯವಿಲ್ಲ" ಎಂದು ತಾಲಿಬಾನ್ ತನ್ನ ಹಿಂದಿನ ಹೇಳಿಕೆಯಲ್ಲಿ ತಿಳಿಸಿತ್ತು.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರಿಗೆ ಅಮೆರಿಕಾ ಎಚ್ಚರಿಕೆ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರಿಗೆ ಅಮೆರಿಕಾ ಎಚ್ಚರಿಕೆ

ತಾಲಿಬಾನ್ ಮುಷ್ಠಿಗೆ ಸಿಲುಕಿರುವ ಪ್ರದೇಶಗಳಿಂದ ಅಮೆರಿಕಾದ ಅಧಿಕಾರಿಗಳು ಮತ್ತು ಪ್ರಜೆಗಳನ್ನು ಸ್ಥಳಾಂತರಿಸಲು ಜೋ ಬೈಡನ್ ತೀರ್ಮಾನಿಸಿದ್ದಾರೆ. ಈ ಸ್ಥಳಾಂತರ ಪ್ರಕ್ರಿಯೆ ವೇಳೆ ಅಡ್ಡಿಪಡಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ತಾಲಿಬಾನ್ ಸಂಘಟನೆಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಅಫ್ಘಾನಿಸ್ತಾನದ ಜೊತೆಗೆ ಮಾಡಿಕೊಂಡ 20 ವರ್ಷಗಳ ಒಪ್ಪಂದ ಅಂತ್ಯಗೊಂಡ ಹಿನ್ನೆಲೆ ಆ ದೇಶದಲ್ಲಿರುವ ತಮ್ಮವರನ್ನು ವಾಪಸ್ ಕರೆಸಿಕೊಳ್ಳುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. "ಸ್ಥಳಾಂತರ ಪ್ರಕ್ರಿಯೆ ನಡೆಸುವುದಕ್ಕೆ 3,000 ದಿಂದ ಸುಮಾರು 5,000 ಭದ್ರಾತ ಸಿಬ್ಬಂದಿಯನ್ನು ರವಾನಿಸಲಾಗಿದೆ. ಅಲ್ಲಿ ಯುಎಸ್ ಸೇನಾ ಕಾರ್ಯಾಚರಣೆಗೆ ಯಾವುದೇ ರೀತಿಯ ಅಡ್ಡಿ-ಆತಂಕಗಳು ಎದುರಾದಲ್ಲಿ ಯುಎಸ್ ಸೇನಾ ಪಡೆಗಳಿಂದ ಕಠಿಣ ಪರಿಣಾಮ ಎದುರಿಸಬೇಕಾಗುತ್ತದೆ, ಎಂದು ತಾಲಿಬಾನ್ ಸಂಘಟನೆಗೆ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆ ನೀಡಿದ್ದಾರೆ.

English summary
Taliban seize Bagram military prison 25 km north of Kabul, 5000 inmates Surrender to Taliban.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X