ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನದಲ್ಲಿ ಅಮೆರಿಕದ ಡ್ರೋನ್ ಹಾರಾಟ, ಎಚ್ಚರಿಕೆ ನೀಡಿದ ತಾಲಿಬಾನ್

|
Google Oneindia Kannada News

ಕಾಬೂಲ್, ಸೆಪ್ಟೆಂಬರ್ 29: ಅಫ್ಘಾನಿಸ್ತಾನದಲ್ಲಿ ಅಮೆರಿಕದ ಡ್ರೋನ್ ಹಾರಾಟ ನಡೆಸುತ್ತಿದ್ದು, ತಾಲಿಬಾನ್ ಎಚ್ಚರಿಕೆ ನೀಡಿದೆ.

ಅಫ್ಘಾನಿಸ್ತಾನದ ವಾಯು ಪ್ರದೇಶದಲ್ಲಿ ಅಮೆರಿಕ ಡ್ರೋನ್ ಹಾರಾಟವನ್ನು ನಿಲ್ಲಿಸದಿದ್ದರೆ ಮುಂದೆ ಎದುರಾಗುವ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದೆ. ತಾಲಿಬಾನ್ ಸರ್ಕಾರದ ಈ ಹೇಳಿಕೆಗೆ ಪ್ರತಿಯಾಗಿ ಅಮೆರಿಕದ ಅಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸಿದಾಗ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ.

ಅಫ್ಘಾನಿಸ್ತಾನದ ವಾಯು ಪ್ರದೇಶದಲ್ಲಿ ಡ್ರೋನ್ ಕಾರ್ಯಾಚರಣೆ ನಡೆಸುವ ಮೂಲಕ ಅಮೆರಿಕ ಅಂತಾರಾಷ್ಟ್ರೀಯ ಹಕ್ಕುಗಳ ಮತ್ತು ಕಾನೂನನ್ನು ಉಲ್ಲಂಘಿಸಿದೆ. ಜತೆಗೆ ದೋಹಾ, ಕತಾರ್‌ನಲ್ಲಿ ತಾಲಿಬಾನ್‌ನೊಂದಿಗೆ ಮಾಡಿಕೊಂಡ ಒಪ್ಪಂದ ಪಾಲಿಸುವ ಬದ್ಧತೆಯನ್ನು ಮರೆತಿದೆ ಎಂದು ತಾಲಿಬಾನ್ ಟ್ವೀಟ್ ಮಾಡಿದೆ.

Taliban Says U.S. Drones Must Stop Entering Afghanistan

ಮುಂದಿನ ದಿನಗಳಲ್ಲಿ ಎದುರಾಗಬಹುದಾದ ನಕಾರಾತ್ಮಕ ಪರಿಣಾಮಗಳನ್ನು ತಡೆಗಟ್ಟುವುದಕ್ಕಾಗಿ ಅಫ್ಘಾನಿಸ್ತಾನವನ್ನು ಅಂತಾರಾಷ್ಟ್ರೀಯ ಹಕ್ಕುಗಳು, ಕಾನೂನುಗಳು ಮತ್ತು ಬದ್ಧತೆಯ ವ್ಯಾಪ್ತಿಯಲ್ಲಿ ಅಮೆರಿಕ ಸೇರಿದಂತೆ ಎಲ್ಲಾ ರಾಷ್ಟ್ರಗಳು ಪರಿಗಣಿಸಬೇಕು ಎಂದು ತಾಲಿಬಾನ್ ಹೇಳಿದೆ.

ಕಾಬೂಲ್ ಬಾಂಬ್ ಸ್ಫೋಟದ ಬೆನ್ನಲ್ಲೇ ಅಫ್ಘಾನಿಸ್ತಾನದ ನಂಗಹಾರ್ ಪ್ರಾಂತ್ಯದಲ್ಲಿ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ನೆಲೆಯ ಮೇಲೆ ಅಮೆರಿಕದ ಮಿಲಿಟರಿ ಪಡೆ ವಾಯುದಾಳಿ ನಡೆಸಿತ್ತು.

ಖೋರಸಾನ್ ಘಟಕದ ಇಸ್ಲಾಮಿಕ್ ಸ್ಟೇಟ್ ಸಂಘಟನೆ ಸದಸ್ಯನನ್ನು ಗುರಿ ಮಾಡಿ ಈ ದಾಳಿ ನಡೆದಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅನುಮತಿಯ ಮೇರೆಗೆ ಈ ಡ್ರೋನ್ ದಾಳಿ ನಡೆದಿತ್ತು.

ಕಾಬೂಲ್ ವಿಮಾನ ನಿಲ್ದಾಣದ ಬಳಿ ಬಾಂಬ್ ಸ್ಫೋಟವಾಗಿ ನೂರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. ಈ ಘಟನೆಯಲ್ಲಿ ಅಮೆರಿಕದ 10ಕ್ಕೂ ಹೆಚ್ಚು ಸೈನಿಕರು ಅಸುನೀಗಿದ್ದರು.

ಅಫ್ಘಾನಿಸ್ತಾನದಲ್ಲಿ ಸಕ್ರಿಯವಾಗಿರುವ ಇಸ್ಲಾಮಿಕ್ ಸ್ಟೇಟ್ ಖೊರಸಾನ್ ಸಂಘಟನೆ ಈ ದಾಳಿಯ ಹೊಣೆ ಹೊತ್ತಿತ್ತು. ಕಳೆದ ತಿಂಗಳು ಕಾಬೂಲ್ ನಲ್ಲಿ ಅಮೆರಿಕ ನಡೆಸಿದ್ದ ಡ್ರೋನ್ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿ ಉಗ್ರ ಎಂದು ಅಮೆರಿಕ ರಕ್ಷಣಾ ಇಲಾಖೆ ತಿಳಿಸಿತ್ತು. ಆ ದಾಳಿಯಲ್ಲಿ ಸತ್ತಿದ್ದು ಉಗ್ರ ಅಲ್ಲ, ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೇನೆಗೆ ತುಂಬಾ ಸಹಾಯ ಮಾಡಿದ್ದ ವ್ಯಕ್ತಿ ಎಂಬ ಮಾಹಿತಿ ಹೊರಬಂದಿದೆ.

ಡ್ರೋನ್ ದಾಳಿಯಲ್ಲಿ ಝೆಮೆರಾಯ್ ಅಹಮದಿ ಎಂಬ ಆಫ್ಘನ್ ನಾಗರಿಕ ಮೃತಪಟ್ಟಿದ್ದ. ಇದೀಗ ಆತನ ಜೊತೆ ಕೆಲಸ ನಿರ್ವಹಿಸಿದ ಅಮೆರಿಕನ್ನರು ಅಮೆರಿಕ ಸೇನೆಯ ಕೃತ್ಯಕ್ಕೆ ಕಿಡಿಕಾರಿದ್ದಾರೆ.

ಝೆಮೆರಾಯ್ ಅಫ್ಘಾನಿಸ್ತಾನ ನೆಲದಲ್ಲಿ ಅಮೆರಿಕ ಸೇನೆಯ ಜೊತೆ ಕೆಲಸ ನಿರ್ವಹಿಸಿದ್ದ. ಆತ ತುಂಬಾ ಒಳ್ಳೆಯ ಕೆಲಸಗಾರ ಎಮ್ದು ಆತನ ಜೊತೆ ಕಾರ್ಯ ನಿರ್ವಹಿಸಿದ್ದ ಅಮೆರಿಕನ್ನರು ಆತನನ್ನು ನೆನಪಿಸಿಕೊಂಡಿದ್ದಾರೆ.

ಆತ ಹಲವು ಬಾರಿ ತನ್ನ ಪ್ರಾಣದ ಹಂಗು ತೊರೆದು ಕರ್ತವ್ಯ ನಿಷ್ಟೆ ಮೆರೆದಿದ್ದ ಎಂದು ಆತನ ಸಹೋದ್ಯೋಗಿಗಳು ಹೇಳಿದ್ದಾರೆ.

English summary
The Taliban on Wednesday warned of consequences if the United States did not stop flying drones over Afghan airspace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X