ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವಿನ ಮನೆಯಿಂದ ಬಚಾವ್: ಉಗ್ರರ ಜೊತೆ ಎಕ್ಸ್ ಚೇಂಜ್ ಆಫರ್!

|
Google Oneindia Kannada News

ಕಾಬೂಲ್, ನವೆಂಬರ್.19: ಅಫ್ಘಾನಿಸ್ತಾನ್ ನಲ್ಲಿ ಇಬ್ಬರು ಅಮೆರಿಕನ್ ಪ್ರಜೆಗಳು ಜವರಾಯನ ಬಾಯಿಂದ ಜಸ್ಟ್ ಮಿಸ್ ಆಗಿದ್ದಾರೆ. ಸ್ವಲ್ಪ ಯಾಮಾರಿದ್ರೆ ಬದುಕಿ ಬದುವುದೇ ಕಷ್ಟವಿತ್ತು. ಆದರೆ, ಅಫ್ಘಾನಿಸ್ತಾನ್ ಅಧ್ಯಕ್ಷರು ನೀಡಿದ ಭರವಸೆ ಇಂದು ಇಬ್ಬರ ಪ್ರಾಣವನ್ನು ಉಳಿಸಿದೆ.

ಹೌದು, ತಾಲಿಬಾನ್ ಉಗ್ರ ಸಂಘಟನೆ ಒತ್ತೆಯಾಳಾಗಿ ಇಟ್ಟುಕೊಂಡಿದ್ದ ಅಮೆರಿಕ ಮೂಲದ ಇಬ್ಬರು ಪ್ರೊಫೆಸರ್ ಗಳನ್ನು ಬಿಡುಗಡೆ ಮಾಡಿದೆ. ಇಬ್ಬರು ಒತ್ತೆಯಾಳುಗಳನ್ನು ನವೆಂಬರ್.19ರ ಬೆಳಗ್ಗೆ 10 ಗಂಟೆ ವೇಳೆಗೆ ತಾಲಿಬಾನ್ ಉಗ್ರರು ರಿಲೀಸ್ ಮಾಡಿದ್ದಾರೆ. ಕಾಬೂಲ್ ನಲ್ಲಿ ಅಮೆರಿಕ ಸೇನಾ ಪಡೆಗೆ ಇಬ್ಬರು ಒತ್ತೆಯಾಳುಗಳನ್ನು ಒಪ್ಪಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಕಾರು ಬಾಂಬ್ ಸ್ಫೋಟ; ಕನಿಷ್ಠ 20 ಸಾವುಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಕಾರು ಬಾಂಬ್ ಸ್ಫೋಟ; ಕನಿಷ್ಠ 20 ಸಾವು

ಅಫ್ಘಾನಿಸ್ತಾನ್ ರಾಜಧಾನಿ ಕಾಬೂನ್ ನಲ್ಲಿರುವ ಅಮೆರಿಕಾ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದ ಕೆವಿನ್ ಕಿಂಗ್, ಆಸ್ಟ್ರೇಲಿಯಾದ ತಿಮೋಠಿ ವೀಕ್ಸ್ ರನ್ನು ಮೂರು ವರ್ಷಗಳ ಹಿಂದೆ ಅಪಹರಿಸಲಾಗಿತ್ತು. 2016ರಲ್ಲಿ ಸೇನಾ ಯೋಧರ ವೇಷ ಧರಿಸಿ ಬಂದ ತಾಲಿಬಾನ್ ಉಗ್ರರು, ಇಬ್ಬರು ಪ್ರೊಫೆಸರ್ ಗಳನ್ನು ಅಪಹರಿಸಿದ್ದರು.

ಉಗ್ರರ ಜೊತೆ ಎಕ್ಸ್ ಚೇಂಜ್ ಆಫರ್!

ಉಗ್ರರ ಜೊತೆ ಎಕ್ಸ್ ಚೇಂಜ್ ಆಫರ್!

ತಾಲಿಬಾನ್ ಜೊತೆ ಶಾಂತಿ ಮಾತುಕತೆ ಬಗ್ಗೆ ನವೆಂಬರ್.12ರಂದು ಅಫ್ಘಾನಿಸ್ತಾನ್ ಅಧ್ಯಕ್ಷ ಅಷ್ರಫ್ ಘನಿ ಘೋಷಿಸಿದ್ದರು. ತಾಲಿಬಾನ್ ಉಗ್ರರ ಬೇಡಿಕೆಯಂತೆ ಸಂಘಟನೆಯ ಮೂವರು ಕೈದಿಗಳನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ನೌಬಹಾರ್ ಜಿಲ್ಲೆಯ ಜಬೂಲ್ ಬಳಿ ಒತ್ತೆಯಾಳಾಗಿ ಇರಿಸಿಕೊಂಡಿದ್ದ ಇಬ್ಬರು ಪ್ರೊಫೆಸರ್ಸ್ ನ್ನು ತಾಲಿಬಾನ್ ಉಗ್ರರು ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.

ಕೈದಿಗಳನ್ನು ಬಿಡುಗಡೆಗೊಳಿಸುತ್ತಾ ಸರ್ಕಾರ?

ಕೈದಿಗಳನ್ನು ಬಿಡುಗಡೆಗೊಳಿಸುತ್ತಾ ಸರ್ಕಾರ?

ಈಗ ನಾವು ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದೇವೆ. ತಮ್ಮ ಬೇಡಿಕೆಯಂತೆ ಕಾಬೂಲ್ ಹಾಗೂ ಅಮೆರಿಕಾದಲ್ಲಿ ಇರುವ ತಮ್ಮ ಮೂವರು ಉಗ್ರರನ್ನು ಬಿಡುಗಡೆಗೊಳಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ತಾಲಿಬಾನ್ ನ ಒಬ್ಬ ಉಗ್ರ ಹೇಳಿದ್ದಾನೆ.

ಪೂರ್ವ ಅಫ್ಘಾನಿಸ್ತಾನದಲ್ಲಿ ಬಸ್ ಮೇಲೆ ಬಾಂಬ್ ದಾಳಿ; ಕನಿಷ್ಠ ಹತ್ತು ಮಂದಿ ಸಾವುಪೂರ್ವ ಅಫ್ಘಾನಿಸ್ತಾನದಲ್ಲಿ ಬಸ್ ಮೇಲೆ ಬಾಂಬ್ ದಾಳಿ; ಕನಿಷ್ಠ ಹತ್ತು ಮಂದಿ ಸಾವು

ಒತ್ತೆಯಾಳು ಬಿಡುಗಡೆ ಬಗ್ಗೆ ಇನ್ನೂ ಮೌನ

ಒತ್ತೆಯಾಳು ಬಿಡುಗಡೆ ಬಗ್ಗೆ ಇನ್ನೂ ಮೌನ

ತಾಲಿಬಾನ್ ವಶದಲ್ಲಿದ್ದ ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿ ಆಗಿದೆ. ಈಗ ಮೂವರು ಕೈದಿಗಳನ್ನು ರಿಲೀಸ್ ಮಾಡುವಂತೆ ಉಗ್ರರು ಷರತ್ತು ಹಾಕಿದ್ದಾರೆ. ಆದರೆ, ಈ ಬಗ್ಗೆ ಅಫ್ಘಾನಿಸ್ತಾನ್ ನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಇವರ ಬಿಡುಗಡೆಗೆ ತಾಲಿಬಾನ್ ಷರತ್ತು

ಇವರ ಬಿಡುಗಡೆಗೆ ತಾಲಿಬಾನ್ ಷರತ್ತು

ಅಫ್ಘಾನಿಸ್ತಾನ್ ದ ಬಗ್ರಾಮ್ ಜೈಲಿನಲ್ಲಿರುವ ಮೂವರು ತಾಲಿಬಾನ್ ಕೈದಿಗಳನ್ನು ಬಿಡುಗಡೆಗೆ ಸಂಘಟನೆ ಷರತ್ತು ವಿಧಿಸಿದೆ. ಈ ಷರತ್ತಿನ ಮೇಲೆಯೇ ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ. ಹಾಗಿದ್ರೆ, ಈ ಕೈದಿಗಳು ಯಾರು ಅವರ ಹಿನ್ನೆಲೆ ಏನು ಎಂಬುದನ್ನು ನೋಡುವುದಾದರೆ, ಒಬ್ಬ ತಾಲಿಬಾನ್ ನ ನಟೋರಿಯಸ್ ಉಗ್ರ ಅನಾಸ್ ಹಕ್ಕಾನಿ. ಈತನನ್ನು 2014ರಲ್ಲಿ ಬಂಧಿಸಲಾಗಿತ್ತು. ಮತ್ತೊಬ್ಬನ ಹೆಸರು ಹಜಿ ಮಲ್ಲಿಕ್ ಖಾನ್. ಇವನು ಹಕ್ಕಾನಿ ನೆಟ್ ವರ್ಕ್ ನ ಸಿರಾಜ್ ಉದ್ದೀನ್ ಹಕ್ಕಾನಿ ಹಾಗೂ ಮಹಮ್ಮದೇ ನಬಿ ಓಮಾರಿ ಸಹೋದರ ಎನ್ನಲಾದ ಅಬ್ದುಲ್ ರಶೀದ್ ನನ್ನು ಬಿಡುಗಡೆಗೊಳಿಸಲು ತಾಲಿಬಾನ್ ಷರತ್ತು ಹಾಕಿದೆ.

English summary
Afghanistan President Announced About Release The Taliban Prisoners. Today Taliban Released Two Western Hostages.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X