ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿವಿ ನಿರೂಪಕರಿಗೆ ಹೊಸ ಆದೇಶ ಹೊರಡಿಸಿದ; ತಾಲಿಬಾನ್

|
Google Oneindia Kannada News

ಕಾಬೂಲ್, ಮೇ 20: ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಸ್ವಾತಂತ್ಯ್ರಕ್ಕೆ ಕಡಿವಾಣ ಹಾಕಿರುವ ತಾಲಿಬಾನಿಗಳು ಈಗ ಸುದ್ದಿವಾಹಿನಿಯಲ್ಲಿನ ನಿರೂಪಕಿಯರು ಮುಖ ಮುಚ್ಚಿಕೊಂಡು ಸುದ್ದಿ ಓದುವಂತೆ ಆದೇಶ ಹೊರಡಿಸಿದೆ ಎಂದು ಅಫ್ಘಾನಿಸ್ತಾನದ ಸುದ್ದಿಸಂಸ್ಥೆ ವರದಿ ಮಾಡಿದೆ.

ಮಾಹಿತಿ ಮತ್ತು ಸಂಸ್ಕೃತಿ ಸಚಿವಾಲಯ ನಿರ್ಣಯ ತೆಗೆದುಕೊಂಡಿದ್ದು, ತಾಲಿಬಾನ್ ಮುಖಂಡರು ತೆಗೆದುಕೊಳ್ಳುವ ನಿರ್ಣಯಗಳನ್ನು ಜಾರಿಗೆ ತರುವ ಅಧಿಕಾರ ವಹಿಸಿಕೊಂಡಿರುವ, ತಾಲಿಬಾನ್ ವರ್ಚ್ಯೂ ಮತ್ತು ವೈಸ್ ಸಚಿವಾಲಯ ನಿಯಮ ಪಾಲಿಸುವಂತೆ ಆದೇಶ ನೀಡಿದೆ.

ಅಫ್ಘಾನಿಸ್ತಾನದಲ್ಲಿ ಅನ್ನಕ್ಕಾಗಿ ಹಾಹಾಕಾರ; ಹಸಿವಿನಲ್ಲಿ ಅರ್ಧ ಜನರುಅಫ್ಘಾನಿಸ್ತಾನದಲ್ಲಿ ಅನ್ನಕ್ಕಾಗಿ ಹಾಹಾಕಾರ; ಹಸಿವಿನಲ್ಲಿ ಅರ್ಧ ಜನರು

ಈ ನಿಯಮ ಅಫ್ಘಾನಿಸ್ತಾನದ ಎಲ್ಲಾ ಮಾಧ್ಯಮಗಳಿಗೂ ಅನ್ವಯಿಸುತ್ತದೆ ಎಂದು ಟೋಲೊ ಸುದ್ದಿ ವಾಹಿನಿ ಟ್ವೀಟ್ ಮೂಲಕ ತಿಳಿಸಿದೆ. ಮಾತ್ರವಲ್ಲದೆ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿಕೆ ನೀಡಿದೆ.

ತಾನು ಕೆಲಸ ಮಾಡುವ ಚಾನೆಲ್‌ಗೆ ಆದೇಶ ನೀಡಲಾಗಿದೆ. ಈ ಆದೇಶದ ಕುರಿತು ಚರ್ಚೆ ಮಾಡದಂತೆ ಸೂಚನೆ ನೀಡಲಾಗಿದೆ. ಅವರ ಆದೇಶ ಒಪ್ಪಿಕೊಳ್ಳದೆ ಅನ್ಯ ದಾರಿಯಿಲ್ಲ ಎಂದು ಅಫ್ಘಾನಿಸ್ತಾನದ ಸ್ಥಳೀಯ ಮಾಧ್ಯಮದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಭದ್ರತೆಯ ಕಾರಣದಿಂದ ತನ್ನ ಹೆಸರು ಹೇಳಬಾರದು ಎಂದು ಅಧಿಕಾರಿ ಷರತ್ತು ವಿಧಿಸಿದ್ದಾರೆ.

ಅಫ್ಘಾನಿಸ್ತಾನ: ಸಾರ್ವಜನಿಕ ಸ್ಥಳಗಳಲ್ಲಿ ಬುರ್ಕಾ ಕಡ್ಡಾಯ!ಅಫ್ಘಾನಿಸ್ತಾನ: ಸಾರ್ವಜನಿಕ ಸ್ಥಳಗಳಲ್ಲಿ ಬುರ್ಕಾ ಕಡ್ಡಾಯ!

ನಿರೂಪಕಿಯರು ಮಾಡಿದ್ದೇನು?

ನಿರೂಪಕಿಯರು ಮಾಡಿದ್ದೇನು?

ಆದೇಶದ ನಂತರ ಹಲವಾರು ಮಹಿಳಾ ಸುದ್ದಿ ವಾಚಕರು ಮತ್ತು ನಿರೂಪಕರು ಕಾರ್ಯಕ್ರಮ ಪ್ರಸ್ತುತಪಡಿಸುವಾಗ ಮಾಸ್ಕ್‌ಗಳಿಂದ ಮುಖ ಮುಚ್ಚಿರುವ ಅವರ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಟೊಲೊ ವಾಹಿನಿಯ ಪ್ರಮುಖ ನಿರೂಪಕಿ ಯಾಲ್ಡಾ ಅಲಿ, "ವರ್ಚ್ಯೂ ಮತ್ತು ವೈಸ್ ಸಚಿವಾಲಯದ ಆದೇಶದ ಮೇರೆಗೆ ಮಹಿಳೆಯನ್ನು ಅಳಿಸಲಾಗುತ್ತಿದೆ" ಎಂಬ ಶೀರ್ಷಿಕೆಯೊಂದಿಗೆ ಫೇಸ್‌ಮಾಸ್ಕ್ ಹಾಕಿಕೊಂಡು ವೀಡಿಯೋ ಹಂಚಿಕೊಂಡಿದ್ದಾರೆ.

ಸ್ಥಳೀಯ ಶಂಶಾದ್ ವಾಹಿನಿಯಲ್ಲಿ ಆದೇಶದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಓರ್ವ ಮಹಿಳಾ ಆಂಕರ್ ಗುರುವಾರ ಫೇಸ್ ಮಾಸ್ಕ್‌ ಧರಿಸಿ ಕಾರ್ಯಕ್ರಮ ಪ್ರಸ್ತುತ ಪಡಿಸಿದರೆ, ನಂತರದ ದಿನದಲ್ಲಿ ಮತ್ತೊಬ್ಬ ಆಂಕರ್ ಮಾಸ್ಕ್‌ ಧರಿಸದೆ ಸುದ್ದಿ ವಾಚಿಸಿದ್ದಾರೆ.

ಮಹಿಳೆಯರ ಮೇಲೆ ಕಠಿಣ ನಿರ್ಬಂಧ

ಮಹಿಳೆಯರ ಮೇಲೆ ಕಠಿಣ ನಿರ್ಬಂಧ

1996-2001ರ ಅವಧಿಯಲ್ಲಿ ತಾಲಿಬಾನ್‌ ಸಂಘಟನೆ ಮೊದಲ ಬಾರಿಗೆ ಅಧಿಕಾರದಲ್ಲಿದ್ದಾಗ, ಮಹಿಳೆಯರ ಮೇಲೆ ಸಾಕಷ್ಟು ನಿರ್ಬಂಧಗಳನ್ನು ಹೇರಿದ್ದರು. ದೇಹವನ್ನು ಸಂಪೂರ್ಣವಾಗಿ ಮುಚ್ಚುವಂತೆ ಬುರ್ಖಾ ಧರಿಸಬೇಕು, ಕಣ್ಣುಗಳನ್ನು ಪರದೆಯಿಂದ ಮುಚ್ಚಬೇಕು ಮತ್ತು ಸಾರ್ವಜನಿಕವಾಗಿ ಅವರು ಕಾಣಿಸಿಕೊಳ್ಳದಂತೆ ನಿರ್ಬಂಧ ಹೇರಲಾಗಿತ್ತು.

ಆದರೆ 2021ರ ಆಗಸ್ಟ್‌ನಲ್ಲಿ ಮತ್ತೆ ಅಧಿಕಾರ ವಶಪಡಿಸಿಕೊಂಡ ನಂತರ, ತಾಲಿಬಾನ್ ಮಹಿಳೆಯರ ಉಡುಪಿನ ಬಗ್ಗೆ ಯಾವುದೇ ನಿರ್ಬಂಧ ವಿಧಿಸಿದೆ, ನಿರ್ಬಂಧಗಳನ್ನು ಮಿತಗೊಳಿಸಿದ್ದರೆ. ಆದರೆ ದಿನಕಳೆದಂತೆ ಮಹಿಳೆಯರ ಮೇಲೆ ಒಂದೊಂದಾಗಿ ನಿರ್ಬಂಧಗಳನ್ನು ವಿಧಿಸುತ್ತಿದ್ದಾರೆ.

ಶಿಕ್ಷಣದಿಂದ ವಂಚಿತರಾದ ಹೆಣ್ಣು ಮಕ್ಕಳು

ಶಿಕ್ಷಣದಿಂದ ವಂಚಿತರಾದ ಹೆಣ್ಣು ಮಕ್ಕಳು

ಎಲ್ಲಾ ಮಹಿಳೆಯರು ಸಾರ್ವಜನಿಕವಾಗಿ ಓಡಾಡುವಾಗ ಕಣ್ಣುಗಳು ಮಾತ್ರ ಕಾಣಿಸುವಂತೆ ತಲೆಯಿಂದ ಪಾದದವರೆಗೆ ಬಟ್ಟೆ ಧರಿಸಬೇಕು ಎಂದು ಮೇ ತಿಂಗಳ ಆರಂಭದಲ್ಲಿ ತಾಲಿಬಾನ್ ಮತ್ತೆ ಆದೇಶ ನೀಡಿದೆ. ಮಹಿಳೆಯರು ಅಗತ್ಯವಿದ್ದಾಗ ಮಾತ್ರ ಹೊರಗೆ ಬರಬೇಕು, ಮಹಿಳೆಯರು ಏನಾದರು ತಾಲಿಬಾನ್ ಆದೇಶ ಉಲ್ಲಂಘಿಸಿದರೆ ಮಹಿಳೆಯ ಸಂಬಂಧಿಕ ಪುರುಷರಿಗೆ ಶಿಕ್ಷೆ ನೀಡಬೇಕಾಗುತ್ತದೆ, ಸಮನ್ಸ್ ನೀಡುವುದು, ವಿಚಾರಣೆ ಬಳಿಕ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಅಧಿಕಾರ ವಶಪಡಿಸಿಕೊಂಡ ಆರಂಭದಲ್ಲಿ ಎಲ್ಲಾ ಮಹಿಳೆಯರಿಗೆ ಶಿಕ್ಷಣ ಪಡೆಯಲು ಅವಕಾಶ ನೀಡುವುದಾಗಿ ಹೇಳಿದ್ದ ತಾಲಿಬಾನಿಗಳು ನಂತರ ತಮ್ಮ ವರಸೆ ಬದಲಾಯಿಸಿದ್ದಾರೆ, ಆರನೇ ತರಗತಿಯ ನಂತರ ಬಾಲಕಿಯರು ಶಾಲೆಗೆ ಹೋಗುವುದನ್ನು ನಿಷೇಧಿಸಿದ್ದಾರೆ.

ರೆಸ್ಟೋರೆಂಟ್, ಉದ್ಯಾನಗಳಲ್ಲೂ ನಿಷೇಧ

ರೆಸ್ಟೋರೆಂಟ್, ಉದ್ಯಾನಗಳಲ್ಲೂ ನಿಷೇಧ

ಇತ್ತೀಚೆಗಷ್ಟೇ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಉದ್ಯಾನಗಳಿಗೆ ಭೇಟಿ ನೀಡುವುದನ್ನು ತಾಲಿಬಾನ್ ಅಧಿಕಾರಿಗಳು ನಿಷೇಧಿಸಿದ್ದರು. ನಂತರ ರೆಸ್ಟೋರೆಂಟ್‌ಗಳಲ್ಲಿ ಮಹಿಳೆಯರು ಮತ್ತು ಪುರುಷರು ಒಟ್ಟಿಗೆ ಊಟ ಮಾಡುವುದಕ್ಕೂ ನಿರ್ಬಂಧ ವಿಧಿಸಲಾಗಿತ್ತು, ಮಹಿಳೆಯರು ಮತ್ತು ಪುರುಷರು ಹೋಟೆಲ್‌ಗಳಲ್ಲೂ ಪ್ರತ್ಯೇಕವಾಗಿ ಊಟ ಮಾಡುವಂತೆ ಆದೇಶಿಸಲಾಗಿತ್ತು.

Recommended Video

Virat Kohli ದೊಡ್ಡ ಅನಾಹುತದಿಂದ ಪಾರಾದರು | Oneindia Kannada

English summary
The Taliban authorities in Afghanistan have asked local television broadcasters to ensure that female news presenters cover their faces when on air.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X