ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೆರಡು ದಿನದಲ್ಲಿ ಅಫ್ಘಾನ್‌ನಲ್ಲಿ ತಾಲಿಬಾನ್ ಸರ್ಕಾರ ರಚನೆ

|
Google Oneindia Kannada News

ಕಾಬೂಲ್, ಸೆಪ್ಟೆಂಬರ್ 01: ಒಂದೆರಡು ದಿನದಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ತನ್ನ ಸರ್ಕಾರವನ್ನು ರಚನೆ ಮಾಡಲಿದೆ.

ಇಡೀ ಅಫ್ಘಾನಿಸ್ತಾನವನ್ನೇ ಆಕ್ರಮಿಸಿಕೊಂಡಿರುವ ಮಾಡಿಕೊಂಡಿರುವ ತಾಲಿಬಾನ್ ಹೊಸ ಸರ್ಕಾರ ರಚಿಸುವ ನಿಟ್ಟಿನಲ್ಲಿ ಭರ್ಜರಿ ಕಸರತ್ತು ನಡೆಸುತ್ತಿದೆ. ತಾಲಿಬಾನ್ 2.0 ಸರ್ಕಾರವು ಔಪಚಾರಿಕತೆಯ ಅಂತಿಮ ಹಂತದಲ್ಲಿದ್ದು, ಮುಂದಿನ 24 ರಿಂದ 48 ಗಂಟೆಗಳಲ್ಲಿ ಹೊಸ ಸಚಿವ ಸಂಪುಟ ಘೋಷಣೆಯಾಗುವ ನಿರೀಕ್ಷೆಯಿದೆ.

ಭಯೋತ್ಪಾದನೆ ಪ್ರಕರಣಗಳಲ್ಲಿ ಭಾರತಕ್ಕೆ ಬೇಕಿರುವ 25 ಮಂದಿ ಅಫ್ಘಾನ್‌ನಲ್ಲಿದ್ದಾರೆ: ಗುಪ್ತಚರ ಮಾಹಿತಿಭಯೋತ್ಪಾದನೆ ಪ್ರಕರಣಗಳಲ್ಲಿ ಭಾರತಕ್ಕೆ ಬೇಕಿರುವ 25 ಮಂದಿ ಅಫ್ಘಾನ್‌ನಲ್ಲಿದ್ದಾರೆ: ಗುಪ್ತಚರ ಮಾಹಿತಿ

ಅಫ್ಘಾನಿಸ್ತಾನದಲ್ಲಿ ವಿನೂತನ ಮಾದರಿಯ ಸರ್ಕಾರ ರಚಿಸುತ್ತೇವೆಂದು ತಾಲಿಬಾನ್ ಭಯೋತ್ಪಾಕ ಸಂಘಟನೆ ಹೇಳಿಕೊಂಡಿದೆ. ಮಾನವ ಹಕ್ಕುಗಳನ್ನು ಗೌರವಿಸುವ ಮತ್ತು ಮಹಿಳೆಯರಿಗೆ 'ಇಸ್ಲಾಮಿಕ್ ಕಾನೂನಿನೊಳಗೆ' ಸ್ವಾತಂತ್ರ್ಯ ನೀಡುವ ಸರ್ಕಾರ ರಚಿಸಲು ಉದ್ದೇಶಿಸಲಾಗಿದೆ ಎಂದು ತಾಲಿಬಾನ್ ನಾಯಕರು ಹೇಳಿದ್ದಾರೆ.

Taliban Likely To Announce Afghanistans New Cabinet Within 48 Hours

ಅಫ್ಘಾನಿಸ್ತಾನದಲ್ಲಿ ಕಟ್ಟುನಿಟ್ಟಾಗಿ ಶರಿಯಾ ಕಾನೂನು ಜಾರಿಗೊಳಿಸುವುದಾಗಿ ಈಗಾಗಲೇ ತಾಲಿಬಾನ್ ನಾಯಕರು ಘೋಷಿಸಿದ್ದಾರೆ. ಮುಂದಿನ ದಿನಗಳಲ್ಲಿ ತಾಲಿಬಾನ್ ಸರ್ಕಾರ ಜಾರಿಯಾಗುವ ಭೀತಿಯಲ್ಲಿ ಸಾವಿರಾರು ಅಫ್ಘಾನ್ ಪ್ರಜೆಗಳು ದೇಶ ತೊರೆಯಲು ನಿರ್ಧರಿಸಿದ್ದರು. ತಾಲಿಬಾನ್ ಆಡಳಿತದಲ್ಲಿ ತಮಗೆ ಉಳಿಗಾಲವಿಲ್ಲವೆಂದು ಅನೇಕರು ದೇಶ ತೊರೆಯುತ್ತಿದ್ದಾರೆ.

ಮಾಧ್ಯಮಗಳ ವರದಿಯ ಪ್ರಕಾರ, ತಾಲಿಬಾನ್ ಮುಖ್ಯಸ್ಥ ಹಿಬತುಲ್ಲಾ ಅಖುಂಡಜಾದ ಇಂದು ಸಂಜೆ ಅಥವಾ ನಾಳೆ ಅಫ್ಘಾನಿಸ್ತಾನ ಸರ್ಕಾರದ ಹೊಸ ಸಚಿವ ಸಂಪುಟವನ್ನು ಘೋಷಿಸುವ ಸಾಧ್ಯತೆಯೊಂದಿಗೆ ಕಾಬೂಲ್ ತಲುಪುವ ನಿರೀಕ್ಷೆಯಿದೆ. ಅಖುಂಡಜಾದಸದ್ಯ ಕಂದಹಾರ್‌ನಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಹಿರಿಯ ತಾಲಿಬಾನ್ ನಾಯಕ ಅನಸ್ ಹಕ್ಕಾನಿ ಕೂಡ ಹೊಸ ಸರ್ಕಾರ ರಚಿಸುವ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದಾರೆ. ಶೀಘ್ರವೇ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ನೂತನ ಸರ್ಕಾರ ರಚನೆಯಾಗುವ ಸಾಧ್ಯತೆ ಬಗ್ಗೆ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಅಮೆರಿಕದ ಕೊನೆಯ ಸೇನಾ ವಿಮಾನ ಕಾಬೂಲ್ ವಿಮಾನ ನಿಲ್ದಾಣದಿಂದ ಹೊರಡುವ ಸ್ವಲ್ಪ ಸಮಯಕ್ಕೂ ಮೊದಲು ಮಾತನಾಡಿದ್ದ ಹಕ್ಕಾನಿ, ತಾಲಿಬಾನ್ ಹೊಸ ಸಚಿವ ಸಂಪುಟ ಮುಂದಿನ ಕೆಲವೇ ದಿನಗಳಲ್ಲಿ ಘೋಷಣೆಯಾಗಲಿದೆ ಎಂದು ಹೇಳಿದ್ದರು.

ಅಮೆರಿಕ ಸೇನಾ ಪಡೆಗಳು ಸಂಪೂರ್ಣವಾಗಿ ಅಫ್ಘಾನಿಸ್ತಾನ ತೊರೆದ ಬಳಿಕ, ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ತಾಲಿಬಾನ್ ಸಂಪೂರ್ಣ ನಿಯಂತ್ರಣ ಸಾಧಿಸಿದೆ. ಗುಂಡಿನ ಸದ್ದಿನ ಮೂಲಕ ತಾಲಿಬಾನ್‌ಗಳು ವಿಜಯೋತ್ಸವ ಆಚರಿಸಿದ್ದು, ಸಂಭ್ರಮಾಚರಣೆ ಮಾಡಿದ್ದಾರೆ.

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಸೇರಿದಂತೆ ಬಹುತೇಕ ಎಲ್ಲಾ ಪ್ರಾಂತ್ಯಗಳನ್ನು ತಾಲಿಬಾನ್ ವಶಪಡಿಸಿಕೊಂಡಿದೆ. ಆದರೆ, ಪಂಜಶೀರ್ ಪ್ರಾಂತ್ಯವು ತಾಲಿಬಾನಿಗಳಿಗೆ ಇನ್ನೂ ಸವಾಲಾಗಿ ಉಳಿದಿದೆ. ಈ ಮಧ್ಯೆ, ತಾಲಿಬಾನ್ ಅಫ್ಘಾನಿಸ್ತಾನದ ಪಂಜಶೀರ್ ಪ್ರಾಂತ್ಯವನ್ನು ಪ್ರವೇಶಿಸಿರುವುದಾಗಿ ಹೇಳಿಕೊಂಡಿದೆ.

ಅಲ್ಲದೆ, ಶುತಾರ್ ಜಿಲ್ಲೆಯನ್ನು ವಶಪಡಿಸಿಕೊಂಡಿಸಿರುವುದಾಗಿಯೂ ಹೇಳಿದೆ. ಇದೇ ವೇಳೆ, ದೊಡ್ಡ ಸಂಖ್ಯೆಯಲ್ಲಿ ತಾಲಿಬಾನಿಗಳನ್ನು ಕೊಂದಿರುವುದಾಗಿ ಹೇಳಿಕೊಂಡಿದೆ.

350 ತಾಲಿಬಾನಿಗಳ ಹತ್ಯೆ : ಈ ಬಗ್ಗೆ ಟ್ವೀಟ್ ಮಾಡಿರುವ Northern Alliance, 350 ತಾಲಿಬಾನಿಗಳು ಕೊಲ್ಲಲ್ಪಟ್ಟಿದ್ದಾರೆ ಎಂದು ಹೇಳಿಕೊಂಡಿದೆ. 'ನಿನ್ನೆ ರಾತ್ರಿ ಖವಾಕ್ ಪ್ರದೇಶದ ಮೇಲೆ ದಾಳಿ ಮಾಡಲು ಬಂದ 350 ತಾಲಿಬಾನಿಗಳನ್ನು ಕೊಲ್ಲಲಾಗಿದೆ. ಅಲ್ಲದೆ, 40 ಕ್ಕೂ ಹೆಚ್ಚು ಜನರನ್ನು ಸೆರೆಹಿಡಿಯಲಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದೆ.

ಅಫ್ಘಾನಿಸ್ತಾನ ತೊರೆದ ಯುಎಸ್ ಪಡೆಗಳು : ಯುಎಸ್ ಪಡೆಗಳು ಸೋಮವಾರ ರಾತ್ರಿ ಕಾಬೂಲ್‌ನಿಂದ ಹೊರ ನಡೆದಿವೆ. ಅಮೇರಿಕ ಸೇನೆ ಕಾಬೂಲ್ ಬಿಟ್ಟು ಹೋಗುತ್ತಿದ್ದಂತೆಯೇ, ತಾಲಿಬಾನ್ ಕಾಬೂಲ್ ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡವು. ಆಗಸ್ಟ್ 31 ರ ರಾತ್ರಿ, ಅಮೇರಿಕ ಸೇನೆಯ ಕೊನೆಯ ಪಡೆ ಅಫ್ಘಾನಿಸ್ತಾನವನ್ನು ತೊರೆದಿದೆ.

ಅಫ್ಘಾನಿಸ್ತಾನದಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿರುವ ಬಗ್ಗೆ ಅಧ್ಯಕ್ಷ ಜೋ ಬಿಡೆನ್ ಹೇಳಿಕೆ ನೀಡಿದ್ದಾರೆ. 20 ವರ್ಷಗಳ ಯುಎಸ್ ಮಿಲಿಟರಿ ಅಸ್ತಿತ್ವವು ಅಫ್ಘಾನಿಸ್ತಾನದಲ್ಲಿ ಕೊನೆಗೊಂಡಿದೆ ಎಂದು ಅವರು ಹೇಳಿದ್ದಾರೆ.

English summary
The Taliban 2.0 government is in the final stages of formalization with the first announcement of the new Cabinet of Ministers expected to happen in the next 24 to 48 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X