ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

28 ಪೊಲೀಸರನ್ನು ಭೀಕರವಾಗಿ ಹತ್ಯೆ ಮಾಡಿದ ತಾಲಿಬಾನ್ ಉಗ್ರರು

|
Google Oneindia Kannada News

ಒಂದು ಕಡೆ ಸಂಧಾನ ಸೂತ್ರದ ನಾಟಕವಾಡುತ್ತಿರುವ ತಾಲಿಬಾನಿ ಉಗ್ರರು, ಮತ್ತೊಂದು ಕಡೆ ಅಫ್ಘಾನ್‌ನಲ್ಲಿ ಹಿಂಸಾಚಾರ ಮುಂದುವರಿಸಿದ್ದಾರೆ. ದಕ್ಷಿಣ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರ ಪಡೆ ಅಟ್ಟಹಾಸಕ್ಕೆ ಕನಿಷ್ಠ 28 ಅಫ್ಘಾನ್ ಪೊಲೀಸರು ಹಾಗೂ ಯೋಧರು ಬಲಿಯಾಗಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಈ ಹಿನ್ನೆಲೆಯಲ್ಲಿ ಅಫ್ಘನ್ ನೆಲದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಅಲ್ಲಿನ ಸರ್ಕಾರ ಉಗ್ರರ ಜೊತೆ ಮಾತುಕತೆಗೆ ಮುಂದಾಗಿತ್ತು. ಸೆಪ್ಟೆಂಬರ್ 13ರಂದು ಖತಾರ್ ರಾಜಧಾನಿ ದೋಹಾ ಉಗ್ರರು ಹಾಗೂ ಅಫ್ಘಾನಿಸ್ತಾನ ಸರ್ಕಾರದ ಮಾತುಕತೆಗೆ ವೇದಿಕೆ ಒದಗಿಸಿತ್ತು. ಹೀಗೆ ಮಾತುಕತೆ ಆರಂಭವಾಗಿ 10 ದಿನ ಕಳೆಯುವುದರ ಒಳಗೆ ಪಾಪಿ ಉಗ್ರರು ಮತ್ತೆ ಬಾಲ ಬಿಚ್ಚಿದ್ದಾರೆ.

ತಾಲಿಬಾನ್ ಉಗ್ರರ ಜೊತೆ ಸಂಧಾನ, ಅಮೆರಿಕ ಬ್ರೋಕರ್..!ತಾಲಿಬಾನ್ ಉಗ್ರರ ಜೊತೆ ಸಂಧಾನ, ಅಮೆರಿಕ ಬ್ರೋಕರ್..!

ದಕ್ಷಿಣ ಅಫ್ಘಾನಿಸ್ತಾನದಲ್ಲಿ ನಡೆದ ದಾಳಿಯಲ್ಲಿ ತಾಲಿಬಾನ್ ಉಗ್ರರು ಅಫ್ಘನ್‌ನ ಪೊಲೀಸರು ಹಾಗೂ ಅರೆಸೇನಾ ಪಡೆಯ ಯೋಧರನ್ನು ಹತ್ಯೆ ಮಾಡಿದ್ದಾರೆ. ಖುದ್ದು ತಾಲಿಬಾನ್ ಕಮಾಂಡರ್ ಈ ದಾಳಿಯ ಹೊಣೆಯನ್ನು ಒಪ್ಪಿಕೊಂಡಿದ್ದು, ತಾಲಿಬಾನ್‌ನ ಸಶಸ್ತ್ರದಳ ಈ ಅಟ್ಯಾಕ್ ಮಾಡಿದೆ ಎಂದಿದ್ದಾನೆ.

ಉಗ್ರರಿಗೆ ಶರಣಾಗಲಿಲ್ಲ ಎಂದು ಹತ್ಯೆ

ಉಗ್ರರಿಗೆ ಶರಣಾಗಲಿಲ್ಲ ಎಂದು ಹತ್ಯೆ

ಅಫ್ಘಾನಿಸ್ತಾನದಲ್ಲಿ ಸರ್ಕಾರವಿದ್ದರೂ ಇಲ್ಲದಂತಾಗಿದೆ. ಸರ್ಕಾರಕ್ಕಿಂತ ತಾಲಿಬಾನ್ ಉಗ್ರರೇ ಪವರ್ ಫುಲ್. ಇಡೀ ಅಫ್ಘಾನಿಸ್ತಾನವನ್ನೇ ನಡುಗಿಸುವಷ್ಟು ತಾಲಿಬಾನಿ ಉಗ್ರರು ಅಲ್ಲಿ ಶಕ್ತರಾಗಿದ್ದಾರೆ. ಇದೇ ರೀತಿ ದಕ್ಷಿಣ ಅಫ್ಘಾನಿಸ್ತಾನದಲ್ಲಿ ಪೊಲೀಸರು ಶರಣಾಗಲಿಲ್ಲ ಎಂಬ ಕಾರಣಕ್ಕೆ 28 ಜನರ ಮಾರಣಹೋಮ ನಡೆಸಿದ್ದಾರೆ. ಅಷ್ಟೂ ಜನರನ್ನು ಹಿಡಿದು, ಎಳೆದು ತಂದು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಪಾಪಿ ಉಗ್ರರು. ಆದರೆ ಇದೇ ಸಂದರ್ಭದಲ್ಲಿ 30ಕ್ಕೂ ಹೆಚ್ಚು ಪೊಲೀಸರು ಉಗ್ರರ ಕೈಯಿಂದ ತಪ್ಪಿಸಿಕೊಂಡು ಅದೃಷ್ಟವಶಾತ್ ಜೀವ ಉಳಿಸಿಕೊಂಡಿದ್ದಾರೆ. ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಉಗ್ರರಿಗೆ ನೀತಿ ಪಾಠ ಮಾಡಿದ್ದ ಟ್ರಂಪ್..!

ಉಗ್ರರಿಗೆ ನೀತಿ ಪಾಠ ಮಾಡಿದ್ದ ಟ್ರಂಪ್..!

ತಾಲಿಬಾನಿ ಉಗ್ರರನ್ನು ಅಫ್ಘಾನಿಸ್ತಾನ ಸರ್ಕಾರದ ಜೊತೆ ರಾಜಿ ಮಾಡಿಸಲು ಸ್ವತಃ ಅಮೆರಿಕ ಅಧ್ಯಕ್ಷ ಟ್ರಂಪ್ ಅಖಾಡಕ್ಕೆ ಇಳಿದಿದ್ದರು. ಇನ್ನೇನು ಮಾತುಕತೆಗೆ ವೇದಿಕೆ ಸಿದ್ಧವಾಗಬೇಕು ಎನ್ನುವಷ್ಟರಲ್ಲಿ ಪಾಪಿ ಉಗ್ರರು ಬಾಲಬಿಚ್ಚಿದ್ದರು. ಅಮೆರಿಕ ಸೈನಿಕರ ಮೇಲೆ ದಾಳಿ ನಡೆಸಿ, ಹಲವರನ್ನು ಹತ್ಯೆ ಮಾಡಿದ್ದರು. ಇದರಿಂದ ವಿಶ್ವದ ದೊಡ್ಡಣ್ಣ ಕೆಂಡಾಮಂಡಲನಾಗಿ ತಾಲಿಬಾನಿಗಳ ಜೊತೆ ಮಾತುಕತೆ ಸಾಧ್ಯವಿಲ್ಲ ಎಂದಿದ್ದ. ಇದಾದ ನಂತರವೂ ಕೂಡ ಅಫ್ಘಾನಿಸ್ತಾನ ಸರ್ಕಾರ ಪ್ರಯತ್ನ ಮುಂದುವರಿಸಿತ್ತು. ಇದರ ಭಾಗವಾಗಿ ಆಗಸ್ಟ್‌ನಲ್ಲಿ 100 ಉಗ್ರರನ್ನು ಜೈಲಿನಿಂದ ರಿಲೀಸ್ ಮಾಡಿತ್ತು ಅಫ್ಘಾನಿಸ್ತಾನದ ಅಶ್ರಫ್ ಘನಿ ಸರ್ಕಾರ.

ಬಾಂಬ್ ದಾಳಿಯಲ್ಲಿ ಅಫ್ಘಾನ್ ಉಪಾಧ್ಯಕ್ಷ ಜಸ್ಟ್ ಮಿಸ್..!ಬಾಂಬ್ ದಾಳಿಯಲ್ಲಿ ಅಫ್ಘಾನ್ ಉಪಾಧ್ಯಕ್ಷ ಜಸ್ಟ್ ಮಿಸ್..!

ಇದರಿಂದ ಅಮೆರಿಕ ಲಾಭ ಪಡೆಯುತ್ತಾ..?

ಇದರಿಂದ ಅಮೆರಿಕ ಲಾಭ ಪಡೆಯುತ್ತಾ..?

ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆ ನೆಪದಲ್ಲಿ ಬಂದು ಸೇರಿದ್ದ ಅಮೆರಿಕ ಪಡೆಗಳು ಈಗ ತವರಿಗೆ ಮರಳಬೇಕಿದೆ. ಅಮೆರಿಕ ಕೂಡ ಆರ್ಥಿಕವಾಗಿ ತೀರಾ ಸಂಕಷ್ಟದ ದಿನಗಳನ್ನು ಎದುರಿಸುತ್ತಿದೆ. ಹೀಗಾಗಿ ಅಫ್ಘಾನಿಸ್ತಾನದಲ್ಲಿರುವ ತನ್ನ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು. ಈಗಾಗಲೇ ನೂರಾರು ಬೆಟಾಲಿಯನ್‌ಗಳನ್ನು ಟ್ರಂಪ್ ಮರಳಿ ತಮ್ಮ ದೇಶಕ್ಕೆ ಕರೆಸಿಕೊಂಡಿದ್ದಾರೆ. ಆದರೆ ಇನ್ನೂ ಸಾಕಷ್ಟು ಪ್ರಮಾಣದಲ್ಲಿ ಅಮೆರಿಕ ಸೇನೆ ಅಫ್ಘಾನಿಸ್ತಾನದಲ್ಲಿ ಬೀಡುಬಿಟ್ಟಿದೆ. ಹಾಗಂತ ದಿಢೀರ್ ಅಫ್ಘಾನಿಸ್ತಾನದಿಂದ ಅಷ್ಟೂ ಸೈನಿಕರನ್ನು ವಾಪಸ್ ಕರೆಯಲು ಆಗುವುದಿಲ್ಲ. ಹೀಗೆ ಮಾಡಿದರೆ ಮತ್ತೆ ತಾಲಿಬಾನಿ ಉಗ್ರರು ಅಫ್ಘಾನಿಸ್ತಾನದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುತ್ತಾರೆ. ಈ ಕಾರಣಕ್ಕೆ ಅಮೆರಿಕ ತಾಲಿಬಾನಿ ಉಗ್ರರು ಮತ್ತು ಅಫ್ಘಾನಿಸ್ತಾನ ಸರ್ಕಾರದ ಜೊತೆ ಸಂಧಾನಕ್ಕೆ ಬ್ರೋಕರ್ ರೀತಿ ಮಧ್ಯಸ್ಥಿಕೆ ವಹಿಸಿದೆ. ಈ ಮೂಲಕ ತನ್ನ ಬೇಳೆಯನ್ನೂ ಬೇಯಿಸಿಕೊಳ್ಳುತ್ತಿದೆ.

ಶಾಂತಿ ನೆಲೆಸಿದರೆ ಪಾಕಿಸ್ತಾನಕ್ಕೆ ಗುನ್ನಾ..!

ಶಾಂತಿ ನೆಲೆಸಿದರೆ ಪಾಕಿಸ್ತಾನಕ್ಕೆ ಗುನ್ನಾ..!

ಅಮೆರಿಕ ಈಗ ಒಂದೇ ಏಟಿಗೆ ಎರಡು ಹಕ್ಕಿಗಳಿಗೆ ಗುರಿ ಇಟ್ಟಿದೆ. ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸಿದರೆ ತನ್ನ ಸೇನೆಯನ್ನು ಆರಾಮಾಗಿ ವಾಪಸ್ ಕರೆಸಿಕೊಳ್ಳಬಹುದು. ಮತ್ತೊಂದ್ಕಡೆ ಪಾಕಿಸ್ತಾನ ಈಗ ಅಮೆರಿಕದ ಹಿಡಿತದಲ್ಲಿ ಇಲ್ಲ. ಹೀಗಾಗಿ ಪಾಕಿಸ್ತಾನದ ಪಕ್ಕದಲ್ಲೇ ತಾನು ಭದ್ರವಾಗಿ ತಳವೂರಬಹುದು ಎಂಬುದು ಕಿಲಾಡಿ ಅಮೆರಿಕದ ಲೆಕ್ಕಾಚಾರ. ಅದೇನೆ ಇರಲಿ ದಶಕಗಳ ಕಾಲ ನೆಮ್ಮದಿಯನ್ನೇ ಕಾಣದ ಮೂರು ತಲೆಮಾರುಗಳು ಅಫ್ಘಾನಿಸ್ತಾನದಲ್ಲಿ ನರಕ ಕಾಣುತ್ತಿವೆ. ಜೀವ ಉಳಿಯುತ್ತೋ, ಇಲ್ಲವೋ ಎಂಬ ಅನುಮಾನದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಈಗಲಾದರೂ ತಾಲಿಬಾನ್ ಉಗ್ರರು ಬಾಲ ಮುದುಡಿಕೊಂಡು ಸುಮ್ಮನಿರ್ತಾರೆ ಎಂಬ ಕಾರಣಕ್ಕೆ ಅಶ್ರಫ್ ಘನಿ ಸರ್ಕಾರ ಶಾಂತಿ ಒಪ್ಪಂದಕ್ಕೆ ಮುಂದಾಗಿತ್ತು. ಆದರೆ ಮಾತುಕತೆ ನಡುವೆಯೇ ಈ ರೀತಿ ಉಗ್ರರು ಭೀಕರ ನಡೆಸಿರುವುದರಿಂದ ಶಾಂತಿ ಮಾತುಕತೆ ಮುರಿದುಬೀಳುವ ಸಾಧ್ಯತೆ ದಟ್ಟವಾಗಿದೆ.

English summary
Taliban kills 28 police in southern Afghanistan. A Taliban spokesman, Qari Mohammad Yousuf Ahmadi claimed responsibility for the attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X