ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನ್‌ ಮಹಿಳಾ ಹಕ್ಕುಗಳ ಮೇಲೆ 'ಭಯಾನಕ' ನಿರ್ಬಂಧ ಹೇರುತ್ತಿದೆ ತಾಲಿಬಾನ್‌: ವಿಶ್ವಸಂಸ್ಥೆ ಕಳವಳ

|
Google Oneindia Kannada News

ವಿಶ್ವಸಂಸ್ಥೆ, ಆ. 14: ತಾಲಿಬಾನ್‌ಗಳು ತಾವು ವಶಪಡಿಸಿಕೊಂಡ ಪ್ರದೇಶಗಳಲ್ಲಿ ಅಫ್ಘಾನ್ ಮಹಿಳೆಯರು ಮತ್ತು ಹುಡುಗಿಯರ ಹಕ್ಕುಗಳನ್ನು ತೀವ್ರವಾಗಿ ನಿರ್ಬಂಧಿಸಿವೆ. ತಾಲಿಬಾನಿಗರ ಈ ಕ್ರೌರ್ಯದ ಬಗ್ಗೆ "ಭಯಾನಕ" ವರದಿಗಳು ಹೊರಹೊಮ್ಮಿವೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಶುಕ್ರವಾರ ಹೇಳಿದ್ದಾರೆ.

ಸುಮಾರು ಎರಡು ದಶಕದ ಬಳಿಕ ವಾಷಿಂಗ್ಟನ್‌ ಅಫ್ಘಾನಿಸ್ತಾನದಲ್ಲಿನ ತನ್ನ ಸೇನೆಯನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿ ಇದಕ್ಕಾಗಿ ತಾಲಿಬಾನ್‌ ಜೊತೆ ಒಪ್ಪಂದವನ್ನು ಮಾಡಿಕೊಂಡಿತ್ತು. ತಾಲಿಬಾನ್‌ ಉಗ್ರರು ವಿದೇಶಿ ಸೇನೆ ಹಿಂಪಡೆದ ಬಳಿಕ ತಾವು ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡುವುದಿಲ್ಲ ಎಂದು ಭರವಸೆಯನ್ನು ನೀಡಿತ್ತು. ಆದರೆ ಅಮೆರಿಕ ತನ್ನ ಸೇನೆಯನ್ನು ಹಿಂಪಡೆಯುವ ಕಾರ್ಯ ಆರಂಭ ಮಾಡಿದ ಕೂಡಲೇ ಮೇ ತಿಂಗಳಿನಲ್ಲಿ ಅಫ್ಘಾನಿಸ್ತಾನದ ಮೇಲೆ ತಾಲಿಬಾನ್‌ ದಾಳಿ ನಡೆಸಲು ಆರಂಭಿಸಿದೆ.

ಅಫ್ಘಾನಿಸ್ತಾನದಲ್ಲಿ ಬಿಗಿಯಾದ ಬಟ್ಟೆ ಧರಿಸಿದ್ದಕ್ಕೆ ಯುವತಿ ಕೊಲೆ!ಅಫ್ಘಾನಿಸ್ತಾನದಲ್ಲಿ ಬಿಗಿಯಾದ ಬಟ್ಟೆ ಧರಿಸಿದ್ದಕ್ಕೆ ಯುವತಿ ಕೊಲೆ!

ಪ್ರಸ್ತುತ ಅಫ್ಘಾನಿಸ್ತಾನದ ಬಹುತೇಕ ಶೇ. 75 ರಷ್ಟು ಪ್ರದೇಶವನ್ನು ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಅಷ್ಟೇ ಅಲ್ಲದೇ ಅಫ್ಘಾನಿಸ್ತಾನದ ಮಹಿಳೆಯರ ಸ್ಥಿತಿ ಈಗ ಶೋಚನೀಯವಾಗಿದೆ. ತಾಲಿಬಾನ್‌ ಉಗ್ರರು ಅಫ್ಘಾನ್‌ ರಾಜಧಾನಿ ಕಾಬೂಲ್‌ಗೆ ಹತ್ತಿರವಾಗಿದ್ದಾರೆ. ಅಫ್ಘಾನಿಸ್ತಾನದ ಕಾಬೂಲ್‌ ಒಂದನ್ನು ತಾಲಿಬಾನ್‌ ತನ್ನ ನಿಯಂತ್ರಣಕ್ಕೆ ಪಡೆದುಕೊಂಡರೆ, ದೇಶವನ್ನೇ ತಾಲಿಬಾನ್‌ ತನ್ನ ನಿಯಂತ್ರಣಕ್ಕೆ ಪಡೆದಂತೆಯೇ ಸರಿ.

 Taliban Imposing Horrifying Curbs On Afghan Womens Rights said UN Chief

ತಾಲಿಬಾನ್‌ ವಶದಲ್ಲಿ ಇರುವ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್, "ನಾನು ತಾಲಿಬಾನ್‌ಗಳು ತಮ್ಮ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ, ವಿಶೇಷವಾಗಿ ಮಹಿಳೆಯರು ಮತ್ತು ಪತ್ರಕರ್ತರನ್ನು ಗುರಿಯಾಗಿಸಿಕೊಂಡು ಮಾನವ ಹಕ್ಕುಗಳ ಮೇಲೆ ತೀವ್ರ ನಿರ್ಬಂಧಗಳನ್ನು ಹೇರುತ್ತಿರುವ ಆರಂಭಿಕ ಸೂಚನೆಗಳಿಂದ ತೀವ್ರವಾಗಿ ವಿಚಲಿತಗೊಂಡಿದ್ದೇನೆ," ಎಂದು ಹೇಳಿದ್ದಾರೆ.

"ಅಫ್ಘಾನ್‌ ಹುಡುಗಿಯರು ಮತ್ತು ಮಹಿಳೆಯರು ತೀವ್ರ ಹೋರಾಟ ನಡೆಸಿ ಗೆದ್ದ ಹಕ್ಕುಗಳನ್ನು ಕಿತ್ತುಕೊಳ್ಳುವ ವರದಿಗಳನ್ನು ನೋಡುವುದು ವಿಶೇಷವಾಗಿ ಭಯಾನಕ ಮತ್ತು ಹೃದಯ ವಿದ್ರಾವಕವಾಗಿದೆ," ಎಂದು ಹೇಳಿದ ಯುಎನ್ ಮುಖ್ಯಸ್ಥ ಆಂಟೋನಿಯೊ ಗುಟೆರಸ್, "ನಾಗರಿಕರ ವಿರುದ್ಧ ದಾಳಿಗಳನ್ನು ನಿರ್ದೇಶಿಸುವುದು ಅಂತರಾಷ್ಟ್ರೀಯ ಮಾನವೀಯ ಕಾನೂನಿನ ಗಂಭೀರ ಉಲ್ಲಂಘನೆಯಾಗಿದೆ ಮತ್ತು ಇದು ಯುದ್ಧದ ಅಪರಾಧವಾಗಿದೆ," ಎಂದು ಎಚ್ಚರಿಸಿದ್ದಾರೆ.

ತಾಲಿಬಾನಿಗಳ ಮದುವೆ: ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಇದೆಂಥಾ ಹಿಂಸೆ!?ತಾಲಿಬಾನಿಗಳ ಮದುವೆ: ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಇದೆಂಥಾ ಹಿಂಸೆ!?

ಅಫ್ಘಾನಿಸ್ತಾನದಲ್ಲಿ ಭದ್ರತಾ ಪಡೆಗಳು ಹಲವಾರು ಪ್ರದೇಶಗಳಲ್ಲಿ ತಾಲಿಬಾನಿಗರಿಗೆ ಶರಣಾಗಿದ್ದಾರೆ. ಪ್ರತ್ಯೇಕ ಸೈನಿಕರು, ಘಟಕಗಳು ಮತ್ತು ಇಡೀ ವಿಭಾಗಗಳು ಬಂಡಾಯಗಾರರಿಗೆ ಸಹ ಶರಣಾಗುತ್ತಿವೆ. ಮಿಂಚಿನ ಮುಂಗಡವನ್ನು ಹೆಚ್ಚಿಸಲು ಇನ್ನಷ್ಟು ವಾಹನಗಳು ಮತ್ತು ಮಿಲಿಟರಿ ಯಂತ್ರಾಂಶಗಳನ್ನು ಹಸ್ತಾಂತರಿಸಲಾಗಿದೆ.

ಕಳೆದ ಕೆಲವು ದಿನಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರರು ಯುವತಿಯೊಬ್ಬರು ಬಿಗಿಯಾದ ಬಟ್ಟೆ ಧರಿಸಿ ಮನೆಯಿಂದ ಹೊರ ಬಂದುದ್ದಕ್ಕೆ ಆಕೆಯನ್ನು ಅಮಾನುಷವಾಗಿ ಹತ್ಯೆ ಮಾಡಿದ್ದರು. ಪೊಲೀಸರು ನೀಡಿದ ಮಾಹಿತಿ ಪ್ರಕಾರ, ತಾಲಿಬಾನ್ ಉಗ್ರರ ಕೈಗೆ ಸಿಕ್ಕು ಹತ್ಯೆಯಾದ 21 ವರ್ಷದ ಯುವತಿಯನ್ನು ನಜಾನಿನ್ ಎಂದು ಗುರುತಿಸಲಾಗಿದೆ. ದಾಳಿಯ ಸಮಯದಲ್ಲಿ ನಜಾನಿನ್ ಬುರ್ಖಾ (ಮುಖ ಮತ್ತು ದೇಹವನ್ನು ಆವರಿಸುವ ಮುಸುಕು) ಧರಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ದೇಶದ ಹಲವೆಡೆ ನಗರಗಳನ್ನು ಸ್ವಾಧೀನಪಡಿಸಿಕೊಂಡ ಉಗ್ರ ಸಂಘಟನೆಯು ತಮ್ಮ ಸಂಘಟನೆಯ ಉಗ್ರರನ್ನು ಮದುವೆ ಆಗುವಂತೆ ಅವಿವಾಹಿತ ಮಹಿಳೆಯರಿಗೆ ಹಿಂಸೆ ನೀಡುತ್ತಿದ್ದಾರೆ ಎಂದು ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ. "ಅವಿವಾಹಿತ ಮಹಿಳೆಯರು ತಮ್ಮ ಸಂಘಟನೆ ಉಗ್ರರನ್ನು ಮದುವೆಯಾಗುವಂತೆ ತಾಲಿಬಾನ್ ಒತ್ತಡ ಹೇರುತ್ತಿದೆ. ಆ ಮೂಲಕ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದು, ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗುತ್ತಿದೆ," ದಿ ವಾಲ್ ಸ್ಟ್ರೀಟ್ ಜನರಲ್ ವರದಿ ಮಾಡಿದೆ.

(ಒನ್‌ಇಂಡಿಯಾ ಸುದ್ದಿ)

English summary
"Horrifying" reports have emerged that the Taliban have severely restricted the rights of Afghan women and girls in areas they have seized, United Nations Secretary-General Antonio Guterres.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X