ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುರಾನ್‌ಗೆ ಅವಮಾನ: ಜನಪ್ರಿಯ ಮಾಡೆಲ್ ಬಂಧಿಸಿದ ತಾಲಿಬಾನ್

|
Google Oneindia Kannada News

ಕಾಬೂಲ್‌, ಜೂ. 9: ಇಸ್ಲಾಂಗೆ ಹಾಗೂ ಪವಿತ್ರವಾದ ಕುರಾನ್‌ ಪುಸ್ತಕಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ತಾಲಿಬಾನಿಗಳು ಅಫ್ಘಾನಿಸ್ತಾನದ ಜನಪ್ರಿಯ ಮಾಡೆಲ್‌ ಹಾಗೂ ಅವರ ಮೂವರು ಸಹೋದ್ಯೋಗಿಗಳನ್ನು ಬಂಧಿಸಿದ್ದಾರೆ.

ಫ್ಯಾಶನ್‌ ಶೋಗಳು, ಯೂಟ್ಯೂಬ್ ಕ್ಲಿಪ್‌ಗಳು ಮತ್ತು ಮಾಡೆಲಿಂಗ್‌ ಈವೆಂಟ್‌ಗಳಿಗೆ ಜನಪ್ರಿಯವಾದ ಅಜ್ಮಲ್‌ ಹಖಿಕಿ ಸೇರಿದಂತೆ ಅವರ ಮೂವರು ಸಹೋದ್ಯೋಗಿಗಳನ್ನು ತಾಲಿಬಾನಿಗಳು ಕೈಕೋಳ ಹಾಕಿ ಬಂಧಿಸಿದ್ದಾರೆ. ಅಜ್ಮಲ್ ಹಖಿಕಿ ಮೊದಲಾದವರು ಕುರಾನ್ ಬಗ್ಗೆ ಹಾಸ್ಯ ಮಾಡಿರುವ ವಿಡಿಯೋಗಳು ಟ್ವಿಟ್ಟರ್‌ನಲ್ಲಿ ಹರಿದಾಡಿವೆ. ವ್ಯಾಪಕವಾಗಿ ಪ್ರಸಾರವಾದ ಈ ವಿಡಿಯೋದಲ್ಲಿ ಅಜ್ಮಲ್‌ ಹಖಿಕಿ ತನ್ನ ಸಹೋದ್ಯೋಗಿ ಗುಲಾಮ್‌ ಸಖಿ ನಗುತ್ತಿದ್ದು, ಅವರು ಹಾಸ್ಯವಾಗಿ ಕುರಾನ್ ಪುಸ್ತಕದ ಪದಗಳನ್ನು ಅರೇಬಿಕ್‌ ಭಾಷೆಯಲ್ಲಿ ಬಳಸಿದ್ದರು ಎನ್ನಲಾಗಿದೆ.

ಅಫ್ಘಾನ್‌ನಲ್ಲಿ ವಿದೇಶಿ ಕರೆನ್ಸಿ ಬಳಕೆಯನ್ನು ನಿಷೇಧಿಸಿದ ತಾಲಿಬಾನ್‌ಅಫ್ಘಾನ್‌ನಲ್ಲಿ ವಿದೇಶಿ ಕರೆನ್ಸಿ ಬಳಕೆಯನ್ನು ನಿಷೇಧಿಸಿದ ತಾಲಿಬಾನ್‌

ಬಂಧನದ ನಂತರ ತಾಲಿಬಾನ್ ಬಳಿ ಹಖಿಕಿ ಮತ್ತು ಅವರ ಸಹೋದ್ಯೋಗಿಗಳು ತಿಳಿ ಕಂದು ಜೈಲು ಸಮವಸ್ತ್ರದಲ್ಲಿ ನಿಂತು ತಾಲಿಬಾನ್ ಸರ್ಕಾರ ಮತ್ತು ಧಾರ್ಮಿಕ ವಿದ್ವಾಂಸರಲ್ಲಿ ಕ್ಷಮೆಯಾಚಿಸಿದರು. ಈ ಬಗ್ಗೆ ತಾಲಿಬಾನ್‌ ವೀಡಿಯೊವನ್ನು ಬಿಡುಗಡೆ ಮಾಡಿದೆ. ಈ ಬಗ್ಗೆ ದರಿ ಭಾಷೆಯಲ್ಲಿ ಟ್ವಿಟ್‌ ಮಾಡಿ, ಯಾರೊಬ್ಬರು ಕೂಡ ಮೊಹಮ್ಮದ್‌ ಪೈಗಂಬರ್‌ ಹಾಗೂ ಕುರಾನ್‌ ಬಗ್ಗೆ ಅವಹೇಳನಕಾರಿ ಮಾತನಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ನಂತರ, ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಹೇಳಿಕೆಯನ್ನು ಬಿಡುಗಡೆ ಮಾಡಿ ತಾಲಿಬಾನ್ ಅಜ್ಮಲ್‌ ಹಖಿಕಿ ಮತ್ತು ಅವರ ಸಹೋದ್ಯೋಗಿಗಳನ್ನು ತಕ್ಷಣ ಮತ್ತು ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸಿತು.

ಅಮ್ನೆಸ್ಟಿಯ ದಕ್ಷಿಣ ಏಷ್ಯಾ ಪ್ರಚಾರಕರಾದ ಸಮೀರಾ ಹಮಿದಿ ಮಾಡೆಲ್‌ ಬಂಧನವನ್ನು ಖಂಡಿಸಿದ್ದಾರೆ. ಹಖಿಕಿ ಮತ್ತು ಅವರ ಸಹೋದ್ಯೋಗಿಗಳನ್ನು ಬಂಧಿಸಿ ಕ್ಷಮೆಯಾಚಿಸಲು ಒತ್ತಾಯಿಸುವ ಮೂಲಕ ತಾಲಿಬಾನ್ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಮೇಲೆ ಘೋರ ದಾಳಿಯನ್ನು ಕೈಗೊಂಡಿದ್ದಾರೆ ಎಂದು ಹೇಳಿದರು. ಅಮ್ನೆಸ್ಟಿಯು ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಮಾಡಲಾದ ಹಲವಾರು ಬಂಧನಗಳನ್ನು ದಾಖಲೆ ಮಾಡಿದೆ. ಆಗಾಗ್ಗೆ ಬಲವಂತದ ಹೇಳಿಕೆಗಳೊಂದಿಗೆ ದೇಶದಲ್ಲಿ ಭಿನ್ನಾಭಿಪ್ರಾಯವನ್ನು ನಿಗ್ರಹಿಸುವ ಪ್ರಯತ್ನದಲ್ಲಿ ಮತ್ತು ಇತರರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸದಂತೆ ತಡೆಯುತ್ತದೆ.

ಅಫ್ಘಾನ್ ಮಹಿಳಾ ಆಟಗಾರ್ತಿಯ ಶಿರಚ್ಛೇದನಗೈದ ತಾಲಿಬಾನ್‌ಅಫ್ಘಾನ್ ಮಹಿಳಾ ಆಟಗಾರ್ತಿಯ ಶಿರಚ್ಛೇದನಗೈದ ತಾಲಿಬಾನ್‌

ಸ್ವಾತಂತ್ರ್ಯದ ಹಕ್ಕಿನ ಮೇಲೆ ಘೋರ ದಾಳಿ

ಸ್ವಾತಂತ್ರ್ಯದ ಹಕ್ಕಿನ ಮೇಲೆ ಘೋರ ದಾಳಿ

ಅಮ್ನೆಸ್ಟಿಯ ದಕ್ಷಿಣ ಏಷ್ಯಾ ಪ್ರಚಾರಕರಾದ ಸಮೀರಾ ಹಮಿದಿ ಮಾಡೆಲ್‌ ಬಂಧನವನ್ನು ಖಂಡಿಸಿದ್ದಾರೆ. ಹಖಿಕಿ ಮತ್ತು ಅವರ ಸಹೋದ್ಯೋಗಿಗಳನ್ನು ಬಂಧಿಸಿ ಕ್ಷಮೆಯಾಚಿಸಲು ಒತ್ತಾಯಿಸುವ ಮೂಲಕ ತಾಲಿಬಾನ್ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಮೇಲೆ ಘೋರ ದಾಳಿಯನ್ನು ಕೈಗೊಂಡಿದ್ದಾರೆ ಎಂದು ಹೇಳಿದರು. ಅಮ್ನೆಸ್ಟಿಯು ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಮಾಡಲಾದ ಹಲವಾರು ಬಂಧನಗಳನ್ನು ದಾಖಲೆ ಮಾಡಿದೆ. ಆಗಾಗ್ಗೆ ಬಲವಂತದ ಹೇಳಿಕೆಗಳೊಂದಿಗೆ ದೇಶದಲ್ಲಿ ಭಿನ್ನಾಭಿಪ್ರಾಯವನ್ನು ನಿಗ್ರಹಿಸುವ ಪ್ರಯತ್ನದಲ್ಲಿ ಮತ್ತು ಇತರರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸದಂತೆ ತಡೆಯುತ್ತದೆ.

ಕುಟುಂಬದ ಪ್ರತಿಕ್ರಿಯೆಗಾಗಿ ಸಂಪರ್ಕ

ಕುಟುಂಬದ ಪ್ರತಿಕ್ರಿಯೆಗಾಗಿ ಸಂಪರ್ಕ

ಕಾಬೂಲ್‌ನಲ್ಲಿ ತಾಲಿಬಾನ್ ಅಧಿಕಾರಿಗಳು ತಮ್ಮ ಹೇಳಿಕೆಗಾಗಿ, ವಿನಂತಿಗಳಿಗೆ ತಕ್ಷಣ ಪ್ರತಿಕ್ರಿಯಿಸಲಿಲ್ಲ ಮತ್ತು ತಾಲಿಬಾನ್ ನಡೆಸುತ್ತಿರುವ ನ್ಯಾಯಾಂಗದ ಅಡಿಯಲ್ಲಿ ಮಾಡೆಲ್ ಮತ್ತು ಅವರ ಸಹೋದ್ಯೋಗಿಗಳು ಯಾವ ಕ್ರಮಗಳನ್ನು ಎದುರಿಸುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ. ಅಲ್ಲದೆ ಬಂಧಿತ ಮಾಡೆಲ್‌ಗಳ ಕುಟುಂಬದ ಪ್ರತಿಕ್ರಿಯೆಗಾಗಿ ಸಂಪರ್ಕ ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಇಸ್ಲಾಮಿಕ್ ಕಾನೂನಿನ ಕಠಿಣ ವ್ಯಾಖ್ಯಾನ

ಇಸ್ಲಾಮಿಕ್ ಕಾನೂನಿನ ಕಠಿಣ ವ್ಯಾಖ್ಯಾನ

ಅಮೆರಿಕ ತಮ್ಮ ಪಡೆಗಳನ್ನು ಹಿಂತೆಗೆದುಕೊಂಡಾಗ ಕಳೆದ ಆಗಸ್ಟ್‌ನಲ್ಲಿ ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಅಧಿಕಾರವನ್ನು ವಶಪಡಿಸಿಕೊಂಡರು. ನಂತರ ತಾಲಿಬಾನ್ ಇಸ್ಲಾಮಿಕ್ ಕಾನೂನಿನ ಕಠಿಣ ವ್ಯಾಖ್ಯಾನದ ಪ್ರಕಾರ ಕಟ್ಟುನಿಟ್ಟಾದ ಕ್ರಮಗಳು ಮತ್ತು ಶಾಸನಗಳನ್ನು ವಿಧಿಸಿದೆ. ವಿಶೇಷವಾಗಿ ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ನಿರ್ಬಂಧಿಸಿದೆ. 1990ರ ದಶಕದ ಉತ್ತರಾರ್ಧದಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ಪಡೆದ ಬಳಿಕ ಇಸ್ಲಾಮಿಕ್ ಗುಂಪು ಆಳ್ವಿಕೆ ನಡೆಸಲು ಆಂಭಿಸಿದ ಮೇಲೆ ಅಂತಾರಾಷ್ಟ್ರೀಯ ಕಳವಳಗಳು ಹೆಚ್ಚಾಗಿವೆ. ತಾಲಿಬಾನ್ ಇಸ್ಲಾಂ ಧರ್ಮಕ್ಕೆ ಅಗೌರವ ತೋರುವ ಯಾವುದನ್ನಾದರೂ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸುತ್ತದೆ.

ಮಾನವ ಹಕ್ಕುಗಳ ಕಾನೂನಿಗೆ ಬದ್ಧರಾಗಿರಿ

ಮಾನವ ಹಕ್ಕುಗಳ ಕಾನೂನಿಗೆ ಬದ್ಧರಾಗಿರಿ

ಅಫ್ಘಾನ್‌ ತಮ್ಮ ಸ್ವಾಧೀನದ ನಂತರ ತಾಲಿಬಾನ್ ಮಾನವ ಹಕ್ಕುಗಳು ಅಥವಾ ಆಧುನಿಕ ಮೌಲ್ಯಗಳಿಗೆ ಬೆಂಬಲ ವ್ಯಕ್ತಪಡಿಸಿದ ಯಾರಿಗಾದರೂ, ವಿಶೇಷವಾಗಿ ಮಾನವ ಹಕ್ಕುಗಳ ರಕ್ಷಕರು, ಮಹಿಳಾ ಕಾರ್ಯಕರ್ತರು, ಪತ್ರಕರ್ತರು ಮತ್ತು ಅಕಾಡೆಮಿಯ ಸದಸ್ಯರ ಮೇಲೆ ಬೆದರಿಕೆ, ಕಿರುಕುಳ ಮತ್ತು ಹಿಂಸೆಯನ್ನು ಮಾಡುತ್ತಿದ್ದಾರೆ ಎಂದು ಅಮ್ನೆಸ್ಟಿ ಹೇಳಿದೆ. ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿಗೆ ಬದ್ಧರಾಗಿರಿ ಮತ್ತು ತಾರತಮ್ಯವಿಲ್ಲದೆ ಪ್ರತಿಯೊಬ್ಬರ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಗೌರವಿಸುವಂತೆ" ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅನ್ನು ಅಮ್ನೆಸ್ಟಿ ಒತ್ತಾಯಿಸಿದೆ.

Recommended Video

Suresh Kumar: ಹೊರಟ್ಟಿ ಗೆಲುವು ನಿಶ್ಚಿತ- ಶಿಕ್ಷಣ ಸಚಿವ ನಾಗೇಶ | OneIndia Kannada

English summary
The Taliban have arrested Afghanistan's popular model and three of their colleagues for allegedly insulting Islam and the Holy Quran.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X