ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನದಲ್ಲಿ 33 ಸದಸ್ಯರ ತಾಲಿಬಾನ್ ಸರ್ಕಾರ ರಚನೆ: ಪೂರ್ಣ ಪಟ್ಟಿ

|
Google Oneindia Kannada News

ಕಾಬೂಲ್, ಸೆಪ್ಟೆಂಬರ್ 08: ಅಫ್ಘಾನಿಸ್ತಾನದಲ್ಲಿ ನೂತನ ತಾಲಿಬಾನ್ ಸರ್ಕಾರದ ಮುಖ್ಯಸ್ಥರನ್ನಾಗಿ ಮುಲ್ಲಾ ಮೊಹಮ್ಮದ್ ಹಸನ್ ಅಖುಂದ್‌ ಅವರನ್ನು ನೇಮಕ ಮಾಡಲಾಗಿದೆ ಎಂದು ಮಂಗಳವಾರ ತಾಲಿಬಾನ್ ಘೋಷಿಸಿದೆ.

ತಾಲಿಬಾನ್ ಸಂಸ್ಥಾಪಕ ಮತ್ತು ದಿವಂಗತ ಸರ್ವೋಚ್ಚ ನಾಯಕ ಮುಲ್ಲಾ ಒಮರ್ ಅವರ ಪುತ್ರ ಮುಲ್ಲಾ ಯಾಕೂಬ್ ಅವರನ್ನು ರಕ್ಷಣಾ ಸಚಿವರನ್ನಾಗಿ ನೇಮಿಸಲಾಗಿದೆ. ಹಕ್ಕಾನಿ ನೆಟ್ವರ್ಕ್ ನಾಯಕ ಸಿರಾಜುದ್ದೀನ್ ಹಕ್ಕಾನಿಗೆ ಆಂತರಿಕ ಸಚಿವ ಸ್ಥಾನ ನೀಡಲಾಗಿದೆ ಎಂದು ಮುಜಾಹಿದ್ ಹೇಳಿದ್ದಾರೆ.

ಅಫ್ಘಾನ್ ಸರ್ಕಾರದ ಮುಖ್ಯಸ್ಥ ಹಸನ್ ಅಖುಂದಾ ಬಗ್ಗೆ ತಿಳಿಯಿರಿಅಫ್ಘಾನ್ ಸರ್ಕಾರದ ಮುಖ್ಯಸ್ಥ ಹಸನ್ ಅಖುಂದಾ ಬಗ್ಗೆ ತಿಳಿಯಿರಿ

"ಕ್ಯಾಬಿನೆಟ್ ಇನ್ನೂ ಪೂರ್ಣಗೊಂಡಿಲ್ಲ, ಇದು ಕೇವಲ ಕಾರ್ಯಾರಂಭ " ಎಂದು ಮುಜಾಹಿದ್ ಕಾಬೂಲ್‌ನ ಸರ್ಕಾರಿ ಮಾಹಿತಿ ಮತ್ತು ಮಾಧ್ಯಮ ಕೇಂದ್ರದಲ್ಲಿ ತಿಳಿಸಿದ್ದಾರೆ. ಮುಲ್ಲಾ ಮೊಹಮ್ಮದ್ ಹಸನ್ ಅವರು ಪ್ರಸ್ತುತ 'ರೆಹಾಬ್ರಿ ಶುರಾ ' ಸಮಿತಿಯ ಮುಖ್ಯಸ್ಥರಾಗಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅವರು ಪ್ರಸ್ತುತ ಕಂದಹಾರ್‌ನಲ್ಲಿದ್ದುಕೊಂಡು ವ್ಯವಹರಿಸುತ್ತಿದ್ದಾರೆ.

Taliban Government : Taliban Forms 33-Member Cabinet In Afghanistan: Here Is The Full List

ಮುಲ್ಲಾ ಹಸನ್‌ ಸುಮಾರು 20 ವರ್ಷಗಳಿಂದ ಈ ಸ್ಥಾನದಲ್ಲಿದ್ದಾರೆ. 1996 ರಲ್ಲಿ ರಚನೆಯಾದ ತಾಲಿಬಾನ್ ಸರ್ಕಾರದಲ್ಲಿ ಅವರು ಉಪ ಪ್ರಧಾನಿ ಹಾಗೂ ವಿದೇಶಾಂಗ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡು ಸುಮಾರು 2 ವಾರಗಳಾಗಿವೆ. ಇದಾದ ಬಳಿಕ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು. ಆ. 15ರಂದು ತಾಲಿಬಾನ್ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದಿತ್ತು. ಅಫ್ಘಾನಿಸ್ತಾನದಲ್ಲಿ ಮುಂದಿನ ವಾರ ನೂತನ ಸರ್ಕಾರ ರಚನೆಯಾಗಲಿದ್ದು, ತಾಲಿಬಾನ್​ ಸಂಘಟನೆಯ ಪ್ರಮುಖ ನಾಯಕರಿಗೆ ಮಹತ್ವದ ಹುದ್ದೆಗಳು ಸಿಗಲಿವೆ.

ಈಗಾಗಲೇ ಸಿಕ್ಕಿರುವ ಮಾಹಿತಿಯಂತೆ ಶೇಖ್ ಹೈಬತುಲ್ಲಾ ಅಖುಂಡಜಾದ, ಮುಲ್ಲಾ ಮುಹಮ್ಮದ್ ಒಮರ್ ಅವರ ಮಗನಾದ ಮೌಲವಿ ಮುಹಮ್ಮದ್ ಯಾಕೂಬ್ ಅವರಿಗೆ ಪ್ರಮುಖ ಸ್ಥಾನಗಳನ್ನು ನೀಡಲಾಗುವುದು.

ಈ ಮೊದಲು ಮುಲ್ಲಾ ಹಿಬತುಲ್ಲಾ ಅಖುಂಡಜಾದ ಅವರನ್ನೇ ನೂತನ ಅಧ್ಯಕ್ಷರನ್ನಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ, ಬಳಿಕ ಮುಲ್ಲಾ ಬರಾದಾರ್ ಹೆಸರು ಕೇಳಿಬಂದಿತ್ತು. ಇದೀಗ ಮುಲ್ಲಾ ಮೊಹಮ್ಮದ್ ಹಸನ್ ಅಕುಂದ್ ಅವರನ್ನು ಪ್ರಧಾನಿಯಾಗಿ ಘೋಷಿಸಲಾಗಿದೆ. ಅಫ್ಘಾನ್ ಸರ್ಕಾರ ಈಗಾಗಲೇ ವಿವಿಧ ರಾಜ್ಯಗಳಿಗೆ ರಾಜ್ಯಪಾಲರು, ಪೊಲೀಸ್ ಮುಖ್ಯಸ್ಥರು, ಜಿಲ್ಲಾ ಮಟ್ಟದ ಪ್ರಮುಖ ಅಧಿಕಾರಿಗಳನ್ನು ನೇಮಕ ಮಾಡಿದೆ.

ತಾಲಿಬಾನ್ ಸಹ ಸಂಸ್ಥಾಪಕ ಅಬ್ದುಲ್ ಘನಿ ಬರಾದರ್ ಅವರನ್ನು ಉಪ ಪ್ರಧಾನಿಯಾಗಿ ನೇಮಕ ಮಾಡಲಾಗಿದೆ ಎಂದು ತಾಲಿಬಾನ್ ಮುಖ್ಯ ವಕ್ತಾರ ಜಬಿಹುಲ್ಲಾ ಮುಜಾಹಿದ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
-ಮುಲ್ಲಾ ಮೊಹಮ್ಮದ್ ಹಸನ್-ಪ್ರಧಾನಿ
-ಮೌಲ್ವಿ ಅಬ್ದುಲ್ ಸಲಾಮ್-ಉಪ ಪ್ರಧಾನಿ
-ಮೌಲ್ವಿ ಮೊಹಮ್ಮದ್ ಯಾಕೂಬ್-ರಕ್ಷಣಾ ಸಚಿವ
-ಅಲ್ಹಜ್ ಮುಲ್ಲಾ ಸಿರಾಜುದ್ದೀನ್ ಹಕ್ಕಾನಿ- ಆಂತರಿಕ ಸಚಿವ
-ಮೌಲ್ವಿ ಅಮೀರ್ ಖಾನ್ -ವಿದೇಶಾಂಗ ಸಚಿವ
-ಮುಲ್ಲಾ ಹಿದಾಯತುಲ್ಲಾ ಬದ್ರಿ-ಹಣಕಾಸು ಸಚಿವ
-ಶೇಖ್ ಮೌಲ್ವಿ ನೂರುಲ್ಲಾ ಮುನಿರ್-ಶಿಕ್ಷಣ ಸಚಿವ
-ಮುಲ್ಲಾ ಖೈರುಲ್ಲಾ- ಮಾಹಿತಿ ಮತ್ತು ತಂತ್ರಜ್ಞಾನ ಸಚಿವ
-ಖಾರಿ ದಿನ ಮೊಹಮ್ಮದ್ ಸಾಖಿಬ್-ಹಜ್ ಸಚಿವ
-ಮೌಲ್ವಿ ಅಬ್ದುಲ್ ಹಾಖಿಮ್-ಕಾನೂನು ಸಚಿವ
-ಮುಲ್ಲಾ ನೂರುಲ್ಲಾ ನೂರಿ- ಗಡಿ ಹಾಗೂ ಬುಡಗಕಟ್ಟು ವ್ಯವಹಾರಗಳ ಸಚಿವ
-ಮುಲ್ಲಾ ಮೊಹಮ್ಮದ್ ಯೂನಸ್-ಅಭಿವೃದ್ಧಿ ಸಚಿವ
-ಶೇಖ್ ಮೊಹಮ್ಮದ್ ಖಾಲಿದ್-ದಾವತ್ ಹಾಗೂ ಇರ್ಷಾದ್ ಸಚಿವ
-ಮುಲ್ಲಾ ಅಬ್ದುಲ್ ಮನನ್ ಉಮೇರಿ-ಸಾರ್ವಜನಿಕ ಸೇವೆ ಸಚಿವ
-ಮುಲ್ಲಾ ಮೊಹಮ್ಮದ್ ಎಸ್ಸಾ ಅಖುಂದ್-ಮಿನರಲ್ಸ್ ಹಾಗೂ ಪೆಟ್ರೋಲಿಯಂ ಸಚಿವ
-ಮುಲ್ಲಾ ಅಬ್ದುಲ್ ಲತೀಫ್ ಮನ್ಸೂರ್- ಜಲ ಹಾಗೂ ವಿದ್ಯುತ್ ಸಚಿವ
-ಹಮೀದುಲ್ಲಾ ಅಖುಂಡ್ಜಾದಾ-ಸಾರಿಗೆ ಹಾಗೂ ವಿಮಾನಯಾನ ಸಚಿವ
-ಅಬ್ದುಲ್ ಹಕ್ಕಾನಿ-ಸಂವಹನ ಸಚಿವ
-ಖಾಲಿಲ್ ಉರ್ ರೆಹಮಾನ್ ಹಕ್ಕಾನಿ-ನಿರಾಶ್ರಿತ ಸಚಿವ
-ಅಬ್ದುಲ್ ಹಖ್ ವಸೀಖ್-ಇಂಟೆಲಿಜೆನ್ಸ್ ಮುಖ್ಯಸ್ಥ
-ಹಾಕಿ ಮೊಹಮ್ಮದ್ ಇದ್ರಿಸ್-ಅಫ್ಘಾನಿಸ್ತಾನ ಬ್ಯಾಂಕ್‌ನ ಇಂಚಾರ್ಜ್
-ಮೌಲ್ವಿ ಅಹಮದ್ ಜಾನ್ ಅಹ್ಮೇದಿ-ಆಡಳಿತಾತ್ಮಕ ವ್ಯವಹಾರಗಳ ಉಸ್ತುವಾರಿ
-ಮುಲ್ಲಾ ಮೊಹಮ್ಮದ್ ಫಾಜಿಲ್-ಉಪ ರಕ್ಷಣಾ ಸಚಿವ
-ಖಾರಿ ಫಸೆಹುದ್ದೀನ್-ಸೇನಾ ಮುಖ್ಯಸ್ಥ
-ಶೇರ್ ಮೊಹಮ್ಮದ್ ಅಬ್ಬಾಸ್-ಉಪ ಆತಂತರಿಕ ಸಚಿವ
-ಜಬಿವುಲ್ಲಾ ಮುಜಾಹಿದ್-ಉಪ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ
-ಮುಲ್ಲಾ ತಾಜ್ ಜಾವದ್-ಇಂಟೆಲಿಜೆನ್ಸ್
-ಮುಲ್ಲಾ ರೆಹಮತುಲ್ಲಾ-ಆಡಳಿತಾತ್ಮಕ
-ಮುಲ್ಲಾ ಅಬ್ದುಲ್ ಹಖ್-ಆಂತರಿಕ ಸಚಿವರ ವಿಶೇಷ ಸಹಾಯಕ

English summary
The Taliban on Tuesday announced a caretaker government to run the affairs in Afghanistan, where they have returned to power after two decades.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X