• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಾಲಿಬಾನಿಗಳಿಂದ ಜೈಲಿನ ಮೇಲೆ ದಾಳಿ, 350 ಕೈದಿಗಳು ಎಸ್ಕೇಪ್

By Mahesh
|

ಕಾಬೂಲ್, ಸೆ.14: ಉಗ್ರರ ಮೇಲೆ ದಾಳಿ ನಡೆಸಿ ಸುಮಾರು 15 ಜನರನ್ನು ಅಫ್ಫನ್ ಯೋಧರು ಕೊಂದ ಘಟನೆಗೆ ತಾಲಿಬಾನಿಗಳು ಪ್ರತಿಕಾರ ತೀರಿಸಿಕೊಂಡಿದ್ದಾರೆ.ಸೋಮವಾರ ಮುಂಜಾನೆ ಪೂರ್ವಪ್ರಾಂತ್ಯದಲ್ಲಿರುವ ಘಜ್ನಿ ಕೇಂದ್ರ ಕಾರಾಗೃಹದ ಮೇಲೆ ಹಠಾತ್ ದಾಳಿ ನಡೆಸಿ ಪೊಲೀಸರನ್ನು ಹತ್ಯೆ ಮಾಡಿ, ಕೈದಿಗಳನ್ನು ಜೈಲಿನಿಂದ ಕೈದಿಗಳು ಎಸ್ಕೇಪ್ ಆಗಲು ಸಹಕರಿಸಿದ್ದಾರೆ.

ಘಜ್ನಿ ಕೇಂದ್ರ ಕಾರಾಗೃಹದಕಾವಲಿದ್ದಲ್ಲಿ ಪೊಲೀಸರು, ಜೈಲು ಸಿಬ್ಬಂದಿಗಳನ್ನು ಹತ್ಯೆ ಮಾಡಿ ಜೈಲಲ್ಲಿದ್ದ 350ಕ್ಕೂ ಅಧಿಕ ಕೈದಿಗಳನ್ನು ಮುಕ್ತಗೊಳಿಸಿರುವ ಘಟನೆ ನಡೆದಿದೆ. ಬೆಳಗಿನ ಜಾವ 3 ಗಂಟೆ ಸುಮಾರಿನಲ್ಲಿ ಮಿಲಿಟರಿ ಸಮವಸ್ತ್ರದಲ್ಲಿ ಶಸ್ತ್ರಧಾರಿಗಳಾಗಿ ಬಂದ ತಾಲಿಬಾನಿಗಳು, ಕಾರಾಗೃಹದ ಹೊರಭಾಗದಲ್ಲಿ ಕಾರು ಬಾಂಬ್ ಸ್ಫೋಟ ನಡೆಸಿದ್ದಾರೆ.

ಸ್ಫೋಟದ ಸದ್ದು ಕೇಳಿ ಹೊರಬಂದ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ ನೆಲಕ್ಕುರುಳಿಸಿ, ಒಳನುಗ್ಗಿ ನೂರಾರು ಕೈದಿಗಳನ್ನು ಮುಕ್ತಗೊಳಿಸಿದ್ದಾರೆ ಎಂದು ಘಸ್ನಿ ಪ್ರಾದೇಶಿಕ ಉಪ ರಾಜ್ಯಪಾಲ ಮೊಹ್ಮದ್ ಅಲಿ ಅಹಮ್ಮದಿ ಹೇಳಿದ್ದಾರೆ.

ಜೈಲಿನ ಬಾಗಿಲುಗಳನ್ನು ಧ್ವಂಸ ಮಾಡಿರುವ ಉಗ್ರರು ಸುಮಾರು 350ಕ್ಕೂ ಹೆಚ್ಚು ಕೈದಿಗಳನ್ನು ಕರೆದುಕೊಂಡು ಪರಾರಿಯಾಗಿದ್ದಾರೆ.ಈ ಪೈಕಿ 152 ಮಂದಿ ತಾಲಿಬಾನಿ ಸದಸ್ಯರಾಗಿದ್ದಾರೆ. ಈ ದಾಳಿಯಲ್ಲಿ ಬಲಿಯಾದವರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. 25 ಜನ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ವರು ಪೊಲೀಸ್ ಅಧಿಕಾರಿಗಳು, 7 ಮಂದಿ ಜೈಲು ಸಿಬ್ಬಂದಿ ಜೀವ ಕಳೆದುಕೊಂಡಿದ್ದಾರೆ

ತಾಲಿಬಾನ್ ಸಂಘಟನೆ ಉಗ್ರರು ಮತ್ತು ಜೈಲು ಸಿಬ್ಬಂದಿ ನಡುವಣ ಹೋರಾಟ ಗಂಟೆಗಟ್ಟಲೆ ನಡೆದಿದೆ. ನಂತರ ಇಡೀ ಕಾರಾಗೃಹವನ್ನು ತಾಲಿಬಾನಿಗಳು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಪ್ರಸ್ತುತ ಜೈಲು ಅವರ ನಿಯಂತ್ರಣದಲ್ಲೇ ಇದೆ.

ಕಳೆದ 2011ರಲ್ಲಿ ಕೂಡ ಇದೇ ರೀತಿ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿದ್ದ ಉಗ್ರರು, 500ಕ್ಕೂ ಅಧಿಕ ಸಂಖ್ಯೆಯ ಕೈದಿಗಳನ್ನು ಮುಕ್ತಗೊಳಿಸಿದ್ದರು. ಆಗ ಕಂದಹಾರ್‌ನ ದಕ್ಷಿಣ ಪ್ರಾಂತ್ಯದ ಕಾರಾಗೃಹದ ಮೇಲೆ ದಾಳಿ ನಡೆಸಲಾಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A day after the Afghan army killed dozens of their compatriots in military operations, a Taliban suicide squad struck back. The insurgents raided a jail in eastern Afghanistan early Monday, setting 350 inmates free, a provincial official said. And they killed four police officers and wounded another seven in their attack reported CNN.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more