ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಸತ್ತಿಲ್ಲ ಎಂದು ಆಡಿಯೋ ಬಿಡುಗಡೆ ಮಾಡಿದ ತಾಲಿಬಾನ್ ಸಹ ಸಂಸ್ಥಾಪಕ ಅಬ್ದುಲ್ ಘನಿ

|
Google Oneindia Kannada News

ಕಾಬೂಲ್, ಸೆಪ್ಟೆಂಬರ್ 13: 'ನಾನಿನ್ನೂ ಸತ್ತಿಲ್ಲ ಬದುಕಿದ್ದೇನೆ' ಎಂದು ತಾಲಿಬಾನ್ ಸಹ ಸಂಸ್ಥಾಪಕ ಅಬ್ದುಲ್ ಘನಿ ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.

ತನ್ನ ಸಾವು ಕುರಿತ ವದಂತಿ ಸುಳ್ಳು ಪ್ರಚಾರ ಎಂದು ತಾಲಿಬಾನ್ ಫೋಸ್ಟ್ ಮಾಡಿರುವ ಆಡಿಯೋ ಸಂದೇಶದಲ್ಲಿ ಅಬ್ದುಲ್ ಘನಿ ಬರಾದಾರ್ ಆರೋಪಿಸಿದ್ದಾನೆ. ಅಧ್ಯಕ್ಷೀಯ ಅರಮನೆಯಲ್ಲಿ ತಾಲಿಬಾನ್ ವಿರೋಧಿಗಳ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಅಬ್ದುಲ್ ಘನಿ ಬರಾದರ್ ಮಾರಣಾಂತಿಕವಾಗಿ ಗಾಯಗೊಂಡಿರುವುದಾಗಿ ವಿಶೇಷವಾಗಿ ಭಾರತದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವದಂತಿ ಹಬ್ಬಿತ್ತು.

ತಾಲಿಬಾನ್ ಭಯೋತ್ಪಾದಕರಿಗೆ ಪ್ರೇರಣೆಯಾಗಲಿದೆ ಎಂದ ಬ್ರಿಟನ್ ಗುಪ್ತಚರ ಇಲಾಖೆ ಮುಖ್ಯಸ್ಥತಾಲಿಬಾನ್ ಭಯೋತ್ಪಾದಕರಿಗೆ ಪ್ರೇರಣೆಯಾಗಲಿದೆ ಎಂದ ಬ್ರಿಟನ್ ಗುಪ್ತಚರ ಇಲಾಖೆ ಮುಖ್ಯಸ್ಥ

ತಾಲಿಬಾನ್ ಸಹ ಸಂಸ್ಥಾಪಕ ಮತ್ತು ಅಫ್ಘಾನಿಸ್ತಾನದ ಇದೀಗ ಉಪ ಪ್ರಧಾನಿ ಅಬ್ದುಲ್ ಘನಿ ಬರಾದಾರ್ ಸಾವನ್ನಪ್ಪಿರಬೇಕು ಎಂಬಂತಹ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇಂತಹ ಸುದ್ದಿಗಳ ನಂತರ ಸೋಮವಾರ ಆಡಿಯೋವೊಂದನ್ನು ಬಿಡುಗಡೆ ಮಾಡಿರುವ ಘನಿ, ತಾನು ಜೀವಂತಾಗಿದ್ದು, ಚೆನ್ನಾಗಿರುವುದಾಗಿ ಹೇಳಿದ್ದಾನೆ.

Taliban Co-Founder Abdul Ghani Baradar Releases Audio Statement Amid Rumours Of Death

ಆಡಿಯೋ ಸಂದೇಶದ ನೈಜ್ಯತೆ ದೃಢಪಟ್ಟಿಲ್ಲ, ಆದರೆ, ಹೊಸ ಸರ್ಕಾರದ ರಾಜಕೀಯ ಕಚೇರಿಯ ವಕ್ತಾರ ಸೇರಿದಂತೆ ತಾಲಿಬಾನ್ ನ ಅಧಿಕೃತ ಖಾತೆಯಲ್ಲಿ ಇದನ್ನು ಫೋಸ್ಟ್ ಮಾಡಲಾಗಿದೆ.

ಕಳೆದ ಕೆಲ ರಾತ್ರಿಗಳಲ್ಲಿ ನಾನು ಪ್ರವಾಸದಲ್ಲಿದ್ದೆ, ಈ ಸಮಯದಲ್ಲಿ ನನ್ನ ಸಹೋದರರು, ಸ್ನೇಹಿತರೆಲ್ಲರೂ ಚೆನ್ನಾಗಿದ್ದೇವೆ, ಮಾಧ್ಯಮಗಳು ಯಾವಾಗಲೂ ಸುಳ್ಳು ಪ್ರಚಾರವನ್ನು ಪ್ರಕಟಿಸುತ್ತವೆ.

ಆದ್ದರಿಂದ ಈ ಎಲ್ಲಾ ಸುಳ್ಳುಗಳನ್ನು ಧೈರ್ಯವಾಗಿ ತಿರಸ್ಕರಿಸಿ, ಶೇ. 100 ರಷ್ಟು ಅಂತಹ ಯಾವುದೇ ಸಮಸ್ಯೆಗಳಿಲ್ಲ, ನಮಗೆ ಯಾವುದೇ ತೊಂದರೆಯಿಲ್ಲ ಎಂದು ಬರಾದಾರ್ ಕ್ಲಿಪ್ ನಲ್ಲಿ ತಿಳಿಸಿದ್ದಾನೆ.

1968ರಲ್ಲಿ ಅಫ್ಘಾನಿಸ್ತಾನದ ಉರುಜ್ಗಾನ್ ಪ್ರಾಂತ್ಯದಲ್ಲಿ ಜನಿಸಿದ ಬರದಾರ್ ತಾಲಿಬಾನ್ ಉಗ್ರ ಸಂಘಟನೆಯ ಸಹ ಸಂಸ್ಥಾಪಕ. ಹೈಬತುಲ್ಲಾ ಅಖುಂಡಜಾದ ನಂತರ ತಾಲಿಬಾನ್ ಶ್ರೇಣಿಯಲ್ಲಿ ಅವರು 2ನೇ ಅತ್ಯಂತ ಹಿರಿಯ ನಾಯಕ. 3 ವರ್ಷಗಳ ಹಿಂದೆ ಅಮೆರಿಕದ ಕೋರಿಕೆಯ ಮೇರೆಗೆ ಆತನನ್ನು ಪಾಕಿಸ್ತಾನದ ಜೈಲಿನಿಂದ ಬಿಡುಗಡೆ ಮಾಡಲಾಯಿತು. ಬರದಾರ್ ಇಂದು ರಾಜಕೀಯ ಮುಖ್ಯಸ್ಥ ಮತ್ತು ತಾಲಿಬಾನ್‌ನ ಅತ್ಯಂತ ಗಮನಾರ್ಹ ಸಾರ್ವಜನಿಕ ಮುಖವಾಗಿ ಗುರುತಿಸಿಕೊಂಡಿದ್ದಾನೆ.

ಅಬ್ದುಲ್ ಘನಿ ಬರಾದಾರ್ ದೋಹಾದಿಂದ ಕಾಬೂಲ್ ತಲುಪಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಬೂಲ್ ಪತನದ ಬಗ್ಗೆ ಹೇಳಿಕೆ ನೀಡಿರುವ ಬರದಾರ್, 'ತಾಲಿಬಾನ್‌ನ ನೈಜ ಪರೀಕ್ಷೆಯು ಈಗ ಆರಂಭವಾಗಿದೆ.

ನಾವು ರಾಷ್ಟ್ರದ ಸೇವೆ ಮಾಡಬೇಕು' ಅಂತಾ ಹೇಳಿದ್ದಾರೆ.1980ರಲ್ಲಿ ಸೋವಿಯತ್ ಸೇನೆಯ ವಿರುದ್ಧ ಅಫ್ಘಾನ್ ಮುಜಾಹಿದ್ದೀನ್ ನಲ್ಲಿ ಬರಾದಾರ್ ಹೋರಾಡಿದ್ದರು. 1992ರಲ್ಲಿ ರಷ್ಯನ್ನರ ನಿರ್ಗಮನದ ನಂತರ ಪ್ರತಿಸ್ಪರ್ಧಿ ಸೇನಾಧಿಕಾರಿಗಳ ನಡುವೆ ಅಂತರ್ಯುದ್ಧ ಸ್ಫೋಟಗೊಂಡಿತ್ತು.

ಆ ಸಮಯದಲ್ಲಿ ಬರಾದಾರ್ ಮಾಜಿ ಕಮಾಂಡರ್ ಮತ್ತು ತನ್ನ ಸೋದರಮಾವ ಮೊಹಮ್ಮದ್ ಒಮರ್ ನೊಂದಿಗೆ ಕಂದಹಾರ್‌ನಲ್ಲಿ ಮದರಸಾವನ್ನು ಸ್ಥಾಪಿಸಿದ್ದ. ಈ ಇಬ್ಬರು ಒಟ್ಟಾಗಿ ತಾಲಿಬಾನ್ ಭಯೋತ್ಪಾದಕ ಸಂಘಟನೆ ಯನ್ನು ಹುಟ್ಟುಹಾಕಿದ್ದರು.

ಈ ಯುವ ಇಸ್ಲಾಮಿಕ್ ನಾಯಕರು ದೇಶದ ಧಾರ್ಮಿಕ ಶುದ್ಧೀಕರಣ ಮತ್ತು ಎಮಿರೇಟ್‌ನ ಸೃಷ್ಟಿಗೆ ಮೀಸಲಾದ ಚಳುವಳಿಯನ್ನು ಮುನ್ನಡೆಸಿದರು. ಅಫ್ಘನ್ನರಲ್ಲಿ ಸೇನಾಧಿಪತಿಗಳ ವಿರುದ್ಧ ದ್ವೇಷ ಮತ್ತು ಪಾಕಿಸ್ತಾನದ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ (ISI) ಏಜೆನ್ಸಿಯ ಬೆಂಬಲದಿಂದಾಗಿ 1996ರಲ್ಲಿ ಪ್ರಾಂತೀಯ ರಾಜಧಾನಿಗಳ ಅದ್ಭುತ ವಿಜಯಗಳ ನಂತರ ತಾಲಿಬಾನ್ ಅಧಿಕಾರಕ್ಕೆ ಬಂದಿತ್ತು.

ಮುಲ್ಲಾ ಒಮರ್ ನಂತರದ ಸ್ಥಾನದಲ್ಲಿದ್ದ ಬರಾದಾರ್ ಪರಿಣಾಮಕಾರಿ ಕಾರ್ಯತಂತ್ರ ರೂಪಿಸಿದ್ದರು. ಪರಿಣಾಮ ತಾಲಿಬಾನ್ ವಿಜಯಗಳಲ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದರು.

ಅಫ್ಘಾನಿಸ್ತಾನದ 5 ವರ್ಷಗಳ ತಾಲಿಬಾನ್ ಆಡಳಿತದಲ್ಲಿ ರಕ್ಷಣಾ ಉಪಮಂತ್ರಿಯಾಗಿ ಬರದಾರ್ ಮಿಲಿಟರಿ ಮತ್ತು ಆಡಳಿತಾತ್ಮಕ ಪಾತ್ರಗಳನ್ನು ನಿರ್ವಹಿಸಿದರು. ಇದೀಗ ತಾಲಿಬಾನ್ ಮುಖ್ಯಸ್ಥ ಬರಾದಾರ್ ಅಫ್ಘಾನಿಸ್ತಾನದ ಉಪ ಪ್ರಧಾನಿಯಾಗಿದ್ದಾರೆ.

English summary
The Taliban co-founder and now deputy prime minister of Afghanistan released an audio statement on Monday saying he was alive and well after news of his supposed demise went viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X