ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನದ ಹಲವಾರು ಜಿಲ್ಲೆಗಳು ವಶಕ್ಕೆ ಪಡೆದ ತಾಲಿಬಾನ್‌

|
Google Oneindia Kannada News

ಕಾಬೂಲ್‌, ಜು.05: ಅಫ್ಘಾನಿಸ್ತಾನಕ್ಕೆ ತಾಲಿಬಾನ್‌ ದಾಳಿ ನಡೆಸಿದ್ದು ಹಲವಾರು ಜಿಲ್ಲೆಗಳನ್ನು ವಶಕ್ಕೆ ಪಡೆದುಕೊಂಡಿದೆ. ''ತಾಲಿಬಾನ್‌ ದಾಳಿ ನಡೆಸುತ್ತಿದ್ದಂತೆ ಬೆದರಿದ ಅಫ್ಘಾನ್ ಪಡೆಯು ಸ್ಥಳದಿಂದ ಪಲಾಯನವಾಗಿದ್ದಾರೆ ಹಾಗೂ ನೂರಾರು ಜನರು ಗಡಿ ಹಾದು ತಜಕಿಸ್ತಾನಕ್ಕೆ ಓಡಿ ಹೋಗಿದ್ದಾರೆ,'' ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

''ತಾಲಿಬಾನ್‌ ಗಡಿಯತ್ತ ಆಗಮಿಸಲು ಆರಂಭಿಸಿದಾಗ ಅಫ್ಘಾನಿಸ್ತಾನದ ಬಡಾಖಾನ್ ಪ್ರಾಂತ್ಯದಿಂದ 300 ಕ್ಕೂ ಹೆಚ್ಚು ಅಫಘಾನ್ ಮಿಲಿಟರಿ ಸಿಬ್ಬಂದಿಗಳು ಗಡಿ ದಾಟಿದ್ದಾರೆ','' ಎಂದು ತಜಕಿಸ್ತಾನದ ರಾಷ್ಟ್ರೀಯ ಭದ್ರತೆಗಾಗಿ ಮೀಸಲಾದ ರಾಜ್ಯ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.

ಬೆಂಕಿಯಿಂದ ಬಾಣಲೆಗೆ..! ನೆಮ್ಮದಿಯನ್ನೇ ಹಾಳು ಮಾಡುತ್ತಿದೆಯಾ ಅಮೆರಿಕ..?ಬೆಂಕಿಯಿಂದ ಬಾಣಲೆಗೆ..! ನೆಮ್ಮದಿಯನ್ನೇ ಹಾಳು ಮಾಡುತ್ತಿದೆಯಾ ಅಮೆರಿಕ..?

"ಮಾನವೀಯತೆ ಹಾಗೂ ನೆರೆ ರಾಷ್ಟ್ರದೊಂದಿಗೆ ಸೌರ್ಹಾದತೆ ಉಳಿಸಿಕೊಳ್ಳುವ ತತ್ವ"ದಿಂದಾಗಿ ಅಫಘಾನ್ ರಾಷ್ಟ್ರೀಯ ರಕ್ಷಣಾ ಪಡೆ ಮತ್ತು ಭದ್ರತಾ ಪಡೆಗಳನ್ನು ತಜಕಿಸ್ತಾನಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗಿದೆ ಎಂದು ಹೇಳಿಕೆ ತಿಳಿಸಿದೆ.

Taliban captures several districts in Afghanistan from fleeing troops

ಏಪ್ರಿಲ್ ಮಧ್ಯದಿಂದ, ಅಮೆರಿಕಾ ಅಧ್ಯಕ್ಷ ಜೋ ಬಿಡೆನ್‌ ಅಫ್ಘಾನಿಸ್ತಾನದ "ಶಾಶ್ವತ ಯುದ್ಧ" ಕ್ಕೆ ಅಂತ್ಯವನ್ನು ಘೋಷಿಸಿದ್ದಾರೆ. ಸುಮಾರು ಎರಡು ದಶಕಗಳ ಬಳಿಕ ಅಫ್ಘಾನಿಸ್ತಾನದ ಬಗ್ರಾಮ್‌ ವಾಯುನೆಲೆಯನ್ನು ತೊರೆದಿದ್ದು, ಈ ಬೆನ್ನಲ್ಲೇ ತಾಲಿಬಾನ್ ದೇಶಾದ್ಯಂತ ದಾಳಿ ಆರಂಭಿಸಿದೆ. ಉತ್ತರ ಅಫ್ಘಾನಿಸ್ತಾನದ ಹಲವು ಜಿಲ್ಲೆಗಳನ್ನು ವಶಕ್ಕೆ ಪಡೆದುಕೊಂಡಿದೆ.

ಅಫ್ಘಾನಿಸ್ತಾನದ ಎಲ್ಲಾ 421 ಜಿಲ್ಲೆಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಮೂರನೇ ಒಂದು ಭಾಗವನ್ನು ಈಗ ತಾಲಿಬಾನ್ ನಿಯಂತ್ರಿಸುತ್ತಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಪ್ರಾಂತೀಯ ಪರಿಷತ್ ಸದಸ್ಯ ಮೋಹಿಬ್-ಉಲ್ ರಹಮಾನ್, ''ಇತ್ತೀಚಿನ ದಿನಗಳಲ್ಲಿ ಈಶಾನ್ಯ ಬಡಾಖಾನ್ ಪ್ರಾಂತ್ಯದಲ್ಲಿ ಅಧಿಕ ಹೋರಾಟ ನಡೆಸದೆಯೇ ಸುಲಭವಾಗಿ ದಂಗೆಕೋರರು ದಾಳಿ ನಡೆಸಿದ್ದಾರೆ. ಸೈನಿಕರ ಕಳಪೆ ಸ್ಥೈರ್ಯದ ಹಿನ್ನೆಲೆ ತಾಲಿಬಾನ್ ಯಶಸ್ಸನ್ನು ಸಾಧಿಸಿದೆ. ಕಳೆದ ಮೂರು ದಿನದಲ್ಲೇ 10 ಜಿಲ್ಲೆಗಳು ತಾಲಿಬಾನ್‌ ವಶವಾಗಿದೆ. ಈ ಪೈಕಿ ಎಂಟು ಜಿಲ್ಲೆಗಳಲ್ಲಿ ಯಾವುದೇ ಯುದ್ದವಿಲ್ಲದೆಯೇ ತಾಲಿಬಾನ್‌ ವಶವಾಗಿದೆ,'' ಎಂದು ಆರೋಪಿಸಿದ್ದಾರೆ.

ಶಾಲೆ ಆವರಣದಲ್ಲಿ ರಕ್ತದೋಕುಳಿ, ಉಗ್ರರ ಕೃತ್ಯಕ್ಕೆ 50 ಜನರು ಬಲಿ ಶಾಲೆ ಆವರಣದಲ್ಲಿ ರಕ್ತದೋಕುಳಿ, ಉಗ್ರರ ಕೃತ್ಯಕ್ಕೆ 50 ಜನರು ಬಲಿ

''ರಾಜಧಾನಿಯ ಸುತ್ತಲಿನ ಪರಿಧಿಯನ್ನು ಬಲಪಡಿಸಲು ಭಾನುವಾರ ಮುಂಜಾನೆ ಭದ್ರತಾ ಸಭೆ ನಡೆಸುತ್ತಿದ್ದರೂ, ಕೆಲವು ಹಿರಿಯ ಪ್ರಾಂತೀಯ ಅಧಿಕಾರಿಗಳು ಫೈಜಾಬಾದ್‌ನಿಂದ ರಾಜಧಾನಿ ಕಾಬೂಲ್‌ಗೆ ತೆರಳುತ್ತಿದ್ದರು. ಜೂನ್ ಅಂತ್ಯದಲ್ಲಿ ಅಫ್ಘಾನ್ ಸರ್ಕಾರವು ಅಸ್ತವ್ಯಸ್ತಗೊಂಡ ಅಫ್ಘಾನ್‌ ಪಡೆಯನ್ನು ಪುನರುತ್ಥಾನಗೊಳಿಸಿತು. ಆದರೆ ಬಾದಾಕ್ಷಾನ್ ಜಿಲ್ಲೆಗಳಲ್ಲಿನ ಅನೇಕ ಸೇನಾಪಡೆಗಳು ಅರೆಮನಸ್ಸಿನಿಂದ ಮಾತ್ರ ಹೋರಾಟವನ್ನು ಮಾಡಿವೆ,'' ಎಂದು ರಹಮಾನ್ ದೂರಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
The Taliban’s march through northern Afghanistan gained momentum overnight with the capture of several districts from fleeing Afghan forces, several hundred of whom fled across the border into Tajikistan, officials said Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X