ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನ್‌ನಲ್ಲಿ ವಿದೇಶಿ ಕರೆನ್ಸಿ ಬಳಕೆಯನ್ನು ನಿಷೇಧಿಸಿದ ತಾಲಿಬಾನ್‌

|
Google Oneindia Kannada News

ಕಾಬೂಲ್‌, ನವೆಂಬರ್‌ 03: ಅಫ್ಘಾನಿಸ್ತಾನದಲ್ಲಿ ವಿದೇಶಿ ಕರೆನ್ಸಿ ಬಳಕೆಯನ್ನು ನಿಷೇಧ ಮಾಡಲಾಗಿದೆ ಎಂದು ಅಫ್ಘಾನಿಸ್ತಾನದಲ್ಲಿ ಸರ್ಕಾರ ನಡೆಸುತ್ತಿರುವ ತಾಲಿಬಾನ್‌ ಹೇಳಿದೆ. ಈಗಾಗಲೇ ಯುದ್ಧ ಪೀಡಿತ ಅಫ್ಘಾನಿಸ್ತಾನದ ಆರ್ಥಿಕ ಪರಿಸ್ಥಿತಿಯು ಭಾರೀ ಹದಗೆಟ್ಟಿದೆ. ಈ ನಡುವೆ ಈ ಆರ್ಥಿಕತೆಗೆ ಮತ್ತಷ್ಟು ಅಡ್ಡಿಪಡಿಸುವ ಬೆದರಿಕೆ ಹಾಕುತ್ತಿದೆ.

ಯುಎಸ್‌ ಅಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ಹಿಂದಕ್ಕೆ ಪಡೆಯುತ್ತಿದ್ದಂತೆ ತಾಲಿಬಾನ್‌ ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿದೆ. ಕ್ಷೀಪ್ರವಾಗಿ ಅಫ್ಘಾನಿಸ್ತಾನದ ಪ್ರದೇಶಗಳನ್ನು ತನ್ನ ವಶಕ್ಕೆ ಪಡೆಯುತ್ತಾ ಬಂದ ತಾಲಿಬಾನ್‌ ಕಳೆದ ಆಗಸ್ಟ್‌ನಲ್ಲಿ ಕಾಬೂಲ್‌ ಅನ್ನು ತನ್ನ ತೆಕ್ಕೆಗೆ ಪಡೆಯುವ ಮೂಲಕ ಸಂಪೂರ್ಣವಾಗಿ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದೆ. ಈಗ ಸರ್ಕಾರವನ್ನು ತಾಲಿಬಾನ್‌ ರಚನೆ ಮಾಡಿದೆ.

'ನಮಗೆ ನಮ್ಮ ಹಣ ನೀಡಿಬಿಡಿ': ತಾಲಿಬಾನ್‌ ಒತ್ತಾಯ'ನಮಗೆ ನಮ್ಮ ಹಣ ನೀಡಿಬಿಡಿ': ತಾಲಿಬಾನ್‌ ಒತ್ತಾಯ

ಆದರೆ ಭಯೋತ್ಪಾದಕ ಗುಂಪು ಎಂದು ಗುರುತಿಸಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಮಾನ್ಯತೆಯನ್ನು ಪಡೆಯಲದಿರುವ ತಾಲಿಬಾನ್‌, ಅಫ್ಘಾನಿಸ್ತಾನದಲ್ಲಿ ತನ್ನ ಸರ್ಕಾರ ಆರಂಭ ಮಾಡಿದಾಗಿನಿಂದ ತನ್ನದೇ ಆದ ನಿಯಮಗಳನ್ನು ಶರಿಯತ್‌ ನೆಪದಲ್ಲಿ ಜಾರಿ ಮಾಡುತ್ತಿದೆ. ಅಫ್ಘಾನಿಸ್ತಾನವನ್ನು ತಾಲಿಬಾನ್‌ ವಶಕ್ಕೆ ಪಡೆದ ಬಳಿಕ ಅಫ್ಘಾನಿಸ್ತಾನದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಕಂಡು ಬಂದಿದೆ. ಈ ನಡುವೆ ದೇಶದ ಸಂಪತ್ತು ವಿದೇಶದ ಬ್ಯಾಂಕ್‌ಗಳಲ್ಲಿ ಇದೆ. ತಾಲಿಬಾನ್ ಸರ್ಕಾರವನ್ನು ಅಫ್ಘಾನಿಸ್ತಾನದ ಸರ್ಕಾರ ಎಂದು ಅಂತಾರಾಷ್ಟ್ರೀಯವಾಗಿ ಪರಿಗಣಿಸದ ಕಾರಣದಿಂದಾಗಿ ವಿದೇಶದಲ್ಲಿರುವ ಅಫ್ಘಾನ್‌ ಹಣವನ್ನು ಅಂತಾರಾಷ್ಟ್ರೀಯ ಬ್ಯಾಂಕುಗಳು ತಡೆದು ಹಿಡಿದಿದೆ.

Taliban Bans Use Of Foreign Currency In Afghanistan

ಅಫ್ಘಾನ್‌ನಲ್ಲಿ ಡಾಲರ್‌, ಪಾಕ್‌ ರೂಪಾಯಿ ಬಳಕೆ!

ಅಫ್ಘಾನಿಸ್ತಾನದಲ್ಲಿ ಪ್ರಸ್ತುತ ಆರ್ಥಿಕತೆಯು ಕ್ಷೀಣಿಸುತ್ತಿದೆ. ಈ ನಡುವೆ ಅಫ್ಘಾನಿಸ್ತಾನದಲ್ಲಿ ಬ್ಯಾಂಕುಗಳು ನಗದು ಕೊರತೆಯನ್ನು ಎದುರಿಸುತ್ತಿವೆ. ಆದರೂ ಅಂತರರಾಷ್ಟ್ರೀಯ ಸಮುದಾಯವು ತಾಲಿಬಾನ್ ಆಡಳಿತವನ್ನು ಸರ್ಕಾರವೆಂದು ಗುರುತಿಸಲು ನಿರಾಕರಿಸಿದೆ. ಈ ನಡುವೆ ಅಫ್ಘಾನಿಸ್ತಾನದಲ್ಲಿ ಹಲವಾರು ವಹಿವಾಟುಗಳನ್ನು ಯುಎಸ್‌ ಡಾಲರ್‌ಗಳಲ್ಲಿ ನಡೆಸಲಾಗುತ್ತಿದೆ ಎಂದು ವರದಿಯು ಹೇಳಿದೆ. ದಕ್ಷಿಣ ಗಡಿ ವ್ಯಾಪಾರ ಮಾರ್ಗಗಳಿಗೆ ಹತ್ತಿರವಿರುವ ಪ್ರದೇಶಗಳಲ್ಲಿ ಪಾಕಿಸ್ತಾನಿ ರೂಪಾಯಿಗಳನ್ನು ಬಳಸಲಾಗು‌ತ್ತಿದೆ ಎಂದು ಕೂಡಾ ವರದಿ ಆಗಿದೆ. ಒಂದು ಅಫ್ಘಾನ್‌ ಅಪ್ಘಾನಿಯು (ಅಫ್ಘಾನ್‌ ಹಣ) 0.011 ಯುಎಸ್‌ ಡಾಲರ್‌ಗೆ ಸಮವಾಗಿದೆ. ಹಾಗೆಯೇ ಒಂದು ಅಫ್ಘಾನ್‌ ಅಪ್ಘಾನಿಯು (ಅಫ್ಘಾನ್‌ ಹಣ) 1.87 ಪಾಕಿಸ್ತಾನ ರೂಪಾಯಿಗೆ ಸಮವಾಗಿದೆ

ಈ ನಿಟ್ಟಿನಲ್ಲಿ ತಾಲಿಬಾ‌ನ್‌ ಸರ್ಕಾರವು ದೇಶದಲ್ಲಿ ವಿದೇಶಿ ಕರೆನ್ಸಿಗಳ ಬಳಕೆಯನ್ನು ನಿಷೇಧ ಮಾಡಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆಯ ಮೂಲಕ ಮಾಹಿತಿ ನೀಡಿರುವ ತಾಲಿಬಾನ್‌ ವಕ್ತಾರ ಜಬೀವುಲ್ಲಾ ಮುಜಾಹಿದ್, "ಇನ್ನು ಮುಂದೆ ಯಾರಾದರೂ ವಿದೇಶಿ ಕರೆನ್ಸಿಯನ್ನು ದೇಶೀಯ ವ್ಯವಹಾರಕ್ಕೆ ಬಳಸಿದರೆ ಕಾನೂನು ಕ್ರಮ ಜರುಗಿಸಲಾಗುವುದು," ಎಂದು ಎಚ್ಚರಿಕೆ ನೀಡಿದ್ದಾರೆ.

ಕಾಬೂಲ್ ಮಿಲಿಟರಿ ಆಸ್ಪತ್ರೆ ಬಳಿ ಸ್ಫೋಟ, 15 ಮಂದಿ ದುರ್ಮರಣಕಾಬೂಲ್ ಮಿಲಿಟರಿ ಆಸ್ಪತ್ರೆ ಬಳಿ ಸ್ಫೋಟ, 15 ಮಂದಿ ದುರ್ಮರಣ

"ದೇಶದಲ್ಲಿನ ಆರ್ಥಿಕ ಪರಿಸ್ಥಿತಿ ಮತ್ತು ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ಅಫ್ಘಾನ್‌ ನಾಗರಿಕರು ಎಲ್ಲಾ ವಹಿವಾಟಿನಲ್ಲಿಯೂ ಅಫ್ಘಾನಿ ಕರೆನ್ಸಿಯನ್ನು ಬಳಸಬೇಕಾಗುತ್ತದೆ," ಎಂದು ಪತ್ರಿಕಾ ಹೇಳಿಕೆಯ ಮೂಲಕ ತಾಲಿಬಾನ್‌ ವಕ್ತಾರ ಜಬೀವುಲ್ಲಾ ಮುಜಾಹಿದ್ ತಿಳಿಸಿದ್ದಾರೆ. "ಇಸ್ಲಾಮಿಕ್ ಎಮಿರೇಟ್ ಎಲ್ಲಾ ನಾಗರಿಕರು, ಅಂಗಡಿಯವರು, ವ್ಯಾಪಾರಿಗಳು, ಉದ್ಯಮಿಗಳು ಮತ್ತು ಸಾರ್ವಜನಿಕರಿಗೆ ಇನ್ಮುಂದೆ ಅಫ್ಘಾನಿಸ್ತಾನಿಗಳ ಜೊತೆ ವಹಿವಾಟು ನಡೆಸುವ ಸಂದರ್ಭದಲ್ಲಿ ವಿದೇಶಿ ಕರೆನ್ಸಿಯ ಬಳಕೆ ಮಾಡುವುದನ್ನು ಕಟ್ಟುನಿಟ್ಟಾಗಿ ತಡೆಯುವಂತೆ ಸೂಚನೆ ನೀಡಲಾಗಿದೆ," ಎಂದಿದ್ದಾರೆ.

ನಮ್ಮ ಹಣವನ್ನು ನಮಗೆ ನೀಡಿ ಎಂದಿದ್ದ ತಾಲಿಬಾನ್‌

ಅಫ್ಘಾನಿಸ್ತಾನಕ್ಕೆ ದಾಳಿ ನಡೆಸಿದ ತಾಲಿಬಾನ್‌ ದೇಶವನ್ನು ತನ್ನ ವಶಕ್ಕೆ ಪಡೆದುಕೊಂಡು ಸರ್ಕಾರವನ್ನು ರಚನೆ ಮಾಡಿದೆ. ಆದರೆ ಈಗ ತಾಲಿಬಾನ್‌ಗೆ ಸರ್ಕಾರ ನಡೆಸಲು ಆರ್ಥಿಕ ಸಮಸ್ಯೆ ಕಾಣಿಸಿಕೊಂಡಿದೆ. ಬರಪೀಡಿತ ರಾಷ್ಟ್ರವಾದ ಅಫ್ಘಾನಿಸ್ತಾನ ಈಗ ಆರ್ಥಿಕ ಸಮಸ್ಯೆ, ಬಡತನ ಮೊದಲಾದ ಸಮಸ್ಯೆಯನ್ನು ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರಿಯ ಸೆಂಟ್ರಲ್ ಬ್ಯಾಂಕ್ ಶತಕೋಟಿ ಡಾಲರ್‌ನಷ್ಟು ಹಣವನ್ನು ಬಿಡುಗಡೆ ಮಾಡಬೇಕು ಎಂದು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ಇತ್ತೀಚೆಗೆ ಆಗ್ರಹ ಮಾಡಿದೆ.

ಭಾರತದಲ್ಲಿರುವ ಅಫ್ಘಾನ್ ಅಲ್ಪಸಂಖ್ಯಾತರಿಂದ ತುರ್ತು ಸಭೆಭಾರತದಲ್ಲಿರುವ ಅಫ್ಘಾನ್ ಅಲ್ಪಸಂಖ್ಯಾತರಿಂದ ತುರ್ತು ಸಭೆ

ಯು.ಎಸ್. ಫೆಡರಲ್ ರಿಸರ್ವ್ ಮತ್ತು ಯುರೋಪ್‌ನಲ್ಲಿರುವ ಇತರೆ ಹಲವಾರು ಕೇಂದ್ರ ಬ್ಯಾಂಕುಗಳಲ್ಲಿ ಅಫ್ಘಾನಿಸ್ತಾನವು ಶತಕೋಟಿ ಡಾಲರ್ ಹಣವನ್ನು ಇರಿಸಿದೆ. ಆದರೆ ಕಳೆದ ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನವನ್ನು ತಾಲಿಬಾನ್‌ ವಶಕ್ಕೆ ಪಡೆದ ಬಳಿಕ ಈ ಅಂತಾರಾಷ್ಟ್ರೀಯ ಬ್ಯಾಂಕುಗಳು ಹಣವನ್ನು ತಡೆ ಹಿಡಿದಿದೆ. ತಾಲಿಬಾನ್‌ ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಲಾಗಿರುವ ಹಿನ್ನೆಲೆಯಲ್ಲಿಅಂತಾರಾಷ್ಟ್ರೀಯ ಮಟ್ಟದಲ್ಲಿ ತಾಲಿಬಾನ್‌ ಸರ್ಕಾರವನ್ನು ಸ್ವೀಕಾರ ಮಾಡಿಲ್ಲ ಈ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಈ ಹಿನ್ನೆಲೆ "ಆ ಹಣವು ಅಫ್ಘಾನ್‌ ದೇಶಕ್ಕೆ ಸೇರಿದ ಹಣ. ನಮಗೆ ನಮ್ಮ ಹಣವನ್ನು ನೀಡಿ. ಹಣವನ್ನು ಹೀಗೆ ತಡೆದು ಹಿಡಿಯುವುದು ಅನೈತಿಕ ಹಾಗೂ ಇದು ಕಾನೂನು, ಮೌಲ್ಯಕ್ಕೆ ವಿರುದ್ಧವಾದುದು," ಎಂದು ತಾಲಿಬಾನ್‌ ಸರ್ಕಾರದ ಹಣಕಾಸುವ ಸಚಿವಾಲಯದ ವಕ್ತಾರ ಅಹ್ಮದ್ ವಾಲಿ ಹಕ್ಮಲ್ ಆಗ್ರಹಿಸಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Taliban Bans Use Of Foreign Currency In Afghanistan, Says anyone using foreign currency for domestic business would be prosecuted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X