ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನದಲ್ಲಿ ಮತ್ತೆ ತಾಲಿಬಾನ್ ಅಟ್ಟಹಾಸಕ್ಕೆ 43 ಸೈನಿಕರು ಬಲಿ

By Sachhidananda Acharya
|
Google Oneindia Kannada News

ಕಂದಹಾರ್, ಅಕ್ಟೋಬರ್ 19: ಅಫ್ಘಾನಿಸ್ತಾನದ ದಕ್ಷಿಣ ಕಂದಹಾರ್ ಪ್ರಾಂತ್ಯದಲ್ಲಿ ಸೇನಾ ಶಿಬಿರದ ಮೇಲೆ ತಾಲಿಬಾನ್ ಉಗ್ರರು ಆತ್ಮಾಹುತಿ ಕಾಂರ್ ಬಾಂಬ್ ದಾಳಿ ನಡೆಸಿ ಻ಅಟ್ಟಹಾಸ ಮೆರೆದಿದ್ದಾರೆ. ಎರಡು ಪ್ರಬಲ ಕಾರ್ ಬಾಂಬ್ ಸ್ಪೋಟಕ್ಕೆ 43 ಸೈನಿಕರು ಅಸುನೀಗಿದ್ದಾರೆ.

ಬಾಂಬ್ ದಾಳಿಯ ಬೆನ್ನಿಗೆ ಎಂದಿನಂತೆ ತಾಲಿಬಾನ್ ಉಗ್ರರು ಆರ್ಮಿ ಕ್ಯಾಂಪ್ ಮೇಲೆ ಗುಂಡಿನ ದಾಳಿ ನಡೆಸಿದ್ದು ಕ್ಯಾಂಪ್ ನಲ್ಲಿದ್ದ 60 ಜನರಲ್ಲಿ 43 ಜನರು ಅಸುನೀಗಿದ್ದರೆ, 9 ಜನರು ಗಾಯಗೊಂಡಿದ್ದಾರೆ. ಇನ್ನು 6 ಜನರು ನಾಪತ್ತೆಯಾಗಿದ್ದಾರೆ.

Taliban attack army camp in southern Afghanistan, killing 43

ದಾಳಿಯ ಬೆನ್ನಿಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ತಾಲಿಬಾನ್ ದಾಳಿಯ ಹೊಣೆ ಹೊತ್ತುಕೊಂಡಿದೆ. ಇದು ಈ ವಾರ ನಡೆಯುತ್ತಿರುವ ಮೂರನೇ ತಾಲಿಬಾನ್ ದಾಳಿಯಾಗಿದೆ.

2014ರಲ್ಲಿ ಅಮೆರಿಕಾ ಮತ್ತು ನ್ಯಾಟೋ ಪಡೆಗಳು ತಾಲಿಬಾನ್ ಜತೆಗಿನ ಯುದ್ಧವನ್ನು ನಿಲ್ಲಿಸಿದ ನಂತರ ಉಗ್ರರನ್ನು ಸದೆ ಬಡಿಯಲು ಅಫ್ಘಾನಿಸ್ತಾನದ ಸೇನೆ ಹೆಣಗಾಡುತ್ತಿದೆ. ಪ್ರತಿ ಬಾರಿ ಉಗ್ರರು ಸೇನೆ ಮತ್ತು ಪೊಲೀಸರನ್ನೇ ಗುರಿಯಾಗಿಸಿ ದಾಳಿ ನಡೆಸುತ್ತಿದ್ದು ಸಾವಿರಾರು ಜನರನ್ನು ಬಲಿ ಪಡೆಯುತ್ತಿದೆ.

English summary
Afghan officials say the Taliban have carried out two suicide car bombings at an army camp in the southern Kandahar province, setting of several hours of fighting and killing at least 43 soldiers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X