ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕಾಬೂಲ್‌ ಏರ್‌ಪೋರ್ಟ್‌ನ ಸಮಸ್ಯೆ ಬಗೆಹರಿದಿದೆ, ಸೇವೆ ಆರಂಭಿಸಿ': ವಿಮಾನಯಾನ ಸಂಸ್ಥೆಗೆ ತಾಲಿಬಾನ್‌

|
Google Oneindia Kannada News

ಕಾಬೂಲ್‌, ಸೆಪ್ಟೆಂಬರ್‌ 26: ಅಂತಾರಾಷ್ಟ್ರೀಯ ವಿಮಾನ ಸೇವೆಯನ್ನು ಆರಂಭಿಸುವಂತೆ ತಾಲಿಬಾನ್‌ ಭಾನುವಾರ ವಿಮಾನಯಾನ ಸಂಸ್ಥೆಗಳಿಗೆ ಮನವಿ ಮಾಡಿದೆ. "ಕಾಬೂಲ್‌ ಏರ್‌ಪೋರ್ಟ್‌ನ ಸಮಸ್ಯೆ ಬಗೆಹರಿಸಲಾಗಿದೆ, ನೀವು ವಿಮಾನ ಸೇವೆ ಆರಂಭ ಮಾಡಿ," ಎಂದು ತಾಲಿಬಾನ್‌ ಹೇಳಿದೆ.

"ವಿಮಾನಯಾನ ಸಂಸ್ಥೆಗಳಿಗೆ ಸಹಕಾರ ನೀಡಲಾಗುವುದು, ಕಾಬೂಲ್‌ ಏರ್‌ಪೋರ್ಟ್‌ನ ಸಮಸ್ಯೆ ಬಗೆಹರಿಸಲಾಗಿದೆ," ಎಂದು ಕೂಡಾ ತಾಲಿಬಾನ್‌ ತಿಳಿಸಿದೆ. ಯುಎಸ್‌ ತನ್ನ ಸೇನೆಯನ್ನು ಅಫ್ಘಾನಿಸ್ತಾನದಿಂದ ವಾಪಾಸ್‌ ಪಡೆಯುತ್ತಿದ್ದಂತೆ ಅಫ್ಘಾನಿಸ್ತಾನಕ್ಕೆ ದಾಳಿ ಮಾಡಿದ ತಾಲಿಬಾನ್‌ ಈಗ ಸರ್ಕಾರವನ್ನು ರಚನೆ ಮಾಡಿದೆ. ಆದರೆ ತನ್ನ ಸರ್ಕಾರಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಪಡೆಯಲು ತಾಲಿಬಾನ್‌ ಎಲ್ಲಾ ವಿಫಲ ಪ್ರಯತ್ನವನ್ನು ಮಾಡುತ್ತಿದೆ.

ಮರಣದಂಡನೆ, ಅಂಗಚ್ಛೇದನ ಶಿಕ್ಷೆ: 'ಕೈಗಳನ್ನು ಕತ್ತರಿಸುವುದು ಬಹಳ ಅವಶ್ಯಕ' ಎಂದ ತಾಲಿಬಾನ್‌!ಮರಣದಂಡನೆ, ಅಂಗಚ್ಛೇದನ ಶಿಕ್ಷೆ: 'ಕೈಗಳನ್ನು ಕತ್ತರಿಸುವುದು ಬಹಳ ಅವಶ್ಯಕ' ಎಂದ ತಾಲಿಬಾನ್‌!

"ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ಎಲ್ಲಾ ರಾಷ್ಟ್ರಗಳ ನಾಯಕರನ್ನು ಉದ್ದೇಶಿಸಿ ಮಾತನಾಡುವ ಅವಕಾಶವನ್ನು ನಮಗೂ ನೀಡಬೇಕು," ಎಂದು ಹೇಳಿಕೊಂಡಿದ್ದ ತಾಲಿಬಾನ್‌ ಈಗ ತಾನು ಅಂತಾರಾಷ್ಟ್ರೀಯ ಮನ್ನಣೆಯನ್ನು ಪಡೆಯುವ ಯತ್ನವನ್ನು ಮಾಡಿದೆ. ಈ ಹಿನ್ನೆಲೆ ಅಂತಾರಾಷ್ಟ್ರೀಯ ವಿಮಾನ ಸೇವೆಯನ್ನು ಆರಂಭ ಮಾಡಿ, ವಿಮಾನಯಾನ ಸಂಸ್ಥೆಗಳಿಗೆ ಸೇವೆ ಆರಂಭಿಸುವಂತೆ ಹೇಳಿದೆ.

Taliban Ask Airlines To Return, Says Problems At Kabul Airport Resolved

ಇನ್ನು ತಾಲಿಬಾನ್‌ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದ ಬಳಿಕ ಸ್ಥಗಿತವಾದ ವಾಣಿಜ್ಯ ವ್ಯಾಪಾರವು ಸ್ಥಳೀಯವಾಗಿ ಅಫ್ಘಾನಿಸ್ತಾನದಲ್ಲಿ ಇನ್ನು ಕೂಡಾ ವಾಣಿಜ್ಯ ಕಾರ್ಯಗಳು ಆರಂಭವಾಗಿಲ್ಲ ಎಂದು ವರದಿಯಾಗಿದೆ. ಸ್ಥಳಾಂತರ ಪ್ರಕ್ರಿಯೆಯ ಸಂದರ್ಭದಲ್ಲಿ ಹಲವಾರು ಹಾನಿಗೆ ಒಳಗಾಗಿದ್ದ ಕಾಬೂಲ್‌ ವಿಮಾನ ನಿಲ್ದಾಣವನ್ನು ಕತಾರ್‌ ಹಾಗೂ ಟರ್ಕಿ ತಾಂತ್ರಿಕರ ಸಹಾಯದಿಂದಾಗಿ ಈಗ ಮತ್ತೆ ತೆರೆಯಲಾಗಿದೆ ಎಂದು ವರದಿಯಾಗಿದೆ. ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ ಸೇರಿದಂತೆ ಕೆಲವು ವಿಮಾನಯಾನ ಸಂಸ್ಥೆಗಳು ಸೀಮಿತ ಸೇವೆಗಳನ್ನು ನೀಡುತ್ತಿವೆ. ಕೆಲವು ಜನರು ಈ ವಿಮಾನದಲ್ಲಿ ಸಂಚಾರ ಮಾಡಲು ಕೂಡಾ ಸಾಧ್ಯವಾಗಿದೆ ಎಂದು ವರದಿಯಾಗಿದೆ. ಆದರೆ ವಿಮಾನಯಾನ ದರವು ಸಾಮಾನ್ಯಕ್ಕಿಂತ ಹಲವು ಪಟ್ಟು ಅಧಿಕವಾಗಿದೆ ಎಂದು ಹೇಳಲಾಗಿದೆ.

ಈ ಬಗ್ಗೆ ಮಾತನಾಡಿರುವ ತಾಲಿಬಾನ್ ವಕ್ತಾರ ಅಬ್ದುಲ್‌ ಕಹಾರ್‌ ಬಾಲ್ಕಿ, "ಅಂತಾರಾಷ್ಟ್ರೀಯ ವಿಮಾನಗಳ ಸ್ಥಗಿತದಿಂದಾಗಿ ಅನೇಕ ಅಫ್ಘಾನಿಯನ್ನರು ವಿದೇಶದಲ್ಲಿ ಸಿಲುಕಿಕೊಂಡಿದ್ದಾರೆ. ಜನರು ಕೆಲಸ ಅಥವಾ ಅಧ್ಯಯನಕ್ಕಾಗಿ ಪ್ರಯಾಣ ಮಾಡಲು ಸಾಧ್ಯವಾಗಿಲ್ಲ," ಎಂದಿದ್ದಾರೆ.

ವಿದೇಶದಲ್ಲಿ ಸಿಲುಕಿದ ನೂರಾರು ಅಫ್ಘಾನ್‌ ರಾಜತಾಂತ್ರಿಕರು: ಕಾಡುತ್ತಿದೆ ಹಣದ ಅಭಾವ ವಿದೇಶದಲ್ಲಿ ಸಿಲುಕಿದ ನೂರಾರು ಅಫ್ಘಾನ್‌ ರಾಜತಾಂತ್ರಿಕರು: ಕಾಡುತ್ತಿದೆ ಹಣದ ಅಭಾವ

"ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ವಿಮಾನ ನಿಲ್ದಾಣವು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳಿಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಆರಂಭಿಸಿದೆ. ಆದ್ದರಿಂದ ಎಲ್ಲಾ ಐಇಎ ಸಂಪೂರ್ಣ ಸಹಕಾರದ ಭರವಸೆ ನೀಡುತ್ತದೆ" ಎಂದು ತಿಳಿಸಿದ್ದಾರೆ. ಈ ಮೂಲಕ ತಾಲಿಬಾನ್ ವಕ್ತಾರ ಅಬ್ದುಲ್‌ ಕಹಾರ್‌ ಬಾಲ್ಕಿ ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ ಎಂಬ ಹೆಸರಲ್ಲಿ ತಾಲಿಬಾನ್‌ ಸರ್ಕಾರವನ್ನು ಕರೆದಿದೆ.

ತಾಲಿಬಾನ್‌ ಅಫ್ಘಾನಿಸ್ತಾನದಲ್ಲಿ ತನ್ನ ಸರ್ಕಾರವನ್ನು ರಚನೆ ಮಾಡಿದ ಬಳಿಕ ಹಲವಾರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮನ್ನಣೆ ಸಹಾಯವನ್ನು ಪಡೆಯುವ ಯತ್ನವನ್ನು ತಾಲಿಬಾನ್‌ ಮಾಡುತ್ತಿದೆ. ಆದರೆ ಮಹಿಳಾ ಹಕ್ಕು, ಮಾನವ ಹಕ್ಕಿನ ವಿಚಾರದಲ್ಲಿ ತನ್ನ ದೋರಣೆಯನ್ನು ತಾಲಿಬಾನ್‌ ಬದಲಾವಣೆ ಮಾಡಿಲ್ಲ.

Recommended Video

AB De Villiers ಪಂದ್ಯ ಮುಗಿದ ನಂತರ Dressing roomನಲ್ಲಿ ಮಾಡಿದ್ದೇನು | Oneindia Kannada

(ಒನ್‌ಇಂಡಿಯಾ ಸುದ್ದಿ)

English summary
Taliban Ask Airlines To Return, Says Problems At Kabul Airport Resolved. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X