ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಬೂಲ್‌ನಲ್ಲಿರುವ ಕ್ರಿಕೆಟ್ ಮಂಡಳಿಗೆ ನುಗ್ಗಿದ ತಾಲಿಬಾನಿಗಳು

|
Google Oneindia Kannada News

ಕಾಬುಲ್, ಆಗಸ್ಟ್‌ 20: ಕಾಬೂಲ್‌ನಲ್ಲಿರುವ ಕ್ರಿಕೆಟ್ ಮಂಡಳಿಗೆ ತಾಲಿಬಾನ್ ಬಂಡುಕೋರರು ದಾಳಿ ಇಟ್ಟಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ಉಗ್ರರ ಅಟ್ಟಹಾಸ ಮಿತಿ ಮೀರುತ್ತಿದ್ದು, ಅಫ್ಘಾನಿಸ್ತಾನದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ದೇಶದ ಸಂಪೂರ್ಣ ಆಡಳಿತವನ್ನು ತಾಲಿಬಾನಿಗಳು ವಶಪಡಿಸಿಕೊಂಡಿದ್ದಾರೆ. ಅಮೆರಿಕ ರಾಯಭಾರ ಕಚೇರಿ ಸೇರಿದಂತೆ ರಾಜಧಾನಿ ಕಾಬುಲ್ ಪ್ರಮುಖ ಕಟ್ಟಡಗಳಗಿ ನುಗ್ಗಿರುವ ತಾಲಿಬಾನಿಗಳು ಇದೀಗ ಆಫ್ಘನ್ ಕ್ರಿಕೆಟ್ ಮಂಡಳಿ ಕಚೇರಿಗೆ ನುಗ್ಗಿದ್ದಾರೆ. ಅಚ್ಚರಿ ಎಂದರೆ ತಾಲಿಬಾನಿಗಳೊಂದಿಗೆ ಆಫ್ಘಾನಿಸ್ತಾನ ಮಾಜಿ ಕ್ರಿಕೆಟಿಗ ಅಬ್ದುಲ್ ಮಜಾರಿ ಕೂಡ ಸಾಥ್ ನೀಡಿದ್ದರು.

ಅಫ್ಘಾನಿಸ್ತಾನ ತಾಲಿಬಾನ್ ಹಿಡಿತದಲ್ಲಿದ್ದರೂ ಅಮೆರಿಕಕ್ಕೆ ಬೆದರಿಕೆ: ಬೈಡನ್ಅಫ್ಘಾನಿಸ್ತಾನ ತಾಲಿಬಾನ್ ಹಿಡಿತದಲ್ಲಿದ್ದರೂ ಅಮೆರಿಕಕ್ಕೆ ಬೆದರಿಕೆ: ಬೈಡನ್

ಅಫ್ಘಾನಿಸ್ತಾನ ತಂಡ ಲಾಜಿಸ್ಟಿಕ್ಸ್ ಸೇರಿದಂತೆ ಇನ್ನಿತರ ಯಾವುದೇ ಸಮಸ್ಯೆಗಳಿಗೂ ತೊಂದರೆಯಾಗುವುದಿಲ್ಲ ಎಂದು ತಿಳಿದು ಬಂದಿದ್ದು, ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸದಿಂದಾಗಿ ರಾಜತಾಂತ್ರಿಕ ಬಿಕ್ಕಟ್ಟಿನಿಂದ ಬಳಲುತ್ತಿದ್ದರೂ ಕ್ರಿಕೆಟ್ ಚಟುವಟಿಕೆಗಳಿಗೆ ಯಾವುದೇ ತೊಂದರೆಯಿಲ್ಲ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ (ಎಸಿಬಿ) ಸಿಇಒ ಹಮೀದ್ ಶಿನ್ವರಿ ಈ ಮೊದಲೇ ಹೇಳಿದ್ದರು.

Recommended Video

Afghanistanದಲ್ಲಿ ಈಗ ಪರಿಸ್ಥಿತಿ ಹೇಗಿದೆ , Taliban ಸುಧಾರಿಕೊಳ್ತಾ? | Oneindia Kannada
Taliban Arrive At Afghanistan Cricket Board Headquarters In Kabul

ತಾಲಿಬಾನ್‌ಗಳು ಕ್ರಿಕೆಟ್ ಅನ್ನು ಇಷ್ಟಪಡುತ್ತಾರೆ, ಬೆಂಬಲಿಸುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಆಫ್ಗನ್ ಆಡಳಿತವನ್ನು ತಾಲಿಬಾನ್ ವಶಪಡಿಸಿಕೊಂಡರೂ ಕ್ರಿಕೆಟಿಗರು ಹಾಗೂ ಅವರ ಕುಟುಂಬಸ್ಥರು ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ.

ಈ ವೇಳೆ ಮಾತನಾಡಿದ ತಾಲಿಬಾನಿ ನಾಯಕರು, 'ದೇಶದಲ್ಲಿ ಕ್ರಿಕೆಟ್ ಚಟುವಟಿಕೆ ಯಾವುದೇ ಅಡ್ಡಿ ಆತಂಕವಿಲ್ಲದೆ ನಡೆಯಲಿದೆ. ಎಂದಿನಂತೆ ಕ್ರಿಕೆಟ್ ಚಟುವಟಿಕೆ ಸಾಗಲಿವೆ. ದೇಶದಲ್ಲಿ ಕ್ರಿಕೆಟ್ ಬಂದ್ ಮಾಡುವ ಸಂಬಂಧ ಇದುವರೆಗೂ ಯಾವುದೇ ಸೂಚನೆ ಅಥವಾ ಆದೇಶ ಬಂದಿಲ್ಲ. ಹೀಗಾಗಿ ಅಫ್ಘನ್ ಕ್ರಿಕೆಟ್ ತಂಡಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದ್ದಾರೆ.

ಅಫ್ಘಾನಿಸ್ತಾನ ದೇಶವನ್ನು ತನ್ನ ಸುಪರ್ದಿಗೆ ವಶಪಡಿಸಿಕೊಂಡ ನಂತರ ತಾಲಿಬಾನ್‌ಗಳು ಗುರುವಾರ ಅಫ್ಘಾನಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ್ದಾರೆ. ತಾವು ಅಮೆರಿಕ ಸರ್ಕಾರವನ್ನು ಸೋಲಿಸಿದ್ದೇವೆ ಎಂದು ಹೇಳಿಕೊಂಡಿರುವ ತಾಲಿಬಾನೀಯರ ಮುಂದೆ ಅಫ್ಘನ್‌ನ ಹೆಪ್ಪುಗಟ್ಟಿದ ಸರ್ಕಾರವನ್ನು ನಡೆಸುವುದರಿಂದ ಹಿಡಿದು ದೇಶದ ನಾಗರಿಕರ ಮತ್ತು ವಿಶ್ವದ ರಾಷ್ಟ್ರಗಳ ವಿರೋಧವನ್ನು ಸಮರ್ಥವಾಗಿ ಎದುರಿಸಿ ಸಮರ್ಥ ಆಡಳಿತ ನಡೆಸುವ ಸವಾಲು ಬೃಹತ್ತಾಗಿದೆ.

ಎಟಿಎಂಗಳಲ್ಲಿ ಹಣದ ಕೊರತೆಯಿಂದ ಹಿಡಿದು ಆಮದುಗಳ ಮೇಲೆ ಅವಲಂಬಿತವಾಗಿರುವ 38 ಮಿಲಿಯನ್ ಜನರಿಗೆ ಆಹಾರ ಒದಗಿಸುವುದು, ನಾಗರಿಕ ಸರ್ಕಾರದ ವಿರೋಧ, ಸವಾಲುಗಳನ್ನು ಎದುರಿಸಿ ನಿಂತು ಆಡಳಿತ ನಡೆಸಬೇಕಾಗಿದೆ.

ಮಾನವೀಯ ಬಿಕ್ಕಟ್ಟು ನಮ್ಮ ಕಣ್ಣಮುಂದೆ ತೆರೆದಿಟ್ಟುಕೊಂಡಿದೆ ಎಂದು ಆಫ್ಘಾನಿಸ್ತಾನದಲ್ಲಿ ವಿಶ್ವ ಆಹಾರ ಕಾರ್ಯಕ್ರಮದ ಮುಖ್ಯಸ್ಥೆ ಮೇರಿ ಎಲ್ಲೆನ್ ಮೆಕ್‌ಗ್ರೋಟಿ ಹೇಳುತ್ತಿದ್ದು, ಇದು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಶವಾದ ನಂತರದ ಭೀಕರತೆಯನ್ನು ತೋರಿಸುತ್ತಿದೆ.

ಅಫ್ಘಾನಿಸ್ತಾನದ ಸ್ವಾತಂತ್ರ್ಯ ದಿನವನ್ನು ತಾಲಿಬಾನಿಯರು ಇಂದು ಘೋಷಿಸಿರುವುದು ಮಧ್ಯ ಏಷ್ಯಾದ ರಾಷ್ಟ್ರದಲ್ಲಿ ಬ್ರಿಟಿಷ್ ಆಡಳಿತವನ್ನು ಕೊನೆಗೊಳಿಸಿದ 1919 ರ ಒಪ್ಪಂದವನ್ನು ನೆನಪಿಸುತ್ತದೆ.

ಈ ಮಧ್ಯೆ, ಅಫ್ಘಾನಿಸ್ತಾನದ ಪಂಜ್‌ಶಿರ್ ಕಣಿವೆಗೆ ಪಲಾಯನ ಮಾಡುವ ವಿರೋಧ ಪಕ್ಷದ ನಾಯಕರು 2001 ರ ಆಕ್ರಮಣದ ಸಮಯದಲ್ಲಿ ಯುಎಸ್ ಜೊತೆ ಮೈತ್ರಿ ಮಾಡಿಕೊಂಡ ಉತ್ತರ ಒಕ್ಕೂಟದ ಬ್ಯಾನರ್ ಅಡಿಯಲ್ಲಿ ಸಶಸ್ತ್ರ ಪ್ರತಿರೋಧ ಆರಂಭಿಸುವ ಬಗ್ಗೆ ಮಾತನಾಡಿದ್ದಾರೆ.

ಪ್ರಜಾಪ್ರಭುತ್ವವನ್ನು ಅನುಸರಿಸಲು ಸಾಧ್ಯವಿಲ್ಲ, ಷರಿಯತ್ ಕಾನೂನು ಪ್ರಕಾರ ಸರ್ಕಾರ ನಡೆಸಲಾಗುವುದು ಎಂದು ತಾಲಿಬಾನ್ ಹೇಳುತ್ತಿದೆ. ಅದು ಬಿಟ್ಟರೆ ಸರ್ಕಾರ ಮುನ್ನಡೆಸಲು ತಕ್ಷಣದ ಯೋಜನೆಗಳು ತಾಲಿಬಾನೀಯರ ಮುಂದಿಲ್ಲ.

ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್‌ ಸ್ಥಾಪಿಸಿರುವುದಾಗಿ ತಾಲಿಬಾನ್ ಗುರುವಾರ ಘೋಷಿಸಿದೆ. ದೇಶದ ಸ್ವಾತಂತ್ರ್ಯದ 102 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಹೈದ್ ತನ್ನ ಟ್ವಿಟರ್ ಖಾತೆಯಲ್ಲಿ ಈ ಘೋಷಣೆಯನ್ನು ಮಾಡಿದ್ದಾರೆ.

" ಬ್ರಿಟಿಷ್ ಆಳ್ವಿಕೆಯಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿದ 102 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ (ಇಸ್ಲಾಮಿಕ್ ಎಮಿರೇಟ್ ಆಫ್ ಆಫ್ಘಾನಿಸ್ತಾನ್) ಘೋಷಣೆ " ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಮೂಲಭೂತವಾದಿ ಗುಂಪು ಹೊಸ ಸರ್ಕಾರದ ರಚನೆಯನ್ನು ಶೀಘ್ರದಲ್ಲೇ ಘೋಷಿಸುವುದಾಗಿ ಹೇಳಿದ್ದು, ಅದನ್ನು ಶರಿಯಾ ಕಾನೂನುಗಳ ಪ್ರಕಾರ ನಡೆಸಲಾಗುವುದು ಎಂದು ತಿಳಿಸಿದೆ.

English summary
At a time when the political situation in Afghanistan has taken a new turn after Taliban took over the reins of the South Asian country, the new rulers of Kabul have reportedly touched down the headquarters of the Afghanistan Cricket Board (ACB) in the nation's capital on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X