ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಲಿಬಾನ್ 'ಸಾಮಾನ್ಯ ನಾಗರಿಕರು', ಮಿಲಿಟರಿ ಪಡೆಗಳಲ್ಲ ಎಂದ ಪಾಕ್‌ ಪ್ರಧಾನಿ!

|
Google Oneindia Kannada News

ಇಸ್ಲಮಾಬಾದ್‌, ಜು.29: ''ತಾಲಿಬಾನ್ ಮಿಲಿಟರಿ ಸಂಘಟನೆಗಳಲ್ಲ ಆದರೆ ಸಾಮಾನ್ಯ ನಾಗರಿಕರು,'' ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. "ಗಡಿಯಲ್ಲಿ ಮೂರು ಮಿಲಿಯನ್ ಅಫ್ಘಾನ್‌ ನಿರಾಶ್ರಿತರು ಇರುವಾಗ ದೇಶವು ತಾಲಿಬಾನ್‌ರನ್ನು ಹೇಗೆ ಬೇಟೆಯಾಡಬೇಕು," ಎಂದು ಪ್ರಶ್ನಿಸಿದ್ದಾರೆ.

ಮಂಗಳವಾರ ರಾತ್ರಿ ಪ್ರಸಾರವಾದ ಪಿಬಿಎಸ್ ನ್ಯೂಸ್‌ ಅವರ್‌ಗೆ ನೀಡಿದ ಸಂದರ್ಶನದಲ್ಲಿ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌, ''ಪಾಕಿಸ್ತಾನವು ಮೂರು ಮಿಲಿಯನ್ ಅಫ್ಘಾನ್‌ ನಿರಾಶ್ರಿತರ ಆತಿಥ್ಯ ವಹಿಸಿದೆ, ಅದರಲ್ಲಿ ಹೆಚ್ಚಿನವರು ಪಶ್ತೂನ್‌ಗಳು, ತಾಲಿಬಾನ್ ಹೋರಾಟಗಾರರ ಅದೇ ಜನಾಂಗದವರು ಆಗಿದ್ದಾರೆ,'' ಎಂದು ಹೇಳಿದರು.

'ಮಹಿಳೆ ಯಾವುದೇ ಬಟ್ಟೆ ಧರಿಸಿದರೂ ಅತ್ಯಾಚಾರಕ್ಕೆ ಆರೋಪಿಯೇ ಹೊಣೆ': ಇಮ್ರಾನ್ ಯು ಟರ್ನ್'ಮಹಿಳೆ ಯಾವುದೇ ಬಟ್ಟೆ ಧರಿಸಿದರೂ ಅತ್ಯಾಚಾರಕ್ಕೆ ಆರೋಪಿಯೇ ಹೊಣೆ': ಇಮ್ರಾನ್ ಯು ಟರ್ನ್

"ಪ್ರಸ್ತುತ, 500,000 ಜನರ ಶಿಬಿರಗಳಿವೆ ಹಾಗೂ 100,000 ಜನರ ಶಿಬಿರಗಳಿವೆ. ತಾಲಿಬಾನ್ ಕೆಲವು ಮಿಲಿಟರಿ ಸಂಘಟನೆಗಳಲ್ಲ, ತಾಲಿಬಾನಿಗರು ಕೂಡಾ ಸಾಮಾನ್ಯ ನಾಗರಿಕರು. ಈ ಶಿಬಿರಗಳಲ್ಲಿ ಕೆಲವು ನಾಗರಿಕರು ಇದ್ದರೆ, ಪಾಕಿಸ್ತಾನ ಈ ಜನರನ್ನು ಹೇಗೆ ಬೇಟೆಯಾಡಬೇಕು? ನೀವು ಆ ಜನರನ್ನು ಆತಂಕವಾದಿಗಳು ಎಂದು ಹೇಗೆ ಕರೆಯಬಹುದು?," ಎಂದು ವಾದಿಸಿದರು.

Taliban Are Normal Civilians, Not Military Outfits: Pakistan PM Imran Khan

ಪಾಕಿಸ್ತಾನವು ತಾಲಿಬಾನಿಗೆ ಸುರಕ್ಷಿತೆ ನೀಡುತ್ತಿದೆ, ತಾಲಿಬಾನಿಗರು ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಧಾನಿ, "ಈ ಸುರಕ್ಷಿತ ತಾಣಗಳು ಎಲ್ಲಿವೆ? ಪಾಕಿಸ್ತಾನದಲ್ಲಿ ಮೂರು ದಶಲಕ್ಷ ನಿರಾಶ್ರಿತರು ಇದ್ದಾರೆ. ತಾಲಿಬಾನ್‌ನಂತೆಯೇ ಒಂದೇ ಜನಾಂಗದವರಾಗಿದ್ದಾರೆ," ಎಂದಿದ್ದಾರೆ.

ಅಫ್ಘಾನಿಸ್ತಾನ ಸರ್ಕಾರದ ವಿರುದ್ಧದ ಹೋರಾಟದಲ್ಲಿ ತಾಲಿಬಾನ್‌ಗಳಿಗೆ ಮಿಲಿಟರಿ, ಆರ್ಥಿಕವಾಗಿ ಮತ್ತು ಗುಪ್ತಚರ ಮಾಹಿತಿಯೊಂದಿಗೆ ಪಾಕಿಸ್ತಾನ ಸಹಾಯ ಮಾಡಿದೆ ಎಂದು ಬಹಳ ಹಿಂದಿನಿಂದಲೂ ಆರೋಪಿಸಲಾಗಿದೆ. ಆದರೆ ಇಮ್ರಾನ್ ಖಾನ್ ಈ ಆರೋಪಗಳನ್ನು "ಅತ್ಯಂತ ಅನ್ಯಾಯ" ಎಂದು ತಳ್ಳಿಹಾಕಿದರು.

ಗಡಿ ಸಮೀಪದ ಪ್ರದೇಶ ತಾಲಿಬಾನ್‌ ವಶಕ್ಕೆ ಪಡೆದ ಬಳಿಕ ಅಫ್ಘಾನ್‌ನ ಪ್ರಮುಖ ಗಡಿ ಮುಚ್ಚಿದ ಪಾಕ್‌ಗಡಿ ಸಮೀಪದ ಪ್ರದೇಶ ತಾಲಿಬಾನ್‌ ವಶಕ್ಕೆ ಪಡೆದ ಬಳಿಕ ಅಫ್ಘಾನ್‌ನ ಪ್ರಮುಖ ಗಡಿ ಮುಚ್ಚಿದ ಪಾಕ್‌

"ಅಫ್ಘಾನಿಸ್ತಾನದಲ್ಲಿ ಯುಎಸ್ ಯುದ್ಧದ ನಂತರ ಸಾವಿರಾರು ಪಾಕಿಸ್ತಾನಿಗಳು ತಮ್ಮ ಪ್ರಾಣವನ್ನು ಕಳೆದುಕೊಂಡರು. ಸೆಪ್ಟೆಂಬರ್ 11, 2001 ರಂದು ನ್ಯೂಯಾರ್ಕ್‌ನಲ್ಲಿ ಏನಾಯಿತು ಎಂಬುದಕ್ಕೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ," ಎಂದರು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಸಿದ್ಧಪಡಿಸಿದ ವರದಿಯ ಪ್ರಕಾರ, ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನದ (ಟಿಟಿಪಿ) ಸುಮಾರು 6,000 ಭಯೋತ್ಪಾದಕರು ಗಡಿಯ ಅಫ್ಘಾನ್ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಟಿಟಿಪಿ "ವಿಶಿಷ್ಟ ಪಾಕಿಸ್ತಾನ ವಿರೋಧಿ ಉದ್ದೇಶಗಳನ್ನು" ಹೊಂದಿದೆ. ಇದು ಅಫ್ಘಾನ್‌ ಪಡೆಗಳ ವಿರುದ್ಧವಿರುವ ಅಫ್ಘಾನಿಸ್ತಾನದೊಳಗಿನ ತಾಲಿಬಾನ್ ಭಯೋತ್ಪಾದಕರನ್ನು ಸಹ ಬೆಂಬಲಿಸುತ್ತದೆ ಎಂದು ಯುಎನ್ ವಿಶ್ಲೇಷಣಾತ್ಮಕ ಬೆಂಬಲ ಮತ್ತು ನಿರ್ಬಂಧಗಳ ಮಾನಿಟರಿಂಗ್ ತಂಡದ ವರದಿ ತಿಳಿಸಿದೆ.

ಟಿಟಿಪಿ "ವಿಶಿಷ್ಟ ಪಾಕಿಸ್ತಾನ ವಿರೋಧಿ ಉದ್ದೇಶಗಳನ್ನು ಹೊಂದಿದೆ ಆದರೆ ಅಫ್ಘಾನ್‌ ಸರ್ಕಾರಿ ಪಡೆಗಳ ವಿರುದ್ಧ ಅಫ್ಘಾನಿಸ್ತಾನದೊಳಗೆ ಮಿಲಿಟರಿ ರೀತಿಯಲ್ಲಿ ಅಫ್ಘಾನ್‌ ತಾಲಿಬಾನ್ ಅನ್ನು ಬೆಂಬಲಿಸುತ್ತದೆ," ಎಂದು ಯುಎನ್ ಮಾನಿಟರ್ಸ್ ಗಮನಿಸಿದೆ.

(ಒನ್‌ಇಂಡಿಯಾ ಸುದ್ದಿ)

English summary
The Taliban are not some military outfits but normal civilians, said Pakistan Prime Minister Imran Khan in an interview with PBS NewsHour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X