ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನ ಸರ್ಕಾರ ರಚನೆ ಮತ್ತಷ್ಟು ವಿಳಂಬ, ಕಾರಣವೇನು?

|
Google Oneindia Kannada News

ಕಾಬೂಲ್, ಸೆಪ್ಟೆಂಬರ್ 04: ಅಫ್ಘಾನಿಸ್ತಾನ ಸರ್ಕಾರ ರಚನೆ ಮತ್ತಷ್ಟು ವಿಳಂಬವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ತಾಲಿಬಾನಿಗಳ ಮಧ್ಯೆಯೇ ಭಿನ್ನಮತ ಇರುವುದೇ ಸರ್ಕಾರ ವಿಳಂಬಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಆಗಸ್ಟ್ 15ರಂದು ಕಾಬೂಲ್‌ನ್ನು ವಶಪಡಿಸಿಕೊಂಡ ನಂತರ ತಾಲಿಬಾನಿಗಳು ಹೊಸ ಸರ್ಕಾರ ರಚನೆ ಘೋಷಣೆಯನ್ನು ಎರಡನೇ ಬಾರಿಗೆ ಮುಂದೂಡಿದ್ದಾರೆ.

ಕಾಬೂಲ್ ನಗರಕ್ಕೆ ಕಾಲಿಟ್ಟ ಪಾಕ್ ಗುಪ್ತಚರ ಇಲಾಖೆ ಮುಖ್ಯಸ್ಥ ಕಾಬೂಲ್ ನಗರಕ್ಕೆ ಕಾಲಿಟ್ಟ ಪಾಕ್ ಗುಪ್ತಚರ ಇಲಾಖೆ ಮುಖ್ಯಸ್ಥ

ತಾಲಿಬಾನ್ ಉಗ್ರರು ಇಂದು ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ರಚನೆಯನ್ನು ಘೋಷಿಸುವ ನಿರೀಕ್ಷೆ ಇತ್ತು. ಸಂಘಟನೆಯ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರಾದರ್ ಸರ್ಕಾರದ ನೇತೃತ್ವ ವಹಿಸುವ ಸಾಧ್ಯತೆ ಇತ್ತು.

Taliban Again Postpone Afghan Govt Formation Announcement

ಕಾಬೂಲ್‌ನಲ್ಲಿ ವಿಶಾಲ ಚಿಂತನೆ ಹಾಗೂ ವಿಶ್ವಕ್ಕೆ ಸ್ವೀಕಾರಾರ್ಹವಾಗುವಂತಹ ಸರ್ಕಾರ ರಚನೆಯ ಕಸರತ್ತು ನಡೆಯುತ್ತಿರುವುದರಿಂದ ಸರ್ಕಾರ ರಚನೆ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ತಾಲಿಬಾನ್ ಸಮಿತಿಯ ಸದಸ್ಯ ಖಲೀಲ್ ಹಕ್ಕಾನಿ ತಿಳಿಸಿದ್ದಾರೆ.

ಅಫ್ಘಾನಿಸ್ತಾನದ ಇಸ್ಲಾಮಿಸ್ಟ್​ ಗ್ರೂಪ್​ ನೀಡಿರುವ ಮಾಹಿತಿ ಪ್ರಕಾರ, ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಹೊಸ ಸರ್ಕಾರದ ನಾಯಕನಾಗಲಿದ್ದಾರೆ.

ತಾಲಿಬಾನ್ ರಾಜಕೀಯ ಕಚೇರಿಯ ನೇತೃತ್ವ ವಹಿಸಿಕೊಳ್ಳಲಿರುವ ಮುಲ್ಲಾ ಬರಾದಾರ್ ನೇತೃತ್ವದಲ್ಲಿ ಇರಾನ್ ಮಾದರಿಯ ಸರ್ಕಾರ ರಚನೆಯಾಗಲಿದೆ. ಉಳಿದಂತೆ ತಾಲಿಬಾನ್ ಸಂಸ್ಥಾಪಕ ಮುಲ್ಲಾ ಓಮರ್ ಅವರ ಮಗ ಮುಲ್ಲಾ ಮೊಹಮ್ಮದ್ ಯಾಕೂಬ್, ಶೇರ್ ಅಮೊಹಮ್ಮದ್ ಅಬ್ಬಾಸ್ ಸ್ಟಾನೆಕ್​ಜೈ ಅಫ್ಘಾನಿಸ್ತಾನದ ನೂತನ ಸರ್ಕಾರದ ಪ್ರಮುಖ ಹುದ್ದೆಗಳನ್ನು ಅಲಂಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಫ್ಘಾನಿಸ್ತಾನದ ಮಾಜಿ ಪ್ರಧಾನಿ ಮತ್ತು ಜಮಿಯತ್ ಇ ಇಸ್ಲಾಮಿ ಅಫ್ಘಾನಿಸ್ತಾನದ ಮುಖ್ಯಸ್ಥ ಮತ್ತು ಗುಲ್ಬುದ್ದೀನ್ ಹೆಕ್ಮತ್ಯಾರ್ ಮತ್ತು ಅಫ್ಘಾನ್ ಮಾಜಿ ಅಧ್ಯಕ್ಷ ಅಶ್ರಫ್ ಘನಿಯ ಸಹೋದರ ಸಹ ತಾಲಿಬಾನ್‌ಗೆ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ. ತಾಲಿಬಾನ್ ಸರ್ಕಾರದಲ್ಲಿ ಅವರಿಗೆ ಪ್ರಾತಿನಿದ್ಯ ಸಿಗಲಿದೆ ಎಂದು ಅವರು ಹೇಳಿದ್ದಾರೆ.

ತಾಲಿಬಾನಿಗಳು ತಮ್ಮದೇ ಆದ ಸರ್ಕಾರವನ್ನು ರಚಿಸಬಹುದು, ಆದರೆ, ನಾವು ಸಮಾಜದ ಎಲ್ಲ ಜನರು , ಗುಂಪುಗಳು ಮತ್ತು ವಿಭಾಗದ ಪ್ರಾತಿನಿಧ್ಯವನ್ನು ಹೊಂದಿರುವ ಆಡಳಿತವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದರು. ತಾಲಿಬಾನ್ ಅನ್ನು ಅದರ ವಿಧಾನದಲ್ಲೇ ಜಗತ್ತು ಸ್ವೀಕರಿಸುವುದಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.

ಅಫ್ಘಾನಿಸ್ತಾನ ತಾಲಿಬಾನ್ ವಶವಾದ ನಂತರ ಪಾಕಿಸ್ತಾನದ ಪ್ರಭಾವಿ ಗುಪ್ತಚರ ವಿಭಾಗದ ಮುಖ್ಯಸ್ಥ ಕಾಬೂಲ್ ಗೆ ಭೇಟಿ ನೀಡಿದ್ದಾರೆ. ಪಾಕಿಸ್ತಾನದ ಇಬ್ಬರು ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಜನರಲ್ ಫೈಜ್ ಹಮೀದ್ ಶನಿವಾರದ ಭೇಟಿಯಲ್ಲಿ ತಾಲಿಬಾನ್ ಗೆ ಹೇಳಿದ್ದೇನು? ಎಂಬ ಬಗ್ಗೆ ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಈ ಮೂಲಕ ತಾಲೀಬಾನ್ ಮೆಲೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಪ್ರಭಾವ ಬೀರುತ್ತಿದೆ ಎಂಬುದಂತೂ ಸ್ಪಷ್ಟವಾಗಿದೆ.

ತಾಲಿಬಾನ್ ನಾಯಕತ್ವ ಪಾಕಿಸ್ತಾನದಲ್ಲಿ ತನ್ನ ಪ್ರಧಾನ ಕೇಂದ್ರವನ್ನು ಹೊಂದಿದ್ದು ಪಾಕ್ ನ ಇಂಟರ್ ಸರ್ವಿಸಸ್ ಇಂಟಲಿಜೆನ್ಸ್ ಏಜೆನ್ಸಿಯೊಂದಿಗೆ ನೇರ ಸಂಪರ್ಕದಲ್ಲಿದೆ. ಪಾಕಿಸ್ತಾನ ತಾಲಿಬಾನ್‌ಗೆ ಸೇನಾ ಬೆಂಬಲ ನೀಡುತ್ತಿದೆ ಎಂಬುದನ್ನು ನಿರಂತರವಾಗಿ ಅಲ್ಲಗಳೆಯುತ್ತಿದೆ.

English summary
The Taliban have postponed the formation of a new government in Afghanistan for next week, their spokesman Zabiullah Mujahid said on Saturday, as the insurgent group struggles to give shape to a broad-based and inclusive administration acceptable to the international community.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X