ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ವಿರುದ್ಧ ತೈವಾನ್ ಅಸ್ತ್ರ ಪ್ರಯೋಗಿಸಿದ ಅಮೆರಿಕ..!

|
Google Oneindia Kannada News

ಚೀನಾ ಬುಡಕ್ಕೆ ಬಿಸಿನೀರು ಕಾಯಿಸಲು ಅಮೆರಿಕ ತೈವಾನ್ ಎಂಬ ಅಸ್ತ್ರವನ್ನು ಸರಿಯಾಗಿಯೇ ಬಳಸಿಕೊಳ್ಳುತ್ತಿದೆ. ಕ್ಷಣಮಾತ್ರದಲ್ಲಿ ಶತ್ರುಪಡೆಯ ಹುಟ್ಟಡಗಿಸಬಲ್ಲ 'ಎಫ್‌-16' ಯುದ್ಧ ವಿಮಾನಗಳ ಖರೀದಿಗೆ ತೈವಾನ್‌ ಅಮೆರಿಕದ ಜೊತೆ ಅಧಿಕೃತ ಒಪ್ಪಂದ ಮಾಡಿಕೊಂಡಿದೆ.

ಇದು ಅಮೆರಿಕ ಎಂದರೆ ಮೊದಲೇ ಕೊತ ಕೊತ ಕುದಿಯುತ್ತಿದ್ದ ಚೀನಾಗೆ ಇನ್ನಷ್ಟು ಉರಿ ತಂದಿದೆ. ಅಲ್ಲದೆ ಅಮೆರಿಕ ಹಾಗೂ ಚೀನಾ ನಡುವಿನ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳಲು ಎಫ್‌-16 ಖರೀದಿ ಒಪ್ಪಂದ ವೇದಿಕೆ ಕಲ್ಪಿಸಿದೆ. ಅಮೆರಿಕ ಮೂಲದ ಲಾಕ್‌ಹೀಡ್‌ ಕಂಪೆನಿ ಎಫ್‌-16 ಯುದ್ಧ ವಿಮಾನಗಳನ್ನು ತಯಾರಿಸುತ್ತಿದ್ದು, ತೈವಾನ್‌ಗೆ 2026ರ ಅಂತ್ಯದ ವೇಳೆಗೆ ಸುಮಾರು 96 ಯುದ್ಧ ವಿಮಾನಗಳನ್ನು ಪೂರೈಸುವುದಾಗಿ ತಿಳಿಸಿದೆ.

ಚೀನಾಗೆ ಬೆನ್ನಿಗೆ ಗುನ್ನಾ ಇಡಲು ಹೊರಟ ಅಮೆರಿಕ..!ಚೀನಾಗೆ ಬೆನ್ನಿಗೆ ಗುನ್ನಾ ಇಡಲು ಹೊರಟ ಅಮೆರಿಕ..!

ಅಷ್ಟಕ್ಕೂ 1992ರಲ್ಲೇ ಎಫ್‌ ಸರಣಿಯ ಯುದ್ಧ ವಿಮಾನ ಖರೀದಿಗಾಗಿ ಅಮೆರಿಕ ಹಾಗೂ ತೈವಾನ್‌ ಮಧ್ಯೆ ಒಪ್ಪಂದವಾಗಿತ್ತು. ಆದರೆ ಅದು ಈಗ ಸಾಕಾರಗೊಳ್ಳುತ್ತಿರುವುದು ಸಾಮ್ರಾಜ್ಯಶಾಹಿ ಚೀನಾಗೆ ತಳಮಳ ತಂದಿದೆ. ಈಗಾಗಲೇ ತೈವಾನ್‌ಗೆ ಯುದ್ಧ ವಿಮಾನ ಮತ್ತು ಶಸ್ತ್ರಾಸ್ತ್ರ ಪೂರೈಸುವುದನ್ನು ನಿಲ್ಲಿಸುವಂತೆ ಚೀನಾ ದೊಡ್ಡಣ್ಣನಿಗೆ ತಾಕೀತು ಮಾಡಿತ್ತು. ಇಲ್ಲವಾದಲ್ಲಿ ಅಮೆರಿಕ ಇದರ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ಕೂಡ ನೀಡಿತ್ತು. ಆದರೆ ಡ್ರ್ಯಾಗನ್‌ನ ಗೊಡ್ಡು ಬೆದರಿಕೆಗೆ ಹೆದರದ ವಿಶ್ವದ ದೊಡ್ಡಣ್ಣ ಮಹತ್ವದ ಹೆಜ್ಜೆ ಇಟ್ಟಿದೆ. ತೈವಾನ್ ಜೊತೆ ಶಕ್ತಿಶಾಲಿ 'ಎಫ್‌-16' ಯುದ್ಧ ವಿಮಾನಗಳ ಖರೀದಿ ಒಪ್ಪಂದಕ್ಕೆ ಅಂತಿಮ ಮುದ್ರೆ ಒತ್ತಿದೆ.

ತೈವಾನ್‌ಗೆ ಬೇಷರತ್ ಬೆಂಬಲ..!

ತೈವಾನ್‌ಗೆ ಬೇಷರತ್ ಬೆಂಬಲ..!

ಚೀನಾಗೆ ಹೊಟ್ಟೆ ಉರಿ ತರಿಸಲು ಅಮೆರಿಕ ಎಂತಹದ್ದೇ ಕಾರ್ಯಕ್ಕೂ ಸಿದ್ಧವಾಗಿಬಿಡುತ್ತದೆ. ಅದರಲ್ಲೂ ಚೀನಾದ ನೆರೆ ರಾಷ್ಟ್ರಗಳು ಡ್ರ್ಯಾಗನ್ ವಿರುದ್ಧ ಬುಸುಗುಡುತ್ತಿದ್ದರೆ ಅಲ್ಲಿ ಮೊದಲು ಹಾಜರಾಗುವುದೇ ಅಮೆರಿಕ. ಹೀಗೆ ದಶಕಗಳಿಂದಲೂ ಅಮೆರಿಕ ತೈವಾನ್‌ಗೆ ಬೆಂಬಲ ನೀಡುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಅಮೆರಿಕದ ಸಂಸತ್ತಿನಲ್ಲಿ ತೈವಾನ್‌ಗೆ ಯುದ್ಧ ವಿಮಾನ ಮಾರಾಟ ಮಾಡುವ ಬಗ್ಗೆ ಅನೌಪಚಾರಿಕ ಒಪ್ಪಿಗೆ ಪಡೆಯಲಾಗಿತ್ತು. ಅಮೆರಿಕದ ಸಂಸತ್ತು ಗ್ರೀನ್ ಸಿಗ್ನಲ್ ನೀಡಿದ ಕಾರಣ ಲಾಕ್‌ಹೀಡ್‌ ಕಂಪೆನಿ ತೈವಾನ್‌ಗೆ ‘ಎಫ್‌-16' ಯುದ್ಧವಿಮಾನ ಪೂರೈಸಲು ಮುಂದಾಗಿದೆ.

ಮಿಲಿಟರಿ ಪಂಚ್ ಕೊಟ್ಟಿತ್ತು ತೈವಾನ್..!

ಮಿಲಿಟರಿ ಪಂಚ್ ಕೊಟ್ಟಿತ್ತು ತೈವಾನ್..!

ಇದು ಕೆಲ ವಾರಗಳ ಹಿಂದಿನ ಘಟನೆ. ಚೀನಾ ಪದೇ ಪದೆ ತೈವಾನ್ ವಿಚಾರ ಕೆದಕುವಾಗಲೇ, ತೈವಾನ್ ಮಿಲಿಟರಿ ದಿಟ್ಟತನ ಪ್ರದರ್ಶಿಸಿತ್ತು. ಚೀನಾ ಕಡೆಗೆ ಮುಖ ಮಾಡಿರುವ ತೈಚುಂಗ್‌ನ ದ್ವೀಪವೊಂದರ ಕಡಲ ತೀರದ ಬಳಿ ತೈವಾನ್‌ ಸೇನೆ ಸಮರಾಭ್ಯಾಸ ನಡೆಸಿತ್ತು. ಸಮರಾಭ್ಯಾಸದ ವೇಳೆ ತೈವಾನ್‌‌ನ ಯುದ್ಧ ವಿಮಾನಗಳು, ಹೆಲಿಕಾಪ್ಟರ್ಸ್ ಸಮುದ್ರಕ್ಕೆ ಕ್ಷಿಪಣಿ ಹಾಗೂ ಬಾಂಬ್‌ಗಳನ್ನು ಉಡಾಯಿಸುವ ಮೂಲಕ ಚೀನಾಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದವು. ಇದು ತೈವಾನ್ ಸೇನೆಯ ಶಕ್ತಿಪ್ರದರ್ಶನಕ್ಕೆ ವೇದಿಕೆಯಾಗಿತ್ತು. ಸಮರಾಭ್ಯಾಸದ ಬಗ್ಗೆ ಹೇಳಿಕೆ ನೀಡಿದ್ದ ತೈವಾನ್‌ ಅಧ್ಯಕ್ಷ ತ್ಸೈ ಇಂಗ್-ವೆನ್, ನಾವು ನಮ್ಮ ದೇಶವನ್ನು ರಕ್ಷಿಸುವಲ್ಲಿ ಸಮರ್ಥರಾಗಿದ್ದೇವೆ ಎಂದಿದ್ದರು. ಚೀನಾ ನಮ್ಮನ್ನು ಏನೂ ಮಾಡೋಕೆ ಆಗಲ್ಲ ಅಂತಾ ಪರೋಕ್ಷವಾಗಿ ಸಂದೇಶ ಕೊಟ್ಟಿದ್ದರು. ಈಗ ‘ಎಫ್‌-16' ಶಾಕ್ ಕೊಟ್ಟು ಚೀನಾ ನಾಯಕರನ್ನ ಬೆಚ್ಚಿಬೀಳುವಂತೆ ಮಾಡಿದೆ ಪುಟ್ಟ ದ್ವೀಪ ತೈವಾನ್.

ಚೀನಾ, ತೈವಾನ್ ಮಧ್ಯೆ ನಿರಂತರ ಘರ್ಷಣೆ

ಚೀನಾ, ತೈವಾನ್ ಮಧ್ಯೆ ನಿರಂತರ ಘರ್ಷಣೆ

ಆರಂಭದಲ್ಲಿ ತೈವಾನ್ ಡಚ್ಚರ ವಸಾಹತಾಗಿತ್ತು. ನಂತರ ಜಪಾನ್ ಆಡಳಿತ ಮಾಡಿತ್ತು. 2ನೇ ಮಹಾಯುದ್ಧದ ಬಳಿಕ ಚೀನಾದ ರಾಷ್ಟ್ರೀಯವಾದಿ ಪಕ್ಷದ ಚಿಯಾಂಗ್ ಕೈ-ಶೇಕ್ ಅಧ್ಯಕ್ಷರಾದರು. 1949ರಲ್ಲಿ ಅಂತರ್ಯುದ್ಧ ನಡೆದಾಗ ಮಾವೋ ನೇತೃತ್ವದ ಕಮ್ಯುನಿಸ್ಟ್ ಸೇನೆ, ಚಿಯಾಂಗ್ ಪಡೆಯನ್ನು ಹೊರದಬ್ಬಿತು. ಬೆಂಬಲಿಗರೊಂದಿಗೆ ಚಿಯಾಂಗ್ ಬಂದು ಸೇರಿದ್ದು ಇದೇ ತೈವಾನ್ ಅನ್ನ. ಮಾವೋ ವಶದಲ್ಲಿದ್ದ ಚೀನಾದ ಮುಖ್ಯ ಭೂಭಾಗ ಕಮ್ಯೂನಿಸ್ಟರಿಗೆ ನೆಲೆ ಕೊಟ್ಟಿದ್ದರೆ, ತೈವಾನ್ ‘ರಿಪಬ್ಲಿಕ್ ಆಫ್ ಚೀನಾ' ಆಗಿ ಉಳಿಯಿತು. ನಂತರ ಚೀನಾ ಹಾಗೂ ತೈವಾನ್ ಮಧ್ಯೆ ನಿರಂತರ ಘರ್ಷಣೆಗಳು ನಡೆದಿದ್ದವು.

ಕಮ್ಯುನಿಸ್ಟರ ಪಕ್ಕದಲ್ಲೇ ಪ್ರಜಾಪ್ರಭುತ್ವ..!

ಕಮ್ಯುನಿಸ್ಟರ ಪಕ್ಕದಲ್ಲೇ ಪ್ರಜಾಪ್ರಭುತ್ವ..!

ತೈವಾನ್ ಚೀನಾದಷ್ಟು ದೊಡ್ಡ ದೇಶವಲ್ಲ. ಕೇವಲ 160 ಕಿ.ಮೀ. ಭೂಪ್ರದೇಶ ಹೊಂದಿರುವ ತೈವಾನ್'ನ ಗಂಡೆದೆ ಮೆಚ್ಚಲೇಬೇಕು. ತನ್ನದೇ ಸರ್ಕಾರ ಹೊಂದಿರುವ ತೈವಾನ್'ನಲ್ಲಿ 2.40 ಕೋಟಿ ಜನ ವಾಸಿಸುತ್ತಿದ್ದಾರೆ. ಆದರೆ ಇಲ್ಲಿ ಕೆಲ ದಶಕಗಳ ಹಿಂದೆ ರಾಜಕೀಯ ಸ್ಥಿರತೆ ಇರಲಿಲ್ಲ. ಕೇವಲ 2 ದಶಕಗಳಿಂದ ಈಚೆಗೆ ಅಂದರೆ 1996ರ ನಂತರ ಪ್ರಜಾಪ್ರಭುತ್ವ ವ್ಯವಸ್ಥೆ ಅಲ್ಲಿ ಜಾರಿಗೆ ಬಂದಿದೆ. ಅದಕ್ಕೂ ಮೊದಲು ಹಲವು ದೇಶಗಳು, ಇದೇ ತೈವಾನ್‌ನ ಹರಿದು-ಹಂಚಿ ಆಳ್ವಿಕೆ ನಡೆಸಿದ್ದವು.

English summary
The Cold War Between China And Taiwan Is Erupted Again. Now Taiwan Made A Deal To Buy F-16 Fighter Jets From US Based Lockheed Company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X