ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೊಂದು ವಿಮಾನ ದುರಂತ : 50ಕ್ಕೂ ಹೆಚ್ಚು ಸಾವು

By Prasad
|
Google Oneindia Kannada News

ತೈಪೆ, ಜು. 23 : ಮಲೇಷಿಯಾ ವಿಮಾನ ದುರಂತ ಸಂಭವಿಸಿದ ಕೆಲವೇ ದಿನಗಳ ಅಂತರದಲ್ಲಿ ಮತ್ತೊಂದು ವಿಮಾನ ದುರಂತ ಸಂಭವಿಸಿದೆ. 58 ಪ್ರಯಾಣಿಕರಿದ್ದ ತೈವಾನ್ ವಿಮಾನ ಬುಧವಾರ ಸಂಜೆ ಅಪಘಾತಕ್ಕೀಡಾಗಿದ್ದು, 50ಕ್ಕೂ ಹೆಚ್ಚು ಪ್ರಯಾಣಿಕರು ಸಾವಿಗೀಡಾಗಿದ್ದಾರೆ.

ತೈವಾನ್‌ನ ಮಗಾಂಗ್ ಏರ್ಪೋರ್ಟ್ ನಲ್ಲಿ ಎರಡನೇ ಬಾರಿ ತುರ್ತಾಗಿ ಇಳಿಯುವಾಗ ಟ್ರಾನ್ಸ್‌ಏಷ್ಯಾ ಏರ್‌ಲೈನ್ಸ್‌ಗೆ ಸೇರಿದ ವಿಮಾನ ಅಪಘಾತಕ್ಕೀಡಾಗಿದೆ. ತೈವಾನ್ ರಾಜಧಾನಿ ತೈಪೆಯಿಂದ ಸಣ್ಣ ದ್ವೀಪವಾದ ಪೆಂಘುಗೆ ಹೊರಟಿತ್ತು. ನಡುಮಧ್ಯದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡುವಾಗ ದುರಂತಕ್ಕೀಡಾಗಿದೆ.

Taiwan: TransAsia Airways plane crashes; 51 killed

ಮಂಗಳವಾರದಿಂದ ತೈವಾನ್ ಮಾಟ್ಮೋ ಬಿರುಗಾಳಿಯ ಹೊಡೆತಕ್ಕೆ ಸಿಲುಕಿದೆ. ಭಾರೀ ಮಳೆ ಸುರಿಯಬಹುದೆಂದು ಹವಾಮಾನ ಇಲಾಖೆ ಎಚ್ಚರಿತ್ತು. ಇಂಥ ವಿಷಮ ಪರಿಸ್ಥಿತಿಯಲ್ಲಿ ತುರ್ತಾಗಿ ಇಳಿಯುವ ಸಂದರ್ಭದಲ್ಲಿ ವಿಮಾನ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿ 4 ಜನ ವಿಮಾನ ಸಿಬ್ಬಂದಿಗಳು ಸೇರೆ 58 ಜನರಿದ್ದರು. ಅವರಲ್ಲಿ ಏಳು ಜನರು ಪಾರಾಗಿದ್ದು, ಉಳಿದವರು ಸಾವಿಗೀಡಾಗಿದ್ದಾರೆ.

ಕೇವಲ ಒಂದು ವಾರದ ಹಿಂದೆ ಜು.16ರಂದು 298 ಪ್ರಯಾಣಿಕರಿದ್ದ ಮಲೇಷಿಯಾ ವಿಮಾನ ಎಂಎಚ್17 ಅನ್ನು ಬಂಡುಕೋರರು ಉಕ್ರೇನ್ ನಲ್ಲಿ ಹೊಡೆದು ಉರುಳಿಸಿದ್ದರು. ಅದರ ನೆನಪು ಮಾಸುವ ಮುನ್ನವೇ ಮತ್ತೊಂದು ವಿಮಾನ ಅಪಘಾತ ಸಂಭವಿಸಿದೆ. [ಅಮ್ಮಾ ನಿನ್ನನ್ನು ಒಂದೇ ಸಾರಿ ತಬ್ಬಿಕೊಳ್ಳಲಾ?]

English summary
In yet another aviation disaster, a Taiwan plane has crashed killing 51 people on Wednesday evening. According to the initial reports, the tragedy happened when the TransAsia Airways plane was making an emergency landing in the city of Magong airport in Taiwan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X