ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಡೀ ಜಗತ್ತೇ ತಿರುಗಿ ನೋಡುವಂತೆ ಡೆಡ್ಲಿ ಕೊರೊನಾಗೆ ಸೆಡ್ಡು ಹೊಡೆದು ನಿಂತ ಪುಟ್ಟ ದ್ವೀಪ ರಾಷ್ಟ್ರ!

|
Google Oneindia Kannada News

ಮಾರಣಾಂತಿಕ ಕೊರೊನಾ ವೈರಸ್ ನಿಂದಾಗಿ ಇಡೀ ವಿಶ್ವದಲ್ಲಿ ಚಿಂತಾಜನಕ ಸ್ಥಿತಿ ನಿರ್ಮಾಣವಾಗಿದೆ. ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗಿ, ಎಲ್ಲೆಡೆ ಹಬ್ಬುತ್ತಿರುವುದರಿಂದ ವಿಶ್ವ ಆರೋಗ್ಯ ಸಂಸ್ಥೆ ಇದೊಂದು ಸಾಂಕ್ರಾಮಿಕ ಪಿಡುಗು ಎಂದು ಘೋಷಿಸಿದೆ.

ಡೆಡ್ಲಿ ಕೊರೊನಾ ವೈರಸ್ ವಿರುದ್ಧ ವಿಶ್ವದ ಹಲವು ರಾಷ್ಟ್ರಗಳು ಹೋರಾಡುತ್ತಿವೆ. ಹೀಗಿರುವಾಗಲೇ, ಕೊರೊನಾ ವೈರಸ್ ಸೋಂಕನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ತೈವಾನ್ ಎಂಬ ಪುಟ್ಟ ರಾಷ್ಟ್ರ ಇಡೀ ವಿಶ್ವಕ್ಕೆ ಮಾದರಿಯಾಗಿದೆ.

ಪ್ರಯೋಗ ಫಲಪ್ರದ: ಕೊರೊನಾ ವೈರಸ್ ವಿರುದ್ಧ ಸೆಣಸಾಡಿ ಗೆದ್ದ Anti-HIV ಡ್ರಗ್ಸ್!ಪ್ರಯೋಗ ಫಲಪ್ರದ: ಕೊರೊನಾ ವೈರಸ್ ವಿರುದ್ಧ ಸೆಣಸಾಡಿ ಗೆದ್ದ Anti-HIV ಡ್ರಗ್ಸ್!

ಕೊರೊನಾ ವೈರಸ್ ನಿಂದ ಜರ್ಜರಿತವಾಗಿರುವ ಚೀನಾ ದೇಶದ ಪಕ್ಕದಲ್ಲೇ ಇರುವ ಪುಟ್ಟ ದ್ವೀಪ ರಾಷ್ಟ್ರ ತೈವಾನ್. 23 ಮಿಲಿಯನ್ ಜನಸಂಖ್ಯೆ ಹೊಂದಿರುವ ತೈವಾನ್ ನಲ್ಲಿ ಕೊರೊನಾ ದೊಡ್ಡ ಗಂಡಾಂತರ ಸೃಷ್ಟಿಸಲಿದೆ ಎಂದು ಅಂದಾಜಿಸಲಾಗಿತ್ತು.

ತೈವಾನ್ ನ 850,000 ಕ್ಕೂ ಹೆಚ್ಚು ನಾಗರೀಕರು ಕೆಲಸಕ್ಕೆಂದು ಚೀನಾಕ್ಕೆ ಹೋಗಿ ಬರುತ್ತಿರುತ್ತಾರೆ. ಹೀಗಾಗಿ, ಕೋವಿಡ್-19 ಚೀನಾದಂತೆ ತೈವಾನ್ ಗೂ ಆಪತ್ತು ತಂದೊಡ್ಡಬಹುದು ಎಂದು ಊಹಿಸಲಾಗಿತ್ತು. ಆದ್ರೆ, ಎಲ್ಲರ ಊಹೆಯನ್ನು ತೈವಾನ್ ತಲೆಕೆಳಗು ಮಾಡಿರುವುದೇ ಇಂಟ್ರೆಸ್ಟಿಂಗ್ ವಿಚಾರ.!

ತೈವಾನ್ ನಲ್ಲಿ ಕೊರೊನಾ ಪ್ರಕರಣಗಳೆಷ್ಟು?

ತೈವಾನ್ ನಲ್ಲಿ ಕೊರೊನಾ ಪ್ರಕರಣಗಳೆಷ್ಟು?

ತೈವಾನ್ ನಲ್ಲಿ ಇಲ್ಲಿಯವರೆಗೂ 100 ಕೊರೊನಾ ಸೋಂಕಿತ ಪ್ರಕರಣಗಳು ಮಾತ್ರ ದಾಖಲಾಗಿವೆ. (ಭಾರತಕ್ಕಿಂತಲೂ ಕಡಿಮೆ) ಕೊರೊನಾ ವೈರಸ್ ನಿಂದಾಗಿ ತೈವಾನ್ ನಲ್ಲಿ ಈವರೆಗೆ ಒಬ್ಬ ವ್ಯಕ್ತಿ ಮಾತ್ರ ಮೃತಪಟ್ಟಿದ್ದಾನೆ. ಆಗಲೇ 20 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

ಕೊರೊನಾ ಕಾರ್ಮೋಡ ಇಲ್ಲ

ಕೊರೊನಾ ಕಾರ್ಮೋಡ ಇಲ್ಲ

ಚೀನಾಗೆ ತೀರಾ ಹತ್ತಿರದಲ್ಲೇ ಇದ್ದರೂ, ತೈವಾನ್ ನಲ್ಲಿ ಕೊರೊನಾ ವೈರಸ್ ತಾಂಡವವಾಡಿಲ್ಲ. ಚೀನಾದಲ್ಲಿ 80,894 ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿದ್ದು, 3237 ಮಂದಿ ಸಾವನ್ನಪ್ಪಿದ್ದಾರೆ. ಚೀನಾದ ಅಂಕಿ-ಅಂಶಕ್ಕೆ ಹೋಲಿಸಿದರೆ, ತೈವಾನ್ ನಲ್ಲಿ ಕೊರೊನಾ ಏನೇನೂ ಅಲ್ಲ. ಚೀನಾ ಮತ್ತು ತೈವಾನ್ ನಡುವೆ ಅತಿ ಹೆಚ್ಚು ವಿಮಾನ ಹಾರಾಟ ಇದ್ದರೂ, ತೈವಾನ್ ನಲ್ಲಿ ಕೊರೊನಾ ಕಾರ್ಮೋಡ ಕವಿಯಲಿಲ್ಲ.

ಗುಡ್ ನ್ಯೂಸ್: ಕೊರೊನಾ ವೈರಸ್ ಗೆ ಲಸಿಕೆ, ಮನುಷ್ಯರ ಮೇಲೆ ಪ್ರಯೋಗ ಆರಂಭ!ಗುಡ್ ನ್ಯೂಸ್: ಕೊರೊನಾ ವೈರಸ್ ಗೆ ಲಸಿಕೆ, ಮನುಷ್ಯರ ಮೇಲೆ ಪ್ರಯೋಗ ಆರಂಭ!

ತೈವಾನ್ ಸರ್ಕಾರದ ಸಮಯಪ್ರಜ್ಞೆ

ತೈವಾನ್ ಸರ್ಕಾರದ ಸಮಯಪ್ರಜ್ಞೆ

ಚೀನಾದ ಇತರೆ ನೆರೆ ರಾಷ್ಟ್ರಗಳಲ್ಲಿ ಹೋಲಿಸಿದರೆ, ತೈವಾನ್ ನಲ್ಲಿ ಕೊರೊನಾ ಪ್ರಕರಣಗಳು ಕಡಿಮೆ. ಇದು ಸಾಧ್ಯವಾಗಿದ್ದು ತೈವಾನ್ ಸರ್ಕಾರದ ಸಮಯಪ್ರಜ್ಞೆಯಿಂದ.! ಸರಿಯಾದ ಸಮಯಕ್ಕೆ ಅವಶ್ಯ ಕ್ರಮಗಳನ್ನು ತೈವಾನ್ ಸರ್ಕಾರ ತೆಗೆದುಕೊಂಡಿದ್ದರಿಂದ, ಕೊರೊನಾ ಪುಟ್ಟ ರಾಷ್ಟ್ರವನ್ನು ಅಷ್ಟಾಗಿ ಭಾದಿಸಲಿಲ್ಲ.

124 ಮುನ್ನೆಚ್ಚರಿಕಾ ಕ್ರಮಗಳು

124 ಮುನ್ನೆಚ್ಚರಿಕಾ ಕ್ರಮಗಳು

ಡಿಸೆಂಬರ್ 31 ರಂದು ವುಹಾನ್ ನಲ್ಲಿ ವೈರಸ್ ಒಂದು ಹಬ್ಬಿದೆ ಎಂದು ತಿಳಿದುಬಂದ ಕೂಡಲೆ ಚೀನಾಗೆ ಹೋಗಿ ಬರುವ ವಿಮಾನಗಳಿಗೆ ತೈವಾನ್ ನಿರ್ಬಂಧ ಹೇರಿತು. ಜೊತೆಗೆ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ವೈದ್ಯಕೀಯ ತಪಾಸಣೆ ಮಾಡಲು ಆರಂಭಿಸಿತು. ಸೋಂಕಿನ ಲಕ್ಷಣಗಳು ಕಾಣಿಸಿಕೊಂಡವರನ್ನು ಪ್ರತ್ಯೇಕವಾಗಿರಿಸಿತು. ಬಾರ್ಡರ್ ಕಂಟ್ರೋಲ್, ಗಡಿಗಳಲ್ಲಿ ತಪಾಸಣೆ, ಸೋಂಕಿತರಿಗೆ ಚಿಕಿತ್ಸೆ ಸೇರಿದಂತೆ ಕೊರೊನಾ ವೈರಸ್ ಅನ್ನು ತಡೆಗಟ್ಟಲು ಕಳೆದ ಎರಡು ತಿಂಗಳ ಅವಧಿಯಲ್ಲಿ (ಐದು ವಾರಗಳಲ್ಲಿ) 124 ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಆರೋಗ್ಯ ಸಚಿವರ ನೇತೃತ್ವದಲ್ಲಿ ಸೆಂಟ್ರಲ್ ಎಪಿಡೆಮಿಕ್ ಕಮಾಂಡ್ ಸೆಂಟರ್ ಈ ಕೆಲಸ ನಿರ್ವಹಿಸಿದೆ.

ಕೊರೊನಾಗೆ Anti-HIV ಡ್ರಗ್ಸ್ ಮದ್ದು: ಆರೋಗ್ಯ ಸಚಿವಾಲಯ ಶಿಫಾರಸ್ಸು!ಕೊರೊನಾಗೆ Anti-HIV ಡ್ರಗ್ಸ್ ಮದ್ದು: ಆರೋಗ್ಯ ಸಚಿವಾಲಯ ಶಿಫಾರಸ್ಸು!

ತ್ವರಿತ ಕ್ರಮ ಕೈಗೊಂಡ ಸರ್ಕಾರ

ತ್ವರಿತ ಕ್ರಮ ಕೈಗೊಂಡ ಸರ್ಕಾರ

ರೋಗಿಗಳ 14 ದಿನಗಳ ಟ್ರಾವೆಲ್ ಹಿಸ್ಟರಿಯನ್ನ ಒಂದೇ ದಿನದಲ್ಲಿ ಕಲೆ ಹಾಕಿ ತ್ವರಿತ ಕ್ರಮವನ್ನು ತೈವಾನ್ ಸರ್ಕಾರ ಕೈಗೊಂಡಿದೆ. ಇದಕ್ಕಾಗಿ ನ್ಯಾಷನಲ್ ಹೆಲ್ತ್ ಇನ್ಶ್ಯೂರೆನ್ಸ್ ಅಡ್ಮಿನಿಸ್ಟ್ರೇಷನ್ ಮತ್ತು ಇಮ್ಮಿಗ್ರೇಶನ್ ಏಜೆನ್ಸಿಯಿಂದ ಮಾಹಿತಿ ಪಡೆದುಕೊಂಡಿದೆ. ಬಳಿಕ ಹೈ-ರಿಸ್ಕ್ ಇರುವ ಪ್ರಯಾಣಿಕರನ್ನು ಗುರುತಿಸಿ ಪ್ರತ್ಯೇಕಗೊಳಿಸಲಾಗಿದೆ.

ಎಚ್ಚರಿಕೆ ವಹಿಸಿದ ಸರ್ಕಾರ

ಎಚ್ಚರಿಕೆ ವಹಿಸಿದ ಸರ್ಕಾರ

ಸುರಕ್ಷತಾ ಕ್ರಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದರ ಜೊತೆಗೆ ಪ್ರತಿ ಮಾಲ್, ಅಂಗಡಿ ಮುಂಗಟ್ಟು, ರೆಸ್ಟೋರೆಂಟ್ ಮತ್ತು ಆಫೀಸ್ ಗಳಲ್ಲಿ ಹ್ಯಾಂಡ್ ಸ್ಯಾನಿಟೈಝರ್ ಮತ್ತು ಟೆಂಪರೇಚರ್ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಮೀಡಿಯಾ ಮತ್ತು ಸೈಬರ್ ಗಳಲ್ಲಿ ತಪ್ಪು ಮಾಹಿತಿಗಳು ಹರಡದಂತೆ ಸರ್ಕಾರ ಎಚ್ಚರಿಕೆ ವಹಿಸಿದೆ. ಜನವರಿಯಲ್ಲೇ ತೈವಾನ್ ನಲ್ಲಿ 44 ಮಿಲಿಯನ್ ಸರ್ಜಿಕಲ್ ಮಾಸ್ಕ್ ಗಳು, 1.9 ಮಿಲಿಯನ್ N95 ಮಾಸ್ಕ್ ಗಳು, 1100 ನೆಗೆಟಿವ್ ಪ್ರೆಶರ್ ಐಸೋಲೇಷನ್ ರೂಮ್ ಗಳು ಜನರ ಬಳಕೆಗೆ ಸಿದ್ಧವಾಗಿರಿಸಿತ್ತು.

ಹಳೇ ಅನುಭವದಿಂದ ಪಾಠ ಕಲಿತಿರುವ ತೈವಾನ್

ಹಳೇ ಅನುಭವದಿಂದ ಪಾಠ ಕಲಿತಿರುವ ತೈವಾನ್

2003 ರಲ್ಲಿ SARS ನಿಂದಾದ ಭಯಾನಕ ಅನುಭವದಿಂದ ಪಾಠ ಕಲಿತಿರುವ ತೈವಾನ್, ಈ ಬಾರಿ ಸಮಯಕ್ಕೆ ಸರಿಯಾಗಿ ಎಚ್ಚೆತ್ತುಕೊಂಡಿದೆ. ರಾಜಕೀಯ ಮತ್ತು ಪಕ್ಷ ಭೇದವನ್ನು ಬದಿಗಿಟ್ಟು, ತೈವಾನ್ ನಲ್ಲಿ ಕೊರೊನಾ ವೈರಸ್ ನ ತಡಗೆಟ್ಟಲು ಎಲ್ಲರೂ ಕೈಜೋಡಿಸಿದ್ದಾರೆ.

ತೈವಾನ್ ನತ್ತ ದೊಡ್ಡ ದೇಶಗಳು ತಿರುಗಿ ನೋಡುವಂತಾಗಿದೆ

ತೈವಾನ್ ನತ್ತ ದೊಡ್ಡ ದೇಶಗಳು ತಿರುಗಿ ನೋಡುವಂತಾಗಿದೆ

ಇಟಲಿ, ಇರಾನ್, ಫ್ರಾನ್ಸ್, ಸ್ಪೇನ್, ಯು.ಎಸ್ ನಲ್ಲಿ ಸಾವಿರಾರು ಮಂದಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಕೊರೊನಾ ಬಗ್ಗೆ ಆರಂಭಿಕ ನಿರ್ಲಕ್ಷ್ಯ ವಹಿಸಿದ್ದೇ ಈ ಎಲ್ಲಾ ದೇಶಗಳಿಗೂ ಮುಳುವಾಗಿದೆ. ಆರ್ಥಿಕವಾಗಿ ಸದೃಢವಾಗಿದ್ದರೂ, ಕೊರೊನಾದಿಂದ ಯೂರೋಪ್ ಮತ್ತು ಅಮೇರಿಕಾ ಹೆಣಗಾಡುತ್ತಿದೆ. ಪುಟ್ಟ ದ್ವೀಪ ರಾಷ್ಟ್ರವಾಗಿದ್ದರೂ, ಪ್ರಾರಂಭಿಕ ಹಂತದಲ್ಲೇ ಎಚ್ಚೆತ್ತುಕೊಂಡ ತೈವಾನ್ ನತ್ತ ಇದೀಗ ಕೊರೊನಾ ಪೀಡಿತ ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳೇ ತಿರುಗಿ ನೋಡುವಂತಾಗಿದೆ.

English summary
Coronavirus Scare: Taiwan Sets Example On How To Fight Covid-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X