ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್‌ನಲ್ಲಿ ಹಂದಿ ಮಾಂಸದ ಗದ್ದಲ: ಹಂದಿ ಅಂಗಗಳನ್ನು ಎಸೆದ ಸಂಸದರು!

|
Google Oneindia Kannada News

ತೈಪೆ, ನವೆಂಬರ್ 28: ಹಂದಿ ಮಾಂಸದ ಆಮದು ಮಾಡಿಕೊಳ್ಳುವ ವಿವಾದ ತೈವಾನ್ ಸಂಸತ್‌ನಲ್ಲಿ ಮಾರಾಮಾರಿಗೆ ಕಾರಣವಾಗಿದೆ. ವಿರೋಧಪಕ್ಷದ ಸಂಸದರು ಸಂಸತ್ ಒಳಭಾಗದಲ್ಲಿಯೇ ಹಂದಿಯ ಅಂಗಗಳನ್ನು ಎಸೆದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಅಮೆರಿಕದಿಂದ ಹಂದಿ ಮಾಂಸವನ್ನು ಆಮದು ಮಾಡಿಕೊಳ್ಳಲು ಇರುವ ನಿರ್ಬಂಧವನ್ನು ಸಡಿಲಗೊಳಿಸಿದ ತೈವಾನ್ ಸರ್ಕಾರದ ನಿರ್ಧಾರದ ವಿರುದ್ಧ ಈ ಪ್ರತಿಭಟನೆ ನಡೆದಿದೆ.

ತೈವಾನ್‌ನಲ್ಲಿ ಸಂಸದರ ಗದ್ದಲ, ಹೊಡೆದಾಟಗಳು, ಕೈಕೈ ಮಿಲಾಯಿಸುವ ಘಟನೆಗಳು ಆಗಾಗ್ಗೆ ನಡೆಯುತ್ತಿರುತ್ತದೆ. ಆದರೆ ಶುಕ್ರವಾರದ ಗದ್ದಲ ಮತ್ತೊಂದು ಹಂತಕ್ಕೆ ತಲುಪಿತ್ತು.

ಜಾಗತಿಕ ದಾಖಲೆ: 200 ದಿನದಿಂದ ಈ ದೇಶದಲ್ಲಿ ಒಂದೂ ಕೊರೊನಾ ಪ್ರಕರಣವಿಲ್ಲಜಾಗತಿಕ ದಾಖಲೆ: 200 ದಿನದಿಂದ ಈ ದೇಶದಲ್ಲಿ ಒಂದೂ ಕೊರೊನಾ ಪ್ರಕರಣವಿಲ್ಲ

ವಿರೋಧಪಕ್ಷ ಕುಒಮಿಂಟಾಂಗ್ (ಕೆಎಂಟಿ) ಸಂಸದರು ಚರ್ಚೆ ನಡೆಯುವ ಸದನದ ನೆಲದ ಮೇಲೆ ಬಕೆಟ್‌ಗಳಲ್ಲಿ ತಂದ ಹಂದಿಯ ಅಂಗಾಂಗಗಳನ್ನು ಸುರಿದಿದ್ದಾರೆ. ಹಂದಿನ ಹೃದಯ, ಕಿಡ್ನಿ, ಯಕೃತ್ತು, ಕರುಳು ಮುಂತಾದ ಭಾಗಗಳನ್ನು ಎಸೆದಿದ್ದಾರೆ.

Taiwan Opposition Members Hurls Pig Organs In Parliament

ಜನವರಿ 1ರಿಂದ ಅಮೆರಿಕದಿಂದ ಹಂದಿ ಮಾಂಸದ ಪದಾರ್ಥಗಳನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡುವುದಾಗಿ ಇತ್ತೀಚೆಗೆ ತೈವಾನ್ ಸರ್ಕಾರ ಪ್ರಕಟಿಸಿತ್ತು. ಹಂದಿಮಾಂಸದ ಸಪ್ಲಿಮೆಂಟ್‌ನಿಂದ ಜನರ ಕೃಶಕಾಯ ಸುಧಾರಿಸಲು ನೆರವಾಗುತ್ತದೆ. ಆದರೆ ಯುರೋಪಿಯನ್ ಒಕ್ಕೂಟ ಮತ್ತು ಚೀನಾದಂತಹ ದೇಶಗಳಲ್ಲಿ ಅದನ್ನು ನಿಷೇಧಿಸಲಾಗಿದೆ.

ಅಮೆರಿಕ ಮತ್ತು ತೈವಾನ್ ಹೊಸ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಅಮೆರಿಕದಿಂದ ಹಂದಿ ಮತ್ತು ಗೋಮಾಂಸದ ಆಮದಿನ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿತ್ತು. ಇದಕ್ಕೆ ವಿರೋಧಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಹಂದಿ ಮಾಂಸದ ಆಮದು ನಿರ್ಧಾರ ತರಾತುರಿಯದ್ದಾಗಿದೆ ಮತ್ತು ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಆರೋಪಿಸಿವೆ.

English summary
In a protest against the decision on Pork import, opposition lawmakers hurled pig organs inside Taiwan's parliament.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X