ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಿಜಿಯಲ್ಲಿ ತೈವಾನ್ ಅಧಿಕಾರಿಗಳ ಮೇಲೆ ಚೀನೀ ರಾಜತಾಂತ್ರಿಕರಿಂದ ಹಲ್ಲೆ

|
Google Oneindia Kannada News

ಹಾಂಕಾಂಗ್, ಅಕ್ಟೋಬರ್ 20: ಫಿಜಿಯಲ್ಲಿ ನಡೆಯ ಕಾರ್ಯಕ್ರಮವೊಂದರಲ್ಲಿ ಚೀನಾದ ಇಬ್ಬರು ರಾಜತಾಂತ್ರಿಕರ ಜತೆಗೆ ಕೈಕೈ ಮಿಲಾಯಿಸಿದ ತೈವಾನ್ ಅಧಿಕಾರಿಯೊಬ್ಬರಿಗೆ ಗಾಯಗಳಾಗಿವೆ. ತೈವಾನ್ ಅಧಿಕಾರಿಯ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಫಿಜಿ ರಾಜಧಾನಿ ಸುವಾದಲ್ಲಿ ಅಕ್ಟೋಬರ್ 8ರಂದು ನಡೆದ ತೈವಾನ್ ರಾಷ್ಟ್ರೀಯ ದಿನಾಚರಣೆಯ ವೇಳೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ತಿನ್ನಲು ಅನ್ನ ಅಹಾರವಿಲ್ಲ, ಆದರೂ ಚೀನಾಗೆ ಯುದ್ಧ ಬೇಕು..!ತಿನ್ನಲು ಅನ್ನ ಅಹಾರವಿಲ್ಲ, ಆದರೂ ಚೀನಾಗೆ ಯುದ್ಧ ಬೇಕು..!

ಈ ಕಾರ್ಯಕ್ರಮಕ್ಕೆ ಆಹ್ವಾನ ಇಲ್ಲದಿದ್ದರೂ ಸ್ಥಳಕ್ಕೆ ನುಗ್ಗಿದ ಚೀನಾದ ರಾಯಭಾರಿ ಕಚೇರಿ ಅಧಿಕಾರಿಗಳು ಅಲ್ಲಿ ಭಾಗವಹಿಸಿದ್ದ ಅತಿಥಿಗಳ ಫೋಟೊಗಳನ್ನು ತೆಗೆಯಲು ಪ್ರಯತ್ನಿಸಿದ್ದರು ಎಂದು ತೈವಾನ್ ವಿದೇಶಾಂಗ ಸಚಿವಾಲಯದ ವಕ್ತಾರೆ ಜೋಅನ್ನೆ ಒಯು ಹೇಳಿದ್ದಾರೆ.

 Taiwan Official Injured After Altercation With Chinese Diplomats In Fiji

'ಅಕ್ರಮವಾಗಿ ಒಳಗೆ ಬಂದ ಚೀನೀ ಅಧಿಕಾರಿಗಳಿಗೆ ತೈವಾನ್ ಸಿಬ್ಬಂದಿ ಅಡ್ಡಿಪಡಿಸಿದರು. ಆಗ ಚೀನಾದ ಇಬ್ಬರು ಅಧಿಕಾರಿಗಳು ಆಕ್ರೋಶದಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ನಮ್ಮ ಅಧಿಕಾರಿಯ ತಲೆಗೆ ತೀವ್ರ ಗಾಯವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ' ಎಂದು ಅವರು ತಿಳಿಸಿದ್ದಾರೆ.

ಇದನ್ನು ಅಲ್ಲಗೆಳೆದಿರುವ ಫಿಜಿಯಲ್ಲಿನ ಚೀನಾ ರಾಯಭಾರ ಕಚೇರಿ, ಸಮಾರಂಭದ ಸ್ಥಳದ ಹೊರಗಿನ ಸಾರ್ವಜನಿಕ ಸ್ಥಳದಲ್ಲಿ ತಮ್ಮ ಕಚೇರಿ ಕೆಲಸ ನಡೆಸುತ್ತಿದ್ದ ಚೀನಾ ರಾಜತಾಂತ್ರಿಕ ಸಿಬ್ಬಂದಿ ವಿರುದ್ಧ ತೈವಾನ್ ಅಧಿಕಾರಿಗಳು ಪ್ರಚೋದನಾಕಾರಿಯಾಗಿ ವರ್ತಿಸಿದ್ದರು. ಆಗ ನಡೆದ ಜಗಳದಲ್ಲಿ ಚೀನಾದ ರಾಜತಾಂತ್ರಿಕರೊಬ್ಬರಿಗೆ ಗಾಯವಾಗಿದೆ ಎಂದು ಹೇಳಿಕೊಂಡಿದೆ.

'ಮುಟ್ಟಿದರೆ ಸುಟ್ಟು ಹೋಗ್ತೀರ', ಚೀನಾಗೆ ತೈವಾನ್ ವಾರ್ನಿಂಗ್'ಮುಟ್ಟಿದರೆ ಸುಟ್ಟು ಹೋಗ್ತೀರ', ಚೀನಾಗೆ ತೈವಾನ್ ವಾರ್ನಿಂಗ್

ಚೀನಾ ಸತ್ಯವನ್ನು ತಲೆಕೆಳಗಾಗಿಸುವ ಮೂಲಕ ಜನರಲ್ಲಿ ಗೊಂದಲ ಮೂಡಿಸಲು ಪ್ರಯತ್ನಿಸುತ್ತಿದೆ ಎಂದು ಜೋಅನ್ನೆ ಒಯು ಆರೋಪಿಸಿದ್ದಾರೆ.

ಚೀನಾ ಮತ್ತು ತೈವಾನ್ ನಡುವೆ ಸುದೀರ್ಘ ಕಾಲದಿಂದ ಕಿತ್ತಾಟ ನಡೆಯುತ್ತಿದ್ದು, ಈ ಘಟನೆ ಅದನ್ನು ಮತ್ತಷ್ಟು ಉದ್ವಿಗ್ನಗೊಳಿಸಿದೆ. ತೈವಾನ್ ತನ್ನ ಪ್ರದೇಶದ ಅವಿಭಾಜ್ಯ ಅಂಗ ಎಂದು ಚೀನಾ ಹೇಳಿಕೊಂಡಿದ್ದು, ಅಗತ್ಯಬಿದ್ದರೆ ಬಲವಂತವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದೆ.

English summary
Taiwan official admitted to hospital after alleged violent attack by Chinese diplomats in Fiji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X