ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೈವಾನ್ ಅನಿಲ ಸ್ಫೋಟ, 24 ಮಂದಿ ಸಾವು

By Mahesh
|
Google Oneindia Kannada News

ತೈವಾನ್, ಆ.1 : ದಕ್ಷಿಣದ ತೈವಾನ್ ಕವೋಹ್ ಸಿಯಾಂಗ್ ನ ಅನಿಲ ಸ್ಥಾವರವೊಂದರಲ್ಲಿ ಗ್ಯಾಸ್ ಸೋರಿಕೆಯಿಂದಾಗಿ ಉಂಟಾದ ಭಾರಿ ಸ್ಫೋಟದಲ್ಲಿ 24 ಮಂದಿ ಪ್ರಾಣ ಕಳೆದುಕೊಂಡು 271ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಗಾಯಗೊಂಡಿರುವ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ದಕ್ಷಿಣದ ತೈವಾನ್ ಎರಡನೇ ಅತಿದೊಡ್ಡ ನಗರ ಕವೋಹ್ ಸಿಯಾಂಗ್ ನ ಅನಿಲ ಸ್ಥಾವರವೊಂದರಲ್ಲಿ ಗುರುವಾರ ಮಧ್ಯರಾತ್ರಿ ನಂತರ ಗ್ಯಾಸ್ ಸೋರಿಕೆಯುಂಟಾಗಿ ಸ್ಫೋಟ ಸಂಭವಿಸಿದೆ. ಶುಕ್ರವಾರ ಮುಂಜಾನೆ ಹೊತ್ತಿಗೆ ಸ್ಫೋಟ ಭೀಕರತೆ ಪಡೆದುಕೊಂಡು ಬಂದರು ನಗರಿಯನ್ನು ಬೆಚ್ಚಿ ಬೀಳಿಸಿದೆ.

ಸಿಯಾಂಜೈನ್ ಜಿಲ್ಲೆಯ ಕವೋಹ್ ಸಿಯಾಂಗ್ ನಗರದಲ್ಲಿರುವ ಸಿಯಾಂಜೈನ್ ಸ್ಥಾವರದಲ್ಲಿ ಈ ದುರಂತ ಸಂಭವಿಸಿದೆ. ನೂರಾರು ವಾಹನಗಳು ಬೆಂಕಿಗಾಹುತಿಯಾಗಿವೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಹರಸಾಹಸ ಪಡುತ್ತಿದ್ದು ಇನ್ನು ಪರಿಸ್ಥಿತಿ ನಿಯಂತ್ರಣ ಸಾಧ್ಯವಾಗುತ್ತಿಲ್ಲ.

ಅಗ್ನಿಶಾಮಕ ದಳ ಹರಸಾಹಸ

ಅಗ್ನಿಶಾಮಕ ದಳ ಹರಸಾಹಸ

ವಾರದ ಕೆಳಗೆ ತೈವಾನ್ ನಲ್ಲಿ ವಿಮಾನ ದುರಂತ ಸಂಭವಿಸಿ 48 ಮಂದಿ ಮೃತಪಟ್ಟಿದ್ದರು. ಈಗ ಅನಿಲ ಸ್ಪೋಟ ಸಂಭವಿಸಿದ್ದು ದುರಂತ ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಕಂಡು ಬಂದಿದೆ. ಐದಾರು ಬಾರಿ ಸ್ಫೋಟ ಕಂಡು ಬಂದಿದೆ.

ತೈವಾನ್ ಅನಿಲ ಸ್ಫೋಟದ ಚಿತ್ರಗಳು

ತೈವಾನ್ ಅನಿಲ ಸ್ಫೋಟದ ಚಿತ್ರಗಳು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿವೆ

ಅನಿಲ ದುರಂತದ ಚಿತ್ರಗಳು ಮಾಹಿತಿ

ಅನಿಲ ದುರಂತದ ಚಿತ್ರಗಳು ಮಾಹಿತಿಯನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗುತ್ತಿದೆ.

ತೈವಾನ್ ಅನಿಲ ದುರಂತದ ಚಿತ್ರಗಳು

ತೈವಾನ್ ಅನಿಲ ದುರಂತದ ಚಿತ್ರಗಳು

ತೈವಾನ್ ಅನಿಲ ದುರಂತದ ವಿಡಿಯೋ

ತೈವಾನ್ ಅನಿಲ ದುರಂತದ ವಿಡಿಯೋ ದೃಶ್ಯಾವಳಿ ಇಲ್ಲಿದೆ

English summary
Taiwan gas explosion kills dozens.Hundreds more injured as streets of Kaohsiung are ripped open by petrochemical pipeline blast
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X