• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಬಿಕಿನಿ ಕ್ಲೈಂಬರ್' ಚೆಲುವೆಯ ಪ್ರಾಣಕ್ಕೆ ಎರವಾಯಿತು ಸೆಲ್ಫಿ ಹುಚ್ಚು

|

ತೈಪೆ (ತೈವಾನ್) ಜನವರಿ 22: ಬೆಟ್ಟಗಳ ತುದಿಯೇರಿ ಬಿಕಿನಿಯಲ್ಲಿ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿ ಪಡೆದಿದ್ದ ತೈವಾನ್‌ನ 'ಬಿಕಿನಿ ಕ್ಲೈಂಬರ್' ಗಿಗಿ ವು ಬೆಟ್ಟದಿಂದ ಬಿದ್ದು ಮೃತಪಟ್ಟಿದ್ದಾರೆ.

ಗಿಗಿ ವು ಅವರ ಮೃತದೇಹವನ್ನು ಪತ್ತೆಹಚ್ಚಲು ತೈವಾನಿನ ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆ ನಡೆಸಿದ್ದವು. ಯುಶಾನ್ ರಾಷ್ಟ್ರೀಯ ಉದ್ಯಾನದ ಕಂದರದೊಳಗೆ ಬಿದ್ದು ಗಾಯಗೊಂಡಿರುವುದಾಗಿ ಗಿಗಿ ವು ಸ್ಯಾಟಲೈಟ್ ಫೋನ್ ಮೂಲಕ ತಮ್ಮ ಸ್ನೇಹಿತರಿಗೆ ಮಾಹಿತಿ ನೀಡಿದ್ದರು.

ಡಬ್ಲಿನ್ ನಲ್ಲಿ ಸೆಲ್ಫಿ ಹುಚ್ಚಿಗೆ ಭಾರತದ ವಿದ್ಯಾರ್ಥಿ ಬಲಿ

ಅವರನ್ನು ತಲುಪಲು ತೆರಳಿದ ಹೆಲಿಕಾಪ್ಟರ್‌ಗಳು ಪ್ರತಿಕೂಲ ಹವಾಮಾನದಿಂದಾಗಿ ಮರಳಿದ್ದವು. ಬಳಿಕ ಅಧಿಕಾರಿಗಳು ಜೀವ ಕಳೆದುಕೊಂಡಿದ್ದ ಆಕೆಯ ದೇಹವನ್ನು ಸೋಮವಾರ ಪತ್ತೆಹಚ್ಚಿದ್ದಾರೆ.

ಬೆಟ್ಟವನ್ನೇರಿದ್ದ ಗಿಗಿ, ಸುಮಾರು 20-30 ಮೀಟರ್ (65-100 ಅಡಿ) ಎತ್ತರದಿಂದ ಬಿದ್ದಿರುವುದಾಗಿ ತಮ್ಮ ಸ್ನೇಹಿತರಿಗೆ ಮಾಹಿತಿ ನೀಡಿದ್ದರು. ದೇಹದ ಕೆಳಭಾಗದ ಸ್ವಾಧೀನ ತಪ್ಪಿಹೋಗಿದೆ. ಆದರೆ, ರಕ್ಷಣೆಗೆ ಬರುವವರೊಂದಿಗೆ ಸಂವಹನ ನಡೆಸಿ ಸಹಕರಿಸಬಲ್ಲೆ ಎಂದು ತಿಳಿಸಿದ್ದರು.

ಚಾರಣದ ಆಸಕ್ತಿ ಹೊಂದಿದ್ದ ಗಿಗಿ ವು, ಚಾರಣದ ದಿರಿಸಿನಲ್ಲಿ ಬೆಟ್ಟ ಏರುತ್ತಿದ್ದರು. ಅದರ ತುತ್ತ ತುದಿ ತಲುಪಿದ ಬಳಿಕ ಬಿಕಿನಿಯಲ್ಲಿ ಚಿತ್ರಗಳನ್ನು ತೆಗೆದುಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಮನಸೆಳೆಯುವ ಬಿಕಿನಿ ಚಿತ್ರಗಳ ಮೂಲಕವೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಗಿಗಿಯನ್ನು 'ಬಿಕಿನಿ ಕ್ಲೈಂಬರ್' ಎಂದೇ ಕರೆಯಲಾಗುತ್ತಿತ್ತು.

ಸಾಯುವ ಕೆಲವೇ ಕ್ಷಣ ಮೊದಲು ತೆಗೆದ 'ಮೀನಾಕ್ಷಿ'ಯ ಕಟ್ಟಕಡೆಯ ಚಿತ್ರ!

ನಾಲ್ಕು ವರ್ಷಗಳಲ್ಲಿ 100 ಬೆಟ್ಟದ ತುದಿಗಳನ್ನು ಏರಿದ್ದಾಗಿ ಗಿಗಿ ಕಳೆದ ವರ್ಷ ಹೇಳಿಕೊಂಡಿದ್ದರು. '100 ಬೆಟ್ಟಗಳಲ್ಲಿ ಪ್ರತಿ ಬೆಟ್ಟದ ತುದಿಯನ್ನೇರಿದಾಗಲೂ ಬೇರೆ ಬಿಕಿನಿಯಲ್ಲಿ ಇರುತ್ತಿದ್ದೆ. ನನ್ನ ಬಳಿ ಸುಮಾರು 97 ಬಿಕಿನಿಗಳು ಮಾತ್ರ ಇದ್ದು, ಆಕಸ್ಮಿಕವಾಗಿ ಪುನರಾವರ್ತಿಸಿದ್ದೆ' ಎಂದು ತಿಳಿಸಿದ್ದರು.

ಈ ರೀತಿಯ ಬಿಕಿನಿ ಹುಚ್ಚಾಟವೇಕೆ ಎಂದು ಪ್ರಶ್ನಿಸಿದಾಗ 'ಇದು ಸುಂದರವಾಗಿ ಕಾಣಿಸುತ್ತದೆ, ಇಷ್ಟವಾಗದೆ ಏನು' ಎಂದು ಕೇಳಿದ್ದರು.

ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವೀಸ್ ಪತ್ನಿ ಸೆಲ್ಫಿ ಹುಚ್ಚು: ವಿಡಿಯೋ ವೈರಲ್

ಕಳೆದ ವಾರ ಕ್ಯಾಲಿಫೋರ್ನಿಯಾದ ಯೊಸೆಮಿಟ್ ನ್ಯಾಷನಲ್ ಪಾರ್ಕ್‌ನ ಕೆಳಭಾಗದಲ್ಲಿ ಭಾರತದ ಜೋಡಿಯೊಂದರ ಮೃತದೇಹಗಳು ಪತ್ತೆಯಾಗಿದ್ದವು. ಅವರು ಬಳಸುತ್ತಿದ್ದ ಕ್ಯಾಮೆರಾ ಸಾಧನಗಳು ಬೆಟ್ಟದ ತುದಿಯಲ್ಲಿ ದೊರೆತಿದ್ದವು.

English summary
Taiwan's Bikini Climber famed Gigi Wu, who was famous on social media for taking selfies on top of mountain peaks dressed in a bikini died after falled down a ravine in Yushan National Park.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X