ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವನೋಪಾಯಕ್ಕಾಗಿ ಕಿಡ್ನಿಯನ್ನೇ ಮಾರುತ್ತಿರುವವರ ಕರುಣಾಜನಕ ಕಥೆ

|
Google Oneindia Kannada News

ಮಾರಣಾಂತಿಕ ಕೊರೊನಾ ವೈರಸ್ ಅನ್ನು ತಡೆಗಟ್ಟಲು ಲಾಕ್ ಡೌನ್ ಘೋಷಿಸಿದ್ಮೇಲೆ ಜಾಗತ್ತಿನಾದ್ಯಂತ ಲೆಕ್ಕವಿಲ್ಲದಷ್ಟು ಮಂದಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೆಲಸಕ್ಕೆ ಕುತ್ತು ಬಂದ ಕಾರಣ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿಬಿಟ್ಟಿದೆ.

Recommended Video

ಈಜಿಪ್ಟ್ ಮತ್ತು ಟರ್ಕಿಯಿಂದ ಈರುಳ್ಳಿ ಆಮದು | Oneindia Kannada

ಒಂದು ಕಡೆ ಕೊರೊನಾ ವೈರಸ್ ಹೊಡೆತ ಇನ್ನೊಂದು ಕಡೆ ಸಿರಿಯನ್ ಸಿವಿಲ್ ವಾರ್. ಇವೆರಡರಿಂದ ಅಕ್ಷರಶಃ ಹೆಣಗಾಡುತ್ತಿರುವ ಸಿರಿಯನ್ ನಿರಾಶ್ರಿತರು ಟರ್ಕಿಯಲ್ಲಿ ಜೀವನೋಪಾಯಕ್ಕಾಗಿ ಕಿಡ್ನಿಯನ್ನೇ ಮಾರಾಟ ಮಾಡಿಕೊಳ್ಳುತ್ತಿದ್ದಾರೆ.

ಈ ಸಂಗತಿ ಸಿಬಿಎಸ್ ನ 'ಸೆಲ್ಲಿಂಗ್ ಆರ್ಗನ್ಸ್ ಟು ಸರ್ವೈವ್' ಎಂಬ ಸಾಕ್ಷ್ಯಚಿತ್ರದಲ್ಲಿ ಬಹಿರಂಗವಾಗಿದೆ. ಕಿಡ್ನಿ ಮತ್ತು ಲಿವರ್ ದಾನ ಮಾಡಿದರೆ ದುಡ್ಡು ಕೊಡುವುದಾಗಿ ಹಾಕಿದ್ದ ಫೇಸ್ ಬುಕ್ ಪೋಸ್ಟ್ ಕುರಿತಾದ ತನಿಖಾ ವರದಿಗಾಗಿ ಪತ್ರಕರ್ತರು ಟರ್ಕಿಗೆ ತೆರಳಿದ್ದರು.

600 ಕಿಲೋ ಮೀಟರ್‌ ಪ್ರಯಾಣದಲ್ಲಿ, ಒಬ್ಬರೂ ನೀರು ಕೊಡಲಿಲ್ಲ 600 ಕಿಲೋ ಮೀಟರ್‌ ಪ್ರಯಾಣದಲ್ಲಿ, ಒಬ್ಬರೂ ನೀರು ಕೊಡಲಿಲ್ಲ

ಜೀವನ ನಿರ್ವಹಣೆಗಾಗಿ ಕಿಡ್ನಿಯನ್ನೇ ಮಾರುತ್ತಿರುವ ಸಿರಿಯನ್ ನಿರಾಶ್ರಿತರ ಸ್ಥಿತಿಯನ್ನ ಲಾಭದಾಯಕವಾಗಿ ಬಳಸಿಕೊಳ್ಳುವ ಪ್ರಯತ್ನ ಟರ್ಕಿಯಲ್ಲಿ ಸಾಗುತ್ತಿದೆ. ಕಿಡ್ನಿ ದಾನ ಮಾಡಿದವರಿಗೆ ಕಡಿಮೆ ಹಣ ನೀಡಿ ಮೋಸ ಮಾಡುತ್ತಿರುವುದು ಪತ್ರಕರ್ತರ ರಹಸ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮಾನವೀಯತೆ ಇಲ್ಲದವರು...

ಮಾನವೀಯತೆ ಇಲ್ಲದವರು...

ಸಿರಿಯಾದಲ್ಲಿ ಸಿವಿಲ್ ವಾರ್ ಆರಂಭವಾದ್ಮೇಲೆ ಟರ್ಕಿಗೆ ಬಂದ ಅಬು ಅಬ್ದುಲ್ಲಾ, ಫೇಸ್ ಬುಕ್ ಪೋಸ್ಟ್ ನೋಡಿ ತನ್ನ ಕಿಡ್ನಿಯನ್ನ $10,000 ಗೆ ಮಾರಲು ಮುಂದಾದರು. ಕಿಡ್ನಿಯನ್ನ ಪಡೆದುಕೊಂಡ ಬ್ರೋಕರ್, ಅಬು ಅಬ್ದುಲ್ಲಾಗೆ ನೀಡಿದ್ದು ಅರ್ಧದಷ್ಟು ಹಣ ಮಾತ್ರ. ದುರಂತ ಅಂದ್ರೆ, ಕಿಡ್ನಿ ಪಡೆದ ಬ್ರೋಕರ್ ಅಬು ಅಬ್ದುಲ್ಲಾಗೆ ನೀಡಬೇಕಾದ ವೈದ್ಯಕೀಯ ನೆರವನ್ನೂ ನೀಡಿಲ್ಲ.

ಕಾನೂನುಬಾಹಿರ ಚಟುವಟಿಕೆ

ಕಾನೂನುಬಾಹಿರ ಚಟುವಟಿಕೆ

ಸಿಬಿಎಸ್ ಪ್ರಕಾರ, ಟರ್ಕಿಯಲ್ಲಿ ಅಂಗಾಂಗಳ ಮಾರಾಟ ಮತ್ತು ಖರೀದಿ ಕಾನೂನುಬಾಹಿರ. 'ಕುಟುಂಬದ ಸದಸ್ಯರಿಗೆ ಅಂಗಾಂಗ ದಾನ ಮಾಡುತ್ತಿರುವುದು' ಎಂದು ದಾನಿಗಳು ಸಾಬೀತುಪಡಿಸಬೇಕು. ನಿಯಮ ಹೀಗಿದ್ದರೂ, ಟರ್ಕಿಯಲ್ಲಿ ನಕಲಿ ದಾಖಲೆಗಳ ಸೃಷ್ಟಿಗಾಗಿ $200 ಸಾಕು.

ಹೃದಯ ಹಿಂಡುವ ಕಥೆ: 150ಕಿ.ಮೀ ನಡೆದ ಕಾರ್ಮಿಕ ಸೇರಿದ್ದು ಮನೆಯಲ್ಲ ಮಸಣ!ಹೃದಯ ಹಿಂಡುವ ಕಥೆ: 150ಕಿ.ಮೀ ನಡೆದ ಕಾರ್ಮಿಕ ಸೇರಿದ್ದು ಮನೆಯಲ್ಲ ಮಸಣ!

ಬೇರೆ ದಾರಿಯೇ ಇಲ್ಲ

ಬೇರೆ ದಾರಿಯೇ ಇಲ್ಲ

ಎರಡು ವರ್ಷ ಮನೆಯ ಬಾಡಿಗೆ ಹಣ ಪಾವತಿಸಲು $4,000 ಕ್ಕೆ ಮಹಿಳೆಯೊಬ್ಬರು ತಮ್ಮ ಲಿವರ್ ನ ಮಾರಾಟ ಮಾಡಿದ್ದಾರೆ. ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಸಿರಿಯನ್ ನಿರಾಶ್ರಿತರಿಗೆ ಬೇರೆ ದಾರಿಯೇ ಇಲ್ಲದಾಗಿದೆ ಎನ್ನುತ್ತಾರೆ ಸಿರಿಯನ್-ಅಮೇರಿಕನ್ ಉದ್ಯಮಿ ಯಕ್ಜಾನ್ ಶಿಶಾಕ್ಲಿ.

ಸಾಯುವುದೇ ಒಳ್ಳೆಯದ್ದು

ಸಾಯುವುದೇ ಒಳ್ಳೆಯದ್ದು

''ಅವರಿಗೆ ಬೇರೆ ಆಯ್ಕೆಗಳೇ ಇಲ್ಲ. ಸಾಯುವುದೇ ಒಳ್ಳೆಯದ್ದು ಎಂದು ಅವರು ಯೋಚಿಸುತ್ತಿದ್ದಾರೆ. ಸಾಯುವ ಮುನ್ನ ಕುಟುಂಬಕ್ಕೆ ಹಣ ನೀಡಲು ಸಿರಿಯನ್ ನಿರಾಶ್ರಿತರು ಹೀಗೆ ಮಾಡುತ್ತಿದ್ದಾರೆ'' ಅಂತ ಯಕ್ಞಾನ್ ಶಿಶಾಕ್ಲಿ ಹೇಳಿದ್ದಾರೆ.

English summary
Syrian refugees in Turkey are selling their organs on the black market to survive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X