ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿರಿಯಾ ಕ್ರೌರ್ಯಕ್ಕೆ ಸಾಕ್ಷಿಯಾದ ಮುಗ್ಧ ಮಕ್ಕಳ ರಕ್ತಸಿಕ್ತ ಚಿತ್ರ!

|
Google Oneindia Kannada News

ಸಿರಿಯಾ, ಫೆಬ್ರವರಿ 28: "ಯಾವ ಮತ, ಯಾವ ದೇಶ, ಯಾವ ಸರ್ಕಾರ ಎಂಬುದು ನನಗೆ ಬೇಕಿಲ್ಲ. ನನಗೆ ಮಾನವೀಯತೆ ಬೇಕು... ಈ ಮುಗ್ಧ ಮಕ್ಕಳ ನಿಷ್ಕಾರಣ ಸಾವು ನಿಲ್ಲಬೇಕು..." ಟ್ವಿಟ್ಟಿಗರೊಬ್ಬರು ಭಾವುಕರಾಗಿ ಮಾಡಿದ ಈ ಟ್ವೀಟ್ ಸಿರಿಯಾದ ಕ್ರೌರ್ಯಕ್ಕೆ ಕನ್ನಡಿಯಾಗುತ್ತದೆ.

ಸಿರಿಯಾದಲ್ಲಿ ಐಸಿಸ್ ಉಗ್ರರ ತಾಣದ ಮೇಲೆ ರಷ್ಯಾ ಮತ್ತು ಸಿರಿಯಾ ಸೇನೆ ನಡೆಸಿದ ದಾಳಿಯಲ್ಲಿ 26 ಜನ ಸತ್ತಿದ್ದು ಎಷ್ಟೋ ಮಹತ್ವದ ಸುದ್ದಿಗಳ ನಡುವಲ್ಲಿ ಕಂಡೂ ಕಾಣದಂತೆ ಮರೆಯಾಗಿದೆ. ವೈಮಾನಿಕ ಬಾಂಬ್ ದಾಳಿ ನಡೆಯುವ ಸಮಯದಲ್ಲಿ ಮಕ್ಕಳ ಆಸ್ಪತ್ರೆಯೊಂದಿದೆ ಎಂಬ ಅರಿವಿದ್ದರೂ ದಾಳಿ ನಡೆಸಿದ ಕಾರಣ ಏಳು ಮುಗ್ಧ ಮಕ್ಕಳು ನಿಷ್ಕಾರಣವಾಗಿ ಸಾವನ್ನಪ್ಪಿದ್ದಾರೆ.

ಸಿರಿಯಾ ಮೇಲೆ ಅಮೆರಿಕ ದಾಳಿ, ನೂರಕ್ಕೂ ಹೆಚ್ಚು ಸಾವು ಸಿರಿಯಾ ಮೇಲೆ ಅಮೆರಿಕ ದಾಳಿ, ನೂರಕ್ಕೂ ಹೆಚ್ಚು ಸಾವು

ದಾಳಿಯಲ್ಲಿ ಗಾಯಗೊಂಡ ಪುಟ್ಟ ಪುಟ್ಟ ಕಂದಮ್ಮಗಳ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತ ಸುದ್ದಿ ಮಾಡಿದೆ.

ಪುಟ್ಟ ಮಕ್ಕಳ ಅಂದದ ಮೊಗದ ಮೇಲೆ ರಕ್ತದ ಗುರುತುಗಳನ್ನು ಕಂಡರೆ ಎದೆನಡುಗುತ್ತದೆ. ಮಾನವೀಯತೆಯ ದುರಂತ ಅಂತ್ಯದ ಪ್ರತೀಕವಾಗಿ ಈ ಮಕ್ಕಳ ತಮ್ಮ ತಂದೆ-ತಾಯಿಯನ್ನೋ, ಒಡಹುಟ್ಟಿದವರನ್ನೋ ಕಳೆದುಕೊಂದು ಪರಿತಪಿಸುತ್ತಿದ್ದಾರೆ. ಮತ್ತಷ್ಟು ಮಕ್ಕಳು ಈ ನಿಷ್ಕಾರಣ ಹಿಂಸೆಯ ಅರಿವೇ ಇಲ್ಲದೆ ಮುಗುಳ್ನುಗುತ್ತಿದ್ದಾರೆ!

Array

ಮುಗ್ಧ ಮಗುವಿನ ಮೊಗದಲ್ಲಿ ಬಾಡದ ನಗು!

ಮುದ್ದುಭರಿಸುವ ಈ ಮಗುವಿನ ಮುಖ ನೋಡಿದರೆ ಕರುಣೆ ಉಕ್ಕುತ್ತದೆ. ಬಾಂಬ್ ದಾಳಿ ನಾಡೆಯುತ್ತಿದೆ ಎಂಬ ಯಾವ ಪರಿವೆ ಇಲ್ಲದೆ, ತನ್ನ ತಂದೆ-ತಾಯಿಯನ್ನು ಕಳೆದುಕೊಂಡಿದ್ದೇನೆ ಎಂಬ ಅರಿವೂ ಇಲ್ಲದೆ ಈ ಮಗು ಛಾಯಾಗ್ರಾಹಕನಿಗೆ ಪೋಸು ನೀಡುತ್ತಿದೆ! ಈ ಮುದ್ದು ಮೊಗದ, ಮುಗ್ಧ ನಗುವನ್ನು ಅಳಿಸಿದ ಅಮಾನುಷ ಕೃತ್ಯಕ್ಕೆ ಧಿಕ್ಕಾರವಿರಲಿ ಎಂದಿದ್ದಾರೆ ಟ್ವಿಟ್ಟಿಗರು.

Array

ದಯವಿಟ್ಟು ಇದನ್ನೆಲ್ಲ ನಿಲ್ಲಿಸಿ!

ನನಗೆ ಯಾವ ದೇಶ, ಯಾವ ಧರ್ಮ, ಯಾವ ಸರ್ಕಾರ ಎಂಬುದುಬೇಕಿಲ್ಲ. ಮಾನವೀಯತೆ ಸಾಯುತ್ತಿದೆ. ಮಕ್ಕಳು ಸಾಯುತ್ತಿದ್ದಾರೆ. ಇವನ್ನೆಲ್ಲ ಈಗಲೇ ನಿಲ್ಲಿಸಿ ಎಂದಿದ್ದಾರೆ ಇಶಾ ಗುಪ್ತಾ.

ಎಲ್ಲಿದೆ ಮಾನವೀಯತೆ?

ಮಾನವೀಯತೆ ಎಲ್ಲಿದೆ? ನ್ಯಾಯ ಎಲ್ಲಿದೆ? ಅತಿ ಮಾನುಷ ಶಕ್ತಿ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ ಒಬ್ಬರು.

Array

ಕಣ್ಣೀರುಕ್ಕಿಸುವ ಚಿತ್ರ!

ಪುಟ್ಟ ಹುಡುಗನೊಬ್ಬ ತನ್ನಗಿಂತ ಚಿಕ್ಕ ತಂಗಿಯನ್ನು ಬಾಂಬ್ ದಾಳಿಯಿಂದ ರಕ್ಷಿಸುವಂತೆ ತಬ್ಬಿ ಕುಳಿತ ಈ ದೃಶ್ಯ ಎಂಥವರ ಕಣ್ಣಲ್ಲೂ ನೀರುಕ್ಕಿಸುವುದು ಸತ್ಯ!

Array

ಮೌನವೆಕೆ?

ಸಿರಿಯಾದಲ್ಲಿ ಈ ಪರಿ ಮಾರಣಹೋಮ ನಡೆಯುತ್ತಿದ್ದರೂ ವಿಶ್ವ ಏಕೆ ಮೌನವಾಗಿದೆ ಎಂದು ಪ್ರಶ್ನಿಸಿದ್ದಾರೆ ವ್ಯಕ್ತಿಯೊಬ್ಬರು.

Array

ಹೃದಯ ಅಳುತ್ತಿದೆ...

ಈ ಚಿತ್ರ ನೋಡಿ ಹೃದಯ ಅಳುತ್ತಿದೆ... ಸಿರಿಯಾಕ್ಕಾಗಿ ನಿಮ್ಮ ಧ್ವನಿ ಏರಿಸಿ ಎಂದಿದ್ದಾರೆ ಎಂ.ಸಾದ್ ಸಾದಿಖ್ ಎಂಬುವವರು.

ಸಿರಿಯಾ ರಾಜಧಾನಿಯಲ್ಲಿ ಭೀಕರ ಬಾಂಬ್ ಸ್ಫೋಟಕ್ಕೆ 18 ಬಲಿಸಿರಿಯಾ ರಾಜಧಾನಿಯಲ್ಲಿ ಭೀಕರ ಬಾಂಬ್ ಸ್ಫೋಟಕ್ಕೆ 18 ಬಲಿ

English summary
More than 26 people died including 7 kids in Syria after Syria military with support from Rushain warplanes attacked an ISIS camp on Feb 26th. The photos of the injured kids become viral in social media now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X