ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಿಸ್ ಒಪ್ಪಂದ: ವಿದೇಶಿ ಕಪ್ಪು ಹಣದ ಮಾಹಿತಿ ತಾನಾಗಿಯೇ ಸಿಗಲಿದೆ!

|
Google Oneindia Kannada News

ನವದೆಹಲಿ, ನವೆಂಬರ್ 23: ಭಾರತೀಯರು ಸ್ವಿಸ್ ಬ್ಯಾಂಕ್ ನಲ್ಲಿ ಹೊಂದಿರುವ ಖಾತೆಗಳ ಹಣಕಾಸು ಮಾಹಿತಿಯು 2019ರ ಸೆಪ್ಟೆಂಬರ್ ನಿಂದ ತಾನಾಗಿಯೇ ದೊರೆಯುತ್ತದೆ. ವಿದೇಶಗಳಲ್ಲಿ ಇಟ್ಟಿರುವ ಕಪ್ಪು ಹಣದ ವಿರುದ್ಧದ ಹೋರಾಟಕ್ಕೆ ಇದರಿಂದ ದೊಡ್ಡ ಮಟ್ಟದಲ್ಲಿ ಸಹಾಯವಾಗುತ್ತದೆ.

ಎರಡು ದೇಶಗಳ ಮಧ್ಯದ 'ಆಟೋಮೆಟಿಕ್ ಎಕ್ಸ್ ಚೇಂಜ್ ಇನ್ ಫಾರ್ಮೆಷನ್' ಜಂಟಿ ಘೋಷಣೆಗೆ ಸಹಿ ಬಿದ್ದಿದೆ. ಈ ಕಾರಣದಿಂದ 2019ರ ಸೆಪ್ಟೆಂಬರ್ ನಿಂದ 2018 ಮತ್ತು ನಂತರದ ವರ್ಷಗಳಲ್ಲಿ ಸ್ವಿಜರ್ಲ್ಯಾಂಡ್ ನಲ್ಲಿ ಖಾತೆ ಹೊಂದಿರುವ ಭಾರತೀಯರ ಆರ್ಥಿಕ ಮಾಹಿತಿಗಳು ಸರಕಾರಕ್ಕೆ ಗೊತ್ತಾಗುತ್ತದೆ ಎಂದು ಆರ್ಥಿಕ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದೆ.[ಮೋದಿ ನಡೆಗೆ ಜೈ ಅಂದಿದ್ದಾರೆ ದೇಶದ ಶೇ 82ರಷ್ಟು ಜನ]

Black money

ಕಪ್ಪು ಹಣದ ಸವಾಲನ್ನು ಹೊಡೆದು ಹಾಕಬೇಕು ಅಂದರೆ ವಿದೇಶಗಳಲ್ಲಿರುವ ಭಾರತೀಯರ ಬ್ಯಾಂಕ್ ಖಾತೆಗಳ ವಿವರವೂ ಬಹಳ ಮುಖ್ಯವಾಗಿ ಬೇಕಾಗುತ್ತದೆ ಎಂದು ಹೇಳಲಾಗಿದೆ. ಕಳೆದ ಜೂನ್ ಆರರಂದು ಪ್ರಧಾನಿ ನರೇಂದ್ರ ಮೋಡಿ ಸ್ವಿಸ್ ಅಧ್ಯಕ್ಷರನ್ನು ಜಿನೀವಾದಲ್ಲಿ ಭೇಟಿ ಮಾಡಿದ್ದರು. ತೆರಿಗೆ ಕದಿಯುವವರ ಮಾಹಿತಿ ವಿನಿಮಯದ ವಿರುದ್ಧ ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದ್ದರು.[ಸಮೀಕ್ಷೆ ತೆರೆದಿಟ್ಟ ರಹಸ್ಯ: ನೋಟು ರದ್ದು ಬಗ್ಗೆ ಜನ ಏನಂತಾರೆ?]

ಆ ನಂತರ ಜೂನ್ 15ರಂದು ಕಂದಾಯ ಕಾರ್ಯದರ್ಶಿ ಹಸ್ಮುಖ್ ಅಧಿಯಾ ಹಾಗೂ ಸ್ವಿಜರ್ಲ್ಯಾಂಡ್ ನ ರಾಜ್ಯ ಕಾರ್ಯದರ್ಶಿ ಎರಡು ರಾಷ್ಟ್ರಗಳ ಮಧ್ಯೆ ಮಾಹಿತಿ ವಿನಿಮಯಕ್ಕೆ ಆರಂಭಿಕ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿದ್ದರು. 500, 1000 ನೋಟುಗಳ ರದ್ದು ಆದ ನಂತರ ವಿಪಕ್ಷಗಳು ವಿದೇಶದಲ್ಲಿರುವ ಕಪ್ಪು ಹಣದ ಬಗ್ಗೆ ಪ್ರಶ್ನೆ ಮಾಡುತ್ತಿದ್ದವು. ಇದೀಗ ಈ ಒಪ್ಪಂದ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ.

English summary
India will start getting financial information of accounts held by Indians in Swiss banks on automatic basis from September 2019, a move that will help fight the menace of black money stashed abroad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X