• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೇಟೆಂಟ್ ಬಿಡಲೊಲ್ಲದ ಸಿರಿವಂತ ದೇಶಗಳು; ಡಬ್ಲ್ಯೂಟಿಒದಲ್ಲಿ ಮುರಿದುಬಿದ್ದ ಭಾರತದ ಯತ್ನ

|
Google Oneindia Kannada News

ಜಿನೀವಾ, ಜೂನ್ 15: ಪ್ರತಿಯೊಂದು ದೇಶವೂ ಕೋವಿಡ್‌ನಂಥ ಸಾಂಕ್ರಾಮಿಕ ಪರಿಸ್ಥಿತಿಯನ್ನು ಎದುರಿಸಲು ಸೂಕ್ತ ಔಷಧ ವ್ಯವಸ್ಥೆ ಬಹಳ ಮುಖ್ಯ. ಇದು ಕೋವಿಡ್ ಕಾಲಘಟ್ಟದಲ್ಲಿ ಬಹಳ ಸ್ಪಷ್ಟವಾಗಿ ವೇದ್ಯವಾಗಿದೆ. ಹಲವು ಹಿಂದುಳಿದ ಮತ್ತು ಅಭಿವೃದ್ಧಿಶೀಲ ದೇಶಗಳು ಸಕಾಲಕ್ಕೆ ಔಷಧ ಮತ್ತಿತರ ಮೂಲಸೌಕರ್ಯಗಳ ವ್ಯವಸ್ಥೆ ಇಲ್ಲದೆ ಪರದಾಡಿವೆ. ಈಗಲೂ ಹಲವು ದೇಶಗಳಿಗೆ ಕೋವಿಡ್ ಲಸಿಕೆ ಸಿಕ್ಕಿಲ್ಲ. ಸಿರಿವಂತ ದೇಶಗಳಲ್ಲಿ ಲಸಿಕೆ ಕೊಳೆಯುತ್ತಾ ಇದ್ದರೂ ಬಡದೇಶಗಳಿಗೆ ಅವುಗಳನ್ನು ನೀಡಲಾಗುತ್ತಿಲ್ಲ. ಇಂಥ ಪರಿಸ್ಥಿತಿಯನ್ನು ಹೋಗಲಾಡಿಲು ಅನುವಾವಂತೆ ಡಬ್ಲ್ಯೂಟಿಒದಲ್ಲಿ ಪೇಟೆಂಟ್ ವಿನಾಯಿತಿ ನೀಡಬೇಕು ಎಂಬ ಅಭಿಪ್ರಾಯ ಇದೆ.

ಆದರೆ, ಸ್ವಿಟ್ಜರ್ಲ್ಯಾಂಡ್ ದೇಶದಲ್ಲಿ ನಡೆಯುತ್ತಿರುವ ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯೂಟಿಒ) ಸಭೆಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಮಂಡಿಸಿದ ಈ ಪ್ರಸ್ತಾವಕ್ಕೆ ಡಬ್ಲ್ಯೂಟಿಒದಲ್ಲಿ ಸಿರಿವಂತ ದೇಶಗಳು ಅಡ್ಡಗಾಲಾಗಿವೆ.

WTO ಸಭೆಯಲ್ಲಿ ಬಡವ, ದುರ್ಬಲರ ಪರ ದನಿಯೆತ್ತಿದ ಭಾರತWTO ಸಭೆಯಲ್ಲಿ ಬಡವ, ದುರ್ಬಲರ ಪರ ದನಿಯೆತ್ತಿದ ಭಾರತ

ಪೇಟೆಂಟ್ ವಿನಾಯಿತಿ ಯಾಕೆ?
ಪೇಟೆಂಟ್ ಇತ್ಯಾದಿ ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದಂತೆ ಡಬ್ಲ್ಯೂಟಿಒದಲ್ಲಿ ಟ್ರಿಪ್ಸ್ (TRIPS- Trade Related aspects of Intellectual Property Rights) ಒಪ್ಪಂದ ಇದೆ. ಇದು ಪೇಟೆಂಟ್ ಅನ್ನು ರಕ್ಷಿಸುವ ವ್ಯವಸ್ಥೆ. ಅಂದರೆ, ಒಂದು ಔಷಧಕ್ಕೆ ಪೇಟೆಂಟ್ ಹೊಂದಿರುವ ಸಂಸ್ಥೆ ಅಥವಾ ದೇಶದ ಅನುಮತಿ ಇಲ್ಲದೆ ಆ ಔಷಧವನ್ನು ಬೇರೆ ಯಾರೂ ಬಳಸುವಂತಿಲ್ಲ. ಆದರೆ, ಸಾಂಕ್ರಾಮಿಕ ರೋಗವನ್ನು ಎದುರಿಸಲು ಅಭಿವೃದ್ಧಿಶೀಲ ದೇಶಗಳಿಗೆ ಪೇಟೆಂಟ್‌ಗಳನ್ನು ಹಸ್ತಾಂತರಿಸಬೇಕು. ಈ ನಿಟ್ಟಿನಲ್ಲಿ ಟ್ರಿಪ್ಸ್ ಒಪ್ಪಂದಲ್ಲಿ ಬದಲಾವಣೆ ಮಾಡಬೇಕೆಂಬ ಕೂಗು ಇದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ಈ ಪ್ರಸ್ತಾವದ ಹಿಂದಿನ ರೂವಾರಿಗಳು. ೧೫೦ಕ್ಕೂ ಹೆಚ್ಚು ದೇಶಗಳು ಇದನ್ನು ಬೆಂಬಲಿಸಿವೆ. ಆದರೆ, ಕೆಲವೇ ದೇಶಗಳು ಅಡ್ಡಗಾಲಾಗಿವೆ. ಡಬ್ಲ್ಯೂಟಿಒ ಸಭೆ ಆಯೋಜಿಸಿರುವ ಸ್ವಿಟ್ಜರ್ಲ್ಯಾಂಡ್ ಮತ್ತು ಬ್ರಿಟನ್ ದೇಶಗಳು ಈ ಬಡದೇಶಗಳ ಬೇಡಿಕೆಯನ್ನು ತಿರಸ್ಕರಿಸಿವೆ. ಟ್ರಿಪ್ಸ್ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಮಾಡಲು ಈ ಎರಡು ದೇಶಗಳು ವಿರೋಧಿಸಿವೆ.

ಆಧುನೀಕರಣಕ್ಕೆ ಒತ್ತು, ಭಾರತೀಯ ರೈಲ್ವೆಯಿಂದ ಸ್ಟಾರ್ಟಪ್‌ಗಳ ಮೇಲೆ ವಾರ್ಷಿಕ 50 ಕೋಟಿ ಹೂಡಿಕೆಆಧುನೀಕರಣಕ್ಕೆ ಒತ್ತು, ಭಾರತೀಯ ರೈಲ್ವೆಯಿಂದ ಸ್ಟಾರ್ಟಪ್‌ಗಳ ಮೇಲೆ ವಾರ್ಷಿಕ 50 ಕೋಟಿ ಹೂಡಿಕೆ

ಭಾರತ ಕಿಡಿ:
"ಟ್ರಿಪ್ಸ್ ವಿನಾಯಿತಿ ವಿಚಾರದಲ್ಲಿ ನಾವು ಇನ್ನೇನು ಒಮ್ಮತ ತಲುಪುತ್ತೇವೆಂದುಕೊಂಡಿದ್ದೆವು. ಆದರೆ, ಸ್ವಾರ್ಥ ಶಕ್ತಿಗಳು ಅಡ್ಡಗಾಲಿಟ್ಟಿವೆ. ಕೆಲ ದೇಶಗಳಿಗೆ ನಿಮ್ಮ ಮಾರುಕಟ್ಟೆಯಲ್ಲಿ ಅವಕಾಶ ಬೇಕು, ಆದರೆ, ಪೇಟೆಂಟ್ ಮತ್ತು ಜ್ಞಾನವನ್ನು ಹಂಚಿಕೊಳ್ಳುವುದು ಬೇಡ. ಅವರಿಗೆ ಲಾಭ ಮಾಡುವುದಷ್ಟೇ ಉದ್ದೇಶ" ಎಂದು ಕೇಂದ್ರ ಸಚಿವ ಪೀಯುಶ್ ಗೋಯಲ್ ನಿನ್ನೆ ಮಂಗಳವಾರ ಡಬ್ಲ್ಯೂಟಿಒ ಸಭೆಯಲ್ಲೇ ಕಿಡಿಕಾರಿದ್ದರೆಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿತ್ತು.

Switzerland and UK Oppose Patent Waiver Proposal from India at WTO

"ನೀವು ಭವಿಷ್ಯದ ಅಗತ್ಯತೆಗಳನ್ನು ನೋಡಲು ಸಾಧ್ಯವಾಗುವುದಿಲ್ಲವೆಂದಾದಲ್ಲಿ ನಿಮಗೆ ಸಾವಿರಾರು ಜನರ ಜೀವ ರಕ್ಷಣೆಗಿಂತ ಕೆಲವೇ ಔಷಧ ಕಂಪನಿಗಳಿಗೆ ಲಾಭ ಮಾಡಿಕೊಡುವುದೇ ಹೆಚ್ಚಾಗಿ ಹೋಯಿತು" ಎಂದು ಗೋಯಲ್ ಸಿಡಿಗುಟ್ಟಿದ್ದರು.

ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಉದ್ಭವವಾಗಿರುವ ಕಳೆದ ಎರಡು ವರ್ಷಗಳಲ್ಲಿ ಹಲವು ದೇಶಗಳು ಸರಿಯಾದ ಔಷಧ ಮತ್ತು ಲಸಿಕೆಗಳಿಲ್ಲದೇ ಪರದಾಡಿರುವುದು ನಮ್ಮ ಕಣ್ಮುಂದೆ ಇದೆ. ಭಾರತ ದೇಶವೇ ಹಲವು ದೇಶಗಳಿಗೆ ಲಸಿಕೆ ಸರಬರಾಜು ಮಾಡಿದೆ. ಅಮೆರಿಕ, ಬ್ರಿಟನ್‌ನಲ್ಲಿರುವ ಕೆಲ ಫಾರ್ಮಾ ಕಂಪನಿಗಳು ಲಾಭವಿಲ್ಲದೇ ಔಷಧ ಸರಬರಾಜು ಮಾಡಲು ನಿರಾಕರಿಸಿವೆ. ದುಬಾರಿ ಬೆಲೆಯ ಲಸಿಕೆಗಳನ್ನು ಕೊಳ್ಳಲು ಬಡದೇಶಗಳಿಂದ ಅಸಾಧ್ಯ. ಈ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯೂ ಏನೂ ಮಾಡಲಾಗದ ಸ್ಥಿತಿ ಇದೆ. ಹೀಗಾಗಿ, ಭಾರತ ಮತ್ತು ಸೌತ್ ಆಫ್ರಿಕಾ ದೇಶಗಳು ಈ ಬಗ್ಗೆ ಒಂದಷ್ಟು ಬದಲಾವಣೆ ತರಲು ಪ್ರಯತ್ನಿಸಿದ್ದು, ಅದರ ಭಾಗವಾಗಿ ಡಬ್ಲ್ಯೂಟಿಒದಲ್ಲಿನ ಟ್ರಿಪ್ಸ್ ಒಪ್ಪಂದದಲ್ಲಿ ಪೇಟೆಂಟ್ ವಿನಾಯಿತಿ ಅಂಶ ಸೇರಿಸಬೇಕೆಂದು ಪ್ರಸ್ತಾಪ ಮಂಡಿಸಿದ್ದವು. ಇದಕ್ಕೆ ಈಗ ಇಂಗ್ಲೆಂಡ್ ಮತ್ತು ಸ್ವಿಟ್ಜರ್ಲ್ಯಾಂಡ್ ದೇಶಗಳು ಅಡ್ಡಿಯಾಗಿ ನಿಂತಿವೆ. ಹಲವು ಫಾರ್ಮಾ ಕಂಪನಿಗಳು ಈ ದೇಶಗಳಲ್ಲಿ ಇವೆ. ಅವುಗಳ ಲಾಬಿಯಿಂದಾಗಿ ಭಾರತದ ಪ್ರಸ್ತಾವಕ್ಕೆ ಒಪ್ಪಿಗೆ ಸಿಕ್ಕಿ ಎನ್ನಲಾಗುತ್ತಿದೆ.

Recommended Video

   South Africa ವಿರುದ್ಧ ಗೆದ್ಮೇಲೆ Rishab Pant ಹೊಗಳಿಕೆ‌ ಸಿಕ್ಕಿದ್ದು ಯಾರಿಗೆ? | Oneindia Kannada

   (ಒನ್ಇಂಡಿಯಾ ಸುದ್ದಿ)

   English summary
   Developed nations UK and Switzerland is said to have not agreed to the proposal of waiving patent rights to developing nations during pandemic. India and South Africa had made this propoal at WTO.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X