ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಸ್ವೀಡನ್‌ನ ಪ್ರಧಾನಿಯಾದ ತಕ್ಷಣವೇ ಮ್ಯಾಗ್ಡಲೀನಾ ರಾಜೀನಾಮೆ

|
Google Oneindia Kannada News

ಸ್ವೀಡನ್‌ನ ಹೊಸದಾಗಿ ಚುನಾಯಿತ ಪ್ರಧಾನಿ ಮ್ಯಾಗ್ಡಲೀನಾ ಆಂಡರ್ಸನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬುಧವಾರದಂದು ಮತ ಚಲಾಯಿಸಿ, ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳ ನಂತರ ಕೆಳಗಿಳಿದರು.

ಸಮ್ಮಿಶ್ರ ಸರ್ಕಾರವನ್ನು ತೊರೆಯುವುದಾಗಿ ಗ್ರೀನ್ ಪಾರ್ಟಿ ಘೋಷಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ವಿರೋಧ ಪಕ್ಷಗಳು ಪ್ರಸ್ತಾಪಿಸಿದ ಖರ್ಚು ಯೋಜನೆಗಳನ್ನು ದೇಶದ ಸಂಸತ್ತು ತಿರಸ್ಕರಿಸಿದ ಬಳಿಕ ಗ್ರೀನ್ ಪಾರ್ಟಿ ಸರ್ಕಾರವನ್ನು ತೊರೆಯಲು ನಿರ್ಧರಿಸಿದೆ. ದೇಶದಲ್ಲಿ ಹೊಸ ಆಡಳಿತಕ್ಕೆ ಬಿಕ್ಕಟ್ಟು ಉಂಟಾಗಿದೆ.

ಮೊದಲ ಮಹಿಳಾ ಪ್ರಧಾನಿ:
"ನಾನು ರಾಜೀನಾಮೆ ನೀಡಲು ಬಯಸುತ್ತೇನೆ ಎಂದು ನಾನು ಸ್ಪೀಕರ್‌ಗೆ ಹೇಳಿದ್ದೇನೆ" ಎಂದು ಎಂಎಸ್ ಆಂಡರ್ಸನ್ ಸುದ್ದಿಗಾರರಿಗೆ ತಿಳಿಸಿದರು.

ಒಂದೇ ಪಕ್ಷದಿಂದ ಬಹುಮತ ಗಳಿಸಿ ಅಧಿಕಾರ ಗದ್ದುಗೆಗೇರಿ ಆ ಸರ್ಕಾರದ ನಾಯಕಿಯಾಗಿ ಮತ್ತೊಮ್ಮೆ ಪ್ರಧಾನಿಯಾಗಲು ಪ್ರಯತ್ನಿಸುವ ಭರವಸೆ ಇದೆ ಎಂದು ಆಂಡರ್ಸನ್ ಹೇಳಿದರು.

Swedens Prime Minister Magdalena Andersson has stepped down hours after being voted in

"ಒಂದು ಪಕ್ಷ ತೊರೆದಾಗ ಸಮ್ಮಿಶ್ರ ಸರ್ಕಾರ ರಾಜೀನಾಮೆ ನೀಡಬೇಕು ಎಂಬ ಸಾಂವಿಧಾನಿಕ ಅಭ್ಯಾಸವಿದೆ" ಎಂದು ಸೋಶಿಯಲ್ ಡೆಮಾಕ್ರಟ್ ಬುಧವಾರ ಹೇಳಿದರು. "ನ್ಯಾಯಸಮ್ಮತತೆಯನ್ನು ಪ್ರಶ್ನಿಸುವ ಸರ್ಕಾರವನ್ನು ಮುನ್ನಡೆಸಲು ನಾನು ಬಯಸುವುದಿಲ್ಲ.

ರಾಜೀನಾಮೆಗೂ ಕೆಲ ಗಂಟೆಗಳಿಗೂ ಮುನ್ನ ಆಂಡರ್ಸನ್ ಅವರು ಬುಧವಾರದಂದು ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ಸ್ವೀಡಿಷ್ ಕಾನೂನಿನ ಅಡಿಯಲ್ಲಿ, ಅವರ ವಿರುದ್ಧ ಮತ ಚಲಾಯಿಸದಿರಲು ಅವರಿಗೆ ಬಹುಮತದ ಸಂಸದರ ಅಗತ್ಯವಿತ್ತು.

ಸ್ವೀಡಿಷ್ ಮಹಿಳೆಯರಿಗೆ ಮತಹಕ್ಕು ನೀಡಿದ ನೂರು ವರ್ಷಗಳ ನಂತರ, 54 ವರ್ಷ ವಯಸ್ಸಿನ ಸೋಶಿಯಲ್ ಡೆಮಾಕ್ರಟ್ ಅಧಿನಾಯಕಿಗೆ ಸಂಸತ್ತಿನ ವಿಭಾಗಗಳು ಅಥವಾ ರಿಕ್ಸ್‌ಡಾಗ್‌ನಲ್ಲಿ ಎಲ್ಲರೂ ಎದ್ದು ನಿಂತು ಚಪ್ಪಾಳೆ ಹೊಡೆದು ಸ್ವಾಗತಿಸಿದರು.

ಅಲ್ಪಸಂಖ್ಯಾತ ಸರ್ಕಾರದ ನೇತೃತ್ವ ವಹಿಸಿದ್ದ ಆಕೆಯ ಆಯ್ಕೆಯು ಕೊನೆ ಅವಧಿಯಲ್ಲಿ ವಿರೋಧ ಪಕ್ಷವಾದ ಎಡ ಪಕ್ಷದೊಂದಿಗೆ ಮಾಡಿಕೊಂಡ ಮೈತ್ರಿಯಿಂದ ಸಾಧ್ಯವಾಗಿತ್ತು. ಮೈತ್ರಿಯೊಂದಿಗೆ ಗ್ರೀನ್ಸ್ ಮತ್ತು ಸೆಂಟರ್ ಪಕ್ಷ ಅಧಿಕಾರಕ್ಕೇರಲು ಸಾಧ್ಯವಾಗಿತ್ತು.

ಸಂಸತ್ (ರಿಕ್ಸ್‌ಡಾಗ್‌ನ)ನ 349 ಸದಸ್ಯರಲ್ಲಿ 174 ಜನರು ಆಂಡರ್ಸನ್ ವಿರುದ್ಧ ಮತ ಚಲಾಯಿಸಿದರು. ಆದರೆ ಆಂಡರ್ಸನ್‌ಗೆ ಬೆಂಬಲ ನೀಡಿದ 117 ಸಂಸದರ ಮತ, ಇನ್ನೂ 57 ಮಂದಿ ಗೈರುಹಾಜರಾದವರ ಲೆಕ್ಕ ತಾಳೆ ಹಾಕಿದ ಬಳಿಕ ಅಂತಿಮವಾಗಿ ಒಂದೇ ಒಂದು ಮತದಿಂದ ರೋಚಕ ಜಯ ದಾಖಲಿಸಿದ್ದರು.

ವಿಶ್ವವಿದ್ಯಾನಿಲಯದ ನಗರವಾದ ಉಪ್ಸಲಾ ಮೂಲದವರಾದ ಆಂಡರ್ಸನ್ ಅವರು ಜೂನಿಯರ್ ಈಜು ಚಾಂಪಿಯನ್ ಆಗಿದ್ದವರು. 1996 ರಲ್ಲಿ ಆಗಿನ ಪ್ರಧಾನ ಮಂತ್ರಿ ಗೋರಾನ್ ಪರ್ಸನ್ ಅವರ ರಾಜಕೀಯ ಸಲಹೆಗಾರರಾಗಿ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಕಳೆದ ಏಳು ವರ್ಷಗಳಿಂದ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಮ್ಯಾಗ್ಡಲೀನಾ ಆಂಡರ್ಸನ್ ಅವರನ್ನು ಸಂಸದರು ಬೆಂಬಲಿಸಿ, ಪ್ರಧಾನಿ ಪಟ್ಟಕ್ಕೇರುವಂತೆ ಮಾಡುವ ಮೊದಲು,ನಾರ್ಡಿಕ್ ರಾಜ್ಯಗಳ ಪೈಕಿ ಸ್ವೀಡನ್ ಮಾತ್ರ ಮಹಿಳೆಯನ್ನು ಪ್ರಧಾನಿಯಾಗಿ ಹೊಂದಿಲ್ಲದ ದೇಶವಾಗಿತ್ತು.(Reuters, AP)

English summary
Rejected budget plans have spelled disaster for Sweden’s government, resulting in the resignation of the newly elected prime minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X