• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ವೀಡನ್ ನಲ್ಲಿ ಕಸಕ್ಕೆ ಬೇಡಿಕೆ, ಬೇರೆ ದೇಶದಿಂದಲೂ ಆಗತ್ತೆ ಆಮದು

|

ಲಂಡನ್, ಡಿಸೆಂಬರ್ 12: ಸ್ವೀಡನ್ ನಲ್ಲೀಗ ಕಸದ ಸಮಸ್ಯೆಯೇ ಇಲ್ಲ. ಮತ್ತು ಹೊರದೇಶಗಳಿಂದ ತ್ಯಾಜ್ಯವನ್ನು ಆಮದು ಮಾಡಿಕೊಳ್ಳುವಂಥ ಸ್ಥಿತಿ ಇದೆ. ಇದೇನ್ರೀ ವಿಚಿತ್ರ ಅಂತೀರಾ? ನಮ್ಮ ಬೆಂಗಳೂರು ಸೇರಿದ ಹಾಗೆ ಸುತ್ತಮುತ್ತಲ ಜಿಲ್ಲೆ, ನಗರಗಳಲ್ಲಿ ಕಸವೇ ದೊಡ್ಡ ತಲೆನೋವಾಗಿದೆ. ಆದರೆ ಸ್ವೀಡನ್ ನ ವಿದ್ಯುತ್ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಆಗೋದು ಇಂಥ ರೀಸೈಕಲ್ ಆದ ವಸ್ತುಗಳಿಂದಲೇ.

ಸ್ವೀಡನ್ ನ ಒಟ್ಟಾರೆ ವಿದ್ಯುತ್ ಉತ್ಪಾದನೆಯ ಅರ್ಧದಷ್ಟು ಪ್ರಮಾಣ ನವೀಕರಿಸಬಹುದಾದ ವಸ್ತುಗಳಿಂದಲೇ ಆಗುತ್ತದೆ. 1991ರಲ್ಲೇ ಇಂಧನಗಳ ಬಳಕೆ ಮೇಲೆ ಹೆಚ್ಚು ತೆರಿಗೆ ಹಾಕಲು ಆರಂಭಿಸಿದ ಮೊದಲ ದೇಶ ಸ್ವೀಡನ್. ಅಲ್ಲಿನ ನವೀಕರಣ ವಿಧಾನ ತುಂಬಾ ಆಧುನಿಕವಾಗಿದೆ. ಅಲ್ಲಿನ ಗೃಹಬಳಕೆ ತ್ಯಾಜ್ಯಗಳ ಪೈಕಿ ಶೇ 1ಕ್ಕಿಂತ ಕಡಿಮೆ ಪ್ರಮಾಣದ ತ್ಯಾಜ್ಯವನ್ನು ಮಾತ್ರ ಕಳೆದ ವರ್ಷ ನೆಲದಲ್ಲಿ ಹೂಳಲಾಗಿದೆ.

ಸ್ವೀಡಿಷ್ ಜನರಿಗೆ ಪರಿಸರದ ಪ್ರಾಮುಖ್ಯ ಗೊತ್ತಿದೆ. ಪರಿಸರ ಮತ್ತು ಪ್ರಾಕೃತಿಕ ಸಮಸ್ಯೆಗಳಿಗೆ ಹೇಗೆ ಪರಿಹಾರ ಕಂಡುಕೊಂಡಿದ್ದಾರೆ. ನಾವು ಜನರಲ್ಲಿ ಜಾಗೃತಿ ಮೂಡಿಸುವುದಕ್ಕೆ ತುಂಬ ಸಮಯದಿಂದ ಶ್ರಮ ಪಟ್ಟಿದ್ದೀವಿ. ಯಾವುದನ್ನು ಪುನರ್ ಬಳಕೆ ಮಾಡಬಹುದೋ, ನವೀಕರಿಸಬಹುದೋ ಅಂಥವನ್ನು ಮನೆ ಹೊರಗೆ ಎಸೆಯದಿರುವಂತೆ ತಡೆಯಲು ಸಫಲರಾಗಿದ್ದೀವಿ ಎನ್ನುತ್ತಾರೆ ಅಲ್ಲಿನ ಅಧಿಕಾರಿಯೊಬ್ಬರು.

ಸ್ವೀಡನ್ ನಲ್ಲಿ ರಾಷ್ಟ್ರೀಯ ನವೀಕರಣ ಯೋಜನೆಯೇ ಇದೆ. ಅಲ್ಲಿನ ಖಾಸಗಿ ಕಂಪನಿಗಳು ತ್ಯಾಜ್ಯವನ್ನು ಸುಡುವ ಕೆಲಸಕ್ಕಾಗಿ ಮತ್ತು ಬಳಕೆಗಾಗಿ ತ್ಯಾಜ್ಯವನ್ನು ಆಮದು ಮಾಡಿಕೊಳ್ಳುತ್ತವೆ. ಚಳಿಗಾಲದಲ್ಲಿ ಮನೆಗಳಲ್ಲಿ ಮೈ ಕಾಯಿಸಿಕೊಳ್ಳುವುದಕ್ಕೂ ಬಳಕೆಯಾಗುವುದು ಇದೇ ತ್ಯಾಜ್ಯದ ಬೆಂಕಿಯೇ. ಸದ್ಯಕ್ಕೆ ಯುನೈಟೆಡ್ ಕಿಂಗ್ ಡಮ್ ನಿಂದ ತಾತ್ಕಾಲಿಕವಾಗಿ ತ್ಯಾಜ್ಯವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.

ಯುರೋಪಿಯನ್ ದೇಶಗಳಲ್ಲಿ ತ್ಯಾಜ್ಯವನ್ನು ಹೂಳುವುದು ನಿಷೇಧಿಸಲಾಗಿದೆ. ದೊಡ್ಡ ಮಟ್ಟದ ದಂಡ ಕಟ್ಟುವುದಕ್ಕಿಂತ ನಮಗೆ ಸಹಾಯ ಅನ್ನೋ ಹಾಗೆ ಕಳಿಸ್ತಿದ್ದಾರೆ. ಆಯಾ ದೇಶದ ತ್ಯಾಜ್ಯವನ್ನು ಕಡಿಮೆ ಮಾಡುವುದಕ್ಕೆ, ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುವುದಕ್ಕೆ ಆಯಾ ದೇಶದಲ್ಲೇ ಘಟಕ ಮಾಡಿಕೊಳ್ಳಬೇಕು. ನಾವು ಸ್ವೀಡನ್ ನಲ್ಲಿ ಅದಕ್ಕಾಗಿ ಶ್ರಮಿಸುತ್ತಿದ್ದೇವೆ ಎಂದು ಅಲ್ಲಿನ ಅಧಿಕಾರಿಗಳು ಹೇಳುತ್ತಾರೆ.

ಭವಿಷ್ಯದಲ್ಲಿ ಅಳವಡಿಸಿಕೊಳ್ಳಬೇಕಾದ ತ್ಯಾಜ್ಯ ನಿರ್ವಹಣೆ ವಿಧಾನಗಳ ಬಗ್ಗೆ ಸ್ವಿಡನ್ ನಲ್ಲಿ ಚಿಂತನೆ ನಡೆದಿದೆ. ವಸತಿ ಪ್ರದೇಶಗಳಲ್ಲಿ ಆಟೋಮೆಟೆಡ್ ವ್ಯಾಕ್ಯೂಮ್ ವ್ಯವಸ್ಥೆ, ತ್ಯಾಜ್ಯ ಸಂಗ್ರಹಕ್ಕಾಗಿಯೇ ವಾಹನಗಳ ಅಗತ್ಯ ಇಲ್ಲದಂತೆ ನೋಡಿಕೊಳ್ಳೋದು, ನೆಲದ ಅಡಿಯಲ್ಲಿ ಕಸದ ಕಂಟೇನರ್ ಗಳನ್ನು ಅಳವಡಿಸುವುದು, ಆ ಮೂಲಕ ರಸ್ತೆಯಲ್ಲಿ ಸ್ಥಳ ಇರುವಂತೆ ಮಾಡುವುದು ಜೊತೆಗೆ ದುರ್ನಾತ ಬರದಂತೆ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sweden has run out of garbage and the Scandinavian country has been forced to import rubbish from other countries to keep its state-of-the-art recycling plants going. Sweden, which sources almost half its electricity from renewables.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more