ಮೋದಿ ಸಾಹಸ: ಪಾಕಿಸ್ತಾನಕ್ಕೆ ಹೊರಟ ಪ್ರಧಾನಿ

Subscribe to Oneindia Kannada

ನವದೆಹಲಿ, ಡಿಸೆಂಬರ್, 25: ಅಟಲ್ ಬಿಹಾರಿ ವಾಜಪೇಯಿ ಅವರ ಶಾಂತಿ ಮಂತ್ರದ ಕನಸನ್ನು ನನಸು ಮಾಡಲು ಪ್ರಧಾನಿ ನರೇಂದ್ರ ಮೋದಿ ಸಾಹಸಕ್ಕೆ ಕೈ ಹಾಕಿದ್ದಾರೆ. ಮೋದಿ ಪ್ರವಾಸದಲ್ಲಿ ಮಹತ್ತರ ಬದಲಾವಣೆ ಮಾಡಿಕೊಳ್ಳಲಾಗಿದ್ದು ಅಪಘಾನಿಸ್ತಾನದಿಂದ ಪ್ರಧಾನಿ ಲಾಹೋರ್ ಗೆ ಭೇಟಿ ನೀಡಲಿದ್ದಾರೆ.

ಈ ಬಗ್ಗೆ ಸ್ವತಃ ಮೋದಿ ಅವರೇ ಟ್ವೀಟ್ ಮಾಡಿದ್ದು, ನವಾಜ್ ಷರಿಫ್ ಅವರಿಗೆ ಜನ್ಮದಿನದ ಶುಭಾಶಯ ತಿಳಿಸಲು ತೆರಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ಭಾರತ ಸರ್ಕಾರದಿಂದ ನಿರ್ಮಾಣಗೊಂಡಿದ್ದ ನೂತನ ಪಾರ್ಲಿಮೆಂಟ್ ಅನ್ನು ಉದ್ಘಾಟಿಸಿದ್ದರು.[ವಾಜಪೇಯಿಗೆ ಜನ್ಮದಿನದ ಶುಭಾಶಯ ಕೋರಿದ ಮೋದಿ]

ಮುಖ್ಯವಾದ ಅಂಶವೆಂಬಂತೆ ಇಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಹುಟ್ಟುಹಬ್ಬ ಎಂಬುದನ್ನು ತಿಳಿದ ಪ್ರಧಾನಿ ನರೇಂದ್ರ ಮೋದಿ ಕಾಬೂಲ್ ನಿಂದ ಲಾಹೋರ್ ಗೆ ಬಂದು ಪಾಕ್ ಪ್ರಧಾನಿ ಷರೀಫ್ ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲಿದ್ದಾರೆ.

modi

ಎರಡು ದಿನಗಳ ರಷ್ಯಾ ಭೇಟಿಯ ಬಳಿಕ ಶುಕ್ರವಾರ ನಸುಕಿನಲ್ಲಿ ಆಫ್ಘಾನಿಸ್ತಾನಕ್ಕೆ ಭೇಟಿ ನೀಡಿದ್ದ ಮೋದಿ, ಅಲ್ಲಿಂದ ಭಾರತಕ್ಕೆ ಮರಳುವ ಮಧ್ಯೆಯೇ ಪಾಕ್‌ ಪ್ರಯಾಣದ ಕುರಿತು ಬಹಿರಂಗ ಪಡಿಸಿದ್ದಾರೆ. ಡಿಸೆಂಬರ್ ತಿಂಗಳ ಆರಂಭದಲ್ಲಿ ಬ್ಯಾಂಕಾಕ್‌ನಲ್ಲಿ ಇಂಡೋ-ಪಾಕ್‌ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಾತುಕತೆಯ ಬಳಿಕ ಉಭಯ ರಾಷ್ಟ್ರಗಳ ನಡುವಣ ಸಂಬಂಧದಲ್ಲಿ ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಬಹುದು.

ಆದರೆ ಕಾಂಗ್ರೆಸ್ ಮೋದಿ ಭೇಟಿಯನ್ನು ಟೀಕೆ ಮಾಡಿದೆ. ಶಿವಸೇನೆ ಫೋಟೊಕ್ಕೆ ಫೋಸ್ ಕೊಡಲು ಪ್ರಧಾನಿ ತೆರಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a surprise and unplanned meet, Prime Minister Narendra Modi is set to meet his Pakistani counterpart Nawaz Sharif today. He will meet Sharif in Lahore on his way back to New Delhi. Now in Kabul, Modi tweeted that he spoke to Sharif over telephone and wished him on his birthday. The relations between India and Pakistan have witnessed some positive developments after chill for several months.
Please Wait while comments are loading...