• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಮ್ಮ ಸೂರ್ಯನ ಒಡ ಹುಟ್ಟಿದ 'ಸ್ಟಾರ್' ಪತ್ತೆ

By Mahesh
|
Google Oneindia Kannada News

ವಾಷಿಂಗ್ಟನ್, ಮೇ 10: ಸೂರ್ಯನ ಮೊದಲ 'ಸಹೋದರ/ರಿ' ಟೆಕ್ಸಾಸ್ ವಿವಿಯ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಈ ಬೃಹತ್ ನೂತನ ನಕ್ಷತ್ರ ನಮ್ಮ ಸೂರ್ಯ ಹುಟ್ಟಿದ ಅದೇ ಅನಿಲ ಮತ್ತು ಧೂಳಿನ ರಾಶಿಯಿಂದ ಹುಟ್ಟಿಕೊಂಡಿದೆ. ಎಚ್ ‌ಡಿ162826 ಎಂದು ಕರೆಯಲ್ಪಡುವ ಸೂರ್ಯನ ಸಹೋದರ ಸೂರ್ಯನಿಗಿಂತ 15 ಶೇ. ಹೆಚ್ಚು ದ್ರವ್ಯರಾಶಿಯನ್ನು ಹೊಂದಿದೆ ಹಾಗೂ 110 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ 'ಹರ್ಕ್ಯುಲಸ್' ಎಂಬ ತಾರಾಪುಂಜದಲ್ಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಆಸ್ಟಿನ್ ‌ನಲ್ಲಿರುವ ಟೆಕ್ಸಾಸ್ ವಿವಿಯ ಐವಾನ್ ರಾಮಿರೇಜ್ ನೇತೃತ್ವದ ಸಂಶೋಧನಾ ತಂಡ ನಡೆಸಿದ ಶೋಧವು ಸೂರ್ಯನ ಇನ್ನಷ್ಟು ಸಹೋದರರನ್ನು ಪತ್ತೆ ಹಚ್ಚಲು ಖಗೋಳ ವಿಜ್ಞಾನಿಗಳಿಗೆ ನೆರವು ನೀಡಬಹುದಾಗಿದೆ. ಅದೇ ವೇಳೆ, ನಮ್ಮ ಸೂರ್ಯ ಎಲ್ಲಿ ಮತ್ತು ಹೇಗೆ ರೂಪುಗೊಂಡಿತು ಹಾಗೂ ನಮ್ಮ ಸೌರಮಂಡಲ ಹೇಗೆ ಜೀವಿಗಳ ವಾಸಕ್ಕೆ ಯೋಗ್ಯವಾಯಿತು ಎಂಬುದನ್ನೂ ಈ ಹೊಸ ಸಂಶೋಧನೆ ವಿವರಿಸಬಹುದಾಗಿದೆ.

'ನಾವು ಎಲ್ಲಿ ಹುಟ್ಟಿದೆವು, ಯಾವ ತಾರಾಪುಂಜ ಉಗಮ ಕಾಲದಲ್ಲಿ ಆಶ್ರಯ ನೀಡಿತು ಎಂಬುದನ್ನು ತಿಳಿದುಕೊಳ್ಳಲು ನಾವು ಬಯಸಿದ್ದೇವೆ' 'ಆಕಾಶಗಂಗೆಯ ಯಾವ ಭಾಗದಲ್ಲಿ ಸೂರ್ಯ ರೂಪುಗೊಂಡಿತು ಎಂಬುದನ್ನು ತಿಳಿಯಲು ನಮಗೆ ಸಾಧ್ಯವಾದರೆ ಆದಿ ಸೌರ ಮಂಡಲದಲ್ಲಿ ನೆಲೆಸಿದ್ದ ಪರಿಸ್ಥಿತಿಯನ್ನು ತಿಳಿಯಬಹುದಾಗಿದೆ. ಇಲ್ಲಿ ಯಾಕೆ ನಾವಿದ್ದೇವೆ ಎನ್ನುವುದನ್ನು ತಿಳಿಸಬಹುದಾಗಿದೆ' ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಅದೂ ಅಲ್ಲದೆ, ಈ ಸೌರ ಸಹೋದರ ನಕ್ಷತ್ರಗಳು ಜೀವಿಗಳಿಗೆ ಆಶ್ರಯ ನೀಡಿರುವ ಗ್ರಹಗಳನ್ನೂ ಹೊಂದಿರಬಹುದಾಗಿದೆ. ಆದರೆ, ಈ ಬಗ್ಗೆ ಖಚಿತವಾಗಿ ಹೇಳಲಾಗದು. ಆದರೆ, ಅನ್ಯಗ್ರಹ ಜೀವಿಗಳ ಪತ್ತೆಗೆ ಈ ಹೊಸ ಸಂಶೋಧನ ಸಹಾಯಕ. ಈ ನಕ್ಷತ್ರಗಳ ಆರಂಭಿಕ ದಿನಗಳಲ್ಲಿ ಅವುಗಳ ಜನ್ಮ ವ್ಯಾಪ್ತಿಯಲ್ಲೇ ಢಿಕ್ಕಿಗಳು ಸಂಭವಿಸಿರಬಹುದು ಹಾಗೂ ಗ್ರಹಗಳಿಂದ ತುಂಡುಗಳು ಪ್ರತ್ಯೇಕಗೊಂಡಿರಬಹುದು ಹಾಗೂ ಇವೇ ತುಂಡುಗಳು ನಮ್ಮ ಸೌರವ್ಯೆಹದಲ್ಲಿ ಚಲಿಸಿ ಭೂಮಿಗೆ ಆದಿ ರೂಪದ ಜೀವವನ್ನು ತಂದಿರಬಹುದಾಗಿದೆ ಎನ್ನಲಾಗಿದೆ. [ಭೂಮಿಯಲ್ಲಿ ಜೀವ ಉಗಮ ಹೇಗಾಯ್ತು?]

ಎಚ್ ಡಿ 16826 ಅಲ್ಲದೆ ಇನ್ನೂ 30 ಕ್ಕೂ ಅಧಿಕ ನಕ್ಷತ್ರಗಳನ್ನು ನಮ್ಮ ಸೂರ್ಯನ ಜತೆ ಹೋಲಿಸಲಾಗಿದೆ. ಅದರೆ, ಯಾವುದೂ ಕೂಡಾ ಚಲನೆಯಲ್ಲಿ ರಾಸಾಯನಿಕ ಮಿಶ್ರಣದಲ್ಲಿ ನಮ್ಮ ಸೂರ್ಯನನ್ನು ಹೋಲುತ್ತಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.(ಐಎಎನ್ಎಸ್)

English summary
Did you know that our sun has a sister that lives in a constellation more than 100 light years away from us? A team of researchers led by astronomer Ivan Ramirez of the University of Texas - Austin has identified the first "sibling" of the sun - a star almost certainly born from the same cloud of gas and dust
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X