ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಓಡಿಹೋಗಿದ್ದೇನೆ ಎಂದು ಸಾಧಿಸಲು ಬಿಜೆಪಿ ಯತ್ನ: ಮಲ್ಯ

By ಅನಿಲ್ ಆಚಾರ್
|
Google Oneindia Kannada News

ಲಂಡನ್, ಮಾರ್ಚ್ 31: ದೇಶ ಬಿಟ್ಟು ಓಡಿಹೋಗಿರುವ ಉದ್ಯಮಿ ವಿಜಯ್ ಮಲ್ಯ ಬ್ಯಾಂಕ್ ಗಳಿಗೆ ಎಷ್ಟು ಬಾಕಿ ನೀಡಬೇಕಿತ್ತೋ ಅದಕ್ಕಿಂತ ಹೆಚ್ಚು ವಸೂಲಿ ಮಾಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂದರ್ಶನವೊಂದರಲ್ಲಿ ಹೇಳಿದ್ದನ್ನು ಮಲ್ಯ ಉದಾಹರಿಸಿದ್ದಾರೆ. ಯುಕೆ ಕೋರ್ಟ್ ನಲ್ಲಿ ವಿಜಯ್ ಮಲ್ಯ ವಿಚಾರಣೆ ಎದುರಿಸುತ್ತಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಟ್ವಿಟ್ಟರ್ ನಲ್ಲಿ ಈ ವಿಷಯ ಬರೆದುಕೊಂಡಿದ್ದು, ನನ್ನ ಬಗ್ಗೆ ಪ್ರಧಾನಿಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿರುವುದನ್ನು ಗಮನಕ್ಕೆ ತರಲು ಇಚ್ಛಿಸುತ್ತೇನೆ. ನಾನು ಬ್ಯಾಂಕ್ ಗಳಿಗೆ ಬಾಕಿ ನೀಡಬೇಕಾಗಿರುವ ಸಾಲಕ್ಕಿಂತ ಹೆಚ್ಚು ವಸೂಲಿ ಮಾಡಿದ್ದಾಗಿ ಹೇಳಿದ್ದಾರೆ. ವಾಸ್ತವ ಏನೆಂದರೆ, ಯುಕೆ ನಾಗರಿಕನಾಗಿ 1992ರಿಂದ ಇರುವುದನ್ನು ನಿರ್ಲಕ್ಷಿಸಲಾಗುತ್ತದೆ. ಅದು ಕೂಡ ನಾನು ಓಡಿಹೋದೆ ಎಂದು ಬಿಜೆಪಿಯವರು ದೂರುವ ಸಲುವಾಗಿ ಎಂದು ಮಲ್ಯ ಹೇಳಿದ್ದಾರೆ.

ವಿಜಯ್ ಮಲ್ಯಗೆ ಸೇರಿದ ಷೇರು ಮಾರಾಟದಿಂದ 1008 ಕೋಟಿ ವಸೂಲಿ ವಿಜಯ್ ಮಲ್ಯಗೆ ಸೇರಿದ ಷೇರು ಮಾರಾಟದಿಂದ 1008 ಕೋಟಿ ವಸೂಲಿ

ಖಾಸಗಿ ಸುದ್ದಿ ವಾಹಿನಿ ಜತೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ವಿಜಯ್ ಮಲ್ಯ ಹಸ್ತಾಂತರ ಪ್ರಕ್ರಿಯೆ ಕೊನೆ ಹಂತದಲ್ಲಿದ್ದು, ಈ ಬಗ್ಗೆ ಸಮಾಧಾನ ಇದೆ. ಸರಕಾರ ಈಗಾಗಲೇ ಅವರಿಂದ ಹಣ ವಸೂಲಿ ಮಾಡಿದೆ ಎಂದಿದ್ದರು.

Suits the BJP to say I ran away, said Vijay Mallya

ಆರ್ಥಿಕ ಅಪರಾಧ ಮಾಡಿದವರ ಆಸ್ತಿ ಜಗತ್ತಿನಲ್ಲಿ ಎಲ್ಲೇ ಇದ್ದರೂ ವಶಕ್ಕೆ ಪಡೆಯುವ ಕಾನೂನನ್ನು ಭಾರತ ಸರಕಾರ ತಂದಿದೆ. ನೀವು ವಿಜಯ್ ಮಲ್ಯ ಪ್ರಕರಣದಲ್ಲಿ ನೋಡಬೇಕು. ಆವರು ಬ್ಯಾಂಕ್ ಗಳಿಗೆ ಒಂಬತ್ತು ಸಾವಿರ ಕೋಟಿ ನೀಡಬೇಕು. ನಾವು ಹದಿನಾಲ್ಕು ಸಾವಿರ ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಂಡಿದ್ದೇವೆ. ನಾವು ಎರಡರಷ್ಟು ಮೊತ್ತ ತೆಗೆದುಕೊಂಡಿರುವುದರಿಂದ ಮಲ್ಯ ಸಂಕಷ್ಟದಲ್ಲಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ನಾನು ಹಣ ವಾಪಸ್ ನೀಡಲು ಸಿದ್ಧ, ಆದರೆ ಸರ್ಕಾರವೇ ಬಿಡ್ತಿಲ್ಲ: ವಿಜಯ್ ಮಲ್ಯ ಆರೋಪ ನಾನು ಹಣ ವಾಪಸ್ ನೀಡಲು ಸಿದ್ಧ, ಆದರೆ ಸರ್ಕಾರವೇ ಬಿಡ್ತಿಲ್ಲ: ವಿಜಯ್ ಮಲ್ಯ ಆರೋಪ

ಮೋದಿ ಅವರ ಇಂಟರ್ ವ್ಯೂ ನೋಡಿದೆ. ಅವರು ಅದರಲ್ಲಿ ನನ್ನ ಹೆಸರು ಹೇಳಿದ್ದಾರೆ. ನಾನು ಬ್ಯಾಂಕ್ ಗಳಿಗೆ ಒಂಬತ್ತು ಸಾವಿರ ಕೋಟಿ ಬ್ಯಾಂಕ್ ಗಳಿಗೆ ನೀಡಬೇಕಿದ್ದರೂ ಹದಿನಾಅಲ್ಕು ಸಾವಿರ ಕೋಟಿಯ ಆಸ್ತಿ ಜಪ್ತಿ ಮಾಡಿರುವುದಾಗಿ ಹೇಳಿದ್ದಾರೆ. ಉನ್ನತಾಧಿಕಾರಿಗಳು ಪೂರ್ತಿ ಹಣವನ್ನು ವಸೂಲಿ ಮಾಡಿರುವುದು ಖಾತ್ರಿ ಪಡಿಸಿದ್ದಾರೆ. ಆದರೂ ಬಿಜೆಪಿ ವಕ್ತಾರರು ಏಕೆ ಮತ್ತೆ ಅದೇ ಹಳೇ ಹಾಡು ಮುಂದುವರಿಸಿದ್ದಾರೆ ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ.

English summary
Fugitive liquor baron Vijay Mallya on Sunday quoted an interview of Prime Minister Narendra Modi to assert that the government has already recovered more than what he allegedly owed to banks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X