ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ಯುನಿಸ್‌ನಲ್ಲಿ ಮಹಿಳೆಯಿಂದ ಆತ್ಮಹತ್ಯಾ ಬಾಂಬ್ ದಾಳಿ

|
Google Oneindia Kannada News

ಟ್ಯುನಿಸ್‌, ಅಕ್ಟೋಬರ್ 29: ಟ್ಯನಿಶಿಯಾದ ರಾಜಧಾನಿ ಟ್ಯುನಿಸ್‌ನಲ್ಲಿ ಇಂದು ನಡೆದ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದ್ದು ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಬಾಂಬರ್‌ ಸಾವನ್ನಪ್ಪಿದ್ದಾಳೆ.

ಬೆಂಗಳೂರು ಸ್ಪೋಟದ ರೂವಾರಿ ಮದನಿಗೆ 11 ದಿನಗಳ ಪೆರೋಲ್ಬೆಂಗಳೂರು ಸ್ಪೋಟದ ರೂವಾರಿ ಮದನಿಗೆ 11 ದಿನಗಳ ಪೆರೋಲ್

ಮಧ್ಯ ಟ್ಯುನಿಸ್‌ನ ಜನನಿಬಿಡ ಪ್ರದೇಶವಾದ ಹಬಿಬ್ ಬುರ್ಗಿಬಾ ಅವೆನ್ಯು ಎಂಬಲ್ಲಿ ತನ್ನನ್ನು ತಾನು ಸ್ಪೋಟಿಸಿಕೊಂಡಿದ್ದು, ಬಾಂಬ್ ದಾಳಿಯಲ್ಲಿ ಎಂಟು ಜನ ಪೊಲೀಸರು ಮತ್ತು ಒಬ್ಬ ನಾಗರೀಕ ಗಾಯಗೊಂಡಿದ್ದಾರೆ.

ಟ್ರಂಪ್ ಟೀಕಾಕಾರರಿಗೆ ಪಾರ್ಸೆಲ್ ಬಾಂಬ್ ಕಳುಹಿಸುತ್ತಿದ್ದ ಶಂಕಿತನ ಬಂಧನ ಟ್ರಂಪ್ ಟೀಕಾಕಾರರಿಗೆ ಪಾರ್ಸೆಲ್ ಬಾಂಬ್ ಕಳುಹಿಸುತ್ತಿದ್ದ ಶಂಕಿತನ ಬಂಧನ

ಆತ್ಮಹತ್ಯಾ ಬಾಂಬ್‌ ದಾಳಿ ನಡೆಸಿದ ಮಹಿಳೆಯು ಸುಮಾರು 30 ವರ್ಷ ವಯಸ್ಸಿನ ಯುವತಿ ಎನ್ನಲಾಗಿದೆ. ಆಕೆಯು ಪೊಲೀಸ್‌f ಗುಂಪನ್ನು ಗುರಿಯಾಗಿರಿಸಿಕೊಂಡೇ ಪೊಲೀಸ್ ಗುಂಪಿನ ಬಳಿಯೇ ಆತ್ಮಹತ್ಯೆ ಬಾಂಬ್ ದಾಳಿ ನಡೆಸಿದ್ದಾಳೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.

Suicide bomb attack in Tunis of North Africa

ಪ್ರಾಥಮಿಕ ವರದಿಗಳ ಪ್ರಕಾರ ಆತ್ಮಹತ್ಯೆ ಬಾಂಬರ್ ಸ್ಥಳೀಯ ವಸ್ತುಗಳಿಂದ ತಾನೇ ತಯಾರಿಸಿದ ಗ್ರೆನೆಡ್‌ ಬಾಂಬರ್‌ ಅನ್ನು ಸ್ಪೋಟಿಸಿಕೊಂಡಿದ್ದಾಳೆ. ತೀವ್ರ ಅಪಾಯಕಾರಿ ವಸ್ತುಗಳು ಬಾಂಬ್ ತಯಾರಿಕೆಯಲ್ಲಿ ಬಳಸಿಲ್ಲದ ಕಾರಣ ಹೆಚ್ಚಿನ ಹಾನಿ ಆಗಿಲ್ಲ ಎನ್ನಲಾಗಿದೆ.

ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಓರ್ವ ಸೈನಿಕ ಹುತಾತ್ಮ, ಇಬ್ಬರು ಉಗ್ರರ ಬಲಿ ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಓರ್ವ ಸೈನಿಕ ಹುತಾತ್ಮ, ಇಬ್ಬರು ಉಗ್ರರ ಬಲಿ

ಈ ಮುಂಚೆಯೂ ಟ್ಯುನಿಸ್‌ನಲ್ಲಿ ಆತ್ಮಹತ್ಯಾ ಬಾಂಬ್‌ ದಾಳಿಗಳು ನಡೆದಿವೆ. 2015ರ ಜೂನ್‌ನಲ್ಲಿ 38 ಮಂದಿ ಆತ್ಮಹತ್ಯಾ ಬಾಂಬ್ ದಾಳಿಗೆ ಬಲಿ ಆಗಿದ್ದರು. 2015 ರ ನವೆಂಬರ್‌ನಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಗೆ 12 ಮಂದಿ ಅಧ್ಯಕ್ಷರ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದರು.

English summary
Suicide bomb attack by a woman in Tunis of North Africa. Bomber women dies on the spot leaving nine people seriously injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X