ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಬೂಲ್ ನಲ್ಲಿ ತಾಲಿಬಾನ್ ಆತ್ಮಹತ್ಯಾ ಬಾಂಬ್ ದಾಳಿ; ಕನಿಷ್ಠ ಹತ್ತು ಮಂದಿ ಸಾವು

|
Google Oneindia Kannada News

ಕಾಬೂಲ್, ಸೆಪ್ಟೆಂಬರ್ 5: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ಗುರುವಾರ ತಾಲಿಬಾನ್ ಉಗ್ರರ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಕನಿಷ್ಠ ಹತ್ತು ಮಂದಿ ಸಾವನ್ನಪ್ಪಿ, ನಲವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ನ್ಯಾಟೋ ಪಡೆಗಳ ಮುಖ್ಯ ಕಚೇರಿ, ಅಮೆರಿಕದ ರಾಯಭಾರ ಕಚೇರಿ ಬಳಿ ಸ್ಫೋಟವಾಗಿ, ಹತ್ತಿರದ ಮಳಿಗೆಗಳು ಹಾಗೂ ಅಲ್ಲಿದ್ದ ಕಾರುಗಳು ಧ್ವಂಸವಾಗಿವೆ.

ಈ ದಾಳಿಯ ಹೊಣೆಯನ್ನು ತಾಲಿಬಾನ್ ಉಗ್ರರು ಹೊತ್ತುಕೊಂಡಿದ್ದಾರೆ. "ಈ ಘಟನೆಯಲ್ಲಿ ಹತ್ತು ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ ಹಾಗೂ ನಲವತ್ತೆರಡು ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ" ಎಂದು ಆಂತರಿಕ ಸಚಿವಾಲಯದ ವಕ್ತಾರರಾದ ನಸ್ರತ್ ರಹಿಮಿ ಹೇಳಿದ್ದಾರೆ.

ತಾಲಿಬಾನ್ ಉಗ್ರರ ದಾಳಿಯಲ್ಲಿ 30 ಅಫ್ಘನ್ ಪೊಲೀಸರು ಸಾವುತಾಲಿಬಾನ್ ಉಗ್ರರ ದಾಳಿಯಲ್ಲಿ 30 ಅಫ್ಘನ್ ಪೊಲೀಸರು ಸಾವು

ಈ ದಾಳಿಯ ಫೂಟೇಜ್ ಹಾಗೂ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ ಲೋಡ್ ಮಾಡಲಾಗಿದೆ. ಸಾಕ್ಷಿಗಳು ಹೇಳುವ ಪ್ರಕಾರ, ಆತ್ಮಹತ್ಯಾ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದು, ಆ ವೇಳೆ ಹಲವು ಮಂದಿ ಅಲ್ಲಿದ್ದರು. ಕೆಲವರು ರಸ್ತೆ ದಾಟುತ್ತಿದ್ದರು.

Suicide Bomb Attack By Taliban In Kabul, Killed At Least 10 People

ಬಿಸ್ಮಿಲ್ಲಾ ಅಹ್ಮದಿ ಎಂಬುವವರು ಸಣ್ಣ ಪುಟ್ಟ ಗಾಯಗಳೊಂದಿಗೆ ಬಚಾವ್ ಆಗಿದ್ದು, ಅಂಗಡಿಯೊಂದನ್ನು ಹೊಕ್ಕು ಪ್ರಾಣ ಉಳಿಸಿಕೊಂಡಿದ್ದಾರೆ. "ನನ್ನ ಕಾರಿನ ಕಿಟಕಿ ಚದುರಿಹೋಯಿತು. ಕಾರಿನಿಂದ ಹೊರಗೆ ನನ್ನನ್ನು ಎಳೆದು ತರಲು ಸಾಕಷ್ಟು ಜನರು ಬಂದರು" ಎಂದು ಆತ ಹೇಳಿಕೊಂಡಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಗಾಗಿ ತಾಲಿಬಾನ್ ಉಗ್ರ ಸಂಘಟನೆ ಹಾಗೂ ಅಮೆರಿಕ ಮಧ್ಯೆ ಮಾತುಕತೆ ನಡೆಯುತ್ತಿರುವಾಗಲೇ ಈ ಘಟನೆ ನಡೆದಿದೆ. ಸೋಮವಾರದಂದು ತಾಲಿಬಾನ್ ನ ಆತ್ಮಹತ್ಯಾ ಟ್ರಕ್ ಬಾಂಬರ್ ಕಾಬೂಲ್ ನಲ್ಲಿ ಅಂತರರಾಷ್ಟ್ರೀಯ ಸಂಸ್ಥೆಗಳು ಬಳಸುವ ಕಾಂಪೌಂಡ್ ಮೇಲೆ ದಾಳಿ ನಡೆಸಿ, ಕನಿಷ್ಠ ಹದಿನಾರು ಮಂದಿ ಸಾವನ್ನಪ್ಪಿ, ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

English summary
Taliban suicide bomber attack in Kabul, Afghanistan on Thursday. At least 10 people died and 42 people injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X