ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಚಾರಕ್ಕೆ ಮುಕ್ತವಾದ ಸೂಯೆಜ್ ಕಾಲುವೆ; ತನಿಖೆ ಶುರು

|
Google Oneindia Kannada News

ಕೈರೊ, ಮಾರ್ಚ್ 30: ವಿಶ್ವದ ಪ್ರಮುಖ ಜಲಮಾರ್ಗ ಈಜಿಪ್ಟ್‌ನ ಸೂಯೆಜ್ ಕಾಲುವೆ ಸೋಮವಾರದಿಂದ ಸಂಚಾರಕ್ಕೆ ಮುಕ್ತವಾಗಿದೆ. ಕಳೆದ ಮಂಗಳವಾರದಿಂದ ಸೂಯೆಜ್ ಕಾಲುವೆಯಲ್ಲಿ ಎವರ್ ಗ್ರೀನ್ ಬೃಹತ್ ಕಂಟೇನರ್ ಹಡಗು ಸಿಲುಕಿಕೊಂಡಿದ್ದು, ಏಳು ದಿನಗಳ ಬಳಿಕ ಆ ಹಡಗನ್ನು ಸೋಮವಾರ ತೆರವುಗೊಳಿಸಲು ಸಾಧ್ಯವಾಗಿದೆ.

ಈ ಬೆನ್ನಲ್ಲೇ ಈ ಹಡಗು ಕಾಲುವೆಯಲ್ಲಿ ಹೇಗೆ ಸಿಲುಕಿಕೊಂಡಿತು ಎಂಬ ಕುರಿತು ತಜ್ಞರು ತನಿಖೆ ನಡೆಸಲಿರುವುದಾಗಿ ತಿಳಿದುಬಂದಿದೆ.

ವಿಶ್ವದ ಅತ್ಯಂತ ಮುಖ್ಯ ಜಲಮಾರ್ಗ ವಿಶ್ವದ ಅತ್ಯಂತ ಮುಖ್ಯ ಜಲಮಾರ್ಗ "ಸೂಯೆಜ್ ಕಾಲುವೆ" ಹಿಂದಿದೆ ರೋಚಕ ಇತಿಹಾಸ

ತಜ್ಞರು ಈ ಘಟನೆಯಿಂದ ಹಡಗಿಗೆ ಆದ ಹಾನಿಯ ಕುರಿತು ಪರಿಶೀಲನೆ ನಡೆಸುತ್ತಿದ್ದು, ಕಾಲುವೆಯಲ್ಲಿ ಹಡಗು ಸಿಲುಕಿಕೊಳ್ಳಲು ಏನು ಕಾರಣವಿರಬಹುದು ಎಂಬುದನ್ನು ಪತ್ತೆಹಚ್ಚುವಲ್ಲಿ ನಿರತರಾಗಿದ್ದಾರೆ. ಎಂಜಿನಿಯರ್‌ಗಳು ಹಡಗಿನ ಇಂಜಿನ್‌ಗಳನ್ನು ಪರೀಕ್ಷಿಸುತ್ತಿರುವುದಾಗಿ ತಿಳಿದುಬಂದಿದೆ. ಇದು ಅತಿ ವೇಗದಿಂದ ಸಂಭವಿಸಿದ ಅವಘಡವೇ, ಇನ್ನಿತರ ತಾಂತ್ರಿಕ ದೋಷದಿಂದ ಸಂಭವಿಸಿದ್ದೇ ಎಂಬುದರ ಕುರಿತು ಪರಿಶೀಲನೆ ನಡೆಯುತ್ತಿದೆ.

 Suez Canal Freed And Probe Underway To Find Reason For Stuck

ಕಾಲುವೆಯಲ್ಲಿ ಹಡಗು ಸಿಲುಕಿಕೊಂಡಿದ್ದರಿಂದ ಭಾರೀ ಪ್ರಮಾಣದಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಈ ಮಾರ್ಗದ ಮೂಲಕ ಅನೇಕ ದೇಶಗಳಿಗೆ ಸಾಗುವ ಹಡಗುಗಳ ಸಂಚಾರ ಸ್ಥಗಿತಗೊಂಡಿತ್ತು. ವಾರದ ಬಳಿಕ ಹಡಗನ್ನು ಕೊನೆಗೂ ತೆರವುಗೊಳಿಸಲಾಗಿದೆ.

English summary
Probe underway after evergreen ship freed in suez canal at egypt
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X