ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಥಿಯೋಪಿಯಾ ವಿಮಾನ ದುರಂತ : ಪತಿಯನ್ನು ಕಳೆದುಕೊಂಡ ಮಹಿಳೆಯಿಂದ 1932 ಕೋಟಿಗೆ ದಾವೆ

|
Google Oneindia Kannada News

ಪ್ಯಾರಿಸ್, ಮೇ 21: ಇಥಿಯೋಪಿಯಾದಲ್ಲಿ ಕಳೆದ ಮಾರ್ಚ್ ನಲ್ಲಿ ನಡೆದ ಬೋಯಿಂಗ್ 737 MAX ಏರ್ ಲೈನರ್ ಅಪಘಾತದಲ್ಲಿ ಸಾವನ್ನಪ್ಪಿದ್ದ ವ್ಯಕ್ತಿಯ ಪತ್ನಿಯು ಅಮೆರಿಕದ ವಿಮಾನ ತಯಾರಿಕೆ ಕಂಪೆನಿ ವಿರುದ್ಧ $ 276 ಮಿಲಿಯನ್ ((ಭಾರತೀಯ ರುಪಾಯಿ ಮೌಲ್ಯ 19,257 ಕೋಟಿ) ಪರಿಹಾರ ಕೇಳಿರುವುದಾಗಿ ಆಕೆಯ ವಕೀಲರು ಮಂಗಳವಾರ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಇಥಿಯೋಪಿಯನ್ ಏರ್ ಲೈನ್ಸ್ ವಿಮಾನ 302 ವಿಮಾನವು ಇಥಿಯೋಪಿಯಾ ರಾಜಧಾನಿ ಅಡಿಸ್ ಅಬಾಬಾ ಬಳಿ ಅಪಘಾತವಾಗಿ, ಅದರಲ್ಲಿ ಪ್ರಯಾಣಿಸುತ್ತಿದ್ದ 157 ಪ್ರಯಾಣಿಕರು ಹಾಗೂ ವಿಮಾನ ಸಿಬ್ಬಂದಿ ಸಾವನ್ನಪ್ಪಿದ್ದರು. ದೂರಿನ ಪ್ರಕಾರ, ಬೋಯಿಂಗ್ ನಿಂದ ಪೈಲಟ್ ಗೆ 737 MAXನಲ್ಲಿನ ಸಾಫ್ಟ್ ವೇರ್ ನ ಅಪಾಯದ ಬಗ್ಗೆ ತಿಳಿಸಿಲ್ಲ. ಸೆನ್ಸರ್ ಡೇಟಾದ ಸಮಸ್ಯೆಯಿಂದಾಗಿ ವಿಮಾನ ಅಪಘಾತ ಆಗಿದೆ ಎಂದು ಯು.ಎಸ್. ವಕೀಲರಾದ ನೊಮಾನ್ ಹುಸೇನ್ ಹೇಳಿದ್ದಾರೆ.

149 ಪ್ರಯಾಣಿಕರಿದ್ದ ಇಥಿಯೋಪಿಯನ್ ಏರ್ ಲೈನ್ಸ್ ನ ವಿಮಾನ ಪತನ149 ಪ್ರಯಾಣಿಕರಿದ್ದ ಇಥಿಯೋಪಿಯನ್ ಏರ್ ಲೈನ್ಸ್ ನ ವಿಮಾನ ಪತನ

ಕಾರ್ಪೊರೇಟ್ ಲಾಭಕ್ಕಾಗಿ ಸುರಕ್ಷತೆ ನಿರ್ಲಕ್ಷಿಸಿ, ಸಾರ್ವಜನಿಕರಿಗೆ ತೊಂದರೆಯಾಗಿದೆ. ಬೋಯಿಂಗ್ ವಿಮಾನ ಒಂದೇ ಸೆನ್ಸರ್ ಮೇಲೆ ನಡೆಯುತ್ತಿದ್ದು, ಇದಕ್ಕೂ ಮುನ್ನ 200 ಘಟನೆಗಳು ಆದ ಬಗ್ಗೆ FAA (ಯುಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್) ವರದಿ ನೀಡಲಾಗಿದೆ ಎಂದಿದ್ದಾರೆ.

Sued for 19257 crore by woman, whose husband killed in Ethiopian air crash

ವಕೀಲರಾದ ಹುಸೇನ್ ಪ್ಯಾರಿಸ್ ನಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ನನ್ನ ಕಕ್ಷೀದಾರರಾದ ನಾಡೆಜ್ ಡುಬಾಯಿಸ್- ಸೀಕ್ಸ್ ಗೆ ಆದ ಹಾನಿಗೆ ಕನಿಷ್ಠ $ 276 ಮಿಲಿಯನ್ ಪರಿಹಾರ ನೀಡಬೇಕು ಎಂದು ಕೇಳಿದ್ದೇವೆ ಎಂದಿದ್ದಾರೆ.

ಕಳೆದ ವಾರ ಬೋಯಿಂಗ್ ಈ ಬಗ್ಗೆ ತಿಳಿಸಿದ್ದು, 737 MAXನ MCAS ಸಾಫ್ಟ್ ವೇರ್ ಮೇಲ್ದರ್ಜೆಗೆ ಏರಿಸುವುದು ಪೂರ್ಣವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಪೈಲಟ್ ಗಳಿಗೆ ತರಬೇತಿ ಬಗ್ಗೆ FAAಗೆ ಯೋಜನೆ ಸಲ್ಲಿಸುವ ಪ್ರಕ್ರಿಯೆಯಲ್ಲಿರುವುದಾಗಿ ತಿಳಿಸಿದೆ.

ಇಥಿಯೋಪಿಯನ್ ಏರ್ ಲೈನ್ಸ್ ದುರಂತದ ನಂತ ಜಗತ್ತಿನಾದ್ಯಂತ ವಿಮಾನ ಯಾನ ಸಂಸ್ಥೆಗಳು 737 MAX ಹಾರಾಟ ನಡೆಸದಿರಲು ನಿರ್ಧರಿಸಿವೆ. ಕಳೆದ ಐದು ತಿಂಗಳಲ್ಲಿ ಹೀಗೆ ಮಾಡಿದ ಬೋಯಿಂಗ್ ನ ಎರಡನೇ ಮಾಡೆಲ್ ಇದು.

ವಿಮಾನ ದುರಂತಕ್ಕೂ ಮುನ್ನ ಶಿಖಾ ತನ್ನ ಪತಿಗೆ ಕಳಿಸಿದ ಕೊನೆಯ ಸಂದೇಶ ಇದುವಿಮಾನ ದುರಂತಕ್ಕೂ ಮುನ್ನ ಶಿಖಾ ತನ್ನ ಪತಿಗೆ ಕಳಿಸಿದ ಕೊನೆಯ ಸಂದೇಶ ಇದು

ಲಯನ್ ಏರ್ ನ 737 MAX ಕಳೆದ ಅಕ್ಟೋಬರ್ ನಲ್ಲಿ ಇಂಡೋನೇಷ್ಯಾ ಬಳಿ ಸಮುದ್ರಕ್ಕೆ ಬಿದ್ದಿತ್ತು. ಆ ಘಟನೆಯಲ್ಲಿ 189 ಮಂದಿ ಸಾವನ್ನಪ್ಪಿದ್ದರು. 737 MAX ವಿಮಾನಕ್ಕೆ FAA ನಿಂದ ಅನುಮತಿ ಸಿಗಬಹುದೇ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ. ಇತರ ದೇಶಗಳಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ನಿಗಾ ವಹಿಸುವ ಪ್ರಾಧಿಕಾರಗಳ ಪ್ರಕಾರ, ಸ್ವತಂತ್ರವಾಗಿ ಮೌಲ್ಯಮಾಪನ ನಡೆಸಿದ ನಂತರವೇ ಬೋಯಿಂಗ್ ವಿಮಾನ ಹಾರಾಟಕ್ಕೆ ಅನುಮತಿ ನೀಡಲಾಗುತ್ತದೆ.

English summary
A French woman whose husband was killed in Addis Ababa, Ethiopia in the March crash of a Boeing 737 MAX airliner has filed a U.S. lawsuit against the plane maker seeking at least 1932 crore in damages, her lawyer said on Tuesday. The crash of Ethiopian Airlines flight 302 killed all 157 passengers and crew aboard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X