ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಚ್ಚರಿ ತಂದ ಅಧ್ಯಯನ: ಕೊರೊನಾ ವೈರಸ್ ಗೆ BCG ಲಸಿಕೆ ರಾಮಬಾಣ?

|
Google Oneindia Kannada News

ವಿಶ್ವದಾದ್ಯಂತ 10 ಲಕ್ಷಕ್ಕೂ ಹೆಚ್ಚು ಜನರಿಗೆ ಡೆಡ್ಲಿ ಕೊರೊನಾ ವೈರಸ್ ಸೋಂಕು ತಗುಲಿದೆ. ಮಹಾಮಾರಿ ಕೋವಿಡ್-19 ನಿಂದಾಗಿ 53 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಬಿಟ್ಟಿದ್ದಾರೆ.

ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಮತ್ತು ಸಾವಿನ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಈ ನಡುವೆ, ಕೋವಿಡ್-19 ಗೆ ಔಷಧಿ ಮತ್ತು ಲಸಿಕೆ ಕಂಡು ಹಿಡಿಯುವ ಕಾಯಕದಲ್ಲಿ ವಿಜ್ಞಾನಿಗಳು ತೊಡಗಿದ್ದಾರೆ.

ಕೊರೊನಾ ವೈರಸ್ ನ ಬಗ್ಗುಬಡಿಯಲು ಯಾವುದೇ ಸಮರ್ಥ ಔಷಧಿ ಇದುವರೆಗೂ ಲಭ್ಯವಾಗಿಲ್ಲ. ಆದ್ರೆ, ಈಗಾಗಲೇ BCG ಲಸಿಕೆ ಹಾಕಿಸಿಕೊಂಡವರು ಕೊರೊನಾ ವಿರುದ್ಧ ಶಕ್ತಿಯುತವಾಗಿ ಹೋರಾಡಬಹುದು ಎಂಬ ಅಚ್ಚರಿ ವಿಷಯ ಅಧ್ಯಾಯನವೊಂದರಿಂದ ಬಹಿರಂಗವಾಗಿದೆ.

ಕೊರೊನಾ ಕಟ್ಟಿಹಾಕುವಲ್ಲಿ ಸಫಲವಾಯಿತೇ ಇಸ್ರೇಲ್: ಲಸಿಕೆ ತಯಾರು?ಕೊರೊನಾ ಕಟ್ಟಿಹಾಕುವಲ್ಲಿ ಸಫಲವಾಯಿತೇ ಇಸ್ರೇಲ್: ಲಸಿಕೆ ತಯಾರು?

''ಕಡ್ಡಾಯವಾಗಿ BCG ಲಸಿಕೆ ಹಾಕಿಸಬೇಕು ಎಂಬ ನೀತಿ ಹೊಂದಿರುವ ದೇಶಗಳಲ್ಲಿ ಕೋವಿಡ್-19 ನಿಂದಾಗಿ ಸಂಭವಿಸಿರುವ ಸಾವಿನ ಪ್ರಮಾಣ ಕಡಿಮೆ ಇದೆ'' ಎಂಬ ಸಂಗತಿ ಅಧ್ಯಯನದಿಂದ ಹೊರಬಿದ್ದಿದೆ.

BCG ಲಸಿಕೆ ಕಡ್ಡಾಯ ಇರುವ ದೇಶಗಳಲ್ಲಿ..

BCG ಲಸಿಕೆ ಕಡ್ಡಾಯ ಇರುವ ದೇಶಗಳಲ್ಲಿ..

'ಕ್ಷಯ ರೋಗವನ್ನು ತಡೆಗಟ್ಟಲು BCG ಲಸಿಕೆ ಕಡ್ಡಾಯ ಇಲ್ಲ'ದ ದೇಶಗಳಿಗೆ ಹೋಲಿಸಿದರೆ 'BCG ಲಸಿಕೆ ಕಡ್ಡಾಯ ಮಾಡಿರುವ' ದೇಶಗಳಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಕಡಿಮೆ ಇದೆ ಎಂಬುದು ಪ್ರಾಥಮಿಕ ಅಧ್ಯಯನವೊಂದರಿಂದ ತಿಳಿದುಬಂದಿದೆ.

ಒಂದಕ್ಕೊಂದು ನಂಟು

ಒಂದಕ್ಕೊಂದು ನಂಟು

ಜಪಾನ್ ನಲ್ಲಿ ಕೋವಿಡ್-19 ಪ್ರಕರಣಗಳು ಕಡಿಮೆ ಇರುವುದನ್ನು ಗಮನಿಸಿದ ನ್ಯೂಯಾರ್ಕ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಸಿಸ್ಟೆಂಟ್ ಪ್ರೊಫೆಸರ್ ಗೊನ್ಝಾಲೋ ಒಟಾಝು ಅಧ್ಯಯನ ಮಾಡಲು ಆರಂಭಿಸಿದರು. ಯಾವ ಯಾವ ದೇಶಗಳು ಸಾರ್ವತ್ರಿಕ BCG ಲಸಿಕೆ ಹೊಂದಿವೆ ಮತ್ತು ಅವುಗಳನ್ನು ಯಾವಾಗ ಜಾರಿಗೆ ತಂದಿದೆ ಎಂಬ ಮಾಹಿತಿಯನ್ನು ಕಲೆಹಾಕಿ, ಬಳಿಕ ಕೋವಿಡ್-19 ಕೇಸ್ ಗಳು ಮತ್ತು ಸಾವಿನ ಪ್ರಮಾಣವನ್ನು ಹೋಲಿಕೆ ಮಾಡಿದರು. ಇದರಿಂದ BCG ಲಸಿಕೆ ಮತ್ತು ಕೊರೊನಾ ಕೇಸ್ ಗಳಿಗೆ ನಂಟು ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಸಮಾಧಾನ ತಂದ ಹೊಸ ಸಂಶೋಧನೆ: ಸಕಲ ಜ್ವರಗಳಿಗೂ ಒಂದೇ ಲಸಿಕೆ!ಸಮಾಧಾನ ತಂದ ಹೊಸ ಸಂಶೋಧನೆ: ಸಕಲ ಜ್ವರಗಳಿಗೂ ಒಂದೇ ಲಸಿಕೆ!

ಅಧ್ಯಯನದಲ್ಲಿ ಕಂಡುಬಂದ ಅಂಶಗಳು

ಅಧ್ಯಯನದಲ್ಲಿ ಕಂಡುಬಂದ ಅಂಶಗಳು

ಅಮೇರಿಕಾ, ಇಟಲಿಯಲ್ಲಿ 'ರಿಸ್ಕ್' ಇರುವವರಿಗೆ ಮಾತ್ರ BCG ಲಸಿಕೆಯನ್ನು ಶಿಫಾರಸ್ಸು ಮಾಡಲಾಗುತ್ತದೆ. ಅತ್ತ ಜರ್ಮನಿ, ಸ್ಪೇನ್, ಫ್ರಾನ್ಸ್ ಮತ್ತು ಯುಕೆನಲ್ಲಿ BCG ಲಸಿಕೆಯ ಕಡ್ಡಾಯದ ನಿಯಮವನ್ನು ದಶಕಗಳ ಹಿಂದೆಯೇ ಕೈಬಿಡಲಾಗಿತ್ತು. ಇನ್ನು ಚೀನಾದಲ್ಲಿ 1976 ಕ್ಕೂ ಮೊದಲು BCG ಲಸಿಕೆಯನ್ನ ಪರಿಣಾಮಕಾರಿ ಬಳಸಿಕೊಂಡಿಲ್ಲ. ಆದರೆ, ಜಪಾನ್ ಮತ್ತು ಸೌತ್ ಕೊರಿಯಾ 'ಸಾರ್ವತ್ರಿಕ BCG ಲಸಿಕೆ ನೀತಿ'ಯನ್ನು ಹೊಂದಿದೆ. ಹೀಗಾಗಿ, ಅಮೇರಿಕಾ, ಇಟಲಿ, ಜರ್ಮನಿ, ಸ್ಪೇನ್, ಫ್ರಾನ್ಸ್ ಮತ್ತು ಯುಕೆಗೆ ಹೋಲಿಸಿರೆ ಜಪಾನ್ ಮತ್ತು ಸೌತ್ ಕೊರಿಯಾದಲ್ಲಿ ಕೋವಿಡ್-19 ನಿಂದ ಸಾವಿನ ಪ್ರಮಾಣ ಕಡಿಮೆ ಇದೆ ಎನ್ನಲಾಗಿದೆ.

ರಕ್ಷಣೆ ನೀಡುವ BCG ಲಸಿಕೆ

ರಕ್ಷಣೆ ನೀಡುವ BCG ಲಸಿಕೆ

''Bacillus Calmette-Guerin (BCG) ಲಸಿಕೆ ಟ್ಯೂಬರ್ ಕ್ಯುಲಾಸಿಸ್ (ಕ್ಷಯ) ಬ್ಯಾಕ್ಟೀರಿಯಾ ವಿರುದ್ಧ ಮಾತ್ರವಲ್ಲದೆ ಇತರೆ ಸಾಂಕ್ರಾಮಿಕ ರೋಗಗಳ ವಿರುದ್ಧವೂ ರಕ್ಷಣೆ ನೀಡುತ್ತದೆ ಎಂದು ಸಾರುವ ಅಧ್ಯಯನಗಳ ಬಗ್ಗೆ ನನಗೆ ತಿಳಿದಿದೆ'' ಎಂದು ಗೊನ್ಝಾಲೋ ಒಟಾಝು ಹೇಳಿದ್ದಾರೆ.

ಗುಡ್ ನ್ಯೂಸ್: ಕೊರೊನಾ ವೈರಸ್ ಗೆ ಲಸಿಕೆ, ಮನುಷ್ಯರ ಮೇಲೆ ಪ್ರಯೋಗ ಆರಂಭ!ಗುಡ್ ನ್ಯೂಸ್: ಕೊರೊನಾ ವೈರಸ್ ಗೆ ಲಸಿಕೆ, ಮನುಷ್ಯರ ಮೇಲೆ ಪ್ರಯೋಗ ಆರಂಭ!

ಪರಿಶೀಲನೆಗೆ ಒಳಗಾಗಬೇಕು.!

ಪರಿಶೀಲನೆಗೆ ಒಳಗಾಗಬೇಕು.!

''ಕೋವಿಡ್-19 ನಿಂದಾಗಿ ಜಗತ್ತು ಹೆಣಗಾಡುತ್ತಿದೆ. ಇದಕ್ಕೆ ಲಸಿಕೆ ಕಂಡುಹಿಡಿಯಲು ವರ್ಷಕ್ಕಿಂತ ಹೆಚ್ಚು ಸಮಯ ಬೇಕಾದೀತು. ಹೀಗಾಗಿ, ಕೊರೊನಾ ವೈರಸ್ ವಿರುದ್ಧ BCG ಲಸಿಕೆ ರಕ್ಷಣೆ ನೀಡಬಹುದೇ ಎಂಬುದನ್ನು ನೋಡುವುದು ಸಮಂಜಸವಾಗಿದೆ. ಗೊನ್ಝಾಲೋ ಒಟಾಝು ಅವರ ಅಧ್ಯಯನ ಇನ್ನೂ ಪರಿಶೀಲನೆಗೆ ಒಳಗಾಗಿಲ್ಲ. ಅಧ್ಯಯನ ಫಲಿತಾಂಶವನ್ನು ಬಹಳ ಎಚ್ಚರಿಕೆಯಿಂದ ಓದಬೇಕಿದೆ'' ಎಂದು ಟೊರೊಂಟೋ ವಿಶ್ವವಿದ್ಯಾನಿಲಯದ ರೋಗ ನಿರೋಧಕ ವಿಭಾಗದ ಪ್ರಾಧ್ಯಾಪಕ ಎಲೀನೊರ್ ಫಿಶ್ ತಿಳಿಸಿದ್ದಾರೆ.

ಪ್ರಯೋಗಕ್ಕೆ ಚಾಲನೆ

ಪ್ರಯೋಗಕ್ಕೆ ಚಾಲನೆ

ಕೊರೊನಾ ವೈರಸ್ ವಿರುದ್ಧ BCG ಲಸಿಕೆ ಪರಿಣಾಮಕಾರಿಯಾಗಿದ್ಯಾ ಎಂಬುದನ್ನು ಪರೀಕ್ಷಿಸುವ ಕೆಲಸಕ್ಕೆ ಈಗಾಗಲೇ ಚಾಲನೆ ಕೊಡಲಾಗಿದೆ. ನೆದರ್ಲ್ಯಾಂಡ್ಸ್ ನಲ್ಲಿ 400 ಮಂದಿ ಹೆಲ್ತ್ ವರ್ಕರ್ಸ್ ಮೇಲೆ BCG ಲಸಿಕೆ ಪ್ರಯೋಗಿಸಲಾಗಿದೆ. ಇದರ ಫಲಿತಾಂಶ ಸಿಗಬೇಕು ಅಂದ್ರೆ ಕನಿಷ್ಠ ಎರಡು ತಿಂಗಳು ಕಾಯಬೇಕು. ಆಸ್ಟ್ರೇಲಿಯಾ, ಡೆನ್ಮಾರ್ಕ್, ಜರ್ಮನಿ, ಯು.ಕೆ ಮತ್ತು ಯು.ಎಸ್.ಎ ನಲ್ಲೂ ಇದೇ ಪ್ರಯೋಗ ಚಾಲ್ತಿಯಲ್ಲಿದೆ. ಹಾಗೇ, 60 ವರ್ಷ ಮೇಲ್ಪಟ್ಟವರ ಮೇಲೆ BCG ಲಸಿಕೆಯ ಎಷ್ಟು ಪರಿಣಾಮಕಾರಿ ಎಂಬುದನ್ನೂ ಪರೀಕ್ಷಿಸಬೇಕಾಗಿದೆ.

ಯಾರಿಂದಲೂ ಸಾಧ್ಯವಾಗಿಲ್ಲ.!

ಯಾರಿಂದಲೂ ಸಾಧ್ಯವಾಗಿಲ್ಲ.!

''BCG ಲಸಿಕೆ ಪರಿಣಾಮಕಾರಿ ಎಂದು ಕಂಡುಬಂದರೂ, ಅದನ್ನ ಸಂಗ್ರಹಿಸಿಡಲು ಪ್ರಯತ್ನಿಸಬಾರದು. ಕೋವಿಡ್-19 ವಿರುದ್ಧ ಹೋರಾಡಲು BCG ಲಸಿಕೆಯೊಂದೇ ಸಾಧನವಾಗಲ್ಲ. BCG ಲಸಿಕೆ ಕಡ್ಡಾಯ ಎಂಬ ನೀತಿ ಹೊಂದಿದ್ದರೂ, ಯಾವುದೇ ದೇಶಕ್ಕೆ ಕೋವಿಡ್-19 ರೋಗವನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗಿಲ್ಲ'' ಎಂದು ಗೊನ್ಝಾಲೋ ಒಟಾಝು ಅಭಿಪ್ರಾಯ ಪಟ್ಟಿದ್ದಾರೆ.

English summary
Study says Nations with Mandatory TB Vaccines show few Covid 19 deaths.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X