ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಾಣು 20 ನಿಮಿಷ ಗಾಳಿಯಲ್ಲಿದ್ದರೆ ಶೇ.90ರಷ್ಟು ದುರ್ಬಲ

|
Google Oneindia Kannada News

ಕೊರೊನಾ ವೈರಾಣು ಗಾಳಿಯಲ್ಲಿ 20 ನಿಮಿಷಗಳಿದ್ದರೆ ಸಾಕು, ತನ್ನ ಶೇ.90ರಷ್ಟು ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಸೀನು, ಕೆಮ್ಮು, ಉಗುಳಿನಿಂದ ಗಾಳಿಗೆ ಹಾರಿದ ವೈರಾಣು 5 ನಿಮಿಷಗಳ ಒಳಗಾಗಿ ವ್ಯಕ್ತಿಯೊಬ್ಬರ ದೇಹ ಹೊಕ್ಕಬೇಕು. ಇಲ್ಲವಾದಲ್ಲಿ ಸೋಂಕು ತೀವ್ರವಾಗಿಸುವ ಸಾಮರ್ಥ್ಯ ಕುಂಠಿತವಾಗುತ್ತದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಗಾಳಿಯಲ್ಲಿ ಕೊರೊನಾ ವೈರಾಣು ಒಬ್ಬರಿಂದ ಒಬ್ಬರಿಗೆ ಹರಡುವ ಸಾಮರ್ಥ್ಯವನ್ನು ಬೇಗನೆ ಕಳೆದುಕೊಳ್ಳುತ್ತದೆ ಎಂದು ನೂತನ ಅಧ್ಯಯನ ವರದಿ ತಿಳಿಸಿದೆ. ಗಾಳಿಯಲ್ಲಿ 20 ನಿಮಿಷಗಳಿಗೂ ಹೆಚ್ಚು ಕಾಲ ಇದ್ದರೆ ಶೇ.90ರಷ್ಟು ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ ಎನ್ನುವುದನ್ನು ವರದಿ ಬಹಿರಂಗ ಪಡಿಸಿದೆ.

ಓಮಿಕ್ರಾನ್ ಶೀಘ್ರ ಡೆಲ್ಟಾ ಪ್ರಕರಣಗಳನ್ನು ಓವರ್ ಟೇಕ್ ಮಾಡಲಿದೆ:WHOಓಮಿಕ್ರಾನ್ ಶೀಘ್ರ ಡೆಲ್ಟಾ ಪ್ರಕರಣಗಳನ್ನು ಓವರ್ ಟೇಕ್ ಮಾಡಲಿದೆ:WHO

ಇಂಗ್ಲೆಂಡಿನ ಬ್ರಿಸ್ಟಲ್ ವಿವಿ ಸಂಶೋಧಕರು ಈ ಅಧ್ಯಯನದ ರೂವಾರಿಗಳು. ಗಾಳಿಯಲ್ಲಿ ಕೊರೊನಾ ವೈರಾಣು ಎಷ್ಟು ಕಾಲ ಕಾರ್ಯಶೀಲವಾಗಿರುತ್ತದೆ ಎನ್ನುವ ಸಂಶೋಧನೆಯಲ್ಲಿ ಸಂಶೋಧಕರ ತಂಡ ನಿರತವಾಗಿತ್ತು

Study Says Covid Loses 90 Percent Of Ability To Infect Within 20 Minutes In Air

ಗಾಳಿಯಲ್ಲಿ ಮೊದಲ 5 ನಿಮಿಷಗಳಲ್ಲಿಯೇ ಹೆಚ್ಚಿನ ಶಕ್ತಿಯನ್ನು ಕೊರೊನಾ ವೈರಾಣು ಕಳೆದುಕೊಳ್ಳುತ್ತದೆ. ವೆಂಟಿಲೇಷನ್ ಚೆನ್ನಾಗಿದ್ದ ಸ್ಥಳದಲ್ಲಿ ಕೊರೊನಾ ವೈರಾಣು ಹರಡುವ ಸಾಧ್ಯತ್ರೆ ತುಂಬಾ ಕಡಿಮೆ, ಮುಚ್ಚಿದ್ದ ಸ್ಥಳಗಳಲ್ಲಿ ಕೊರೊನಾ ವೈರಾಣು ಬೇಗನೆ ಹರಡುತ್ತದೆ ಎನ್ನುವ ಸಂಗತಿಯನ್ನು ಹೊಸ ಅಧ್ಯಯನ ದೃಢಪಡಿಸಿದೆ.

ಶ್ವಾಸಕೋಶದಲ್ಲಿ ನೀರಿನಂಶದ ವಾತಾವರಣದಲ್ಲಿ ಜೀವಿಸುವ ವೈರಾಣು, ವ್ಯಕ್ತಿಯ ದೇಹದಿಂದ ಹೊರಕ್ಕೆ ಬಿದ್ದ ಕೂಡಲೇ ಇಂಗಾಲದ ಡೈ ಆಕ್ಸೈಡ್‌ನ ಪ್ರಭಾವದಿಂದ ತನ್ನ ಸಾಮರ್ಥ್ಯ ಕಳೆದುಕೊಳ್ಳುತ್ತಾ ಹೋಗುತ್ತದೆ. ವಾತಾವರಣದಲ್ಲಿ ತೇವಾಂಶ ಹೆಚ್ಚಿದಷ್ಟೂ ವೈರಾಣು ಸಾಮರ್ಥ್ಯ ಕುಗ್ಗುವುದು ವೇಗವಾಗಲಿದೆ. ಶೇ.90ರಷ್ಟು ನೀರಿನಾಂಶ ಇರುವ ವಾತಾವರಣದಲ್ಲಿ 5 ನಿಮಿಷಗಳಲ್ಲಿ ವೈರಾಣು ಶೇ.52ರಷ್ಟು ಸೋಂಕು ಉಂಟು ಮಾಡುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ.

ಅಲ್ಲಿಗೆ ಬೇಸಿಗೆ ಅಥವಾ ಬಿಸಿಯಾದ ವಾತಾವರಣದಲ್ಲಿ ವೈರಾಣು ಶೀಘ್ರವಾಗಿ ಪಸರಿಸುತ್ತದೆ ಎಂಬ ವಾದ ತಪ್ಪಾಗುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಸೋಂಕಿತರಿಂದ ಆದಷ್ಟು ಅಂತರ ಕಾಯ್ದುಕೊಂಡಷ್ಟು ಸುತ್ತಲಿನವರು ಕೊರೊನಾದಿಂದ ಬಚಾವಾಗಬಹುದು. ದೂರ ಹೆಚ್ಚಿದಷ್ಟೂ ವೈರಾಣುವು ಗಾಳಿಯಲ್ಲಿ ಪಸರಿಸಿಕೊಂಡು ಬರಲು ಹೆಚ್ಚು ಸಮಯ ತಗುಲಲಿದೆ. ಇದರಿಂದಾಗಿ ಸೋಂಕು ತೀವ್ರಗೊಳ್ಳುವ ಸಾಮರ್ಥ್ಯ ಕುಂಠಿತವಾಗಲಿದೆ ಎಂದು ಪ್ರೊ. ಜೊನಾಥನ್ ರೀಡ್ ತಿಳಿಸಿದ್ದಾರೆ.

ಕೋವಿಡ್ ಒಂದನೇ ಮತ್ತು ಎರಡನೇ ಅಲೆಯು ಪ್ರತಿಯೊಬ್ಬ ನಾಗರಿಕರ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರಿದೆ. ಅದು ಸೋಂಕು ತಗುಲಿ ಆಗಿರಬಹುದು, ಸಾವು-ನೋವು ಆಗಿರಬಹುದು, ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್, ಮೆಡಿಸಿನ್ ಕೊರತೆಯಾಗಿರಬಹುದು, ಲಾಕ್ ಡೌನ್, ಆರ್ಥಿಕ ಸಂಕಷ್ಟ, ಉದ್ಯೋಗ ಕಳೆದುಕೊಳ್ಳುವಿಕೆ ಹೀಗೆ ನಾನಾ ರೂಪಗಳನ್ನು ಕೋವಿಡ್ ಎರಡೂ ಅಲೆಗಳು ಪ್ರದರ್ಶಿಸಿವೆ.

ಇದೀಗ ಮತ್ತೆ ಕೋವಿಡ್ ಮೂರನೇ ಅಲೆ ಭಾರತ ಸೇರಿದಂತೆ ವಿಶ್ವದಾದ್ಯಂತ ಹೆಚ್ಚಾಗುತ್ತಿದೆ. ಕೊರೋನಾ ರೂಪಾಂತರಿ ವಕ್ಕರಿಸಿದೆ. ಕೋವಿಡ್ ನಿಯಮಗಳನ್ನು ಪಾಲಿಸಿ ಸೋಂಕು ಆದಷ್ಟು ಬರದಂತೆ ತಡೆಯುವುದೇ ಇದಕ್ಕಿರುವ ಬಾಣ ಎಂದು ಸರ್ಕಾರಕ್ಕೆ, ಜನಕ್ಕೆ ಅರ್ಥವಾಗಿದೆ.

ಹಾಗಾದರೆ ಓಮಿಕ್ರಾನ್, ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಏನು ಮಾಡಬೇಕು, ಹೇಗೆ ಸುರಕ್ಷಿತವಾಗಿರಬೇಕು ಎಂದು ನೋಡುವುದಾದರೆ:

ಕೋವಿಡ್ ಲಸಿಕೆ: ಕೊರೊನಾದಿಂದ ದೂರ ಇರಲು, ಸೋಂಕು ವ್ಯಾಪಕವಾಗಿ ಪಸರಿಸದಂತೆ ತಡೆಯಲು ಇರುವ ಬಹಳ ಮುಖ್ಯ ವಿಧಾನ ಕೊರೊನಾ ಲಸಿಕೆ. ಪ್ರತಿಯೊಬ್ಬ ಅರ್ಹ ಫಲಾನುಭವಿಗಳು ಲಸಿಕೆ ಪಡೆಯಬೇಕು.

ಸರ್ಕಾರ ಅನುಮೋದನೆ ನೀಡಿರುವ ಲಸಿಕೆಗಳನ್ನು ಪಡೆಯುವುದರಿಂದ ಕೋವಿಡ್ ಸೋಂಕಿನ ಅತಿ ಗಂಭೀರ ಪರಿಣಾಮದಿಂದ, ಸಾವು-ನೋವಿನಿಂದ ಬಚಾವಾಗಬಹುದು, ಲಸಿಕೆ ಪಡೆದು ಸೋಂಕು ಬಂದರೂ ಕೂಡ ಸೌಮ್ಯ ರೂಪದಲ್ಲಿರುತ್ತದೆ. ಹಾಗೆಂದು ಲಸಿಕೀಕರಣ ಸಂಪೂರ್ಣವಾಗಿ ಕೊರೋನಾ ಹರಡುವುದನ್ನು ತಡೆಯುವುದಿಲ್ಲ. ಅತಿ ಅಪಾಯಕಾರಿ ಪ್ರಕರಣಗಳಲ್ಲಿ ಲಸಿಕೆ ನೀಡಿಕೆ ಹೆಚ್ಚು ಉಪಯೋಗಕ್ಕೆ ಬರುತ್ತದೆ.

ಮಾಸ್ಕ್ ಧರಿಸಿ : ಮೂಗು-ಬಾಯಿಯನ್ನು ಸರಿಯಾಗಿ ಮುಚ್ಚುವ ಮಾಸ್ಕ್ ಹಾಕಿಕೊಳ್ಳಿ. ಜನದಟ್ಟಣೆ ಹೆಚ್ಚಾಗಿರುವ ಪ್ರದೇಶದಲ್ಲಿ ಶಾರೀರಿಕ ಅಂತರ ಎಲ್ಲಾ ಸಂದರ್ಭಗಳಲ್ಲಿ ಕಾಪಾಡುವುದು ಮತ್ತು ಸಾಕಷ್ಟು ಉತ್ತಮ ಗಾಳಿ ಸಿಗುವಂತೆ ನೋಡಿಕೊಳ್ಳುವುದು ಕಷ್ಟಸಾಧ್ಯ. ಅಂತಹ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು ಸಹಾಯಕ್ಕೆ ಬರುತ್ತದೆ.

ಶಾರೀರಿಕ ಅಂತರ : ಜನರೊಂದಿಗೆ ಮಾತನಾಡುವಾಗ ಕನಿಷ್ಠ 1 ಮೀಟರ್ ಅಂತರವಿರುವಂತೆ ನೋಡಿಕೊಳ್ಳಿ. ಕೊರೋನಾ ಸೋಂಕಿತ ವ್ಯಕ್ತಿಯ ಹತ್ತಿರ ಒಂದು ಮೀಟರ್ ಗೂ ಕಡಿಮೆ ಅಂತರದಲ್ಲಿ ನಿಂತಿದ್ದರೆ ಸೋಂಕು ತಗಲುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಸರಿಯಾಗಿ ಗಾಳಿ, ಬೆಳಕು ಹೋಗದ ಒಳಾಂಗಣ ಪ್ರದೇಶ, ಜನದಟ್ಟಣೆ ಹೊಂದಿರುವ ಸ್ಥಳಗಳು ಮತ್ತು ನಿಕಟ ಸಂಪರ್ಕಗಳಿಂದ ದೂರವಿರಿ. ಕೆಮ್ಮುವಾಗ/ಸೀನುವಾಗ ಕೈಯಿಂದ ನಿಮ್ಮ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಿ. ಬಳಸಿದ ಟಿಶ್ಯುಗಳನ್ನು ತಕ್ಷಣವೇ ವಿಲೇವಾರಿ ಮಾಡಿ.

ನೀರು ಅಥವಾ ಸ್ಯಾನಿಟೈಸರ್‌ನಿಂದ ಕೈಗಳನ್ನು ಸ್ವಚ್ಛಗೊಳಿಸಿ. ಸಾಬೂನು ಮತ್ತು ನೀರು ಅಥವಾ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ರಬ್‌ನಿಂದ ಕನಿಷ್ಠ 20 ಸೆಕೆಂಡುಗಳ ಕಾಲ ನಿಮ್ಮ ಕೈಗಳನ್ನು ತೊಳೆಯುವುದು ವೈರಸ್ ಹರಡುವಿಕೆಯನ್ನು ಕಡಿಮೆ ಮಾಡುತ್ತದೆ. ಕಣ್ಣು, ಮೂಗು ಮತ್ತು ಬಾಯಿಯನ್ನು ಸ್ಪರ್ಶಿಸುವುದನ್ನು ತಪ್ಪಿಸಿ, ಮನೆ, ಸುತ್ತಮುತ್ತ ಪರಿಸರ ಸ್ವಚ್ಛವಾಗಿಡಿ.

ಪೋಷಣೆ : ರೋಗಿಗಳಲ್ಲಿ ಕಡಿಮೆ ವಿಟಮಿನ್ ಮಟ್ಟಗಳು (ವಿಟಮಿನ್ ಡಿ 3, ವಿಟಮಿನ್ ಸಿ) ತೀವ್ರ ಸೋಂಕು ಮತ್ತು ಸಾವಿಗೆ ಹೆಚ್ಚಿನ ಅಪಾಯಗಳನ್ನು ತಂದೊಡ್ಡುತ್ತದೆ ಎಂದು ಅಧ್ಯಯನಗಳು ತೋರಿಸುತ್ತಿವೆ. ಆದ್ದರಿಂದ, ಸರಿಯಾದ ಸಮತೋಲಿತ ಆಹಾರ, ಸಾಕಷ್ಟು ನೀರಿನ ಸೇವನೆ ಮತ್ತು ಉತ್ತಮ ಆರೋಗ್ಯವು ಈ ಕೊರೊನಾ ಕಾಲದಲ್ಲಿ ಅತ್ಯಂತ ಮುಖ್ಯವಾಗಿದೆ.

English summary
Coronavirus loses 90% of its ability to infect us within 20 minutes of becoming airborne – with most of the loss occurring within the first five minutes, the world’s first simulations of how the virus survives in exhaled air suggest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X