ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಭೂಕಂಪನ

By Mahesh
|
Google Oneindia Kannada News

ಸ್ಯಾನ್ ಫ್ರಾನಿಸ್ಕೋ, ಆ.24: ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಭಾನುವಾರ ಬೆಳಗ್ಗೆ ಭೂಕಂಪನದ ಅನುಭವವಾಗಿದೆ. ಯುಎಸ್ ಭೂ ಸರ್ವೇಕ್ಷಣ ವಿಭಾಗ(ಯುಎಸ್ ಜಿಎಸ್) ಭೂಕಂಪದ ಪ್ರಮಾಣ ರಿಕ್ಟರ್ ಮಾಪಕದಲ್ಲಿ 6 ರಷ್ಟಿತ್ತು ಎಂದು ಹೇಳಿದೆ.

ವಾಯುವ್ಯ ಅಮೆರಿಕದ ಕ್ಯಾಲಿಫೋರ್ನಿಯಾ ಭಾಗದಲ್ಲಿ ಭಾನುವಾರ ಸ್ಥಳೀಯ ಕಾಲಮಾನ ಮುಂಜಾನೆ 3.20 (10.20 GMT) ವೇಳೆಗೆ 6.7 ಮೈಲಿಗಳಷ್ಟು ಆಳವಾದ ಕಂಪನ ಭೂಮಿಯೊಳಗೆ ಕಂಡು ಬಂದಿದೆ ಎಂದು USGS ತಿಳಿಸಿದೆ ಎಎಫ್ ಪಿ ವರದಿ ಮಾಡಿದೆ.

ಭೂಕಂಪದ ಕೇಂದ್ರ ಭಾಗಕ್ಕೆ ಸರಿಯಾಗಿ 6 ಮೈಲಿಗಳಷ್ಟು ದೂರದಲ್ಲಿರುವ ನಾಪಾ ಕಣಿವೆಯಲ್ಲಿ ಹಾಗೂ ಇನ್ನಿತರ ಪ್ರದೇಶಗಳಲ್ಲಿನ ವಿದ್ಯುತ್ ಪೂರೈಕೆ ಬಂದ್ ಆಗಿದೆ. ಸುಮಾರು 10,000ಕ್ಕೂ ಅಧಿಕ ನಿವಾಸಿಗಳು ಆತಂಕದ ಕ್ಷಣ ಎದುರಿಸಿದ್ದಾರೆ ಎಂದು ಫೆಸಿಫಿಕ್ ಗ್ಯಾಸ್ ಹಾಗೂ ಎಲೆಕ್ಟ್ರಿಕ್ ಕಂಪನಿ ಹೇಳಿದೆ.

ಕ್ಯಾಲಿಫ್ ಪೊಲೀಸರ ಹೇಳಿಕೆ: ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾದ ಹೆದ್ದಾರಿ ಪೊಲೀಸ್ ಪಡೆ ಹೇಳಿಕೆ ನೀಡಿ, ಭೂಕಂಪದಿಂದ ರಸ್ತೆ, ಸೇತುವೆಗಳು ಅಲ್ಲಲ್ಲಿ ಮುರಿದು ಬಿದ್ದಿರುವ ವರದಿಗಳು ಬಂದಿವೆ. ಆದರೆ, ಈ ಬಗ್ಗೆ ಎಲ್ಲೆಡೆ ಅಲರ್ಟ್ ಸಂದೇಶ ನೀಡಲಾಗಿದ್ದು, ವಾಹನ ಸವಾರರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದಿದ್ದಾರೆ.

ಅಂದ ಹಾಗೆ, ಈ ಬಾರಿಯ 8ನೇ ಅಕ್ಕ ಆಯೋಜನೆಯ ವಿಶ್ವ ಕನ್ನಡ ಸಮ್ಮೇಳನ ಇದೇ ಕ್ಯಾಲಿಫೋರ್ನಿಯಾ ಪ್ರಾಂತ್ಯದ ಸ್ಯಾನ್ ಹೊಸೆಯಲ್ಲಿ ಆಯೋಜನೆಗೊಂಡಿದೆ.[ವಿವರಗಳನ್ನು ಇಲ್ಲಿ ಓದಿ]

ಸಾಮಾಜಿಕ ಜಾಲ ತಾಣಗಳಲ್ಲಿ ಭೂಕಂಪ ಹಾಗೂ ಭೂಕಂಪದ ನಂತರ ಪರಿಣಾಮದ ಬಗ್ಗೆ ಸಾರ್ವಜನಿಕರು ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದಾರೆ.

ಹಲವೆಡೆ ವಿದ್ಯುತ್ ಪೂರೈಕೆ ಬಂದ್

ಹಲವೆಡೆ ವಿದ್ಯುತ್ ಪೂರೈಕೆ ಬಂದ್

ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಭಾನುವಾರ ಬೆಳಗ್ಗೆ ಭೂಕಂಪನದ ಅನುಭವವಾಗಿದೆ. ಯುಎಸ್ ಭೂ ಸರ್ವೇಕ್ಷಣ ವಿಭಾಗ(ಯುಎಸ್ ಜಿಎಸ್) ಭೂಕಂಪದ ಪ್ರಮಾಣ ರಿಕ್ಟರ್ ಮಾಪಕದಲ್ಲಿ 6 ರಷ್ಟಿತ್ತು ಎಂದು ಹೇಳಿದೆ. ನಾಪಾ ಕಣಿವೆಯಲ್ಲಿ ಹಾಗೂ ಇನ್ನಿತರ ಪ್ರದೇಶಗಳಲ್ಲಿನ ವಿದ್ಯುತ್ ಪೂರೈಕೆ ಬಂದ್ ಆಗಿದೆ.

ಭೂಕಂಪದ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ

ಭೂಕಂಪದ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ ಸುದ್ದಿ ಸಂಸ್ಥೆಗಳು

ಸಾರ್ವಜನಿಕರು ನೀಡಿರುವ ವಿಡಿಯೋ

ಭೂಕಂಪದ ಅನುಭವದ ಬಗ್ಗೆ ಸಾರ್ವಜನಿಕರು ಟ್ವಿಟ್ಟರ್ ನಲ್ಲಿ ನೀಡಿರುವ ವಿಡಿಯೋ

ಭೂಕಂಪದ ನಂತರದ ಅನುಭವ

ಭೂಕಂಪದ ನಂತರದ aftershocks ಅನುಭವದ ಬಗ್ಗೆ ಟ್ವೀಟ್

25 ವರ್ಷಗಳಲ್ಲೆ ಅತ್ಯಂತ ಭೀಕರ

ಕಳೆದ 25 ವರ್ಷಗಳಲ್ಲೆ ಅತ್ಯಂತ ಭೀಕರ ಭೂಕಂಪನದ ಅನುಭವ ಇದಾಗಿದೆ.

ಯಾವುದೇ ಸಾವು ನೋವು ವರದಿಯಾಗಿಲ್ಲ

ಭೂಕಂಪದ ನಂತರ ಯಾವುದೇ ಸಾವು ನೋವು ವರದಿಯಾಗಿಲ್ಲ. ಅದರೆ, ಹಲವೆಡೆ ಕಟ್ಟಡಗಳಲ್ಲಿ ಬಿರುಕು, ಅಂಗಡಿಗಳು ಪದಾರ್ಥಗಳು ಚೆಲ್ಲಾ ಪಿಲ್ಲಿಯಾಗಿರುವ ಬಗ್ಗೆ ವರದಿಗಳು ಬಂದಿವೆ.

ಭೂಕಂಪದ ಬಗ್ಗೆ ಬ್ರೇಕಿಂಗ್ ನ್ಯೂಸ್ ವರದಿ

ಭೂಕಂಪದ ಬಗ್ಗೆ ಬ್ರೇಕಿಂಗ್ ನ್ಯೂಸ್ ವರದಿ ಹೀಗಿದೆ

English summary
A strong 6.0-magnitude earthquake jolted California early Sunday morning, the US Geological Survey said, though there were no immediate reports of deaths or serious damage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X