ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೊಡ್ಡಣ್ಣ ಅಮೆರಿಕವನ್ನು ಚೀನಾ ಹಿಂದಿಕ್ಕುವುದೇ?

By Srinath
|
Google Oneindia Kannada News

street-survey-china-may-soon-overtake-us-to-be-worlds-economic-power
ನ್ಯೂಯಾರ್ಕ್, ನ. 5: ಬಹುತೇಕ ಎಲ್ಲ ಕ್ಷೇತ್ರಗಳಲೂ ಇಡೀ ವಿಶ್ವಕ್ಕೆ ದೊಡ್ಡಣ್ಣನಾಗಿರುವ ಅಮೆರಿಕವನ್ನು ಚೀನಾ ಬಗ್ಗುಬಡಿಯುವುದೇ?

ಸಮೀಕ್ಷೆಯೊಂದರ ಪ್ರಕಾರ ಖುದ್ದು ಅಮೆರಿಕನ್ನರಿಗೆ 'ತಾವಿನ್ನೂ ವಿಶ್ವದ ದೊಡ್ಡಣ್ಣನಾಗಿ ಉಳಿದಿಲ್ಲ' ಎಂಬುದು ಭಾಸವಾದಂತಿದೆ. Wall Street Journal ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ವರದಿಯ ಪ್ರಕಾರ ಚೀನಾ ಅಮೆರಿಕದತ್ತ ದಾಪುಗಾಲು ಹಾಕುತ್ತಿದ್ದು, ಅದಾಗಲೇ ಅಮೆರಿಕವನ್ನು ಬಲಾಢ್ಯ ಆರ್ಥಿಕ ಶಕ್ತಿ ಪಟ್ಟದಿಂದ ಕೆಳಗುರುಳಿಸಿದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಅಮೆರಿಕನ್ನರು ಅಭಿಪ್ರಾಯಪಟ್ಟಿದ್ದಾರೆ.

ಆರ್ಥಿಕವಾಗಿಯಂತೂ ಚೀನಾ ಅಮೆರಿಕದ ವಿರುದ್ಧ ಸೆಟೆದು ನಿಂತಿದೆ ಎಂಬುದು ಮೂರನೆಯ ಒಂದು ಭಾಗದಷ್ಟು ಅಮೆರಿಕನ್ನರ ಬಲವಾದ ಅನಿಸಿಕೆಯಾಗಿದೆ ಎಂದು The Street ಎಂಬ ವಿತ್ತ ವೆಬ್ ಸೈಟ್ ನಡೆಸಿರುವ ಸಮೀಕ್ಷೆಯಿಂದ ತಿಳಿದುಬಂದಿದೆ.

ಆದರೆ ಶೇ. 43ರಷ್ಟು ಅಮೆರಿಕನ್ನರ ಪ್ರಕಾರ ತಮ್ಮ ರಾಷ್ಟ್ರವು ಮುಂದಿನ ಐದಾರು ವರ್ಷ ಕಾಲ ವಿಶ್ವದ ಬಲಾಢ್ಯ ಆರ್ಥಿಕ ಶಕ್ತಿಯಾಗಿ ಮುಂದುವರಿಯುವುದು ಖಚಿತವಂತೆ.

ಅಂದಹಾಗೆ 1871ರಿಂದಲೂ ಅಮೆರಿಕವೇ ವಿಶ್ವದ ಅಗ್ರಮಾನ್ಯ ಆರ್ಥಿಕ ಶಕ್ತಿಯಾಗಿ ಚಾಲ್ತಿಯಲ್ಲಿದೆ. ಆದರೆ ಅರ್ಧಕ್ಕರ್ಧ ಅಮೆರಿಕನ್ನರ ಪ್ರಕಾರ ಇದಕ್ಕೆ ಕೊನೆಗಾಲ ಬಂದಿದೆಯಂತೆ. ಸದ್ಯದಲ್ಲೇ ಚೀನಾ ನಂತರ ಎರಡನೆಯ ಸ್ಥಾನಕ್ಕೆ ಅಮೆರಿಕ ಕುಸಿಯಲಿದೆಯಂತೆ.

ಅಮೆರಿಕದ ಜಿಡಿಪಿ ಚೀನಾದ್ದಕ್ಕಿಂತ ದುಪ್ಪಟ್ಟು ಇದ್ದರೂ ಅಮೆರಿಕದ ಆರ್ಥಿಕ ಪ್ರಗತಿ ಕುಂಟುತ್ತಾ ಸಾಗಿದ್ದು, ಇದೇ ವೇಳೆ ಚೀನಾ ಆರ್ಥಿಕತೆ ಸದೃಢವಾಗಿ ಶರವೇಗದಲ್ಲಿರುವುದು ಅಮೆರಿಕಕ್ಕೆ ಕಂಟಕ ಪ್ರಾಯವಾಗಲಿದೆ ಎಂಬುದು ಸಮೀಕ್ಷೆಯ ಸಾರಾಂಶವಾಗಿದೆ.

English summary
The Street survey - China may soon overtake USA to be worlds economic power. According to the poll reported in the Wall Street Journal, many Americans feel that China is slowly on its way to dethrone US from being the world's 'dominant economic power.'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X