• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬ್ರೆಜಿಲ್‌ನ ಬೀದಿ ನಾಯಿ ಈಗ ಹ್ಯುಂಡೈ ಕಾರು ಶೋರೂಂನ ಕನ್ಸಲ್ಟೆಂಟ್

|

ನವದೆಹಲಿ, ಆಗಸ್ಟ್‌ 14: ಬೀದಿ ನಾಯಿಗಳು ಅಂದ್ರೆ ತುಚ್ಚವಾಗಿ ನೋಡುವ ಜನರು ಸಮಾಜದಲ್ಲಿ ಸಾಕಷ್ಟಿದ್ದಾರೆ. ಹೀಗಿರುವಾಗ ಬ್ರೆಜಿಲ್‌ನ ಹ್ಯುಂಡೈ ಕಾರುಗಳ ವ್ಯಾಪಾರಿಯೊಬ್ಬರು ಬೀದಿ ನಾಯಿಯನ್ನು ದತ್ತು ತೆಗೆದುಕೊಂಡು 'ಕಾರ್‌ ಕನ್ಸಲ್ಟೆಂಟ್' ಆಗಿ ಶೋರೂಂನಲ್ಲಿ ಕರೆತಂದಿರುವುದು ವಿಶ್ವದಾದ್ಯಂತ ಖ್ಯಾತಿಯನ್ನು ಗಳಿಸಿದೆ.

ಈ ಬೀದಿ ನಾಯಿ ಹೇಗೆ ಕಾರು ಶೋರೂಂ ಕನ್ಸಲ್ಟೆಂಟ್ ಆಯ್ತು ಅನ್ನೋದು ನಿಮಗೆ ಕುತೂಹಲ ಮೂಡಿಸಿರಬಹುದು. ಬ್ರೆಜಿಲ್‌ನ ಹ್ಯುಂಡೈ ಪ್ರೈಮ್ ಬ್ರಾಂಚ್‌ನ ನೌಕರರು ಶೋರೂಂನ ಹೊರಗೆ ದಾರಿ ಕಾಯುತ್ತಾ ಕುಳಿತ ಒಂದು ನಾಯಿಯನ್ನು ಗಮನಿಸಿದ್ದಾರೆ. ಸಮಯ ಕಳೆದಂತೆ ಶ್ವಾನ ಹೊರಟು ಹೋಗುತ್ತದೆ ಎಂದು ಅವರು ಭಾವಿಸಿದ್ದರು. ಆದರೆ, ನಾಯಿ ಮಾತ್ರ ಶೋರೂಂನ ಹೊರಗಡೆಯಿಂದ ಹೋಗಲೇ ಇಲ್ಲ. ಅದರಲ್ಲೂ ವಿಶೇಷವಾಗಿ ಮಳೆಗಾಲದ ರಾತ್ರಿಯಲ್ಲಿಯೂ ಕೂಡ ನಾಯಿ ಅಲ್ಲಿಂದ ಕದಲಿಲ್ಲ. ಇದನ್ನು ಗಮನಿಸಿದ ಶೋರೂಂನ ವ್ಯವಸ್ಥಾಪಕ ಎಮರ್ಸನ್ ಮರಿಯಾನೊ ನಾಯಿಯ ಮೇಲೆ ಮೇಲೆ ಕರುಣೆ ತೋರಿ ಸ್ವಲ್ಪ ಆಹಾರ ಮತ್ತು ನೀರನ್ನು ನೀಡಿದ್ದಾರೆ.

ಮಾರುತಿ ಸುಜುಕಿ ಆಲ್ಟೋ ಹೊಸ ದಾಖಲೆ: 40 ಲಕ್ಷ ಮಾರಾಟವಾದ ಭಾರತದ ಮೊದಲ ಕಾರು

ನಾಯಿಗೆ ಆಹಾರ, ನೀರು ಅಷ್ಟೇ ಕೊಡದೇ ದಾರಿತಪ್ಪಿದ ನಾಯಿಯನ್ನು ದತ್ತು ತೆಗೆದುಕೊಂಡು ಮಾರಾಟ ಸಿಬ್ಬಂದಿ ಮತ್ತು ಗ್ರಾಹಕರೊಂದಿಗೆ ಸಮಯ ಕಳೆಯಲು "ಕಾರ್ ಕನ್ಸಲ್ಟೆಂಟ್" ಆಗಿ ಮಾರಾಟಗಾರರೊಳಗೆ ಕರೆತಂದು ಸಾಕಷ್ಟು ಸುದ್ದಿಯಾಗಿದ್ದಾರೆ.

ಇಷ್ಟೇ ಅಲ್ಲದೆ ಈ ನಾಯಿಗೆ ತಕ್ಸನ್ ಪ್ರೈಮ್ ಎಂಬ ಹೆಸರನ್ನು ನೀಡಿ, ನಾಯಿಯನ್ನು ವೃತ್ತಿಪರ ಸಲಹೆಗಾರನಾಗಿ ನೇಮಿಸಿಕೊಂಡಿದ್ದಾರೆ. ನಾಯಿಗೂ ಕೂಡ ಸ್ಟಾಫ್ ಐಡಿ ಬ್ಯಾಜ್ ನೀಡಲಾಗಿದೆ. ಇನ್ನು ವಿಶೇಷ ಅಂದ್ರೆ ಈ ನಾಯಿಗೂ ಇನ್‌ಸ್ಟಾಗ್ರಾಮ್ ಖಾತೆಯಿದ್ದು 1,24,000 ಫಾಲೋವರ್ಸ್‌ಗಳಿದ್ದಾರೆ.

ಗ್ರಾಹಕರ ಜೊತೆಗೆ ಟಕ್ಸನ್ ವ್ಯವಹರಿಸುತ್ತಿರುವ ರೀತಿ ಮಾತ್ತು ಮಾತುಕತೆ ನಡೆಸುವ ಕ್ಷಮತೆಯನ್ನು ಪರಿಗಣಿಸಿ ಅದಕ್ಕೆ ಪ್ರಮೋಶನ್ ನೀಡಲಾಗಿದೆ. ಇನ್ನು ಟಕ್ಸನ್ ಶೋರೂಂ ಬಂದ ಮೇಲೆ ವ್ಯವಹಾರವು ಸಾಕಷ್ಟು ಸುಧಾರಿಸಿದೆ ಎಂದು ಶೋರೂಂನ ವ್ಯವಸ್ಥಾಪಕರು ಹೇಳಿದ್ದಾರೆ.

English summary
A Hyundai Dealer in Brazil has gained worldwide fame after adopting a stray dog and bringing him into the dealership as a "car consultant" to spend time with the sales staff and customers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X